HOME » NEWS » State » THESE AUTO DRIVERS HELPS TO NON COVID PATIENTS AT GADAG THIS PANDEMIC TIME SKG LG

ನಾನ್​-ಕೋವಿಡ್​ ರೋಗಿಗಳ ಪಾಲಿಗೆ ಆಪತ್ಭಾಂದವ ಆಗಿದ್ದಾರೆ ಈ ಆಟೋ ಚಾಲಕರು

ಇನ್ನು ಕಳೆದ ಲಾಕ್​ಡೌನ್​ ಸೇರಿದಂತೆ ಈ ವರ್ ವೂ ಲಾಕ್​​ಡೌನ್​ ಆದ ಪರಿಣಾಮ ಆಟೋ ಚಾಲಕರು ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದಾರೆ. ಅಷ್ಟಾಗಿಯೂ 10ಕ್ಕೂ ಹೆಚ್ಚು ಆಟೋ ಚಾಲಕರು ಸಮಯ ನಿಗದಿ ಮಾಡಿಕೊಂಡು ಈ ಕೆಲಸ ವಹಿಸಿಕೊಂಡಿದ್ದಾರೆ. ಹಗಲು-ರಾತ್ರಿ ಎನ್ನದೆ ಯಾವುದೇ ರೋಗಿಗಳು ಫೋನ್‌ ಮಾಡಿದ್ರೆ ಸಾಕು ಅವರ ಮನೆಗೆ ಹೋಗಿ ಅವರಿಗೆ ಯಾವುದೇ ತೊಂದರೆಯಾಗದಂತೆ ಆಸ್ಪತ್ರೆಗೆ ತೆರಳಿ ಬಿಟ್ಟು ಬರುತ್ತಿದ್ದಾರೆ.

news18-kannada
Updated:April 29, 2021, 11:58 AM IST
ನಾನ್​-ಕೋವಿಡ್​ ರೋಗಿಗಳ ಪಾಲಿಗೆ ಆಪತ್ಭಾಂದವ ಆಗಿದ್ದಾರೆ ಈ ಆಟೋ ಚಾಲಕರು
ಆಟೋ ಚಾಲಕರ ಸೇವೆ
  • Share this:
ಗದಗ(ಏ.29): ರಾಜ್ಯಾದ್ಯಂತ ಕೊರೋನಾ 2ನೇ ಅಲೆ ತನ್ನ ಆರ್ಭಟ ಮುಂದುವರೆಸಿದೆ. ಪರಿಣಾಮ ಕಳೆದ ವರ್ಷದ‌‌ ಲಾಕ್​ಡೌನ್​​ ಗಾಯದಿಂದ ಇನ್ನೂ ಹೊರಬಾರದ ಜನತೆಗೆ ಮತ್ತೆ ಈ‌ ವರ್ಷದ ಲಾಕ್​ಡೌನ್​ ಬರೆ ಬಿದ್ದಿದೆ. ಈ ನಡುವೆ ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳ ಸಂಕಟ ಹೇಳ ತೀರದಾಗಿದೆ. ಅದಕ್ಕಂತಲೇ ಇಲ್ಲೊಂದು ಚಾಲಕರ ಸಂಘವು ಮಾನವೀಯತೆ ಕೆಲಸದ ಮೂಲಕ ನಾನ್ ಕೋವಿಡ್ ರೋಗಿಗಳ ಆಪತ್ಭಾಂದವ ಆಗಿದೆ.

ರಾಜ್ಯದೆಲ್ಲೆಡೆ ಕಣ್ಣಿಗೆ ಕಾಣದ ಮಾಯಾವಿ ತನ್ನ ಆರ್ಭಟ ಮುಂದುವರೆಸಿದೆ. ಅದಕ್ಕೆಂದು ಸರಕಾರ‌ 14 ದಿನಗಳ ಕಾಲ ಲಾಕ್​ಡೌನ್​ ಅಸ್ತ್ರ ಜಾರಿಗೆ ತಂದಿದ್ದು ತುರ್ತು ಸೇವೆಗೆ ಹೋಗುವವರ ಪಾಡು ಹೇಳತೀರದಾಗಿದೆ. ಅದರಲ್ಲೂ ನಾನ್ ಕೋವಿಡ್ ರೋಗಿಗಳ ಪಾಡಂತೂ ತೀರಾ ಸಂಕಷ್ಟದಲ್ಲಿದೆ. ಖಾಸಗಿ ವಾಹನಗಳು ಸಿಗದೆ ರೋಗಿಗಳು ಪರದಾಟ ನಡೆಸುತ್ತಿದ್ದಾರೆ. ಆದ್ರೆ ಇದ‌ನ್ನೆಲ್ಲ ಮನಗಂಡಿರುವ ಗದಗ ನಗರದ ಆಟೋ ಚಾಲಕರ ಸಂಘವು ಇದಕ್ಕೆಲ್ಲ ಪೂರ್ಣ ವಿರಾಮ ಇಟ್ಟಿದೆ.

ಅನಿವಾರ್ಯ ಕೆಲಸಗಳಿಗೆ ತೆರಳುವ ಹಾಗೂ ನಾನ್ ಕೋವಿಡ್ ರೋಗಿಗಳು ಖಾಸಗಿ ವಾಹನಕ್ಕಾಗಿ ಪರದಾಡೋದು ಬೇಡ ಅಂತ ಆಟೋ ಚಾಲಕರ ಸಂಘವು ಎಲ್ಲೆಡೆ ಉಚಿತವಾಗಿ ಸೇವೆ ಸಲ್ಲಿಸುತ್ತಿದೆ. ಯಾವುದೇ ರೋಗಿಗಳು ಒಂದು ಕರೆ ಮಾಡಿದ್ರೆ ಸಾಕು ಥಟ್ಟನೆ ಅವರ ಮನೆ ಮುಂದೆ ಆಟೋ ಬಂದು ನಿಲ್ಲುತ್ತೆ. ಅವರನ್ನ ಉಚಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಆಗುವವರೆಗೂ ಅಲ್ಲಿಯೇ ನಿಂತು ನಂತರ ಅವರನ್ನ ಮರಳಿ ಅವರ ಮನೆಗೆ ಬಿಟ್ಟು ಬರುವ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.

Bangalore: ನಾನೂ ಸತ್ತೋದ್ರೆ ನನ್ನ ಮಕ್ಕಳಿಗೆ ಯಾರು ಗತಿ?; ಹೆಂಡತಿ ಅಗಲಿಕೆಯಿಂದ ನೊಂದ ವ್ಯಕ್ತಿಯ ಮಾತು

ಇನ್ನು ಕಳೆದ ಲಾಕ್​ಡೌನ್​ ಸೇರಿದಂತೆ ಈ ವರ್ ವೂ ಲಾಕ್​​ಡೌನ್​ ಆದ ಪರಿಣಾಮ ಆಟೋ ಚಾಲಕರು ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದಾರೆ. ಅಷ್ಟಾಗಿಯೂ 10ಕ್ಕೂ ಹೆಚ್ಚು ಆಟೋ ಚಾಲಕರು ಸಮಯ ನಿಗದಿ ಮಾಡಿಕೊಂಡು ಈ ಕೆಲಸ ವಹಿಸಿಕೊಂಡಿದ್ದಾರೆ. ಹಗಲು-ರಾತ್ರಿ ಎನ್ನದೆ ಯಾವುದೇ ರೋಗಿಗಳು ಫೋನ್‌ ಮಾಡಿದ್ರೆ ಸಾಕು ಅವರ ಮನೆಗೆ ಹೋಗಿ ಅವರಿಗೆ ಯಾವುದೇ ತೊಂದರೆಯಾಗದಂತೆ ಆಸ್ಪತ್ರೆಗೆ ತೆರಳಿ ಬಿಟ್ಟು ಬರುತ್ತಿದ್ದಾರೆ.

ಈಗಾಗಲೇ 20ಕ್ಕೂ ಹೆಚ್ಚು ರೋಗಿಗಳು ಖಾಸಗಿ ವಾಹನ ಸಿಗದೇ ಪರದಾಡ್ತಾಯಿದ್ರು. ಅಂಥವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರೋ ಮೂಲಕ ಜೀವರಕ್ಷಕವಾಗಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದಲ್ಲಿರುವ 10 ಜನರ ಟೀಂ ಇಂತಹದ್ದೊಂದು ಸಮಾಜ ಸೇವೆ ಮಾಡಲು ಮುಂದಾಗಿದ್ದು, ಇಂದು ಸಹ ನಗರದಲ್ಲಿ ಹೃದಯಾಘಾತದಿಂದ ಬಳಲುತ್ತಿದ್ದ ಓರ್ವ ರೋಗಿಯನ್ನು ಕರೆದುಕೊಂದು ಚಿರಾಯು ಆಸ್ಪತ್ರೆಗೆ ಬಿಟ್ಟು ಬಂದಿದ್ದಾರೆ. ಅಷ್ಟೇ ಅಲ್ಲದೇ ಐದಕ್ಕೂ ಹೆಚ್ಚು ಗರ್ಭಿಣಿಯರನ್ನು ಸರಿಯಾದ ಸಮಯಕ್ಕೆ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗೋದಲ್ಲದೆ ಚಿಕ್ಕ ಮಕ್ಕಳನ್ನು ಸಹ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಡ ರೋಗಿಗಳಿಗೆ ಆಪತ್ಭಾಂದವರಾಗಿದ್ದಾರೆ.
Youtube Video
ಒಟ್ಟಾರೆ ಉಳ್ಳವರಿಗೆ ಅವರವರ ಐಶಾರಾಮಿ ಕಾರುಗಳುಂಟು. ಆದರೆ ಬಡ ಹಾಗೂ ಮಧ್ಯಮ ವರ್ಗದವರಿಗೆ ತಕ್ಷಣ ಆಸ್ಪತ್ರೆಗೆ ತೆರಳಬೇಕೆಂದಾಗ ಅದರಲ್ಲೂ ಇವತ್ತಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಭಗವಂತದೇ ದಾರಿ ತೋರಿಸಬೇಕು. ಅಂಥಹ ದೈವಸ್ವರೂಪಿ ಕಾರ್ಯವನ್ನ ಗದಗನ ಆಟೋ ಚಾಲಕರ ಸಂಘವು ಮಾಡುತ್ತಿರುವದು ಇಡೀ ಅವಳಿ ನಗರದ‌ ಜನತೆ‌ಗೆ ಹೆಮ್ಮೆ ತರುವಂತೆ ಮಾಡಿದ್ದು ಸಾರ್ವಜನಿಕರ ಸ್ಮರಣೆಗೆ ಕಾರಣವಾಗಿದೆ.
Published by: Latha CG
First published: April 29, 2021, 11:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories