ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟ; ನಟ ಜಗ್ಗೇಶ್, ಸಂಸದ ತೇಜಸ್ವಿ ಸೂರ್ಯ ಸೇರಿ ಹಲವು ಪ್ರಮುಖರಿಗೆ ಕೊಕ್​

ಯಶವಂತಪುರದಿಂದ ಟಿಕೆಟ್​ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ನಟ ಜಗ್ಗೆಶ್​ಗೆ ಆತಂರಿಕವಾಗಿ ಬಿಜೆಪಿ ಬಗ್ಗೆ ಅಸಮಾಧಾನವಿದೆ. ಇನ್ನು, ನೆರೆ ಪರಿಹಾರದ ವಿಚಾರದಲ್ಲಿ ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ಳಲು ಸಂಸದ ತೇಜಸ್ವಿ ಸೂರ್ಯ ವಿಫಲರಾಗಿದ್ದಾರೆ. ಹೀಗಾಗಿ, ಅವರನ್ನು ಈ ಬಾರಿ ಪ್ರಚಾರ ಕಣದಿಂದ ಕೈ ಬಿಡಲಾಗಿದೆ ಎನ್ನಲಾಗಿದೆ.

Rajesh Duggumane | news18-kannada
Updated:November 17, 2019, 1:58 PM IST
ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟ; ನಟ ಜಗ್ಗೇಶ್, ಸಂಸದ ತೇಜಸ್ವಿ ಸೂರ್ಯ ಸೇರಿ ಹಲವು ಪ್ರಮುಖರಿಗೆ ಕೊಕ್​
ತೇಜಸ್ವಿ ಸೂರ್ಯ-ಜಗ್ಗೇಶ್​
  • Share this:
ಬೆಂಗಳೂರು (ನ.17): ಕರ್ನಾಟಕ ಉಪಚುನಾವಣೆಯಲ್ಲಿ ಹದಿನೈದೂ ಸ್ಥಾನಗಳನ್ನು ಗೆಲ್ಲಲೇಬೇಕು ಎನ್ನುವ ಛಲಕ್ಕೆ ಬಿಜೆಪಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ 40 ಸ್ಟಾರ್​ ಪ್ರಚಾರಕನ್ನು ನೇಮಿಸಿದೆ. ಅಚ್ಚರಿ ಎಂದರೆ, ಪಟ್ಟಿಯಿಂದ ನಟ ಜಗ್ಗೇಶ್, ಸಂಸದ ತೇಜಸ್ವಿ ಸೂರ್ಯ ಸೇರಿ ಹಲವು ಪ್ರಮುಖರಿಗೆ ಕೊಕ್​​ ನೀಡಲಾಗಿದೆ.

ಸ್ಟಾರ್ ಪ್ರಚಾರಕರಲ್ಲಿ ನಂಬರ್ 1 ಸ್ಥಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇದ್ದಾರೆ. ಮುಖ್ಯಮಂತ್ರಿ ಬಿಎಸ್​ವೈಗೆ ಎರಡನೇ ಸ್ಥಾನ ನೀಡಲಾಗಿದೆ. ಈ ವಿಚಾರ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಯಶವಂತಪುರದಿಂದ ಟಿಕೆಟ್​ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ನಟ ಜಗ್ಗೆಶ್​ಗೆ ಆತಂರಿಕವಾಗಿ ಬಿಜೆಪಿ ಬಗ್ಗೆ ಅಸಮಾಧಾನವಿದೆ. ಇನ್ನು, ನೆರೆ ಪರಿಹಾರದ ವಿಚಾರದಲ್ಲಿ ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ಳಲು ಸಂಸದ ತೇಜಸ್ವಿ ಸೂರ್ಯ ವಿಫಲರಾಗಿದ್ದಾರೆ. ಹೀಗಾಗಿ, ಅವರನ್ನು ಈ ಬಾರಿ ಪ್ರಚಾರ ಕಣದಿಂದ ಕೈ ಬಿಡಲಾಗಿದೆ ಎನ್ನಲಾಗಿದೆ.

ಸಂಸದ ಅನಂತ್ ಕುಮಾರ್ ಹೆಗ್ಡೆ, ನಟಿ ಮಾಳವಿಕಾಗೂ ಕೊಕ್ ನೀಡಲಾಗಿದೆ.   ವಿವಾದಾತ್ಮಕ ಹೇಳಿಕೆಗಳನ್ನು ಕೊಡುವ ಹಿನ್ನೆಲೆಯಲ್ಲಿ ಅನಂತ್ ಕುಮಾರ್ ಹೆಗಡೆ ಅವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಎಸ್ ಎಂ ಕೃಷ್ಣ, ಸಂಸದ ವಿ ಶ್ರೀನಿವಾಸ್ ಪ್ರಸಾದ್ ಹೆಸರನ್ನು ಸೇರ್ಪಡೆ ಮಾಡಿಲ್ಲ.

ರಾಜ್ಯದ ನಾಯಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಉದ್ದೇಶದಿಂದ ಕೇಂದ್ರದ ಯಾವ ನಾಯಕರಿಗೂ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಸ್ಥಾನ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಜೆ ಪಿ ನಡ್ಡಾ, ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್, ಪಿಯೂಶ್ ಗೋಯಲ್, ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಮನ್ ಈ ಬಾರಿಯ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಇಳಿಯುತ್ತಿಲ್ಲ.

ಸ್ಟಾರ್​ ಪ್ರಚಾರಕರ ಹೆಸರು:

• ನಳಿನ್ ಕುಮಾರ್ ಕಟೀಲ್• ಬಿ.ಎಸ್.ಯಡಿಯೂರಪ್ಪ
• ಡಿ.ವಿ ಸದಾನಂದಗೌಡ
• ಪ್ರಹ್ಲಾದ್ ಜೋಷಿ
• ಬಿ.ಎಲ್ ಸಂತೋಷ್
• ಮುರುಳೀಧರರಾವ್
• ಅರುಣ್ ಕುಮಾರ್
• ಜಗದೀಶ್ ಶೆಟ್ಟರ್
• ಲಕ್ಷ್ಮಣ ಸವದಿ
• ಗೋವಿಂದ ಕಾರಜೋಳ
• ಡಾ.ಸಿ.ಎನ್ ಅಶ್ವತ್ಥನಾರಾಯಣ್
• ಕೆ.ಎಸ್.ಈಶ್ವರಪ್ಪ
• ಅರವಿಂದ ಲಿಂಬಾವಳಿ
• ಸಿ.ಟ ರವಿ
• ಶೋಭಾ ಕರಂದ್ಲಾಜೆ
• ಎನ್.ರವಿಕುಮಾರ್
• ಮಹೇಶ್ ತೆಂಗಿನಕಾಯಿ
• ಆರ್.ಅಶೋಕ್
• ಪಿ.ಸಿ ಮೋಹನ್
• ಶ್ರೀರಾಮುಲು
• ಪ್ರತಾಪ್ ಸಿಂಹ
• ವಿ.ಸೋಮಣ್ಣ
• ಬಸವರಾಜ ಬೊಮ್ಮಾಯಿ
• ರಮೇಶ್ ಜಿಗಜಿಣಗಿ
• ಪ್ರಭಾಕರ್ ಕೋರೆ
• ನಿರ್ಮಲ್ ಕುಮಾರ್ ಸುರಾನಾ
• ಶಶಿಕಲಾ ಜೊಲ್ಲೆ
• ಸುರೇಶ್ ಅಂಗಡಿ
• ಚಲವಾದಿ ನಾರಾಯಣಸ್ವಾಮಿ
• ಶ್ರುತಿ
• ತಾರಾ ಅನೂರಾಧ
• ರಾಜೂಗೌಡ
• ಭಾರತಿ ಶೆಟ್ಟಿ
• ಸಿ.ಸಿ ಪಾಟೀಲ್
• ಬಿ.ಜೆ ಪುಟ್ಟಸ್ವಾಮಿ
• ಉಮೇಶ್ ಕತ್ತಿ
• ಕೋಟಾ‌ ಶ್ರೀನಿವಾಸ ಪೂಜಾರಿ
• ಪ್ರಭು ಚೌಹಾನ್
• ಎಸ್.ಆರ್.ವಿಶ್ವನಾಥ್
• ಮಾಧುಸ್ವಾಮಿ

(ವರದಿ: ರಮೇಶ್​ ಹಿರೆಜಂಬೂರು)

First published: November 17, 2019, 1:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading