Karnataka BJP: ನಳಿನ್ ಕುಮಾರ್ ಕಟೀಲ್ ಬದಲಾವಣೆ ಬಹುತೇಕ ಫಿಕ್ಸ್; ಈ ಐವರಲ್ಲಿ ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ?

2023ರ ಚುನಾವಣೆಗೆ ಜನಪ್ರಿಯ ನಾಯಕ ಅಧ್ಯಕ್ಷರಾಗಬೇಕು. ಇಡೀ ಕರ್ನಾಟಕ ಗುರುತಿಸೋ ನಾಯಕ ಅಧ್ಯಕ್ಷರಾಗಬೇಕು. ಪ್ರತಿಪಕ್ಷಗಳಿಗೆ ಕೌಂಟರ್ ಕೊಡುವವರ ನೇಮಕಕ್ಕೆ ಬಿ.ಎಸ್.ಯಡಿಯೂರಪ್ಪ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ನಳಿನ್​​ ಕುಮಾರ್​ ಕಟೀಲ್​​

ನಳಿನ್​​ ಕುಮಾರ್​ ಕಟೀಲ್​​

  • Share this:
ಕರ್ನಾಟಕ ಬಿಜೆಪಿ (Karnataka BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (BJP State President Nalin Kumar Kateel) ಅವರ ಅಧಿಕಾರವಧಿ ಇದೇ ತಿಂಗಳು ಆಂದ್ರೆ ಆಗಸ್ಟ್ 21ರಂದು ಮುಕ್ತಾಯಗೊಂಡಿದೆ. ರಾಜ್ಯಾಧ್ಯಕ್ಷರ ಅವಧಿ  ಮುಗಿದ್ರೂ ಮುಂದಿನ ಬಿಜೆಪಿ (BJP) ಈ ಸಂಬಂಧ ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ. ಮೂಲಗಳ ಪ್ರಕಾರ ನಳಿನ್ ಕುಮಾರ್ ಕಟೀಲ್ ಅವರ ಬದಲಾವಣೆ ಬಹುತೇಕ ಫಿಕ್ಸ್ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯಾಧ್ಯಕ್ಷರ ಬದಲಾವಣೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ತಮ್ಮ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಈ ಸಂಬಂಧ ಬಿಜೆಪಿ ಹೈಕಮಾಂಡ್​ನಿಂದ (BJP High command) ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಗಳಿವೆ.

2023ರ ಚುನಾವಣೆಗೆ ಜನಪ್ರಿಯ ನಾಯಕ ಅಧ್ಯಕ್ಷರಾಗಬೇಕು. ಇಡೀ ಕರ್ನಾಟಕ ಗುರುತಿಸೋ ನಾಯಕ ಅಧ್ಯಕ್ಷರಾಗಬೇಕು. ಪ್ರತಿಪಕ್ಷಗಳಿಗೆ ಕೌಂಟರ್ ಕೊಡುವವರ ನೇಮಕಕ್ಕೆ ಬಿ.ಎಸ್.ಯಡಿಯೂರಪ್ಪ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕಟೀಲ್ ಬದಲಾವಣೆ ಯಾಕೆ?

ರಾಜ್ಯ ಬಿಜೆಪಿಗೆ ನಳಿನ್ ಕುಮಾರ್ ಕಟೀಲ್ ಹೆಸರಿಗಷ್ಟೇ ಅಧ್ಯಕ್ಷರಾಗಿದ್ದಾರೆ. ಉಪಾಧ್ಯಕ್ಷ ನಿರ್ಮಲ್​ಕುಮಾರ್ ಸುರಾನ ಸೂಪರ್ ಪ್ರೆಸಿಡೆಂಟ್ ಎಂಬ ಮಾತುಗಳು ಬಿಜೆಪಿ ಅಂಗಳದಲ್ಲಿಯೇ ಕೇಳಿ ಬರುತ್ತಿವೆ. ಕಟೀಲ್ ರಾಷ್ಟ್ರೀಯ ನಾಯಕರೊಬ್ಬರ ಕೈಗೊಂಬೆ ಎಂಬ ಗುಸುಗುಸು ಕಮಲ ಪಾಳಯದಲ್ಲಿ ಕೇಳಿ ಬಂದಿದೆ.

These are the people in karnataka state bjp president post
ಬಿಜೆಪಿ ಧ್ವಜ


ಇದನ್ನೂ ಓದಿ:  Madrasa: ಉತ್ತರ ಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿಯೂ ರಚನೆಯಾಗುತ್ತಾ ಮದರಸಾ ಶಿಕ್ಷಣ ಮಂಡಳಿ?; ಇಂದು ಮಹತ್ವದ ಸಭೆ

ಕಟೀಲ್ ಸಮಗ್ರ ಕರ್ನಾಟಕಕ್ಕೆ ಪರಿಚಿತರಲ್ಲ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಕರಾವಳಿ ಭಾಗಕ್ಕೆ ಮಾತ್ರ ಕಟೀಲ್ ಸೀಮಿತ ಎಂಬ ಆರೋಪಗಳು ಕೇಳಿ ಬಂದಿವೆ. ಇತ್ತೀಚೆಗೆ ಪ್ರವೀಣ್ ಹತ್ಯೆ ಬಳಿಕ ಕರಾವಳಿಯಲ್ಲೂ ಕಟೀಲ್ ವಿರೋಧಿ ಅಲೆ ಕಂಡು ಬಂದಿದೆ.

ಕಟೀಲ್ ಬದಲಾವಣೆಗೆ ವಿರೋಧ

ಇತ್ತ ನಳಿನ್ ಕುಮಾರ್ ಕಟೀಲ್ ಅವರ ಬದಲಾವಣೆಗೆ ಪಕ್ಷದಲ್ಲಿ ಒಂದು ವರ್ಗದ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರಂತೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಹ ಕಟೀಲ್ ಪರ ಬ್ಯಾಟ್ ಬೀಸಿದ್ದಾರೆ ಎನ್ನಲಾಗಿದೆ. ಚುನಾವಣೆ ಹೊತ್ತಲ್ಲಿ ಹೊಸ ಅಧ್ಯಕ್ಷರು ಬೇಡ ಎಂಬುವುದು ಬಿ.ಎಲ್.ಸಂತೋಷ್ ಅವರ ವಾದ ಎನ್ನಲಾಗಿದೆ.

ಅಧ್ಯಕ್ಷ ಗಾದಿಯ ಸ್ಪರ್ಧೆಯಲ್ಲಿ ಯಾರಿದ್ದಾರೆ?

ಒಂದು ವೇಳೆ ನಳಿನ್ ಕುಮಾರ್ ಕಟೀಲ್ ಬದಲಾವಣೆಯಾದ್ರೆ ಆ ಸ್ಥಾನಕ್ಕೆ ಶಾಸಕ ಸಿ.ಟಿ ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಸುನಿಲ್ ​ಕುಮಾರ್, ಸಿ.ಎನ್.​ ಅಶ್ವತ್ಥ ನಾರಾಯಣ ಮತ್ತು ಅರವಿಂದ ಲಿಂಬಾವಳಿ ಸ್ಪರ್ಧೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

These are the people in karnataka state bjp president post
ಬಿಜೆಪಿ


ಯಾವ ಕಾರಣಕ್ಕೆ ಈ ನಾಯಕರಿಗೆ ಸ್ಥಾನ ಸಿಗಬಹುದು?

1.ಸಿ.ಟಿ.ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕರಾಗಿರುವ ಸಿ.ಟಿ.ರವಿ ಅವರು ಆಕ್ರಮಣಕಾರಿ ನಾಯಕ. ಹಿಂದೂ ಪ್ರತಿಪಾದಕರು ಸಹ ಆಗಿದ್ದಾರೆ. ಒಂದು ವೇಳೆ ಸಿ.ಟಿ.ರವಿ ಬಿಜೆಪಿ ರಾಜ್ಯಾಧ್ಯಕ್ಷರಾದ್ರೆ ಒಕ್ಕಲಿಗರ ಮತ ಸೆಳೆಯಬಹುದು ಎಂದು ಲೆಕ್ಕಾಚಾರ ಸಹ ಇದೆ.

2.ಡಾ.ಸಿ.ಎನ್.ಅಶ್ವತ್ಥ ನಾರಾಯಣ

ಒಂದು ವೇಳೆ ಅಶ್ವತ್ಥ ನಾರಾಯಣ ಬಿಜೆಪಿ ರಾಜ್ಯಾಧ್ಯಕ್ಷರಾದ್ರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಠಕ್ಕರ್ ಕೊಡಬಹುದು. ರಾಮನಗರ ಮತ್ತು ಕನಕಪುರ ಭಾಗದಲ್ಲಿ ಪಕ್ಷ ಸಂಘಟನೆಗೆ ಸಹಾಯ ಆಗಬಹುದು ಎಂಬುವುದು ಬಿಜೆಪಿ ಲೆಕ್ಕಾಚಾರ. ವಿದ್ಯಾವಂತ, ಸಚಿವರಾಗಿ ಅನುಭವ ಹೊಂದಿರುವ ನಾಯಕರಾಗಿದ್ದು, ಒಕ್ಕಲಿಗ ಮತಗಳ ಸೆಳೆಯೋ ಶಕ್ತಿ ಇದೆ

3.ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ ಅವರು ಆಕ್ರಮಣಕಾರಿ ನಾಯಕಿಯಾಗಿದ್ದು, ಮಹಿಳಾ ಮತದಾರರನ್ನು ಸೆಳೆಯಬಹುದು. ಹಿಂದುತ್ವ , ಕರಾವಳಿ ಭಾಗದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ನಾಯಕಿಯಾಗಿದ್ದಾರೆ. ರಾಜಕೀಯ ಅನುಭವ, ಒಕ್ಕಲಿಗರಾಗಿದ್ದು, ಸದ್ಯ ಕೇಂದ್ರ ಸಚಿವೆಯಾಗಿದ್ದಾರೆ.

4.ಸುನಿಲ್ ಕುಮಾರ್

OBC ಸಮುದಾಯದ ಪ್ರಬಲ ನಾಯಕರಾಗಿದ್ದು, ಹಿಂದುತ್ವ, ಆಕ್ರಮಣಾಕಾರಿ ನಾಯಕರು. ಕರಾವಳಿ ಭಾಗದಲ್ಲಿ ಪ್ರಭಾವಿಯಾಗಿದ್ದು, ಕಾರ್ಯಕರ್ತರ ನಾಡಿಮಿಡಿತದ ದನಿ ಬಲ್ಲವರಾಗಿದ್ದಾರೆ.

ಇದನ್ನೂ ಓದಿ:  KGF Babu: ಚಿಕ್ಕಪೇಟೆ ಕ್ಷೇತ್ರದ ಜನತೆಗೆ ಬಂಪರ್; ಪ್ರತಿ ಕುಟುಂಬಕ್ಕೆ 5 ಸಾವಿರ; 350 ಕೋಟಿಯ ಕೆಜಿಎಫ್ ಬಾಬು ಲೆಕ್ಕಾಚಾರ ಏನು?

5.ಅರವಿಂದ್ ಲಿಂಬಾವಳಿ

ಪರಿಶಿಷ್ಟ ಜಾತಿ ಸಮುದಾಯದ ನಾಯಕರಾಗಿರು ಅರವಿಂದ್ ಲಿಂಬಾವಳಿ ಉತ್ತಮ ಸಂಘಟಕರಾಗಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಮೂಲಕ ದಲಿತ ಸಮುದಾಯದ ಮತಗಳನ್ನು ಸೆಳೆಯಬಹುದು.
Published by:Mahmadrafik K
First published: