ಮತ್ತೆ ಸಿಎಂ ಆಗ್ತೇನೆ ಎಂದು ಔಪಚಾರಿಕವಾಗಿ ಸಿದ್ದರಾಮಯ್ಯ ಹೇಳಿರಬಹುದು - ದಿನೇಶ್ ಗುಂಡೂರಾವ್

news18
Updated:August 25, 2018, 10:37 PM IST
ಮತ್ತೆ ಸಿಎಂ ಆಗ್ತೇನೆ ಎಂದು ಔಪಚಾರಿಕವಾಗಿ ಸಿದ್ದರಾಮಯ್ಯ ಹೇಳಿರಬಹುದು - ದಿನೇಶ್ ಗುಂಡೂರಾವ್
news18
Updated: August 25, 2018, 10:37 PM IST
- ಪರೀಕ್ಷಿತ್ ಶೇಟ್,  ನ್ಯೂಸ್ 18 ಕನ್ನಡ 

ಬೆಂಗಳೂರು ( ಆಗಸ್ಟ್ 25) :  ಮತ್ತೆ ಸಿಎಂ ಆಗ್ತೇನೆ ಎಂದು ಔಪಚಾರಿಕವಾಗಿ ಸಿದ್ದರಾಮಯ್ಯ ಹೇಳಿರಬಹುದು. ಅವರು ಹೇಳಿರೋ ಸನ್ನಿವೇಶವೇ ಬೇರೆ ಐದು ವರ್ಷಗಳ ಕಾಲ ಯಾವುದೇ ಬದಲಾವಣೆ ಇಲ್ಲ. ಸರ್ಕಾರ ಅಸ್ತಿರಗೊಳಿಸುವ ಪ್ರಶ್ನೆಯೇ ಉದ್ಬವವಾಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಬಿಜೆಪಿಯವರು ಮಾತಿಗಾಗಿ ಧರ್ಮದ ಬಗ್ಗೆ ಹೇಳಿಕೆ ನೀಡುತ್ತಾರೆ. ಮಾಡೋದೆಲ್ಲ ಅಧರ್ಮ ಅನೈತಿಕ. ಎಲ್ಲರನ್ನೂ ಬಿಜೆಪಿ ಯಾಮಾರಿಸಿದೆ. ಪರೇಶ್ ಮೇಸ್ತಾ ಸಿಬಿಐ ತನಿಖೆ ಏನಾಯ್ತು. ಇದಕ್ಕೆ ಶೋಭಾ ಕೆರಂದ್ಲಾಜೆ ಉತ್ತರ ಕೊಡಬೇಕು ಎಂದದರು.

ಕೊಡಗಿನ ಗಂಜಿ ಕೇಂದ್ರದಲ್ಲೂ ಶೋಭಾ ಕರಂದ್ಲಾಜೆ ಊಟ ಬಡಿಸಿ ಪೋಸ್ ಕೊಡ್ತಾರೆ. ಜನ, ಸರ್ಕಾರ ಕೊಟ್ಟ ಆಹಾರ ಬಡಿಸುತ್ತಾರೆ. ಶೋಭಾ ಕರಂದ್ಲಾಜೆ ತಮ್ಮ ಕ್ಷೇತ್ರವನ್ನು ಮರೆತಿದ್ದಾರೆ ಹೀಗಾಗಿ ಉಡುಪಿ ಚಿಕ್ಕಮಗಳೂರಿನಲ್ಲಿ ಈ ಬಾರಿಯ ಎಂಪಿ ಚುನಾವಣೆಯಲ್ಲಿ ಶೋಭಾ ಸ್ಪರ್ಧಿಸಲು ಸಾಧ್ಯವೇ ಇಲ್ಲ.ಯಡಿಯೂರಪ್ಪನವರಿಗೆ 75 ವರ್ಷ ದಾಟಿರುವ ಕಾರಣಕ್ಕೆ  ಅವರ ಮಾತನ್ನು ಶೋಭಾ ಕೇಳಲ್ಲ ಎಂದು ಲೇವಡಿ ಮಾಡಿದರು.

ಸಂಸದೆ ಶೋಭಾ ಕರಂದ್ಲಾಜೆ ಒಂದೇ ಕಡೆ ಎರಡು ಬಾರಿ ಸ್ಪರ್ಧೆ ಮಾಡಲ್ಲ. ಅವರು ಕ್ಷೇತ್ರಕ್ಕೆ ಬರಬೇಕಾದರೆ ಸಾವು ಆಗ್ಬೇಕು .ಸುಳ್ಳು, ಅಪಪ್ರಚಾರ ಮಾತ್ರ ಅವರ ಕೆಲಸ. ಶೋಭಾ ಕರಂದ್ಲಾಜೆ ಕೀಳುಮಟ್ಟದ ರಾಜಕಾರಣಿ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಮಲತಾಯಿ ದೋರಣೆ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನಡವಳಿಕೆ ಸರಿಯಲ್ಲ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಅವರ ವರ್ತನೆ ರಾಜ್ಯ ಸರ್ಕಾರಕ್ಕೂ ಅಗೌರವ ತಂದಿದೆ. ಸಂತ್ರಸ್ತರಿಗೆ ಯಾವುದೇ ಅನುದಾನ ಕೇಂದ್ರ ಘೋಷಿಸಿಲ್ಲ. ಇದು ಮಲತಾಯಿ ದೋರಣೆ. ಶ್ರೀರಾಮುಲುಗೆ ತಿಳುವಳಿಕೆ ಕೊರತೆ ಇದೆ. ರಾಮುಲುಗೆ ಯಾವುದೇ ಸೀರಿಯಸ್ ನೆಸ್ ಇಲ್ಲ. ರಾಮುಲು ರಾಜ್ಯ ಒಡೆಯಲು ಹೊರಟವರು. ಸಾಲಮನ್ನಾದ ಬಗ್ಗೆ ಅವರಿಗೆ ಏನೂ ಮಾಹಿತಿಯೇ ಇಲ್ಲ ಎಂದು ಶ್ರೀರಾಮಲು ವಿರುದ್ದ ವಾಗ್ದಾಳಿ ನಡೆಸಿದರು.
Loading...

 
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...