ಉಪಚುನಾವಣೆಯಲ್ಲಿ ಜೆಡಿಎಸ್​ ಸ್ಪರ್ಧಿಸುವ ಅವಶ್ಯಕತೆ ಇರಲಿಲ್ಲ; ಜಿಟಿ ದೇವೇಗೌಡ

ಪಕ್ಷದ​ ಸೋಲಿನ ಕುರಿತು ಪರಾಮರ್ಶೆ ನಡೆಸಿದ ಅವರು, ಉಪಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ಅಭಿವೃದ್ಧಿ ದೃಷ್ಟಿಯಿಂದ ಆಡಳಿತ ಪಕ್ಷಕ್ಕೆ ಬೆಂಬಲಿಸಬೇಕಿತ್ತು. ಸಾರ್ವತ್ರಿಕ ಚುನಾವಣೆ ಬೇರೆ ಉಪಚುನಾವಣೆ ಬೇರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್​ ಸ್ಪರ್ಧಿಸಿದ್ದು ತಪ್ಪು ಎಂಬ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. 

news18-kannada
Updated:December 14, 2019, 11:18 AM IST
ಉಪಚುನಾವಣೆಯಲ್ಲಿ ಜೆಡಿಎಸ್​ ಸ್ಪರ್ಧಿಸುವ ಅವಶ್ಯಕತೆ ಇರಲಿಲ್ಲ; ಜಿಟಿ ದೇವೇಗೌಡ
ಪಕ್ಷದ​ ಸೋಲಿನ ಕುರಿತು ಪರಾಮರ್ಶೆ ನಡೆಸಿದ ಅವರು, ಉಪಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ಅಭಿವೃದ್ಧಿ ದೃಷ್ಟಿಯಿಂದ ಆಡಳಿತ ಪಕ್ಷಕ್ಕೆ ಬೆಂಬಲಿಸಬೇಕಿತ್ತು. ಸಾರ್ವತ್ರಿಕ ಚುನಾವಣೆ ಬೇರೆ ಉಪಚುನಾವಣೆ ಬೇರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್​ ಸ್ಪರ್ಧಿಸಿದ್ದು ತಪ್ಪು ಎಂಬ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. 
  • Share this:
ಬೆಂಗಳೂರು (ಡಿ.14): 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್​ ಸ್ಪರ್ಧಿಸುವ ಅಗತ್ಯ ಇರಲಿಲ್ಲ. ಆದರೂ ಕೂಡ ಜೆಡಿಎಸ್​ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತು ಎಂದು ಜೆಡಿಎಸ್​ ಹಿರಿಯ ನಾಯಕ ಜಿಟಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. 

ಪಕ್ಷದ​ ಸೋಲಿನ ಕುರಿತು ಪರಾಮರ್ಶೆ ನಡೆಸಿದ ಅವರು, ಉಪಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ಅಭಿವೃದ್ಧಿ ದೃಷ್ಟಿಯಿಂದ ಆಡಳಿತ ಪಕ್ಷಕ್ಕೆ ಬೆಂಬಲಿಸಬೇಕಿತ್ತು. ಸಾರ್ವತ್ರಿಕ ಚುನಾವಣೆ ಬೇರೆ ಉಪಚುನಾವಣೆ ಬೇರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್​ ಸ್ಪರ್ಧಿಸಿದ್ದು ತಪ್ಪು ಎಂಬ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಹಿಂದೆ ತಮಿಳುನಾಡಿನಲ್ಲಿ ನಡೆದ ಉಪಚುನಾವಣೆಯಲ್ಲಿ ಕೂಡ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಿರಲಿಲ್ಲ. ಕರ್ನಾಟಕದಲ್ಲಿಯೂ ಅಭ್ಯರ್ಥಿ ಹಾಕಬೇಕಿರಲಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ವಿಪಕ್ಷಗಳು ಬಿಜೆಪಿಯನ್ನು ಬೆಂಬಲಸಬೇಕು. ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಬೆಂಬಲಿಸಿದ್ದರೆ, ಈ ಹೀನಾಯ ಸೋಲಿನ ಮುಜಗರ ತಪ್ಪುತ್ತಿತ್ತು ಎಂಬರ್ಥದಲ್ಲಿ ಮಾತನಾಡಿದರು.

ಮೈತ್ರಿ ಸರ್ಕಾರ ಪತನದ ಬಳಿಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದ ಜೊತೆ ಗುರುತಿಸಿಕೊಂಡಿದ್ದ ಜಿಡಿ ದೇವೇಗೌಡ ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಾ ಹರಿದಾಡಿದ್ದವು. ಆದರೆ, ಅವರು ತಾವು ಯಾವುದೇ ಕಾರಣಕ್ಕೂ ಜೆಡಿಎಸ್​ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ: ರೈತರಿಗೆ ಖಾರವಾದ ಕೆಂಪು ಮೆಣಸಿನಕಾಯಿ; ರೋಗವೂ ನಿಯಂತ್ರಣಕ್ಕೆ ಬರುತ್ತಿಲ್ಲ, ಬೆಲೆಯೂ ಸಿಗುತ್ತಿಲ್ಲ..!

ಇನ್ನು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಜಿಡಿ ದೇವೇಗೌಡ ಹುಣಸೂರು ಉಪಚುನಾವಣೆಯಲ್ಲಿ ಜೆಡಿಎಸ್​ ಬೆಂಬಲಿಸಲಿದ್ದಾರಾ, ಬಿಜೆಪಿ ಬೆಂಬಲಿಸಲಿದ್ದಾರಾ ಎಂಬ ಬಗ್ಗೆ ಕುತೂಹಲ ಮೂಡಿತ್ತು. ಆದರೆ, ಚುನಾವಣೆಯಲ್ಲಿ ತಟಸ್ಥರಾಗಿರುವ ಮೂಲಕ ಜಿಟಿ ದೇವೇಗೌಡ ಯಾರನ್ನು ಬೆಂಬಲಿಸಲಿಲ್ಲ.

First published: December 14, 2019, 11:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading