ಎಲ್ಐಸಿಯನ್ನೂ ಮಾರುವ ಹಂತಕ್ಕೆ ದೇಶ ಬಂದಿದೆ; ಇದು ನಿರಾಶೆಯ ಬಜೆಟ್: ಸಿದ್ದರಾಮಯ್ಯ
ಕೇಂದ್ರ ಸರ್ಕಾರ ಕೊನೆಯದಾಗಿ ಎಲ್ಐಸಿ ಶೇರು ಮಾರಲು ಮುಂದಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಎಂಥ ಪರಿಸ್ಥಿತಿಗೆ ಬಂದಿದೆ ಎಂಬುದು ನಮ್ಮ ಕಣ್ಮುಂದಿದೆ.

ಮಾಜಿ ಸಿಎಂ ಸಿದ್ದರಾಮಯ್ಯ
- News18 Kannada
- Last Updated: February 10, 2020, 6:38 PM IST
ಮೈಸೂರು(ಫೆ.01): ಜಿಡಿಪಿ ದರ ಶೇ. 3.5ಕ್ಕೆ ಕುಸಿತಗೊಂಡಿದೆ. ದೇಶದ ಆದಾಯ ಪಾತಾಳಕ್ಕೆ ಹೋಗಿದೆ. ಇದರಿಂದ ಹೆಚ್ಚು ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಮುಂದೆ ಜಿಡಿಪಿ ಶೇ.6 ತರುತ್ತೇವೆ ಅಂತಿದ್ದಾರೆ. ಅದು ಗಗನ ಕುಸುಮ ಆಗಲಿದೆ. ಜಿಡಿಪಿ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಆಶಾದಾಯಕ ಬಜೆಟ್ ಅಲ್ಲ. ಕಳೆದ ಬಜೆಟ್ನ ಅಂದಾಜು ವೆಚ್ಚದಲ್ಲಿ 2 ಲಕ್ಷ ಕೋಟಿ ಕಡಿಮೆ ಖರ್ಚಾಗಿದೆ. ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಆದಾಯ ಬಂದಿಲ್ಲ. ಇದರಿಂದ ರಾಜ್ಯಗಳಿಗೆ ಬರಬೇಕಾದ ಪಾಲು ಕಡಿಮೆ ಆಗಿದೆ. ದೇಶದ ಆದಾಯವನ್ನ 5 ಟ್ರಿಲಿಯನ್ ಡಾಲರ್ ಮಾಡುತ್ತೇವೆ ಅಂತಾ ಹೇಳಿದ್ದರು. ಆದರೆ, ಇದು ಸಾಧ್ಯವಿಲ್ಲ ಅಂತ ಎಲ್ಲರಿಗೂ ಗೊತ್ತಾಗುತ್ತಿದೆ ಎಂದು ವ್ಯಂಗ್ಯವಾಡಿದರು. ಉದ್ಯೋಗ ಸೃಷ್ಟಿ ಆಗದೇ ಈ ಬಜೆಟ್ನಲ್ಲೂ ಉದ್ಯೋಗಾಂಕ್ಷಿಗಳಿಗೆ ನಿರಾಸೆಯಾಗಿದೆ.
ಸುಮ್ಮನೆ ಹೆಸರುಗಳನ್ನ ಆಕರ್ಷದಾಯಕವಾಗಿರುವಂತೆ ಇಡಲಾಗಿದೆ. ಯಾವುದೇ ಕಾರ್ಯಕ್ರಮಗಳೂ ಉಪಯೋಗ ಆಗಲ್ಲ. ಕೃಷಿ ಕಾ ಉಡಾನ್ ಯಾರಿಗೆ ಅನುಕೂಲ ಆಗಲಿದೆ? ಇದು ರೈತರಿಗೆ, ಬಡವರಿಗೆ ಅನುಕೂಲವಾಗುವುದಲ್ಲ. ಕಾರ್ಪೋರೇಟ್ ಕಂಪನಿಗಳಿಗೆ ಮಾತ್ರ ಅನುಕೂಲವಾಗುತ್ತವೆ. ಕೃಷಿ ಬೆಳವಣಿಗೆ ಕೇವಲ ಶೇ. 2.5 ಆಗಿದೆ. ರೈತರ ಆದಾಯ ದುಪ್ಪಟ್ಟು ಮಾಡಲು ಶೇ. 10 ಅಭಿವೃದ್ಧಿ ಇರಬೇಕು. ಈ ಬಜೆಟ್ ರೈತರ ಮೂಗಿಗೆ ತುಪ್ಪ ಸವರುವ ಬಜೆಟ್ ಆಗಿದೆ. ಕೃಷಿಗೆ ಯಾವುದೇ ಕಾರ್ಯಕ್ರಮ ಪೂರಕವಾಗಿಲ್ಲ ಎಂದು ಟೀಕಿಸಿದರು.
Union Budget 2020 - ಬೆಂಗಳೂರಿಗೆ ಸಿಹಿ ಸುದ್ದಿ: ಸಬರ್ಬನ್ ರೈಲು ಯೋಜನೆಗೆ ಬಜೆಟ್ನಲ್ಲಿ ಅನುದಾನ
ಕೃಷಿಯನ್ನ ಖಾಸಗಿಕರಣಗೋಳಿಸಲು ಮೋದಿ ಸರ್ಕಾರ ಮುಂದಾಗಿದೆ. ಕೃಷಿ ಆಧಾರಿತ ಯೋಜನೆಗಳಲ್ಲಿ ಕಳೆದ ಸಾಲಿಗಿಂತ ಈ ಸಾಲಿನಲ್ಲಿ 10 ಸಾವಿರ ಕೋಟಿ ಕಡಿಮೆಯಾಗಿದೆ.
ಕೃಷಿಯ 16 ಅಂಶಗಳ ಯೋಜನೆಯಲ್ಲಿ 9 ಕಾರ್ಪೋರೆಟ್ ವಲಯಕ್ಕೆ ಸೀಮಿತವಾಗಿದೆ.ಕೃಷಿಯನ್ನ ಕಾರ್ಪೋರೆಟ್ಗೆ ಮೀಸಲು ಮಾಡಿದ್ದಾರೆ. ಮೋದಿ ಸರ್ಕಾರದಿಂದ ಕೃಷಿಗೆ ಸಿಕ್ಕ ನಿರಾಸೆಯ ಬಜೆಟ್ ಆಗಿದೆ ಎಂದು ಹೇಳಿದರು.
ಕೇಂದ್ರ ಬಜೆಟ್ ಟಿಂಕ್ರಿಂಗ್(tinkering) ಬಜೆಟ್ ಆಗಿದೆ. ಯಾವ ಯೋಜನೆಯನ್ನು ಪೂರ್ತಿಯಾಗಿ ಜಾರಿ ಮಾಡಿಲ್ಲ. ಹಳೆ ಯೋಜನೆಗಳನ್ನ ಮತ್ತೆ ಹೇಳಿದ್ದಾರೆ. ಬೆಂಗಳೂರಿಗೆ ಸಬ್ಅರ್ಬನ್ ರೈಲು ನಿಲ್ದಾಣ ಕೊಡುತ್ತೇವೆ ಅಂತ ಹೇಳಿದ್ದಾರೆ. ಇದನ್ನ ಕಳೆದ ಬಾರಿಯೇ ಘೋಷಣೆ ಮಾಡಿದರು. ಆದರೆ, ಒಂದೆ ಒಂದು ಕಿಲೋಮೀಟರ್ ಕೆಲಸ ಆಗಿಲ್ಲ. ಬೆಂಗಳೂರಿಗರು ಸುಮ್ಮನೆ ಖುಷಿ ಪಡಬೇಕು ಅಷ್ಟೇ ಎಂದು ಸಿದ್ದರಾಮಯ್ಯ ಬೇಸರಿಸಿದರು.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಸಲಹೆ ಪಡೆಯಲಿಲ್ಲ.
ಯಾವ ಆರ್ಥಿಕ ತಜ್ಞರ ಸಲಹೆಯನ್ನೂ ಪಡೆದಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಆರ್ಥಿಕ ಪರಿಸ್ಥಿತಿಯ ಮುನ್ನೋಟ ಇಲ್ಲ. ನಾವು ಇಟ್ಟುಕೊಂಡಿದ್ದ ನಿರೀಕ್ಷೆ ಎಲ್ಲ ಹುಸಿಯಾಗಿದೆ. ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ ಎಂದು ಹೇಳಿದರು.
ನಾವೆಲ್ಲ ತಾಳಿ ಮಾರೋದು ತೀರ ಕಷ್ಟ ಬಂದಾಗ. ಕೊನೆಯದಾಗಿ ಎಲ್ಲವನ್ನು ಬಿಟ್ಟು ತಾಳಿ ಕಳಚಿಕೊಡುತ್ತೇವೆ. ಹಾಗೇ ಕೇಂದ್ರ ಸರ್ಕಾರ ಕೊನೆಯದಾಗಿ ಎಲ್ಐಸಿ ಶೇರು ಮಾರಲು ಮುಂದಾಗಿದೆ. ಇದು ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ
ಎಂಥ ಪರಿಸ್ಥಿತಿಗೆ ಬಂದಿದೆ ಎಂಬುದು ನಮ್ಮ ಕಣ್ಮುಂದಿದೆ. ಎಲ್ಐಸಿ ಶೇರು ಮಾರಾಟ ಮಾಡುವ ಸ್ಥಿತಿ ಈ ದೇಶಕ್ಕೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ: ಜಿಲ್ಲೆಯ ಶಾಸಕರ ಮಾತಿಗೆ ಬೆಲೆಯೇ ಇಲ್ಲ - ಶಾಸಕ ಗೂಳಿಹಟ್ಟಿ ಶೇಖರ್ ವಿಷಾದ
ನಿರ್ಮಲಾ ಸೀತರಾಮನ್ ವಿಫಲ ಹಣಕಾಸು ಸಚಿವೆಯಾಗಿದ್ದಾರೆ. ಸರ್ಕಾರಕ್ಕೆ ಒಂದು ಆರ್ಥಿಕ ಶಿಸ್ತು ಬೇಕು. ಅದು ಈ ಸರ್ಕಾರದಲ್ಲಿ ಕಾಣಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ನಮ್ಮ ಅಕ್ಕಪಕ್ಕದ ದೇಶಗಳು ಸ್ನೇಹಪರ ದೇಶಗಳಲ್ಲ. ಆದರೂ, ರಕ್ಷಣಾ ಇಲಾಖೆಗೆ ಯಾವುದೇ ಆದ್ಯತೆ ಇಲ್ಲ. ಪಾಕಿಸ್ತಾನವಾಗಲಿ ಚೈನಾ ಆಗಲಿ ನಮ್ಮ ಸ್ನೇಹಿತರಂತೆ ಇಲ್ಲ. ಹೀಗಾಗಿ ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನ ಸೇರಿಕೊಂಡಿವೆ. ನಮ್ಮ ರಕ್ಷಣಾ ವ್ಯವಸ್ಥೆಗೆ ಹೆಚ್ಚು ಹಣ ಇಟ್ಟಿದ್ದರೆ ಅಕ್ಕಪಕ್ಕದ ದೇಶಗಳು ಎಚ್ಚರಿಕೆಯಿಂದ ಇರುತ್ತಿದ್ದವು. ಸುಮ್ಮನೆ ದೇಶವನ್ನ ಸುಭದ್ರವಾಗಿ ಇಡುತ್ತೇವೆ ಅಂತಾ ಬಜೆಟ್ನಲ್ಲಿ ರಕ್ಷಣಾ ಇಲಾಖೆಗೂ ಮಹತ್ವ ಇಲ್ಲ ಎಂದರು.
ಆಶಾದಾಯಕ ಬಜೆಟ್ ಅಲ್ಲ. ಕಳೆದ ಬಜೆಟ್ನ ಅಂದಾಜು ವೆಚ್ಚದಲ್ಲಿ 2 ಲಕ್ಷ ಕೋಟಿ ಕಡಿಮೆ ಖರ್ಚಾಗಿದೆ. ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಆದಾಯ ಬಂದಿಲ್ಲ. ಇದರಿಂದ ರಾಜ್ಯಗಳಿಗೆ ಬರಬೇಕಾದ ಪಾಲು ಕಡಿಮೆ ಆಗಿದೆ. ದೇಶದ ಆದಾಯವನ್ನ 5 ಟ್ರಿಲಿಯನ್ ಡಾಲರ್ ಮಾಡುತ್ತೇವೆ ಅಂತಾ ಹೇಳಿದ್ದರು. ಆದರೆ, ಇದು ಸಾಧ್ಯವಿಲ್ಲ ಅಂತ ಎಲ್ಲರಿಗೂ ಗೊತ್ತಾಗುತ್ತಿದೆ ಎಂದು ವ್ಯಂಗ್ಯವಾಡಿದರು.