ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ; ಮಾಜಿ ಸಂಸದ ಮುನಿಯಪ್ಪ ಸ್ಪಷ್ಟನೆ

ವಿರೋಧಿಗಳ ಜೊತೆಗಿದ್ರೆ ನಿಮ್ಮ ಗೌರವ ಘನತೆಗೆ ಧಕ್ಕೆ ಬರೋದಾಗಿ ನಾನು‌ ಹೇಳಿದ್ದು ನಿಜ, ಅದನ್ನ ಕೇಳೋದು ಬಿಡೋದು ಅವರಿಗೆ ಬಿಟ್ಟ ವಿಚಾರ ಎಂದ ಅವರು, ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದೆ ಬಂಡಾಯವಾಗಿ ನಾಮ ಪತ್ರ ಸಲ್ಲಿಕೆ ಮಾಡಿದವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು

G Hareeshkumar | news18-kannada
Updated:November 6, 2019, 3:41 PM IST
ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ; ಮಾಜಿ ಸಂಸದ ಮುನಿಯಪ್ಪ ಸ್ಪಷ್ಟನೆ
ಸಿದ್ದರಾಮಯ್ಯ, ಹಾಗೂ ಕೆ.ಹೆಚ್​. ಮುನಿಯಪ್ಪ
  • Share this:
ಕೋಲಾರ(ನ.06): ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದವರನ್ನ ಜತೆಗಿಟ್ಟುಕೊಳ್ಳಬೇಡಿ ಎಂದು ಹೇಳಿದ್ದು ನಿಜ, ಸಿದ್ದರಾಮಯ್ಯ ನಮ್ಮ ನಾಯಕರು, ಮಾಜಿ ಮುಖ್ಯಮಂತ್ರಿಗಳು, ಭಿನ್ನಾಭಿಪ್ರಾಯ ಇಲ್ಲ ಎಂದು ಮಾಜಿ ಸಂಸದ ಕೆ ಎಚ್​​ ಮುನಿಯಪ್ಪ ಹೇಳಿದ್ದಾರೆ.

ವಿರೋಧಿಗಳ ಜೊತೆಗಿದ್ರೆ ನಿಮ್ಮ ಗೌರವ ಘನತೆಗೆ ಧಕ್ಕೆ ಬರೋದಾಗಿ ನಾನು‌ ಹೇಳಿದ್ದು ನಿಜ, ಅದನ್ನ ಕೇಳೋದು ಬಿಡೋದು ಅವರಿಗೆ ಬಿಟ್ಟ ವಿಚಾರ ಎಂದ ಅವರು, ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದೆ ಬಂಡಾಯವಾಗಿ ನಾಮಪತ್ರ ಸಲ್ಲಿಕೆ ಮಾಡಿದವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು ಎಂದ ಅವರು. ಎಲ್ಲಾ ಭಿನ್ನಾಭಿಪ್ರಾಯಗಳನ್ನ ಬದಿಗೊತ್ತಿ ಚುನಾವಣೆ ಎದುರಿಸಬೇಕು ಎಂದು ಕಾರ್ಯಕರ್ತರಿಗೆ ಮುನಿಯಪ್ಪ ಸೂಚನೆ ನೀಡಿದರು.

ಲೋಕಸಭೆ ಚುನಾವಣೆ ಸೋಲಿನ ಬಗ್ಗೆ ಹಾಗೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಬಗ್ಗೆ ಕೆಎಚ್ ಮುನಿಯಪ್ಪ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಮೂರು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಜಯಭೇರಿ ಖಚಿತ ಎಂದರು.

ಮಾಜಿ ಸ್ಪೀಕರ್​ ಕೆ ಆರ್​ ರಮೇಶ್ ಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರ ಬಗ್ಗೆ ಈ ಹಿಂದೆ ಬಹಿರಂಗವಾಗಿ ಮಾಜಿ ಸಂಸದ ಕೆ ಎಚ್ ಮುನಿಯಪ್ಪಕಿಡಿಕಾರಿದ್ದರು.

ಇದನ್ನೂ ಓದಿ : ಮಾಜಿ ಪ್ರಧಾನಿ ದೇವೇಗೌಡರ ಪ್ರತಿಭಟನೆಗೆ ಮಣಿದ ಮುಖ್ಯಮಂತ್ರಿ: ಯಾದಗಿರಿ ಪಿಎಸ್​​ಐ ಎತ್ತಂಗಡಿ !

ಕಾಂಗ್ರೆಸ್ ಸ್ವಲ್ಪ ಕಷ್ಟಪಟ್ಟಿದ್ದರೇ ಮಹಾರಾಷ್ಟ್ರ​ ಹಾಗೂ ಹರಿಯಾಣದಲ್ಲಿ ಸರ್ಕಾರವನ್ನು ರಚನೆ ಮಾಡಬಹುದಿತ್ತು. ಆದರೆ ಚುನಾವಣೆಯಲ್ಲಿ ಶೇ 50 ಕ್ಕಿಂತ ಹೆಚ್ಚು ಮತಗಳು ಬಿಜೆಪಿ ವಿರುದ್ದವಾಗಿ ಕಾಂಗ್ರೆಸ್​​​ಗೆ ಬಿದ್ದಿವೆ. ಇಲ್ಲಿ ಜನರು ನಮಗೆ ಆದೇಶವನ್ನು ನೀಡಿದ್ದು. ಮುಂದಿನ ಚುನಾವಣೆಲ್ಲಿ ಜ್ಯಾತ್ಯಾತೀತ ಪಕ್ಷಗಳ ಜೊತೆಗೆ ಕಾಂಗ್ರೆಸ್ ಸರ್ಕಾರ ಮಾಡುವ ಸಂದರ್ಭಗಳು ಸನ್ನಿತವಾಗುತ್ತಿದೆ ಎಂದರು.

 
First published: November 6, 2019, 2:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading