ಸುಂದರ, ಒಂಟಿ ಹೆಣ್ಮಕ್ಕಳನ್ನ ಎತ್ತಾಕ್ಕೊಂಡು ಹೋಗ್ತಾರೆ, ಮೂರ್ನಾಲ್ಕು ದಿನ ಇಟ್ಕೊಂಡು ಕಳುಹಿಸ್ತಾರೆ


Updated:March 2, 2018, 9:12 PM IST
ಸುಂದರ, ಒಂಟಿ ಹೆಣ್ಮಕ್ಕಳನ್ನ ಎತ್ತಾಕ್ಕೊಂಡು ಹೋಗ್ತಾರೆ, ಮೂರ್ನಾಲ್ಕು ದಿನ ಇಟ್ಕೊಂಡು ಕಳುಹಿಸ್ತಾರೆ
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ
  • Share this:
- ನ್ಯೂಸ್ 18 ಕನ್ನಡ

ತುಮಕೂರು(ಮಾ.02): ಪ್ರಾಣಿಗಳ ರೀತಿ ಮಹಿಳೆಯರನ್ನ ಎತ್ತಾಕ್ಕೊಂಡು ಹೋಗಿ ಮೂರ್ನಾಲ್ಕು ದಿನ ಇಟ್ಕೊಂಡು ಕಳುಹಿಸುತ್ತಾರೆ. ಯಾರೂ ದೂರು ಕೊಡಂಗಿಲ್ಲ. ವಿರೋಧ ವ್ಯಕ್ತಪಡಿಸುವಂತಿಲ್ಲ. ಇಂಥದ್ದೊಂದು ಬೆಚ್ಚಿಬೀಳಿಸುವ ಕಾಮುಕರ ಜಾಲ ಪಾವಗಡ ತಾಲೂಕಿನ ನಿಡಗಲ್ಲು ಭಾಗದಲ್ಲಿ ಹರಡಿಕೊಂಡಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಹೊರ ಹಾಕಿದ್ದಾರೆ.

ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಇವತ್ತು ನಿಡಗಲ್ಲು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಾಗಲಕ್ಷ್ಮೀ ಬಾಯಿ ಆಘಾತಕಾರಿ ಸುದ್ದಿಯನ್ನ ಬಿಚ್ಚಿಟ್ಟಿದ್ದಾರೆ. ನಿಡಗಲ್ಲು ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯೊಬ್ಬರು ಪಾತ್ರೆ ತೊಳೆಯುವಾಗ ದಾಲಿ ನಡೆಸಿದ ಕಾಮುಕ ಕೈಹಿಡಿದು ಎಳೆದಾಡಿದ್ದಾನೆ. ಈ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ್ದರು. ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಿದಾಗ ಆತಂಕಕಾರಿ ವಿಷಯ ನನ್ನ ಗಮನಕ್ಕೆ ಬಂದಿದೆ. ನಮ್ಮ ರಾಜ್ಯ ಉತ್ತರ ಪ್ರದೇಶ, ಬಿಹಾರದ ರೀತಿ ಆಗಬಾರದು. ತಾಲಿಬಾನ್ ಸಂಸ್ಕೃತಿ ನಮ್ಮದಾಗಬಾರದು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರದೇಶದಲ್ಲಿ ಹೆಣ್ಣುಮಕ್ಕಳಿಗೆ ಉಳಿಗಾಲವಿಲ್ಲ. ಗಂಡನನ್ನ ಕಳೆದುಕೊಂಡಿರುವ ಹೆಣ್ಣುಮಕ್ಕಳು, ಒಂಟಿ ಹೆಣ್ಣುಮಕ್ಕಳು, ಸುಂದರವಾದ ಹೆಣ್ಣುಮಕ್ಕಳ ಮೇಲೆ ಕಾಮುಕರ ಕಣ್ಣು ಬಿದ್ದಿದೆ.ಹೆಣ್ಣುಮಕ್ಕಳನ್ನ ಎತ್ತಾಕ್ಕೊಂಡು ಹೋಗುವ ಕಾಮುಕರು ಮೂ್ನಾಲ್ಕು ದಿನಗಳ ಕಾಲ ಇಟ್ಕೊಂಡು ನಂತರ ಮನೆಗೆ ಬಿಡುತ್ತಾರೆ. ಆದರೆ, ಈ ಬಗ್ಗೆ ಆ ಮಹಿಳೆಯ ಕುಟುಂಬಸ್ಥರು ಯಾವುದೇ ದೂರು ನೀಡಬಾರದು ಎಂಬ ಪರಿಸ್ಥಿತಿ ಇದೆ. ಈ ಬಗ್ಗೆ ಹಲವಾರು ಹೆಣ್ಣುಮಕ್ಕಳು ನಮ್ಮ ಮುಂದೆ ನೋವು ತೋಡಿಕೊಂಡಿದ್ದಾರೆ. ದೂರು ನೀಡಲು ಮುಂದೆ ಬಂದಿದ್ದಾರೆ. ಅತ್ಯಾಚಾರಕ್ಕೊಳಗಾಗಿ ಅಪಮಾನದಿಂದ ಹಲವು ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾಗಲಕ್ಷ್ಮೀಬಾಯಿ ಹೇಳಿದ್ದಾರೆ.

 

 
First published:March 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading