ತಮಿಳುನಾಡಿಗೆ ಕಾವೇರಿ ನೀರು ಬಿಡುವ ಪ್ರಶ್ನೆಯೇ ಇಲ್ಲ: ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ‘


Updated:January 13, 2018, 6:20 PM IST
ತಮಿಳುನಾಡಿಗೆ ಕಾವೇರಿ ನೀರು ಬಿಡುವ ಪ್ರಶ್ನೆಯೇ ಇಲ್ಲ: ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ‘
ಮುಖ್ಯಮಂತ್ರಿ ಸಿದ್ದರಾಮಯ್ಯ

Updated: January 13, 2018, 6:20 PM IST
-ಧರಣೀಶ್ ಬೂಕನಕೆರೆ, ನವದೆಹಲಿ

ನವದೆಹಲಿ(ಜ.13): ಕೂಡಲೇ 7 ಟೆಎಂಸಿ ಕಾವೇರಿ ನೀರು ಬಿಡಬೇಕು ಮತ್ತು ಮುಂದಿನ 15 ದಿನಗಳಲ್ಲಿ 61 ಟಿಎಂಸಿ ನೀರು ಬಿಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಬರೆದಿರುವ ಪತ್ರದ ಕುರಿತಂತೆ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಲು‌ ಸಾಧ್ಯವಿಲ್ಲ ಎಂದಿದ್ದಾರೆ.

ನಮಗೇ ನೀರಿಲ್ಲದಿರುವುದರಿಂದ ತಮಿಳುನಾಡಿಗೆ ನೀರು ಬಿಡಲಾಗದು. ಮುಂದಿನ‌ ತಿಂಗಳು ಕಾವೇರಿ ತೀರ್ಪು ಬರಲಿದೆ. ನಮ್ಮ ಪರ ತೀರ್ಪು ಬರುವ ನಿರೀಕ್ಷೆ ಇದೆ. ಮಹಾದಾಯಿ ವಿಷಯದಲ್ಲಿ ಶೀಘ್ರವೇ ಸರ್ವಪಕ್ಷಗಳ ಸಭೆ ಕರೆಯುವೆ. ಸಭೆಯಲ್ಲಿ ಎಲ್ಲರೊಂದಿಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಪ್ರಧಾನಮಂತ್ರಿ‌ ಮೋದಿ ಮಧ್ಯಪ್ರವೇಶದಿಂದ ಮಾತ್ರ ಮಹಾದಾಯಿ ಸಮಸ್ಯೆಗೆ ಪರಿಹಾರ ಸಿಗಲಿದೆ. ರಾಜ್ಯ ಬಿಜೆಪಿ ನಾಯಕರು ಇದನ್ನು ಮೋದಿಗೆ ಮನವರಿಕೆ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಾವೇರಿ ಜಲಾಶಯಗಳಲ್ಲ ಸದ್ಯ ಕೇವಲ 48 ಟಿಎಂಸಿ ನೀರು ಲಭ್ಯವಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗಲಿದೆ. ಅಂತಹುದರಲ್ಲಿ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ಧಾರೆ.

 

 
First published:January 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ