• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Danger Journey: ಒಂದೇ ಬಸ್‌ನಲ್ಲಿ ಊರು ತಲುಪುವ ಧಾವಂತ; ಪ್ರಾಣ ಪಣಕ್ಕಿಟ್ಟು ವಿದ್ಯಾರ್ಥಿಗಳು, ಜನರ ಪ್ರಯಾಣ!

Danger Journey: ಒಂದೇ ಬಸ್‌ನಲ್ಲಿ ಊರು ತಲುಪುವ ಧಾವಂತ; ಪ್ರಾಣ ಪಣಕ್ಕಿಟ್ಟು ವಿದ್ಯಾರ್ಥಿಗಳು, ಜನರ ಪ್ರಯಾಣ!

ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಟ

ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಟ

ಏಕಕಾಲಕ್ಕೆ ಶಾಲಾ ಕಾಲೇಜುಗಳು ಬಿಡುತ್ತಿರುವುದರಿಂದ ಒಂದೇ ಸಮಯಕ್ಕೆ ಜನರು ತಮ್ಮೂರಿಗೆ ಹೋಗುವ ಧಾವಂತವಿದೆ. ಹೀಗಾಗಿ ಬರೋ ಒಂದೇ ಬಸ್​ನಲ್ಲಿ ಜನರು ಹಾಗೂ ಶಾಲಾ ಮಕ್ಕಳು ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

 • Share this:

ಕೊಪ್ಪಳ (ಜು. 12): ಮುಂಜಾನೆ ಬೇರೆ ಬೇರೆ ಬಸ್, ಬೇರೆ ಊರಿನಿಂದ ಬೇರೆ ಬೇರೆ ಸಮಯಕ್ಕೆ ಬರುತ್ತದೆ. ಆದ್ರೆ ವಾಪಸ್ಸು ಹೋಗುವಾಗ ಇವರೆಲ್ಲರೂ ಜೀವನವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕು. ಶಾಲಾ-ಕಾಲೇಜು  (School-College) ಮಕ್ಕಳು ನಿತ್ಯ ಬಸ್ ನಲ್ಲಿ ಜೋತು ಬಿದ್ದು ಹೋಗುತ್ತಿದ್ದಾರೆ. ಈ  ಬಗ್ಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕಣ್ಣು- ಕಿವಿ ಮುಚ್ಚಿಕೊಂಡಿದ್ದಾರೆ. ಬಸ್ (Bus) ಅವ್ಯವಸ್ಥೆಯ ಕಾರಣಕ್ಕೆ ಪ್ರಯಾಣಕರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿ ತೀರಾ ಹಿಂದುಳಿದಿರುವ ಕೊಪ್ಪಳ (Koppala) ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ (Transport System) ಸರಿ. ಇಲ್ಲಿ ಪ್ರಯಾಣಕ್ಕೆ (Journey) ಬಸ್ ಸೇವೆ ಅನಿವಾರ್ಯವಾಗಿದೆ.


ಸಂಜೆಯ ವೇಳೆಗೆ ಕೊಪ್ಪಳದಿಂದ ತಮ್ಮ ತಮ್ಮ ಊರಿಗೆ ಹೋಗಲು ನಿತ್ಯ ಪರದಾಡುವಂಥ ಸ್ಥಿತಿ ಇದೆ. ಕೊಪ್ಪಳ ಬಸ್ ನಿಲ್ದಾಣ ಸಂಜೆ 4 ಗಂಟೆಯಿಂದ ಆರು ಗಂಟೆಯವರೆಗೂ ಪ್ರಯಾಣಿಕರಿಂದ ಗಿಜಗುಡುತ್ತಿರುತ್ತದೆ. ಒಂದು ಬಸ್ ಬಂದರೆ ಈ ಬಸ್ ಫುಲ್ ಆಗಿರುತ್ತದೆ. ಈ ಬಸ್ ಬಿಟ್ಟರೆ ಬೇರೆ ಬಸ್ ಇರೋವುದಿಲ್ಲ. ಈ ಕಾರಣಕ್ಕೆ ಎಷ್ಟೆ ರಸ್ ಇದ್ದರೂ ಚಿಂತೆ ಇಲ್ಲ ತಾವು ತಮ್ಮೂರಿಗೆ ಹೋಗಬೇಕಾದ ಅನಿವಾರ್ಯತೆ ಇದೆ.


ಜೀವ ಪಣಕ್ಕಿಟ್ಟು ಪ್ರಯಾಣ


ಜಿಲ್ಲಾ ಕೇಂದ್ರ ಸ್ಥಳವಾಗಿರುವ ಕೊಪ್ಪಳ ನಗರಕ್ಕೆ ಬೇರೆ ಬೇರೆ ಊರಿನಿಂದ ಸರಕಾರಿ ಕಚೇರಿ ಕೆಲಸ ಮಾಡುವ ಸಿಬ್ಬಂದಿ. ಕೊಪ್ಪಳದಲ್ಲಿ ಮುಂಜಾನೆ ಕೆಲಸಕ್ಕೆ ಬಂದು ಮತ್ತೆ ತಮ್ಮ ಊರಿಗೆ ಹೋಗುವ ಜನರು. ಇವರ ಮಧ್ಯೆ ಸಂಜೆಯ ವೇಳೆಗೆ ಏಕಕಾಲಕ್ಕೆ ಶಾಲಾ ಕಾಲೇಜುಗಳು ಬಿಡುತ್ತಿರುವುದರಿಂದ ಒಂದೇ ಸಮಯಕ್ಕೆ ಜನರು ತಮ್ಮೂರಿಗೆ ಹೋಗುವ ಧಾವಂತವಿದೆ. ಈ ಧಾವಂತದಿಂದ ಜನರು ಹಾಗೂ ಶಾಲಾ ಮಕ್ಕಳು ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಇಂದು ಸೋಮುವಾರ ಕೊಪ್ಪಳ ಬರುವ ಜನರ ಸಂಖ್ಯೆ ಸ್ವಲ್ಪ ಹೆಚ್ಚೆ ಎಂದು ಹೇಳಬೇಕು.


There is no proper transport system in Koppala and people are roaming around sbr Pvn
ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಟ


ಕೇಳೋರಿಲ್ಲ ವಿದ್ಯಾರ್ಥಿಗಳ ಪರದಾಟ!


ಇಂದು ಸಂಜೆ 5.30ಕ್ಕೆ ಕೊಪ್ಪಳ ಬಸ್ ನಿಲ್ದಾಣದಿಂದ ಕುಷ್ಟಗಿಗೆ ಹೋಗುವ ಬಸ್ ಗೆ ಫುಟ್ ರೆಸ್ಟ್ ಮೇಲೆ ಪ್ರಯಾಣಿಕರು ಪ್ರಯಾಣಿಸುವ ದೃಶ್ಯ ಕಂಡು ಬಂತು. ಸಾಮಾನ್ಯವಾಗಿ ಬಸ್ ಕಂಡಕ್ಟರ್ ಮೊದಲಿಗೆ ಪ್ರಯಾಣಿಕರನ್ನು ನಂತರ ಪಾಸ್ ಹೊಂದಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿರುವದರಿಂದ ಶಾಲಾ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಬಸ್​ ಡೋರ್​ ಬಳಿ ನಿಂತು ಪ್ರಯಾಣಿಸುತ್ತಿರುವುದು ಕಂಡು ಬಂತು. ಬಸ್ ಪ್ರಯಾಣ ಆರಂಭಿಸುವ ಮುನ್ನ ಬಸ್ ಬಾಗಿಲು ಭದ್ರ ಪಡಿಸಿಕೊಂಡು ಪ್ರಯಾಣ ಆರಂಭಿಸಬೇಕು.


ಇದನ್ನೂ ಓದಿ: Tunga Bhadra: ತುಂಗಭದ್ರೆಯ ಒಡಲಲ್ಲಿ ಜಲರಾಶಿಯ ಅಬ್ಬರ! ಅದ್ಭುತ ದೃಶ್ಯ ನೀವೂ ಕಣ್ತುಂಬಿಕೊಳ್ಳಿ


ಈ ಬಸ್ ಬಿಟ್ಟರೆ ಬೇರೆ ಬಸ್ ಇಲ್ಲ


ಆದರೆ ಇಲ್ಲಿ ಬಸ್ ನಲ್ಲಿ ನಿಗಿದಿತ ಸೀಟುಗಳಿಗಿಂತ ದುಪ್ಪಟ್ಟು ಜನರಿರುವುದರಿಂದ ಡ್ರೈವರ್ ಹಾಗು ಕಂಡಕ್ಟರ್ ನಿಸ್ಸಾಯಕರಾಗಿ ಬಸ್ ಓಡಿಸಬೇಕಾಗಿದೆ. ಈ ಸಂದರ್ಭದಲ್ಲಿ ಬಸ್ ನಲ್ಲಿರುವ ಪ್ರಯಾಣಿಕರನ್ನು ಮಾತನಾಡಿಸಿದರೆ ಈ ಬಸ್ ಬಿಟ್ಟರೆ ಬೇರೆ ಬಸ್ ಇಲ್ಲ. ಇದೇ ಬಸ್ ಗೆ ಹೋದರೆ ಕುಷ್ಟಗಿಯಿಂದ ಮುಂದೆ ನಮ್ಮೂರಿಗೆ ಹೋಗಬಹುದು ಇಲ್ಲದಿದ್ದರೆ ಇಲ್ಲ. ಅಲ್ಲದೆ ಕ್ರಾಸ್ ನಲ್ಲಿ ಇಳಿದು 3-4 ಕಿಮೀ ದೂರ ನಡೆದುಕೊಂಡು ಹೋಗಬೇಕು ಇದರಿಂದಾಗಿ ಏನು ಮಾಡೋಣ ಸರ್ ಎನ್ನುತ್ತಾರೆ.


ಇದನ್ನೂ ಓದಿ: Pampa Sarovara: ಅಂಜನಾದ್ರಿ ಆಯ್ತು, ಈಗ ಪಂಪಾ ಸರೋವರದ ಸರದಿ; ಹೊಸ ವಿವಾದ ಸೃಷ್ಟಿಸಿದ ಗುಜರಾತ ಸರ್ಕಾರ

top videos


  ಇದು ಕೇವಲ ಕುಷ್ಟಗಿ ಕಡೆ ಹೋಗುವ ಬಸ್ಸಿನ ಸಮಸ್ಯೆ ಅಲ್ಲ. ಕೊಪ್ಪಳದಿಂದ ಬೇರೆ ಬೇರೆ ಸ್ಥಳಕ್ಕೆ ಹೋಗುವ ಬಸ್ ಗಳ ಸಮಸ್ಯೆ. ಈ ಸಮಸ್ಯೆಯ ಬಗ್ಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ ಇದೆ. ಅವಶ್ಯಕತೆ ಇರುವಾಗ ಹೆಚ್ಚು ಬಸ್ ಗಳನ್ನು ಓಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜನರು ಅಪಾಯ ರೀತಿಯಲ್ಲಿ ಸಂಚರಿಸುವ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.

  First published: