Hospital: ಇದು ಹೆಸರಿಗೆ ಮಾತ್ರ ಜಿಲ್ಲಾಸ್ಪತ್ರೆ; ಆದ್ರೆ ಬಾಣಂತಿಯರಿಗೆ ಬೆಡ್‌ ಸಿಗಲ್ಲ, ಬಿಸಿ ನೀರು ಕೊಡಲ್ಲ!

ಹೆರಿಗೆ ನಂತರದಲ್ಲಿ ಬಾಣಂತಿಯರು ನಿತ್ಯ ಕರ್ಮಗಳಿಗೆ ತಣ್ಣೀರು ಬಳಸಿದರೆ, ಹೆರಿಗೆ ಗಾಯಕ್ಕೆ ಸೋಂಕು ತಗುಲುವ ಭೀತಿಯೂ ಇದೆ, ಹಾಗಾಗಿ ಬಾಣಂತಿಯರು ಕೆಲ ದಿನಗಳ ಕಾಲ ಬಿಸಿ ನೀರನ್ನೆ ಬಳಸುವುದು ಸಾಮಾನ್ಯ ವಿಚಾರವಾಗಿದೆ, ಆದರೆ ಇಷ್ಟೆಲ್ಲಾ ವೈದ್ಯಕೀಯ ಸೇವೆ ಇರುವ ಆಸ್ಪತ್ರೆಯಲ್ಲಿ ಕನಿಷ್ಟ ಬಿಸಿನೀರು ಒದಗಿಸಲಾಗದ ನಿರ್ಲಕ್ಷ್ಯ ಏತಕ್ಕೆ ಎನ್ನುವ ಪ್ರಶ್ನೆ ಕಾಡುತ್ತಿದೆ.

ಬಿಸಿ ನೀರಿಗಾಗೂ ಪರದಾಡಬೇಕಾದ ಪರಿಸ್ಥಿತಿ

ಬಿಸಿ ನೀರಿಗಾಗೂ ಪರದಾಡಬೇಕಾದ ಪರಿಸ್ಥಿತಿ

  • Share this:
ಕೋಲಾರ: ಬಡವರಿಗೆ (Poor people) ಉತ್ತಮ ಆರೋಗ್ಯ (Good health) ನೀಡಬೇಕಿದ್ದ ಕೋಲಾರ ಜಿಲ್ಲಾಸ್ಪತ್ರೆ (Kolar District Hospital) ಅವ್ಯವಸ್ತೆಗಳ ಆಗರವಾಗಿದೆಯಾ ಎನ್ನುವ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ. ಈಗಾಗಲೇ ಹೆರಿಗೆ (Delivery) ವಿಚಾರವಾಗಿ ಆಸ್ಪತ್ರೆಯಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿರುವ ಸಮಯದಲ್ಲೇ ಆಸ್ಪತೆಯಲ್ಲಿ ಬಾಣಂತಿಯರ ಆರೈಕೆ ವಿಚಾರದಲ್ಲೂ ಭಾರೀ ನಿರ್ಲಕ್ಷ್ಯ ತೋರುತ್ತಿರುವುದು ನ್ಯೂಸ್ 18 ಕನ್ನಡ ವರದಿಯಲ್ಲಿ ಬಯಲಿಗೆ ಬಂದಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಬಿಸಿ ನೀರಿನ (Hot Water) ವ್ಯವಸ್ತೆಯಿಲ್ಲ, ಮಕ್ಕಳ ವಾರ್ಡ್‍ನಲ್ಲಿ (Children's Ward) ಬೆಡ್ (Bed) ಇಲ್ಲದೆ ಗರ್ಭಿಣಿಯರು ಹಾಗೂ ಬಾಣಂತಿಯರು ಪರದಾಡುವಂತಾಗಿದೆ.

ಬಿಸಿ ನೀರಿಗಾಗಿ ಬಾಣಂತಿಯರ ಪರದಾಟ

100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಹೈಟೆಕ್ ಆಸ್ಪತ್ರೆಯಲ್ಲಿ ನಿತ್ಯ ಬೆಳಗಾದರೆ, ಬಾಣಂತಿಯರ ನಿತ್ಯಕರ್ಮಗಳಿಗೆ ಬಿಸಿ ನೀರು ಒದಗಿಸಲು ಪೋಷಕರ ಪರದಾಟ ಪಡುತ್ತಿದ್ದಾರೆ. ಬಾಟಲ್ ಹಿಡಿದು, ಹೋಟೆಲ್, ಟೀ ಶಾಪ್ ಗಳಿಗೆ ತೆರಳಿ ಬಿಸಿ ನೀರು ಕಾಯಿಸಿಕೊಂಡು ತರುತ್ತಿದ್ದಾರೆ. ಬಾಟಲ್ ನೀರು ಖರೀದಿ ಮಾಡೊದು ಅಲ್ಲದೆ, ಒಂದು ಬಾಟಲ್ ಬಿಸಿ ನೀರು ಕಾಯಿಸಿಕೊಳ್ಳೊಕೆ 10 ರಿಂದ 20 ರೂಪಾಯಿ ಹಣ ಖರ್ಚು ಮಾಡುವ ದುಸ್ಥಿತಿ ಎದುರಾಗಿದೆ. ಕೆಲ ತಿಂಗಳಿಂದ ಅವ್ಯವಸ್ತೆಯಿದ್ದರು, ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ.

ಕೋಟಿ ಕೋಟಿ ವೆಚ್ಚಮಾಡಿದ್ರೂ ಸರಿಯಾಗದ ವ್ಯವಸ್ಥೆ

ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೊ ಹೈಟೆಕ್ ಆಸ್ಪತ್ರೆಯಲ್ಲಿ ಬಿಸಿ ನೀರಿಗಾಗಿ ಸೋಲಾರ್ ವ್ಯವಸ್ತೆಯನ್ನ ಅಳವಡಿಸಲಾಗಿದೆ. ಸೋಲಾರ್ ವ್ಯವಸ್ತೆ ಹದಗೆಟ್ಟು ಹಲವು ತಿಂಗಳುಗಳೇ ಕಳೆದರು ಇನ್ನು ರಿಪೇರಿ ಕಾರ್ಯವೇ ಆಗಿಲ್ಲ. ಹೆರಿಗೆ ನಂತರದಲ್ಲಿ ಬಾಣಂತಿಯರು ನಿತ್ಯ ಕರ್ಮಗಳಿಗೆ ತಣ್ಣೀರು ಬಳಸಿದರೆ, ಹೆರಿಗೆ ಗಾಯಕ್ಕೆ ಸೋಂಕು ತಗುಲುವ ಭೀತಿಯೂ ಇದೆ, ಹಾಗಾಗಿ ಬಾಣಂತಿಯರು ಕೆಲ ದಿನಗಳ ಕಾಲ ಬಿಸಿ ನೀರನ್ನೆ ಬಳಸುವುದು ಸಾಮಾನ್ಯ ವಿಚಾರವಾಗಿದೆ, ಆದರೆ ಇಷ್ಟೆಲ್ಲಾ ವೈದ್ಯಕೀಯ ಸೇವೆ ಇರುವ ಆಸ್ಪತ್ರೆಯಲ್ಲಿ ಕನಿಷ್ಟ ಬಿಸಿನೀರು ಒದಗಿಸಲಾಗದ ನಿರ್ಲಕ್ಷ್ಯ ಏತಕ್ಕೆ ಎನ್ನುವ ಪ್ರಶ್ನೆ ಕಾಡುತ್ತಿದೆ.

ಇದನ್ನೂ ಓದಿ: Multispeciality Hospital: ಉತ್ತರ ಕನ್ನಡದ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಗೆ ಎಳ್ಳುನೀರು! ಅನುಮೋದನೆಯನ್ನೇ ನೀಡದ ಆರ್ಥಿಕ ಇಲಾಖೆ!

ಬೇಜವಾಬ್ದಾರಿ ಉತ್ತರ ನೀಡಿದ ವೈದ್ಯಾಧಿಕಾರಿ

ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಿಸಿ ನೀರು ಒದಗಿಸುವಂತೆ ಬಾಣಂತಿಯರು ಹಾಗು ಪೊಷಕರ ಆಗ್ರಹಿಸಿದ್ದು, ಮತ್ತೊಂದೆಡೆ ಆಸ್ಪತ್ರೆಯಲ್ಲಿ ತಣ್ಣೀರಿಗೂ ಅಭಾವ ಎದುರಾಗಿದೆ. ಸಮಯಕ್ಕೆ ಸರಿಯಾಗಿ ನೀರು ಪೂರೈಸುತ್ತಿಲ್ಲ, ಶೌಚಾಲಯದಲ್ಲಿ ಸ್ವಚ್ಚತೆಯಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ, ಈ ಬಗ್ಗೆ ಬೇಜವಾಬ್ದಾರಿಯಾಗಿ ಪ್ರತಿಕ್ರಿಯೆ ನೀಡಿರುವ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ. ವಿಜಯ್ ಕುಮಾರ್, ಆಸ್ಪತ್ರೆಯಲ್ಲಿ ಬಿಸಿ ನೀರು ಇದೆ. ಅಲ್ಲದೇ ಅದರ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ತಾಯಿ ಮಕ್ಕಳ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸುವಂತೆ ಮನವಿ

ತಾಯಿ ಮತ್ತು ಮಕ್ಕಳ ಆಸ್ಪತ್ರೆ 100 ಬೆಡ್‍ಗಳ ಸಾಮಥ್ರ್ಯ ಹೊಂದಿದ್ದು, ಇದರಲ್ಲಿ ಮಕ್ಕಳಿಗೆ 40 ರಿಂದ 50 ಬೆಡ್ ಗಳನ್ನ ಮೀಸಲಿಡಲಾಗಿದೆ, ಆದರೆ ವಾತಾವರಣದಲ್ಲಿ ಏರು ಪೇರಾಗುವ ಸಮಯದಲ್ಲಿ ಮಕ್ಕಳಲ್ಲಿ ಸಾಂಕ್ರಾಮಿಕ ರೊಗ ಹೆಚ್ಚಾಗಿ, ಆಗಾಗ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಅಂತಹ ಸಮಯದಲ್ಲಿ ಒಂದು ಬೆಡ್ ಮೇಲೆ ಇಬ್ಬರು, ಮೂವರು ಮಕ್ಕಳಿಗೆ ಚಿಕಿತ್ಸೆ ನೀಡುವ ದುಸ್ತಿತಿಯೂ ಆಸ್ಪತ್ರೆಯಲ್ಲಿದೆ, ಹಾಗಾಗಿ ಆಸ್ಪತ್ರೆಯಲ್ಲಿ ಮತ್ತಷ್ಟು ಬೆಡ್‍ಗಳ ಸಂಖ್ಯೆ ಏರಿಸಿ ವೈದ್ಯಕೀಯ ಸೇವೆಯನ್ನ ಮತ್ತಷ್ಟು ಮೇಲ್ದರ್ಜೆ ಏರಿಸುವಂತೆಯೂ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Pregnant Lady Problem: ಈ ಊರಲ್ಲಿ ಪೌಷ್ಠಿಕ ಆಹಾರಕ್ಕಾಗಿ 7 ಕಿಮೀ ನಡೆಯಬೇಕು! ಗರ್ಭಿಣಿ ಗೋಳು ಕೇಳೋರಿಲ್ಲ

ಒಟ್ಟಿನಲ್ಲಿ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿದೆ, ಆದರೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ತೆಯನ್ನ ಗಮನಿಸಿದರೆ ಸರ್ಕಾರದ ಅನುದಾನ ಎಲ್ಲಿ ಬಳಕೆಯಾಗಿದೆ ಎನ್ನುವ ಪ್ರಶ್ನೆ ಕಾಡುತ್ತಿದೆ.
Published by:Annappa Achari
First published: