Bengaluru Potholes: ಪ್ರಧಾನಿಗಳು ಸಂಚರಿಸಿದ ರಸ್ತೆಯಲ್ಲಿ ಗುಂಡಿಗಳೇ ಬಿದ್ದಿಲ್ಲ; ಸರ್ಕಾರಕ್ಕೆ ವರದಿ ಸಲ್ಲಿಸಿದ BBMP

ಪಿಎಂ ಸಾಹೇಬ್ರು ಬಂದಾಗ ನಾವು ಆ ರಸ್ತೆ ಮಾಡಿಲ್ಲ. ಆ ರಸ್ತೆಯಲ್ಲಿ ಪ್ರಧಾನ ಮಂತ್ರಿಗಳು ಓಡಾಡಿಲ್ಲ. ಅದು ಪಿಎಂ ಓಡಾಡಿದ ಪಕ್ಕದ ರಸ್ತೆ ಆಗಿತ್ತು

ಬಿಬಿಎಂಪಿ

ಬಿಬಿಎಂಪಿ

  • Share this:
ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಗಮನದ ಹಿನ್ನೆಲೆ ಬೆಂಗಳೂರಿನ ಕೆಲ ರಸ್ತೆಗಳಿಗೆ (Bengaluru Road) ಡಾಂಬಾರ್ ಹಾಕಲಾಗಿತ್ತು. ಆದ್ರೆ ಈ ಕಾಮಗಾರಿ ಕಳಪಡೆಯಾಗಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ ಬಿಬಿಎಂಪಿಗೆ (BBMP) ವರದಿ ಸಲ್ಲಿಸುವಂತೆ ಪ್ರಧಾನಿ ಕಾರ್ಯಾಲಯ ಸೂಚನೆ ನೀಡಿತ್ತು. ಈ ಸೂಚನೆ ಬೆನ್ನಲ್ಲೇ ಪ್ರಧಾನಿ ಕಾರ್ಯಾಲಯಕ್ಕೆ (PM Office) ತಲುಪಿಸಲು ಸರ್ಕಾರಕ್ಕೆ ಬಿಬಿಎಂಪಿ ವರದಿ ಸಲ್ಲಿಸಿದೆ. ಈ ಸಂಬಂಧ ತನಿಖೆ ನಡೆಸಿ ಬಿಬಿಎಂಪಿ ಯೋಜನಾ‌ ವಿಭಾಗದ ಅಧಿಕಾರಿಗಳು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಿದ್ದಾರೆ. ಸದ್ಯ ವರದಿಯ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ಬಿಬಿಎಂಪಿ ಅಧಿಕಾರಿಗಳು (BBMP) ಸಿದ್ಧಪಡಿಸಿರುವ ನಾಲ್ಕು ಪುಟದ ವರದಿಯಲ್ಲಿ ತನ್ನ ತಪ್ಪನ್ನು ಮುಚ್ಚಿಟ್ಟುಕೊಂಡಿದೆ. ವರದಿಯಲ್ಲಿ ಪ್ರಧಾನಿಗಳು ಸಂಚರಿಸಿದ ರಸ್ತೆಯಲ್ಲಿ ಗುಂಡಿ (Potholes) ಬಿದ್ದಿಲ್ಲ ಅಂತ ಉಲ್ಲೇಖಿಸಲಾಗಿದೆ.

ಪ್ರಧಾನಿ ಮೋದಿ ಸಂಚರಿಸಿದ ರಸ್ತೆಯ ಸಮೀಪದ ರಸ್ತೆಗಳು ಗುಂಡಿ ಬಿದ್ದಿವೆ ಅಂತ ವರದಿ ನೀಡಲಾಗಿದೆ. ಜ್ಞಾನಭಾರತಿ, ಮರಿಯಪ್ಪನಪಾಳ್ಯ ಮಾರ್ಗದ ರಸ್ತೆಯಲ್ಲಿ ರಸ್ತೆ ಗುಂಡಿ ಬಿದ್ದಿರೋದು ಎಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಈಗ ಬಿಬಿಎಂಪಿ ಮಾತ್ರ ತನ್ನ ವರದಿಯಲ್ಲಿ ಆ ರೀತಿಯ ಗುಂಡಿಗಳೇ ಬಿದ್ದಿಲ್ಲ ಅಂತ ಹೇಳಿದೆ.

ಮೂವರು ಇಂಜಿನಿಯರ್ ಗಳಿಗೆ ನೋಟಿಸ್

ಪ್ರಧಾನಿಗಳು ಸಂಚರಿಸಿದ ರಸ್ತೆಗಳಲ್ಲಿ ಗುಂಡಿ ಬಿದ್ದಿಲ್ಲ. ರಸ್ತೆಯು ಗುಣಮಟ್ಟದಿಂದ ಕೂಡಿದೆ. ಕೆಲ ಕಡೆ ಕಳಪೆ ಕಾಮಗಾರಿ ನಡೆಸಿದ್ದ ಪ್ರಕರಣ ಕುರಿತಂತೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಮೂವರು ಇಂಜಿನಿಯರ್ ಗಳಿಗೆ ನೋಟಿಸ್ ನೀಡಲಾಗಿದೆ ಎಂದು ಬಿಬಿಎಂಪಿ ನೀಡಿದ ವರದಿಯಲ್ಲಿದೆ.

ಇದನ್ನೂ ಓದಿ:  Couple Reunited: ಯೌವ್ವನದಲ್ಲಿ ವಿಚ್ಛೇದನ, 52 ವರ್ಷಗಳ ಬಳಿಕ ದಂಪತಿಯನ್ನು ಒಂದು ಮಾಡಿದ ಕೋರ್ಟ್

ಮೋದಿ ಅವರು ಸಾಗಿದ ಮಾರ್ಗದಲ್ಲೇ ಬಿದ್ದಿದೆ ದೊಡ್ಡ ರಸ್ತೆ ಗುಂಡಿದೆ. ಮರಿಯಪ್ಪನಪಾಳ್ಯ ರಸ್ತೆಯಲ್ಲಿ ಕಳಪೆ ಡಾಂಬರ್ ಈಗಾಗಲೇ ಕಿತ್ತುಬಂದಿದೆ. ಇಷ್ಟಾಗಿದ್ರೂ ನಮ್ಮ ಕಡೆಯಿಂದ ಯಾವುದೇ ತಪ್ಪು ಮಾಡಿಲ್ಲ ಅಂತ ಬಿಬಿಎಂಪಿ ಸಮಜಾಯಿಷಿ ನೀಡುವ ಮೂಲಕ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ.

ಬಿಬಿಎಂಪಿ ವರದಿಯಲ್ಲಿರುವ ಅಂಶಗಳೇನು?

*ಪ್ರಧಾನಿ ಸಂಚಾರ ಮಾಡಿದ ರಸ್ತೆಯಲ್ಲಿ ಗುಂಡಿ ಬಿದ್ದಿಲ್ಲ. ಗುಣಮಟ್ಟದ ಡಾಂಬರ್ ಮಾಡಿದ್ದೀವಿ

*ಜಲಮಂಡಳಿ ಪೈಪ್ ಅಳವಡಿಕೆ ಆಗಿದ್ದರಿಂದ ಡಾಂಬರ್ ಕಿತ್ತು ಬಂದಿದೆ.

*ಕಳಪೆ ಕಾಮಗಾರಿ ಮಾಡಿದ  ಮೂವರು ಇಂಜಿನಿಯರ್ ಗಳಿಗೆ ನೋಟಿಸ್ ನೀಡಲಾಗಿದೆ.

*ಇನ್ಮುಂದೆ ಹೀಗೆ ಆಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

*ಬಿಬಿಎಂಪಿ ಯಾವತ್ತೂ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡುತ್ತಿದೆ

ವರದಿ ಬಗ್ಗೆ  ತುಷಾರ್ ಗಿರಿನಾಥ್ ಹೇಳಿಕೆ

ಈ ವರದಿ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ನೀಡಿದ ಸೂಚನೆ ಮೇರೆಗೆ ಇಂದು ಸಭೆ ನಡೆಸಲಾಗಿದೆ. ಪ್ರತಿ ಸೋಮವಾರ ಎಲ್ಲ ಇಲಾಖೆಯವರು ಸೇರೆ ಸಮನ್ವಯ ಸಭೆ ನಡೆಸಲಾಗುತ್ತದೆ ಎಂದರು.

ಟ್ರಾಫಿಕ್ ಪೊಲೀಸರು ನಗರದಲ್ಲಿ ಮಳೆ ಬಂದಾಗ ವಾಟರ್ ಲಾಗಿನ್ ಆಗುವ 54 ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಹೆಬ್ಬಾಳ, ಕೆಆರ್ ಪುರಂ ಜಂಕ್ಷನ್ ಗೊರಗುಂಟೆ ಪಾಳ್ಯ ದಲ್ಲಿನ ಟ್ರಾಫಿಕ್ ಬಗ್ಗೆ ಸಹ ಸಭೆಯಲ್ಲಿ ಚರ್ಚೆ ನಡೆದಿದೆ. ಈ ಭಾಗದಲ್ಲಿ ಟ್ರಾಫಿಕ್ ತಡೆಗಟ್ಟಲು ತಾತ್ಕಾಲಿಕ  ಹಾಗೂ ಶಾಶ್ವತ ಕ್ರಿಯಾ ಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ರಸ್ತೆ ಗುಂಡಿ ಬಗ್ಗೆ ವರದಿ

ನಾಳೆ ರಾತ್ರಿ 11 ಗಂಟೆಗೆ ಪೊಲೀಸ್ ಇಲಾಖೆಯೊಂದಿಗೆ  ತಪಾಸಣೆ ಮಾಡಲಿದ್ದೇವೆ. ಟ್ರಾಫಿಕ್ ಸುಲಲಿತ ಸಂಚಾರಕ್ಕೆ ಪೊಲೀಸ್ ಇಲಾಖೆಗೆ ಬೇಕಿರುವ ಸಹಕಾರ ಬಿಬಿಎಂಪಿ ಮಾಡಲಿದೆ.

ಈ ಸಭೆಯಲ್ಲಿ ರಸ್ತೆ ಗುಂಡಿ ವಿಚಾರವಾಗಿ ಸಹ ಚರ್ಚೆ ನಡೆದಿದೆ. ಇವತ್ತಿನವರೆಗೂ ಬಿಬಿಎಂಪಿ ಪ್ರಕಾರ 1,000 ಪ್ಲಸ್ ರಸ್ತೆ ಗುಂಡಿ ಇದೆ. ಆದರೆ ಪೊಲೀಸ್ ಇಲಾಖೆ  ಪ್ರಕಾರ 2,000 ರಸ್ತೆ ಗುಂಡಿಗಳಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಕೇಳಲಾಗಿದೆ.

ಇದನ್ನೂ ಓದಿ:  Ginger Price: ಉತ್ತರ ಭಾರತದಿಂದ ಭಾರೀ ಬೇಡಿಕೆ; ದಿಢೀರ್ ಏರಿಕೆಯಾದ ಶುಂಠಿ ಬೆಲೆ

ಆ ರಸ್ತೆಯಲ್ಲಿ ಪ್ರಧಾನಿಗಳು ಓಡಾಡಿಲ್ಲ

ಪ್ರಧಾನ ಮಂತ್ರಿ ಕಾರ್ಯಲಯಕ್ಕೆ ನಾವು ಈಗಾಗಲೇ ವರದಿ ಕಳಿಸಿದ್ದೇವೆ. ಯಾವ ಗುಂಡಿಯ ವಿಚಾರವಾಗಿ  ಟ್ವೀಟ್ ಆಗಿತ್ತು ಆ ವಿಚಾರವಾಗಿ ಮಾತ್ರ ವರದಿ ಕಳಿಸಿದ್ದೀವಿ. ನೆವೆಂಬರ್ 2021ರಲ್ಲಿ ಆ ರಸ್ತೆ ನಿರ್ಮಾಣ ಮಾಡಲಾಗಿತ್ತು. ನಂತರ ಅಲ್ಲಿ‌ ಸೀವೇಜ್ ಕಂಡು ಬಂದಿತ್ತು. ಇವಾಗ ಜಾಸ್ತಿ ಆಗಿದ್ದು ನೋಡುವಾಗ ಅಲ್ಲಿ ಹಳೆ ಕಾಲದು ಒಂದು ವಾಟರ್ ಲೈನ್ ಇರೋದು ಕಂಡು ಬಂದಿದೆ.

ಪಿಎಂ ಸಾಹೇಬ್ರು ಬಂದಾಗ ನಾವು ಆ ರಸ್ತೆ ಮಾಡಿಲ್ಲ. ಆ ರಸ್ತೆಯಲ್ಲಿ ಪ್ರಧಾನ ಮಂತ್ರಿಗಳು ಓಡಾಡಿಲ್ಲ. ಅದು ಪಿಎಂ ಓಡಾಡಿದ ಪಕ್ಕದ ರಸ್ತೆ ಆಗಿತ್ತು. ಆ ಜಾಗ ಸಿಂಕ್ ಆಗ್ತಾ  ಇತ್ತು ಅನ್ನುವ ಕಾರಣಕ್ಕೆ  ತಾತ್ಕಾಲಿಕವಾಗಿ ಅದನ್ನು ಮುಚ್ಚಲಾಗಿತ್ತು. ನಾವು ಮರಿಯಪ್ಪನ ಪಾಳ್ಯದಲ್ಲಿ ಎರಡು ಕಡೆ ಚಕ್ಕೆ ತರ ಬಂದಿರೋದು ಬೇರೆ ರಸ್ತೆಯಲ್ಲಿ ಅಂತ ಹೇಳಿದರು.
Published by:Mahmadrafik K
First published: