ಬೆಂಗಳೂರು(ಏ. 06): ಕೊರೋನಾ ವೈರಸ್ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ನಟ ಬುಲೆಟ್ ಪ್ರಕಾಶ್ ಪಾರ್ಥಿವ ಶರೀರದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ. ಇದೇ ರೀತಿಯಾಗಿ ಸೆಲೆಬ್ರಿಟಿಗಳು ಸಹ ಅಂತಿಮ ದರ್ಶನ ಪಡೆಯುವಂತಿಲ್ಲ. ಆದರೆ, ಸಂಬಂಧಿಕರಿಗಷ್ಟೇ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಲಾಕ್ ಡೌನ್ ಮುಗಿದ ನಂತರ ಕಡಿಮೆ ಜನರು ಪೂಜೆ ಸಂಸ್ಕಾರದಲ್ಲಿ ಭಾಗಿಯಾಗಬಹುದು. ದೂರದಿಂದಲೇ ನಟ ಬುಲೆಟ್ ಪ್ರಕಾಶ್ ಅವರಿಗೆ ನಮನ ಸಲ್ಲಿಸುವಂತೆ ಅಭಿಮಾನಿಗಳಲ್ಲಿ ಸಚಿವರು ಮನವಿ ಮಾಡಿದ್ದಾರೆ.
ಬುಲೆಟ್ ಪ್ರಕಾಶ್ ನನ್ನ ಒಳ್ಳೆಯ ಗೆಳೆಯ, ಪ್ರತಿ ತಿಂಗಳು ಇಬ್ಬರು ಭೇಟಿ ಮಾಡುತ್ತಿದ್ವಿ. ಕಿಡ್ನಿ ಟ್ರಾನ್ಸ್ಫಾರ್ಮೇಷನ್ ಆಗಬೇಕು ಸಹಾಯ ಮಾಡುವಂತೆ ಕೇಳಿದ. ನಾನು ಒಪ್ಪಿಕೊಂಡಿದ್ದೆ. ಮುಖ್ಯಮಂತ್ರಿಗಳು ಎರಡು ಲಕ್ಷ ರೂಪಾಯಿಯನ್ನು ಆಪರೇಷನ್ಗೆ ಕೊಡುವುದಾಗಿ ಒಪ್ಪಿದ್ದರು. ಆದರೆ ಈಗ ಅವರೇ ಇಲ್ಲ ಎಂದು ಸಚಿವ ಆರ್ ಅಶೋಕ್ ಬೇಸರ ವ್ಯಕ್ತಪಡಿಸಿದರು.
ಅವರು ಇವತ್ತು ನಮ್ಮೊಂದಿಗೆ ಇಲ್ಲ ಅನ್ನೋದು ದುಃಖ ತಂದಿದೆ. ಇವತ್ತು ಅವರ ದೇಹವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿಲ್ಲ. ಬದಲಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಅಂತ್ಯಕ್ರಿಯೆ ಹೆಬ್ಬಾಳದಲ್ಲಿ ನಡೆಯಲಿದೆ. ಆದರೆ, ಅಂತಿಮ ದರ್ಶನಕ್ಕೆ ಯಾವುದೇ ವ್ಯವಸ್ಥೆ ಮಾಡಲಾಗುವುದಿಲ್ಲ ಎಂದರು.
ಕಂಬನಿ ಮಿಡಿದ ಸಚಿವ ಬಿ ಸಿ ಪಾಟೀಲ್ ಹಾಗೂ ನಟ ಪುನೀತ್ ರಾಜ್ಕುಮಾರ್
Bullet Prakash, ಒಳ್ಳೆ ನಟರು, ತುಂಬಾ ಚೆನ್ನಾಗಿ ಪರಿಚಯ, ಒಟ್ಟಿಗೆ ಅಪ್ಪು, ವೀರ ಕನ್ನಡಿಗ ಚಿತ್ರಗಲ್ಲಿ ನಟಿಸಿದ್ದೀವಿ, ಜಾಕಿ ಸಿನಿಮಾದಲ್ಲಿ ಒಳ್ಳೆ ಪಾತ್ರ ಮಾಡಿದ್ರು. May his soul RIP
— Puneeth Rajkumar (@PuneethRajkumar) April 6, 2020
ಇದನ್ನೂ ಓದಿ : Prakash Passes Away: ಪ್ರಕಾಶ್ ಜೊತೆಗೆ ಬುಲೆಟ್ ಸೇರಿಸಿದ್ದು ಕ್ರೇಜಿ ಮಾಮ ರವಿಚಂದ್ರನ್; ಹಿಂದಿನ ಕತೆ ಇಲ್ಲಿದೆ ..!
ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ಬಹಳ ಕಷ್ಟಪಟ್ಟು ಕನ್ನಡ ಚಿತ್ರರಂಗದಲ್ಲಿ ಮೇಲೆ ಬಂದವರು. ಪ್ರಕಾಶ್ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಎಲ್ಲರೊಂದಿಗೆ ಬೆರೆಯುವ ಒಳ್ಳೆಯ ಮನಸು ಪ್ರಕಾಶ್ ಅವರಿಗಿತ್ತು ಎಂದು ಕೃಷಿ ಸಚಿವ ಹಾಗೂ ನಟ ಬಿ.ಸಿ. ಪಾಟೀಲ್ ಕಂಬನಿ ಮಿಡಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ