ತೀವ್ರ ಸ್ವರೂಪ ಪಡೆದ ಮಿಂಟೋ ವೈದ್ಯರ ಪ್ರತಿಭಟನೆ; ಇಂದು ರಾಜ್ಯಾದ್ಯಂತ ಒಪಿಡಿ ಸೇವೆ ಬಂದ್

ವೈದ್ಯರು ಇಂದು ಒಪಿಡಿ ಬಂದ್​ಗೆ ಕರೆ ಕೊಟ್ಟಿದ್ದು, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಆಸ್ಪತ್ರೆಗಳ ಹೊರರೋಗಿ ವಿಭಾಗಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಈ ವೈದ್ಯರ ಮುಷ್ಕರಕ್ಕೆ ಐಎಂಎ, ಫನಾ ಸೇರಿದಂತೆ ಅನೇಕ ವೈದ್ಯಕೀಯ ಸಂಘಟನೆಗಳು ಬೆಂಬಲ ನೀಡಿವೆ. ರಾಜ್ಯದ ಇಡೀ ವೈದ್ಯ ಸಮೂಹವೇ ಬಲ ಪ್ರದರ್ಶನಕ್ಕೆ ಮುಂದಾಗಿದೆ.

Latha CG | news18-kannada
Updated:November 8, 2019, 8:29 AM IST
ತೀವ್ರ ಸ್ವರೂಪ ಪಡೆದ ಮಿಂಟೋ ವೈದ್ಯರ ಪ್ರತಿಭಟನೆ; ಇಂದು ರಾಜ್ಯಾದ್ಯಂತ ಒಪಿಡಿ ಸೇವೆ ಬಂದ್
ವೈದ್ಯರ ಪ್ರತಿಭಟನೆ
  • Share this:
ಬೆಂಗಳೂರು(ನ.08): ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಲ್ಲೆ ನಡೆಸಿದ್ದ ಪ್ರಕರಣ ದಿನೇ ದಿನೇ ತಾರಕಕ್ಕೇರುತ್ತಿದೆ. ನವೆಂಬರ್ 1ರಿಂದ ಇಂದಿನವರೆಗೆ ವೈದ್ಯರು ಪ್ರತಿಭಟನೆ ಮಾಡುತ್ತಿದ್ದಾರೆ. ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಇಂದು ರಾಜ್ಯಾದ್ಯಂತ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಒಪಿಡಿ ವಿಭಾಗವನ್ನು ಬಂದ್​ ಮಾಡಿದ್ದಾರೆ.

ವೈದ್ಯರು ಇಂದು ಒಪಿಡಿ ಬಂದ್​ಗೆ ಕರೆ ಕೊಟ್ಟಿದ್ದು, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಆಸ್ಪತ್ರೆಗಳ ಹೊರರೋಗಿ ವಿಭಾಗಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಈ ವೈದ್ಯರ ಮುಷ್ಕರಕ್ಕೆ ಐಎಂಎ, ಫನಾ ಸೇರಿದಂತೆ ಅನೇಕ ವೈದ್ಯಕೀಯ ಸಂಘಟನೆಗಳು ಬೆಂಬಲ ನೀಡಿವೆ. ರಾಜ್ಯದ ಇಡೀ ವೈದ್ಯ ಸಮೂಹವೇ ಬಲ ಪ್ರದರ್ಶನಕ್ಕೆ ಮುಂದಾಗಿದೆ.

ಐಎಂಎ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ಈ ಬಗ್ಗೆ ನ್ಯೂಸ್​ 18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕರವೇ ಮುಖಂಡರು ಬೆಳಗ್ಗೆ 11 ಗಂಟೆಗೆ  ಶರಣಾಗುತ್ತೇವೆ ಎಂದಿದ್ದಾರೆ. ಶರಣಾದ ತಕ್ಷಣವೇ ನಮ್ಮ ನಿರ್ಧಾರ ತಿಳಿಸುತ್ತೇವೆ. ರಾಜ್ಯದ ಎಲ್ಲಾ ಪದಾಧಿಕಾರಿಗಳು ಸೇರಿ ನಿರ್ಧಾರ ಮಾಡುತ್ತೇವೆ. ವೈದ್ಯರ ರಕ್ಷಣೆಗೆ ಸೂಕ್ತ ಕಾನೂನು ರೂಪಿಸಬೇಕು. ಸರ್ಕಾರದ ಭರವಸೆಯನ್ನೂ ನಿರೀಕ್ಷೆ ಮಾಡುತ್ತಿದ್ದೇವೆ. 11 ಗಂಟೆ ನಂತರ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ತುರ್ತು ಚಿಕಿತ್ಸೆಗೆ ಯಾವುದೇ ತೊಂದರೆ ಇರಲ್ಲ. ಎಲ್ಲಾ ಆಸ್ಪತ್ರೆಗಳಲ್ಲೂ ತುರ್ತು ಚಿಕಿತ್ಸೆ ನೀಡುತ್ತಿದ್ದೇವೆ. ಮೊದಲು ಕರವೇ ಮುಖಂಡರು ಶರಣಾಗಲಿ ಎಂದು ಹೇಳಿದ್ದಾರೆ.

ತಾರಕಕ್ಕೇರಿದ ವೈದ್ಯರ ಪ್ರತಿಭಟನೆ: ನಾಳೆ ರಾಜ್ಯವ್ಯಾಪಿ ಎಲ್ಲಾ ಆಸ್ಪತ್ರೆಗಳ ಓಪಿಡಿ ಬಂದ್; ರೋಗಿಗಳೇ ಎಚ್ಚರ

ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆ ವೈದ್ಯರ ಧರಣಿ ನಡೆಯುತ್ತಿದೆ. ಇಂದು ಎಲ್ಲಾ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್​ ಮಾಡಿದ್ದಾರೆ. ಆದರೆ ಕಲಬುರ್ಗಿಯಲ್ಲಿ ರೋಗಿಗಳಿಗೆ ತೊಂದರೆಯಾಗುತ್ತೆಂದು ಒಪಿಡಿ ಬಂದ್​ ಮಾಡದಿರಲು ನಿರ್ಧರಿಸಲಾಗಿದೆ. ಬದಲಾಗಿ ವೈದ್ಯರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡಲಿದ್ದಾರೆ. ಕಲಬುರ್ಗಿ ಖಾಸಗಿ ಆಸ್ಪತ್ರೆಗಳ ಸಂಘದವರು ಈ ನಿರ್ಧಾರ ಮಾಡಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಲು ತೀರ್ಮಾನಿಸಿದ್ದಾರೆ. ಹೀಗಾಗಿ ಇಂದು ಎಂದಿನಂತೆ ಒಪಿಡಿಗಳು ಕಾರ್ಯನಿರ್ವಹಿಸಲಿವೆ ಎಂದು ಐಎಂಎ ಅಧ್ಯಕ್ಷ ಡಾ.ಅಮೂಲ್ ಪತಂಗೆ ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್​ ಆಗಿದೆ. ಕಿಮ್ಸ್​​ ಸೇರಿ ಸರ್ಕಾರಿ ಆಸ್ಪತ್ರೆಗಳಲ್ಲಿನ ಸೇವೆ ಎಂದಿನಂತೆ ಇರುತ್ತದೆ. ಆದರೆ ಬೆಳಗ್ಗೆ 6ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಬಂದ್​ ಆಗಲಿದೆ. ವೈದ್ಯರ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹ ಮಾಡಲಿದ್ದಾರೆ. ಎಸ್ಮಾ ಜಾರಿ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಬಾಗಲಕೋಟೆ ಜಿಲ್ಲೆಯಾದ್ಯಂತ ಇಂದು ಸುಮಾರು 540 ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಆಗಿವೆ.ಸುಪ್ರೀಂನಲ್ಲಿ ಅಯೋಧ್ಯೆ ತೀರ್ಪಿಗೆ ದಿನಗಣನೆ; ಬೆಂಗಳೂರು ಸೇರಿದಂತೆ ದೇಶಾದ್ಯಂತ ಕಟ್ಟೆಚ್ಚರ​

ಬಳ್ಳಾರಿಯ ಖಾಸಗಿ ಆಸ್ಪತ್ರೆ ಒಪಿಡಿ, ಕ್ಲಿನಿಕ್ ಸೇವೆ ಬಂದ್ ಆಗಿದೆ. ಐಎಂಎ, ಕಿರಿಯ ವೈದ್ಯರಿಂದ ಇಂದು ಬೆಳಗ್ಗೆ 9 ಗಂಟೆಗೆ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿದೆ. ಸಂಜೆ 6 ಗಂಟೆವರೆಗೆ ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ಸೇವೆ ಇರುವುದಿಲ್ಲ. ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆಯಾಗದ ರೀತಿ ವೈದ್ಯರ ನಿಯೋಜನೆ ಮಾಡಲಾಗಿದೆ.

ಬೆಳಗಾವಿಯಲ್ಲಿ ಸದ್ಯ ಒಪಿಡಿ ಬಂದ್ ಇಲ್ಲ. ಎಂದಿನಂತೆ ಒಪಿಡಿಗಳು ಕಾರ್ಯನಿರ್ವಹಿಸಲಿವೆ. ವೈದ್ಯರ ಸಲಹೆ ಮೇರೆಗೆ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ. ವೈದ್ಯಕೀಯ ಸೇವೆಯಲ್ಲಿ ಯಾವುದೇ ತೊಂದರೆ ಇಲ್ಲ. ಬೆಳಗಾವಿಯ ಲೇಕವೀವ್ ಆಸ್ಪತ್ರೆ ವಿಜಯಾ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳು ಸದ್ಯ ಎಂದಿನಂತೆ ಕಾರ್ಯನಿರ್ವಹಿಸಲಿವೆ.

ರಾಯಚೂರು ನಗರದ ಹಾಗೂ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಒಪಿಡಿ ಸೇವೆ ಬಂದ್ ಆಗಿದೆ. 230ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸಿಗಲ್ಲ. ಹಳ್ಳಿಗಳಿಂದ ನಗರದ ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳ ಪರದಾಡುವ ಸಾಧ್ಯತೆ ಇರುತ್ತದೆ.

ಅಮೆರಿಕ ಸ್ಥಳೀಯ ಚುನಾವಣೆಯಲ್ಲಿ ಕನ್ನಡಿಗನಿಗೆ ಜಯ; ಇತಿಹಾಸ ನಿರ್ಮಿಸಿದ ಭಾರತೀಯರು
First published: November 8, 2019, 8:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading