news18-kannada Updated:September 4, 2020, 6:41 PM IST
ಸಚಿವ ವಿ. ಸೋಮಣ್ಣ
ಬೆಂಗಳೂರು(ಸೆಪ್ಟೆಂಬರ್. 04): ವಸತಿ ಇಲಾಖೆಯ ಯೋಜನೆಗಳಿಗೆ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲ ಎಂದು ವಸತಿ ಸಚಿವ ವಿ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ವಿಕಾಸಸೌಧದಲ್ಲಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ಇದೇ ವೇಳೆ, ಕೊಳಗೇರಿ ನಿವಾಸಿಗಳಿಗೆ ಒಂದು ಮನೆ ಕೊಡಲಿಕ್ಕೆ ಆಗುತ್ತಿಲ್ಲ ಏಕೆ? ಹಿಂದಿನ ಸರ್ಕಾರ ದಲ್ಲಿ ಕೆಲಸ ಮಾಡಿದಂತೆ ಈಗ ಕೆಲಸ ಮಾಡಬೇಡಿ ಎಂದು ಅಧಿಕಾರಿಗಳನ್ನ ಸಚಿವರು ತರಾಟೆಗೆ ತೆಗೆದುಕೊಂಡರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರ್ಕಾರ 1.80 ಲಕ್ಷ ಮನೆಗಳನ್ನು ರಾಜ್ಯಕ್ಕೆ ನೀಡಿ ನಾಲ್ಕು ವರ್ಷ ಆಗಿದೆ. ಈಗ 34, 900 ಮನೆಗಳನ್ನು ಫಲಾನುಭವಿಗಳಿಗೆ ನೀಡಲಿದ್ದೇವೆ. 188 ವಿಧಾನಸಭಾ ಕ್ಷೇತ್ರಗಳಲ್ಲಿ 97, 134 ಮನೆಗಳ ನಿರ್ಮಾಣಕ್ಕೆ ಇದೇ ತಿಂಗಳ 16 ಒಳಗೆ ಕೆಲಸ ಆರಂಭಿಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ರಾಜೀವಗಾಂಧಿ ವಸತಿ ನಿಗಮದಲ್ಲಿ 1.56 ಲಕ್ಷ ಮನೆಗಳನ್ನು ನೀಡಲು ತೀರ್ಮಾನಿಸಲಾಗಿದೆ. ಗ್ರಾಮೀಣ ಭಾಗದ ಬಡ ಜನತೆಗೆ ಒಂದು ಪಂಚಾಯತಿಗೆ 20 ಮನೆಗಳಂತೆ ನೀಡಲು ನಿರ್ಧರಿಸಲಾಗಿದೆ. 1700 ಕ್ಕೂ ಹೆಚ್ಚು ಕೊಳೆಗೇರಿಗಳಲ್ಲಿ 3.12 ಲಕ್ಷ ಮನೆಗಳನ್ನು ಸಕ್ರಮಗೊಳಿಸಲಾಗುತ್ತಿದೆ. 7 ಸಾವಿರ ಎಕರೆಯಲ್ಲಿ ಮೂಲಭೂತ ಸೌಕರ್ಯ ನೀಡಲು ಕ್ರಮ ಕೈಗೊಳ್ಳಲಿದ್ದು, 3.16 ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.
ಸಾಲ ಮಾಡಬೇಕೆಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸೋಮಣ್ಣ, ಮುಖ್ಯಮಂತ್ರಿಗಳು ಸಮರ್ಥರಿದ್ದಾರೆ. ಅವರು ಎಲ್ಲವನ್ನೂ ನಿಭಾಯಿಸುತ್ತಾರೆ ಎಂದು ಹೇಳಿದರು.
ಬಳಿಕ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ದಂಧೆ ಬಗ್ಗೆ ಸಚಿವ ವಿ ಸೋಮಣ್ಣ ಮಾತನಾಡಿದರು. ಡ್ರಗ್ಸ್ ಅನ್ನೋ ಕೆಟ್ಟ ವ್ಯವಸ್ಥೆಯ ಬಗ್ಗೆ ಇಂದಿನ ಗೃಹ ಸಚಿವರು ಸೂಕ್ತ ಕ್ರಮಕೈಗೊಳ್ಳುತ್ತಾರೆ. ರಾಜಕಾರಣಿಗಳ ಮಕ್ಕಳಿದ್ದರೆ ಅವರದ್ದು ಹೊರಗೆ ಬರಲಿ. ಯಾರು ಇಂಥಾ ಕೆಲಸ ಮಾಡಿದ್ದಾರೆ. ಅದೆಲ್ಲವೂ ಹೊರ ಬರಲಿ. ಪೊಲೀಸ್ ಇಲಾಖೆ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಸಿನೆಮಾ ಕ್ಷೇತ್ರ ಅಷ್ಟೇ ಅಲ್ಲ. ಯಾವುದೇ ರಂಗದಲ್ಲಿದ್ದರೂ ಹೊರಬರಲಿ. ಇದನ್ನ ಸಿರೀಯಸ್ ಆಗಿ ಸರ್ಕಾರ ತೆಗೆದುಕೊಂಡಿದ್ದು, ಯಾವ ಹಂತಕ್ಕೆ ಹೋಗುತ್ತೋ ನೋಡೋಣ ಎಂದು ಹೇಳಿದರು.
ಇದನ್ನೂ :
ಕರ್ನಾಟಕದಿಂದ ಆಯ್ಕೆಯಾದ ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ರಾಜ್ಯಕ್ಕೆ ಕೊಡುಗೆ ಏನು : ಆರ್. ಧ್ರುವನಾರಾಯಣ
ಮಾಜಿ ಸಚಿವ ಎಂ ಬಿ ಪಾಟೀಲ್ ಅವರಿಗೆ ಈ ಬಗ್ಗೆ ಮಾಹಿತಿ ಇದ್ದರೆ ನೀಡಲಿ. ಅವರು ಗೃಹ ಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಸುಮ್ಮನೆ ಆರೋಪ ಮಾಡಬಾರದು. ಅವರಿಗೆ ಮಾಹಿತಿ ಇದ್ದರೆ ಕೊಡಲಿ. ಇಂತಹ ಕರಾಳ ದಂಧೆಗೆ ಕಡಿವಾಣ ಹಾಕೋಣ ಎಂದರು.
ಸಿನಿಮಾ ಮಂದಿ, ರಾಜಕಾರಣಿಗಳ ಮಕ್ಕಳು ಸೇರಿದಂತೆ ಯಾರೇ ಈ ಜಾಲದಲ್ಲಿ ಇದ್ದರೂ ಹೊರಗೆ ಬರಬೇಕು. ಡ್ರಗ್ಸ್ ದಂಧೆಯನ್ನು ನಿಯಂತ್ರಣ ಮಾಡುವಲ್ಲಿ ನಮ್ಮ ಸರ್ಕಾರ ಬದ್ದ. ಈಗಾಗಲೇ ಈ ಬಗ್ಗೆ ಕ್ರಮ ತೆಗದುಕೊಳ್ಳಲು ಮುಖ್ಖಮಂತ್ರಿಗಳು ಸೂಚನೆ ನೀಡಿದ್ದಾರೆ. ನಮ್ಮ ಗೃಹ ಸಚಿವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
Published by:
G Hareeshkumar
First published:
September 4, 2020, 6:40 PM IST