ಬೆಂಗಳೂರು (ಆಗಸ್ಟ್ 20); ಕಳೆದ ಒಂದು ವಾರದಿಂದ ಅಫ್ಘಾನಿಸ್ತಾನದ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಜನತಂತ್ರ ಸರ್ಕಾರವನ್ನು ಪದಚ್ಯುತಗೊಳಿಸಿರುವ ತಾಲಿಬಾನ್ ಉಗ್ರರು ಕಳೆದ ಭಾನುವಾರ ಇಡೀ ಆಫ್ಘನ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಆಫ್ಘನ್ ನೆಲದಲ್ಲಿ ರಕ್ತದೋಕುಳಿ ಹರಿಸುತ್ತಿದ್ದಾರೆ. ತಾಲಿಬಾನಿಗಳ ಇಂತಹ ಅಮಾನವೀಯ ನಡೆಗಳನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ಸಹ ಇಂದು ಬಹಿರಂಗವಾಗಿ ಖಂಡಿಸಿದ್ದರು. ಆದರೆ, ಇದನ್ನು ವ್ಯಂಗ್ಯವಾಡಿ ರುವ ರಾಜ್ಯ ಕಾಂಗ್ರೆಸ್ ಕೆಪಿಸಿಸಿ ಘಟಕ, "ಜನರನ್ನು ಅಮಾನವೀಯ ವಾಗಿ ಕೊಲ್ಲುವ ತಾಲಿಬಾನಿಗಳು ಮತ್ತು ಭಯೋತ್ಪಾದಕರನ್ನೇ ಸಂಸದೆಯನ್ನಾಗಿಸಿ ಕೊಂಡಾಡುವ ಬಿಜೆಪಿಗರಿಗೂ ಹೆಚ್ಚು ವ್ಯತ್ಯಾಸ ಏನಿಲ್ಲ. ಇಬ್ಬರದ್ದೂ ಭಯೋತ್ಪಾದಕ ಮನಸ್ಥಿತಿಯೇ" ಎಂದು ಕಿಡಿಕಾರಿದೆ.
ಭಯೋತ್ಪಾದಕರನ್ನ ಭಯೋತ್ಪಾದಕರೇ ಸಮರ್ಥಿಸಬಲ್ಲರು ಹೊರತು ಬೇರೆಯವರಲ್ಲ.
ಉಗ್ರರನ್ನು ಮಟ್ಟ ಹಾಕುತ್ತ ಹುತಾತ್ಮರಾದ ಹೇಮಂತ್ ಕರ್ಕರೆಯವರ ಸಾವಿಗೆ ನನ್ನ ಶಾಪವೇ ಕಾರಣ ಎಂದಿದ್ದಾಕೆ ಭಯೋತ್ಪಾದಕಿ ಸಾದ್ವಿ.
ತನ್ನಂತೆಯೇ ಇದ್ದ ಮತ್ತೊಬ್ಬ ಉಗ್ರರನ್ನು ಕರ್ಕರೆಯವರು ಕೊಂದಿದ್ದಕ್ಕೆ ನೊಂದು ಶಾಪ ಕೊಟ್ಟಳೇ @BJP4Karnataka!?#ತಾಲಿಬಾನಿಬಿಜೆಪಿ
— Karnataka Congress (@INCKarnataka) August 20, 2021
ಮಲೆಗಾವ್ ಬಾಂಬ್ ಸ್ಫೋಟದ ರೂವಾರಿಯಾದ ಭಯೋತ್ಪಾದಕಿಯನ್ನ ಸಂಸದೆ ಮಾಡಿ ಬಿಜೆಪಿ ತನ್ನ ತಾಲಿಬಾನ್ ಮನಸ್ಥಿತಿಯನ್ನ ಜಾಹೀರುಪಡಿಸಿದೆ.
ನೇಣುಗಂಬಕ್ಕೆ ಏರಬೇಕಾದಾಕೆಯನ್ನ ಪವಿತ್ರ ಸಂಸತ್ತಿನೊಳಗೆ ಕರೆತಂದು ಪ್ರಜಾಪ್ರಭುತ್ವಕ್ಕೆ, ಸಂಸತ್ತಿಗೆ ಐತಿಹಾಸಿಕ ಕಪ್ಪುಚುಕ್ಕೆ ಇಟ್ಟಿದ್ದು #ತಾಲಿಬಾನಿಬಿಜೆಪಿ.
ಈ ಎರೆಡೂ ಬಗೆಯ ಮೂಲಭೂತವಾದಿಗಳದ್ದು ಒಂದೇ ರಕ್ತ!
— Karnataka Congress (@INCKarnataka) August 20, 2021
RSS & ಬಿಜೆಪಿಗೂ ತಾಲಿಬಾನಿಗೂ ಬಹಳ ನೆಂಟಸ್ತಿಕೆ,
ಕಟ್ಮಂಡು ವಿಮಾನ ಅಪಹರಣ ಪ್ರಕರಣದಲ್ಲಿ ಅಮೃತಸರದಲ್ಲಿ ಲ್ಯಾಂಡ್ ಆಗಿದ್ದ ವಿಮಾನವನ್ನು ತಾಲಿಬಾನಿಗಳಿಗೆ ಅನುಕೂಲವಾಗಲೆಂದು ಕಂದಹಾರ್‌ಗೆ ಕಳಿಸಿಕೊಟ್ಟು, ಮೂವರು ತಾಲಿಬಾನ್ ಉಗ್ರರನ್ನು ರಾಜಮರ್ಯಾದೆಯಲ್ಲಿ ಬಿಟ್ಟು ಕಳಿಸಿದ್ದು #ತಾಲಿಬಾನಿಬಿಜೆಪಿ.
ಇಬ್ಬರೂ ಒಂದೇ ದಾರಿಯ ಪಯಣಿಗರಲ್ಲವೇ, ಹಾಗಾಗಿ.
— Karnataka Congress (@INCKarnataka) August 20, 2021
ಇದನ್ನೂ ಓದಿ: Opposition Party Meet: 2024ರ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳ ಅಜೆಂಡಾ ಸೆಟ್ ಮಾಡಿದ ಸೋನಿಯಾ ಗಾಂಧಿ
ತಾಲಿಬಾನಿಗಳು ಅಫ್ಘನಿಸ್ತಾನವನ್ನು ಕಬಳಿಸಿದ ನಂತರವೂ ಅವರ ರಕ್ತ ಪಿಪಾಸುತನ ಶಮನವಾಗಿರುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಕಳೆದ ಬುಧವಾರ ವಿನಾಃ ಕಾರಣ ಕಾಬೂಲ್ನಲ್ಲಿ ಮಹಿಳೆ ಸೇರಿ ಮೂವರು ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದ ತಾಲಿಬಾನಿಗಳು, ಗುರುವಾರ ಅಫ್ಘನ್ ಪ್ರಜೆಗಳ ಸ್ವಾತಂತ್ರ್ಯೋತ್ಸವ ರ್ಯಾಲಿ ಮೇಲೂ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ಬಹಿರಂಗವಾಗಿಲ್ಲ.
ಹೀಗಾಗಿ ಭಾರತ ಸೇರಿದಂತೆ ಎಲ್ಲಾ ದೇಶಗಳು ಅಫ್ಘನ್ನಿಂದ ತಮ್ಮ ರಾಜತಾಂತ್ರಿಕರನ್ನು ಈಗಾಗಲೇ ಹಿಂದಕ್ಕೆ ಕರೆಸಿಕೊಂಡಿದ್ದಾರೆ.. ಅಲ್ಲದೆ, ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಯಾವ ಯುರೋಪ್ ರಾಷ್ಟ್ರಗಳೂ ಸಹ ತಾಲಿಬಾನಿಗಳ ಸರ್ಕಾರವನ್ನು ಒಪ್ಪಿಕೊಂಡು ದೇಶದ ಮಾನ್ಯತೆ ನೀಡಲು ಸಿದ್ದರಿಲ್ಲ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ