ಗೋಕಾಕ್​​​ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಗೊಂದಲವಿಲ್ಲ; ಲಖನ್​​​ ನಮ್ಮ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

ಚುನಾವಣೆಗೆ ಸಮಯ ಇರುವುದರಿಂದ ಮುಂದಿನ ದಿನಗಳ ಟಿಕೆಟ್ ಘೋಷಣೆ ಮಾಡುತ್ತಾರೆ. ಗೋಕಾಕ್ ನಲ್ಲಿ ಈ ತಿಂಗಳ 11 ರ ನಂತರ ಕಾಂಗ್ರೆಸ್ ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದ್ದು, ಅನರ್ಹ ಶಾಸಕರ ತೀರ್ಪು ಎದುರು ನೋಡುತ್ತಿದ್ದೇವೆ

G Hareeshkumar | news18-kannada
Updated:November 8, 2019, 2:22 PM IST
ಗೋಕಾಕ್​​​ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಗೊಂದಲವಿಲ್ಲ; ಲಖನ್​​​ ನಮ್ಮ ಅಭ್ಯರ್ಥಿ: ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
  • Share this:
ಬೆಳಗಾವಿ(ನ.08): ಗೋಕಾಕ್ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಸಹೋದರ ಲಖನ್ ಅವರಿಗೆ ಟಿಕೆಟ್ ಸಿಗಲಿದೆ. ಹೀಗಾಗಿ ಬೇರೆಯವರಿಗೆ ಟಿಕೆಟ್ ನೀಡುವ ಪ್ರಶ್ನೇ ಇಲ್ಲ. ಲಖನ್ ಪರವಾಗಿ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ನಡೆಸಿದ್ದೇವೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

ಚುನಾವಣೆಗೆ ಸಮಯ ಇರುವುದರಿಂದ ಮುಂದಿನ ದಿನಗಳ ಟಿಕೆಟ್ ಘೋಷಣೆ ಮಾಡುತ್ತಾರೆ. ಗೋಕಾಕ್ ನಲ್ಲಿ ಈ ತಿಂಗಳ 11 ರ ನಂತರ ಕಾಂಗ್ರೆಸ್ ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದ್ದು, ಅನರ್ಹ ಶಾಸಕರ ತೀರ್ಪು ಎದುರು ನೋಡುತ್ತಿದ್ದೇವೆ ಎಂದರು.

ಗೋಕಾಕ್ ತಾಲೂಕಿನ ಗ್ರಾ.ಪಂ.ನಲ್ಲಿ ನಡೆದ ಅವ್ಯವಹಾರ ಬಗ್ಗೆ ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳನ್ನ ಜಿ.ಪಂ. ಅಧಿಕಾರಿಗಳಿಗೆ ನೀಡಿದ್ದೇವೆ. ಅಧಿಕಾರಿಗಳು ಬೇರೆ ಬೇರೆ ಹಂತಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಗೋಕಾಕ್ ತಾಲೂಕಿನ ಮತ್ತೊಂದು ಹಗರಣವನ್ನು ಹಾಡಿನ ರೂಪದಲ್ಲಿ ಶೀಘ್ರ ಜನರ ಮುಂದಿಡುತ್ತೇವೆ. ಈ ಬಾರಿ ಶೌಚಾಲಯದ ಅವ್ಯವಹಾರ ಕುರಿತು ಹಾಡು ಬಿಡುಗಡೆ ಆಗಲಿದೆ. 180 ಶೌಚಾಲಯ ನಿರ್ಮಾಣದ ಹಗರಣದ ವಿರುದ್ಧ ಹಾಡಿನ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಗೋಕಾಕ್ ತಾಲೂಕಿನ ಅಂಕಲಗಿ‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಗಮೇಶ್ವರ ಗ್ರಾಮದ ಕುರಿತು ಹಾಡು ರಚಿಸಲಾಗಿದೆ. ಈ ಹಗರಣದ ತನಿಖೆಯನ್ನು ಜಿ.ಪಂ. ಅಧಿಕಾರಿಗಳು ಮಾಡುತ್ತಿದ್ದಾರೆ. ಇದರ ಸಂಪೂರ್ಣ ಮಾಹಿತಿ ಹಾಡಿನಲ್ಲಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಇದನ್ನೂ ಓದಿ : ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ; ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಗ್ರಾಮದಿಂದ ಒಂದು ಕಿಲೋ‌ಮೀಟರ್ ದೂರದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಶೌಚಾಲಯಕ್ಕೆ ಹೋಗಲು ಅರ್ಧ ಗಂಟೆ ಬೇಕು. ನಿರ್ಮಾಣವಾಗಿರುವ ಶೌಚಾಲಯಗಳು ಹಸ್ತಾಂತರವಾಗುವ ಮುನ್ನವೇ 40-50 ಬಿದ್ದು ಹೋಗಿವೆ. ಶೌಚಾಲಯದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲ ಎಂದು ಮಾಜಿ ಸಚಿವರು ಬೇಸರ ವ್ಯಕ್ತಪಡಿಸಿರು.

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ