ಸರ್ಕಾರ ಉಳಿಯುತ್ತೆ ಅನ್ನೋ ವಿಶ್ವಾಸ ಇಲ್ಲ ; ಸಚಿವ ಸತೀಶ್​ ಜಾರಕಿಹೊಳಿ

ರೆಬೆಲ್ ಶಾಸಕರ ಬಗ್ಗೆ ದೂರು ನೀಡಬಹುದು ಎಂದು ಸ್ಪೀಕರ್ ಹೇಳಿದ್ದಾರೆ. ರಕ್ತ ಸಂಬಂಧಿಗಳು ದೂರು ನೀಡಬಹುದು. ರಮೇಶ್ ಜಾರಕಿಹೊಳಿ ನನ್ನ ಸಂಪರ್ಕದಲ್ಲಿ ಇಲ್ಲ. ಸ್ಪೀಕರ್ ಗೆ ದೂರು ನೀಡುವ ಸಂದರ್ಭ ಇಲ್ಲ. ಅಂತ ಸನ್ನಿವೇಶ ಇಲ್ಲ, ಸಂದರ್ಭ ಬಂದರೆ ನೋಡೋಣ

G Hareeshkumar | news18
Updated:July 19, 2019, 11:02 PM IST
ಸರ್ಕಾರ ಉಳಿಯುತ್ತೆ ಅನ್ನೋ ವಿಶ್ವಾಸ ಇಲ್ಲ ; ಸಚಿವ ಸತೀಶ್​ ಜಾರಕಿಹೊಳಿ
ಮಾಜಿ ಸಚಿವ ಸತೀಶ್ ಜಾರಕಿಹೊಳಿ
  • News18
  • Last Updated: July 19, 2019, 11:02 PM IST
  • Share this:
ಬೆಂಗಳೂರು (ಜುಲೈ 19) : ಸರ್ಕಾರ ಉಳಿಯುತ್ತೆ ಅನ್ನುವ ವಿಶ್ವಾಸ ಇಲ್ಲ. ಅತೃಪ್ತ  ಶಾಸಕರು ವಾಪಸ್ ಬೆಂಬಲಕ್ಕೆ ಬರುತ್ತಾರೋ ಅನ್ನೋ ವಿಶ್ವಾಸ ಇಲ್ಲ. ಸರ್ಕಾರ ಎಲ್ಲ ವಿಚಾರವನ್ನು ಹೇಳಬೇಕಿದ್ದು, ಆ ಕಾರಣಕ್ಕಾಗಿ ಚರ್ಚೆ ಮಾಡುತ್ತಿದ್ದೇವೆ. ಸೋಮವಾರ ಸಂಜೆ ವಿಶ್ವಾಸ ಮತ ಯಾಚನೆಗೆ ಮತದಾನ ಆಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ರೆಬೆಲ್ ಶಾಸಕರ ಬಗ್ಗೆ ದೂರು ನೀಡಬಹುದು ಎಂದು ಸ್ಪೀಕರ್ ಹೇಳಿದ್ದಾರೆ. ರಕ್ತ ಸಂಬಂಧಿಗಳು ದೂರು ನೀಡಬಹುದು. ರಮೇಶ್ ಜಾರಕಿಹೊಳಿ ನನ್ನ ಸಂಪರ್ಕದಲ್ಲಿ ಇಲ್ಲ. ಸ್ಪೀಕರ್ ಗೆ ದೂರು ನೀಡುವ ಸಂದರ್ಭ ಇಲ್ಲ.  ಅಂತ ಸನ್ನಿವೇಶ ಇಲ್ಲ, ಸಂದರ್ಭ ಬಂದರೆ ನೋಡೋಣ ಎಂದರು.

ಬಿಜೆಪಿಯವರು ತರಾತುರಿ ಮಾಡುತ್ತಿದ್ದಾರೆ ; ಯು ಟಿ ಖಾದರ್

ಇವತ್ತು ಮಧ್ಯಾಹ್ನವೇ ಸದನ ಮುಗಿಯಬೇಕಿತ್ತು ವಿಶ್ವಾಸಮತ ಯಾಚನೆ ಮಾಡೋದು ಬೇಗ ಮುಗಿಯೋ‌ ವಿಚಾರ ಅಲ್ಲ. ಶಾಸಕರ ಹಕ್ಕನ್ನು ಮೊಟಕುಗೊಳಿಸಿದ್ರೇ ಹೇಗೆ ಬಿಜೆಪಿಯವರು ತರಾತುರಿ ಮಾಡುತ್ತಿದ್ದಾರೆ. ಎರಡು ದಿವಸ ಕೂಡಾ ಮಾತನಾಡಲು ಬಿಡೋದಿಲ್ಲ ಅಂದ್ರೆ ಹೇಗೆ? ಇದನ್ನು ಪ್ರತಿಪಕ್ಷ ಕೂಡಾ ಅರ್ಥ ಮಾಡಿಕೊಳ್ಳಬೇಕಾಗುತ್ತೆ ಇದು ಬರೀ ಪ್ರತಿಪಕ್ಷ ಆಡಳಿತದ ವಿಚಾರ ಅಲ್ಲ. ಇದು ಇಡೀ ಕರ್ನಾಟಕದ ವಿಚಾರ. ಡಿಫೆಕ್ಷನ್ ಆಕ್ಟ್‌ನ ಅಸ್ತಿತ್ವದ ಪ್ರಶ್ನೆ. ಶಾಸಕರಿಗೆ ಮಾತನಾಡುವ ಎಲ್ಲ ಅವಕಾಶ ಮಾಡಿಕೊಡಬೇಕು ಎಂದು ಸಚಿವ ಯು ಟಿ ಖಾದರ್ ತಿಳಿಸಿದರು.

 ಮತದಾನ ಮಾಡದೇ ಪಲಾಯಾನ ಮಾಡಿದ ಸಿಎಂ ; ಆರ್ ಅಶೋಕ್

ಪ್ರತೀ ಬಾರಿ ಮಾತನಾಡುವಾಗ ಸಿಎಂ ನನ್ನ ಸರ್ಕಾರ ಎನ್ನುತ್ತಿದ್ದರು. ಅವರದೇ ಸರ್ಕಾರದ ಮುಖ್ಯಮಂತ್ರಿ ಓಟಿಂಗ್ ಮಾಡದೇ ಪಲಾಯನ ಮಾಡಿದ್ದಾರೆ. ರಾಜ್ಯಪಾಲರ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿರುವಂಥದ್ದು ಸರಿಯಲ್ಲ. ಗವರ್ನರ್ ಆದೇಶ ಧಿಕ್ಕರಿಸಿರುವ ಮೊದಲ ಮುಖ್ಯಮಂತ್ರಿ ಇವರು ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಹೇಳಿದರು.

ಇದನ್ನೂ ಓದಿ : ಎಲ್ಲರಿಗೂ ಚರ್ಚೆ ಮಾಡುವ ಅವಕಾಶ ಕೊಡಬೇಕಿದೆ ಹಾಗಾಗಿ ಸೋಮವಾರ ಕೂಡ ಚರ್ಚೆ ನಡೆಯಲಿದೆ : ಹೆಚ್​ ಕೆ ಪಾಟೀಲ್ಸದನದ ನಿಯಮಾವಳಿ ಪ್ರಕಾರ ಏನು ಮಾತನಾಡಬೇಕಾಗಿತ್ತೋ ಅದನ್ನು ಮಾಡದೇ ಸದನದ ಸಮಯ ಹಾಳುಮಾಡಿದ್ದಾರೆ. ಇದರಿಂದ ಅವರಿಗೆ ಸ್ಪಷ್ಟ ಬಹುಮತ ಇಲ್ಲ ಅನ್ನೋದು ಸಾಬೀತಾಯಿತು. ಸಿಎಂ ರಾಜೀನಾಮೇನೂ ಕೊಡುತ್ತಿಲ್ಲ. ರಾಜ್ಯಪಾಲರ ಆದೇಶವನ್ನೂ ಪಾಲಿಸದೇ ಸರ್ಕಾರ ತಪ್ಪು ಮಾಡಿದೆ, ಮುಂದೆ ಪ್ರತಿಫಲವನ್ನೂ ಪಡೆಯಲಿದೆ ಎಂದರು.

First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading