ಕಾಂಗ್ರೆಸ್​ನಲ್ಲಿ ಕಂಡೀಷನ್​ ಬ್ಲಾಕ್​ಮೇಲ್ ತಂತ್ರ ನಡೆಯಲ್ಲ, 5ನಿಮಿಷಕ್ಕೆ ಟೋಪಿ ಬದಲಾಗುತ್ತೆ; ಡಿ.ಕೆ. ಶಿವಕುಮಾರ್

ರಾಜ್ಯ ಸರ್ಕಾರ ಮೊದಲು ಗೋಲಿಬಾರ್​ನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಿದೆ. ಆದರೆ, ದೆಹಲಿ ನಾಯಕರಿಂದ ಫೋನ್ ಬರುತ್ತಿದ್ದಂತೆ ಸಿಎಂ ಯಡಿಯೂರಪ್ಪ ತಕ್ಷಣ ಚೆಕ್ ಅನ್ನು ತಡೆಹಿಡಿದ್ದಾರೆ. ಆರೋಪಿಗಳು ಯಾರು ಎಂದು ನ್ಯಾಯಾಲಯ ತೀರ್ಪು ನೀಡುವ ಮುನ್ನವೇ ಬಿಜೆಪಿ ನಾಯಕರು ಗುರ್ತಿಸಿದ್ದಾರೆ ಎಂದು ಡಿಕೆಶಿ ಕಿಡಿಕಾರಿದ್ದಾರೆ.

MAshok Kumar | news18-kannada
Updated:December 26, 2019, 4:07 PM IST
ಕಾಂಗ್ರೆಸ್​ನಲ್ಲಿ ಕಂಡೀಷನ್​ ಬ್ಲಾಕ್​ಮೇಲ್ ತಂತ್ರ ನಡೆಯಲ್ಲ, 5ನಿಮಿಷಕ್ಕೆ ಟೋಪಿ ಬದಲಾಗುತ್ತೆ; ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್
  • Share this:
ಬೆಂಗಳೂರು (ಡಿಸೆಂಬರ್ 26); ಕಾಂಗ್ರೆಸ್ ಪಕ್ಷದಲ್ಲಿ 5 ನಿಮಿಷದಲ್ಲಿ ಟೋಪಿ ಬದಲಾಗುತ್ತೆ. ಇಲ್ಲಿ ಯಾರದೇ ಬ್ಲಾಕ್ಮೇಲ್, ಕಂಡಿಷನ್ ನಡೆಯಲ್ಲ. ಬ್ಲಾಕ್ಮೇಲ್ ಮಾಡುವ ಮೂರ್ಖರು ಕಾಂಗ್ರೆಸ್​ ಪಕ್ಷದಲ್ಲಿ ಸಿಗಲ್ಲ, ಇಲ್ಲಿ ನನ್ನ ಮಾತೂ ಫೈನಲ್ ಅಲ್ಲ ಎಂದು ಡಿ.ಕೆ. ಶಿವಕುಮಾರ್​ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಗಾದಿಯ ಕುರಿತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ಬಳಿ ಕಂಡೀಷನ್ ಹಾಕಿರುವ ಕುರಿತು ಸ್ಪಷ್ಟನೆ ನೀಡಿರುವ ಅವರು, “ಕಾಂಗ್ರೆಸ್​ ಶಿಸ್ತಿನ ಪಕ್ಷ. ಇಲ್ಲಿ ಯಾರೂ ಬ್ಲಾಕ್ಮೇಲ್ ಮಾಡಿ ಅಧಿಕಾರ ಪಡೆಯುವುದು ಸಾಧ್ಯವೇ ಇಲ್ಲ. ಬ್ಲಾಕ್ಮೇಲ್ ಮಾಡುವ ಮೂರ್ಖರು ಕಾಂಗ್ರೆಸ್​ ಪಕ್ಷದಲ್ಲಿ ಸಿಗಲ್ಲ. ಹೀಗಾಗಿ ಹಳಬರು ಕೆಪಿಸಿಸಿ ಅಧ್ಯಕ್ಷರಾಗ್ತಾರ? ಅಥವಾ ಹೊಸಬರಿಗೆ ಅವಕಾಶ ಸಿಗುತ್ತಾ? ಎಂದು ಕಾದು ನೋಡಬೇಕು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ನೀಡಿದ ಪರಿಹಾರವನ್ನು ಹಿಂಪಡೆದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, "ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಆದರೆ, ಈ ಕುರಿತು ನ್ಯಾಯಾಲಯ ತೀರ್ಪು ನೀಡುವುದಕ್ಕಿಂತ ಮುಂಚೆಯೇ ಬಿಜೆಪಿ ನಾಯಕರು ತೀರ್ಪು ನೀಡಿದ್ದಾರೆ. ಮೃತರ ಕುಟುಂಬಗಳಿಗೆ ಘೋಷಿಸಿದ ಪರಿಹಾರವನ್ನೂ ಹಿಂಪಡೆದಿದ್ದಾರೆ. ಈ ಸರ್ಕಾರದ ನೀತಿಯನ್ನು ಜನ ನೋಡುತ್ತಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

“ರಾಜ್ಯ ಸರ್ಕಾರ ಮೊದಲು ಗೋಲಿಬಾರ್​ನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಿದೆ. ಆದರೆ, ದೆಹಲಿ ನಾಯಕರಿಂದ ಫೋನ್ ಬರುತ್ತಿದ್ದಂತೆ ಸಿಎಂ ಯಡಿಯೂರಪ್ಪ ತಕ್ಷಣ ಚೆಕ್ ಅನ್ನು ತಡೆಹಿಡಿದ್ದಾರೆ. ಆರೋಪಿಗಳು ಯಾರು ಎಂದು ನ್ಯಾಯಾಲಯ ತೀರ್ಪು ನೀಡುವ ಮುನ್ನವೇ ಬಿಜೆಪಿ ನಾಯಕರು ಗುರ್ತಿಸಿದ್ದಾರೆ. ಪರಿಹಾರವನ್ನು ಹಿಂಪಡೆದಿದ್ದಾರೆ. ಈ ಕುರಿತು ರಾಜ್ಯದ ಜನರಿಗೆ ತಿಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ನಾಯಕರು ಸಾವಿನ ಮನೆಯಲ್ಲೂ ರಾಜಕೀಯ ಮಾಡ್ತಾರೆ; ಯು.ಟಿ. ಖಾದರ್ ಆರೋಪ

First published:December 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ