CM Basavaraja Bommai ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ: ಪ್ರಹ್ಲಾದ್ ಜೋಶಿ

ಸದ್ಯ ಹೈಕಮಾಂಡ್ ನಾಯಕರು 5 ರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಚುನಾವಣೆ ಮುಗಿದ ಬಳಿಕ ಹೈಕಮಾಂಡ್ ನಾಯಕರು ಸಿಎಂ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ನಿರ್ಧಾರ ಮಾಡುತ್ತಾರೆ.

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

  • News18
  • Last Updated :
  • Share this:
ನವದೆಹಲಿ, ಜ.‌ 21: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌  (Chief Minister Basavaraja Bommai)  ಅವರನ್ನು ಬದಲಾಯಿಸಿ ಹೊಸಬರಿಗೆ ಮುಖ್ಯಮಂತ್ರಿ ಪಟ್ಟ ಕೊಡುತ್ತಾರೆ ಎಂಬುದು ವದಂತಿ. ಹೈಕಮಾಂಡ್ ಮಟ್ಟದಲ್ಲಿ ಆ ರೀತಿಯ ಯಾವುದೇ ಚರ್ಚೆ ಆಗುತ್ತಿಲ್ಲ. 2023ರವರೆಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಮೇಯ ಇಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Union Parliment Affairs Minister Prahlad Joshi) ಹೇಳಿದರು.

5 ರಾಜ್ಯಗಳ ಬಳಿಕ‌ ಸಂಪುಟ ವಿಸ್ತರಣೆ
ಶುಕ್ರವಾರ ದೆಹಲಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪ್ರಹ್ಲಾದ್ ಜೋಷಿ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸದ್ಯ ಹೈಕಮಾಂಡ್ ನಾಯಕರು 5 ರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಚುನಾವಣೆ ಮುಗಿದ ಬಳಿಕ ಹೈಕಮಾಂಡ್ ನಾಯಕರು ಸಿಎಂ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು. ಗೊಂದಲಗಳಿದ್ದವರು ಹೈಕಮಾಂಡ್ ನಾಯಕರ ಜೊತೆಗೆ ಚರ್ಚಿಸಲಿ. ಅದನ್ನು ಬಿಟ್ಟು ಮಾಧ್ಯಮಗಳಲ್ಲಿ ಯಾರು ಕೂಡ ಆಕ್ಷೇಪ ವ್ಯಕ್ತಪಡಿಸಬಾರದು. ಮಾಧ್ಯಮಗಳ ಮುಂದೆ ಹೋಗುವುದನ್ನು ಹೈಕಮಾಂಡ್ ಒಪ್ಪುವುದಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ಉತ್ತರಖಂಡಾದಲ್ಲಿ ಬಿಜೆಪಿ ಅಧಿಕಾರಕ್ಕೆ
ಉತ್ತರಾಖಂಡ ಚುನಾವಣಾ ಉಸ್ತುವಾರಿ ಆಗಿರುವ ಕೇಂದ್ರ ಸಚಿವ ಪ್ರಹಾದ್ ಜೋಶಿ ಉತ್ತರಖಂಡಾದ ಚುನಾವಣಾ ಚಿತ್ರಣವನ್ನು ಬಿಡಿಸಿಟ್ಟರು.‌ 2002ರಲ್ಲಿ ಉತ್ತರಖಂಡಾ ರಾಜ್ಯ ರಚನೆ ಆದ ಬಳಿಕ ಅಲ್ಲಿ ಯಾವುದೇ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದಿಲ್ಲ. ಅದಕ್ಕೆ ಕಾರಣ ಗೆಲುವಿನ ಅಂತರ ಕಡಿಮೆ ಇರುವುದು. ಆದರೆ 2017ರ ಬಳಿಕ ಉತ್ತರಾಖಂಡದಲ್ಲಿ ಪರಿಸ್ಥಿತಿ ಬದಲಾಗಿದೆ. ಈ ಬಾರಿ ಬಿಜೆಪಿ ‌ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಇದನ್ನು ಓದಿ: ಸೈನಿಕರಿಗೆ ಅಪಮಾನ ಮಾಡಿದ್ದಾರೆಂದು ದೆಹಲಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಪ್ರತಿಕೃತಿ ದಹನ

ಉತ್ತರಾಖಂಡ ರಚನೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಜೊತೆಗೆ ಆ ರಾಜ್ಯದ ಅಭಿವೃದ್ಧಿಗೂ ಆಸಕ್ತಿ ತೋರಿಸಿಲ್ಲ. ಅಲ್ಲಿನ ಸಾರಿಗೆ, ಮೂಲ ಸೌಕರ್ಯಗಳು ಇರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಹೆಚ್ಚಿಸಿದೆ. ರಸ್ತೆ,  ರೈಲು ಸೇರಿದಂತೆ ಮೂಲ ಸೌಕರ್ಯಗಳನ್ನು ಹೆಚ್ಚಿಸಿದೆ. ಪ್ರಧಾನ ಮಂತ್ರಿ ಮೋದಿ ಮತ್ತು ಮುಖ್ಯಮಂತ್ರಿ ಧಾಮಿ ಅವರ ಡಬಲ್ ಇಂಜಿನ್ ಸರ್ಕಾರ ಹೊಸ ಇತಿಹಾಸ ಬರೆಯಲಿದೆ. ಎರಡನೇ ಬಾರಿ ಅಧಿಕಾರ ಬರುವ ಮೂಲಕ ದಾಖಲೆ ಬರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: ನಾಳೆಯಿಂದ ಇಲ್ಲ Weekend Curfew; ಸಿಎಂ ಸಭೆಯಲ್ಲಿ ತೀರ್ಮಾನ

ನಾನು ಉತ್ತರಖಂಡಾಕ್ಕೆ ಉಸ್ತುವಾರಿಯಾಗಿದ್ದೇನೆ. ಈಗಾಗಲೇ 59 ಅಭ್ಯರ್ಥಿಗಳ ಪ್ರಕಟವಾಗಿದೆ. 60ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ.  ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ಪಕ್ಷದ ನಿಲುವು ಸ್ಪಷ್ಟವಾಗಿದೆ. ಉತ್ತರಾಖಂಡ ರಾಜ್ಯದಲ್ಲಿ ಮೋದಿ ಬಗ್ಗೆ ಅಪಾರವಾದ ಜನಪ್ರಿಯತೆ ಇದೆ. ವರ್ಚ್ಯುಯಲ್ ಮೂಲಕ ಸಮಾವೇಶ ಮಾಡುತ್ತಿದ್ದೇವೆ, ಪ್ರತಿ ಬೂತ್ ನಲ್ಲಿ 10 ಮೀಟಿಂಗ್ ನಡೆಸುತ್ತಿದ್ದೇವೆ. ಅಭಿವೃದ್ಧಿ ಅಜೆಂಡಾದ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಪ್ರಹ್ಲಾದ್ ಜೋಷಿ ವಿವರಿಸಿದರು.

ಕಾಂಗ್ರೆಸ್ ಸೇರಿದ ಬಿಜೆಪಿ ನಾಯಕ
ಇತ್ತ ಪ್ರಹ್ಲಾದ್ ಜೋಷಿ ಗೆಲುವಿನ‌ ಬಗ್ಗೆ ಮಾತನಾಡುತ್ತಿದ್ದ ವೇಳೆ ಅತ್ತ ಉತ್ತರಾಖಂಡ ಬಿಜೆಪಿ  ನಾಯಕ ಹಾಗೂ ರಾಜ್ಯ ಸಂಪುಟದ ಮಾಜಿ ಸಚಿವ ಹರಕ್ ಸಿಂಗ್ ರಾವತ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಕಾಂಗ್ರೆಸ್‌‌ ಸೇರಿದ ಬಳಿಕ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ಹರಕ್ ಸಿಂಗ್ ಅವರು, ಬಿಜೆಪಿ ನನ್ನನ್ನು ಬಳಸಿ ಎಸೆಯುವ ವಸ್ತು ಎಂದು ಭಾವಿಸಿತ್ತು. ಇದರಿಂದ ನಾನು ಬೇಸರಗೊಂಡಿದ್ದೇನೆ. ಮಾರ್ಚ್‌ 10ರಂದು ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಉತ್ತರಖಂಡಾದಲ್ಲಿ ಗೆಲುವು ಸಾಧಿಸಲಿದೆ' ಎಂದು ಹೇಳಿದರು.
Published by:Seema R
First published: