‘ಕಾಂಗ್ರೆಸ್​-ಜೆಡಿಎಸ್​​ ಅಸಮಾಧಾನ ನಿಜ, ಮುಂದಿನ ತಿಂಗಳು ಭಾರೀ ಬದಲಾವಣೆ: ಸಿಎಂ ಇಬ್ರಾಹಿಂ

ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಇರುವುದು ವಾಸ್ತವ, ಗಣಪತಿ ಹಬ್ಬದ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಆಗಲಿದೆ.


Updated:August 31, 2018, 4:16 PM IST
‘ಕಾಂಗ್ರೆಸ್​-ಜೆಡಿಎಸ್​​ ಅಸಮಾಧಾನ ನಿಜ, ಮುಂದಿನ ತಿಂಗಳು ಭಾರೀ ಬದಲಾವಣೆ: ಸಿಎಂ ಇಬ್ರಾಹಿಂ
ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಇರುವುದು ವಾಸ್ತವ, ಗಣಪತಿ ಹಬ್ಬದ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಆಗಲಿದೆ.

Updated: August 31, 2018, 4:16 PM IST
ನ್ಯೂಸ್​-18 ಕನ್ನಡ

ಬೆಂಗಳೂರು(ಆಗಸ್ಟ್​​.31): ಜೆಡಿಎಸ್​ ಕಾಂಗ್ರೆಸ್​ ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಇರುವುದು ವಾಸ್ತವ, ಗಣಪತಿ ಹಬ್ಬದ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಆಗಲಿದೆ ಎಂದು ಕಾಂಗ್ರೆಸ್​ ಹಿರಿಯ ಮುಖಂಡ ಸಿಎಂ ಇಬ್ರಾಹಿಂ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ಧಾರೆ.

ಸರ್ಕಾರದ ವಿರುದ್ಧ ಅಸಮಧಾನ ಹೊರ ಹಾಕಿದ ಸಿಎಂ ಇಬ್ರಾಹಿಂ, ನಾನು ಕಿಂಗ್ ಅಲ್ಲ ಕಿಂಗ್ ಮೇಕರ್. ಸಮ್ಮಿಶ್ರ ಸರ್ಕಾರದಲ್ಲಿ ಅಸಮಧಾನ ಇರೋದು ಸತ್ಯ. ದೇವರ ಬಳಿಯೇ ಅಸಮಧಾನ ಸರಿ ಪಡಿಸೋಕೆ ಆಗಲಿಲ್ಲ. ಇನ್ನು ಮನುಷ್ಯರಲ್ಲಿ ಇರಲ್ಲವೆ ಎಂದು ಕಾಂಗ್ರೆಸ್​ ಮುಖಂಡ ಸರ್ಕಾರದ ಬಗ್ಗೆ ಮಹತ್ವದ ಸುಳಿವು ನೀಡಿದ್ಧಾರೆ.

ಸೆಪ್ಟೆಂಬರ್​ನಲ್ಲಿ ಭಾರೀ ಬದಲಾವಣೆ ಆಗಲಿದೆ. ನಮ್ಮ ಸಮುದಾಯಕ್ಕೆ ಸರ್ಕಾರದಲ್ಲಿ ಉನ್ನತ ಸ್ಥಾನ ಸಿಕ್ಕಿಲ್ಲ. ಮಹತ್ವದ ನಿರ್ಧಾರ ಕೈಗೊಳ್ಳುವ ಅಧಿಕಾರ ನಮಗೆ ಕೊಟ್ಟಿಲ್ಲ. ನಮ್ಮ ಸಮುದಾಯ ಕೇವಲ ಉತ್ಸವ ಮೂರ್ತಿ. ಲಿಂಗಾಯಿತರು, ಬ್ರಾಹ್ಮಣರು, ಒಕ್ಕಲಿಗರೇ ಸರ್ಕಾರದಲ್ಲಿ ಹೆಚ್ಚಿದ್ದಾರೆ ಎಂದು ಸಿಎಂ ಇಬ್ರಾಹಿಂ ಅಸಮಾಧಾನ ಹೊರಹಾಕಿದ್ಧಾರೆ.

ಸರ್ಕಾರದಲ್ಲಿ ಷೇರು ಇಲ್ಲದವರೇ ಹೆಚ್ಚು ಮಾತನಾಡುತ್ತಿದ್ದಾರೆ. ನಾವು ಲಾಭಾಂಶ ಕೇಳುತ್ತ ಇದ್ದೇವೆ. ಸಮುದಾಯಕ್ಕೆ ಅಧಿಕಾರಕ್ಕಿಂತ ಮಾನ ಮುಖ್ಯ. ನಿರ್ಣಯ ತೆಗೆದುಕೊಳ್ಳುವ ಸಮಿತಿಯಲ್ಲಿ ನಮ್ಮನ್ನ ಕಡೆಗಣಿಸಿದ್ದಾರೆ. ಸದ್ಯ ಸಮುದ್ರದಲ್ಲಿ ಧುಮುಕ್ಕಿದ್ದೇನೆ. ಮುಂದೆ ಕೋಲು ಆಡಿಸುತ್ತೇನೆ ಎಂದರು.

ಸದ್ಯ ನನ್ನ ಬಹು ದೊಡ್ಡ ಗಂಟು ಕಳೆದು ಹೋಗಿದೆ. ಅದನ್ನ ಹುಡುಕುವ ಪ್ರಯತ್ನ ಮಾಡ್ತಾ ಇದೀನಿ. ಸೆಪ್ಟೆಂಬರ್ ವೇಳೆಗೆ ನನಗೆ ಬಹು ದೊಡ್ಡ ಗಂಟು ಸಿಗಲಿದೆ. ಸದ್ಯ ನಾನು ಉತ್ತರ ಕರ್ನಾಟಕ ಪ್ರವಾಸ ಮಾಡ್ತಾ ಇದೀನಿ. ಸೆಪ್ಟೆಂಬರ್​ನಲ್ಲಿ ಪ್ರವಾಸ ಮುಗಿಯಲಿದ್ದು, ಬಳಿಕ ನನ್ನ ಶಕ್ತಿ ತೋರ್ಪಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ಧಾರೆ.

ಇದೆ ವೇಳೆ ನಾನು ಸಚಿವ ಸ್ಥಾನ ಕೇಳೊದಿಲ್ಲ. ನನ್ನ ಸಾಮರ್ಥ್ಯ ಏನು ಅನ್ನೋದು ಎಲ್ಲರಿಗೂ ಗೊತ್ತಿದೆ. ನಾನು ಒಬ್ಬಂಟಿ ಅಲ್ಲ, ಹಿಂದೆ ಸಾಕಷ್ಟು ಜನರಿದ್ದಾರೆ. ಹಾಲಿ ಸಂಪುಟದಲ್ಲಿರೋ ನಮ್ಮ ಸಮುದಾಯದವರು ಕೇವಲ ಉತ್ಸವ ಮೂರ್ತಿಗಳು. ನಮ್ಮ ಸಮುದಾಯ ತುಳಿತಕ್ಕೆ ಒಳಗಾಗಿದೆ. ಇದನ್ನ ಮೇಲತ್ತುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಜರೆದರು.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ