• Home
  • »
  • News
  • »
  • state
  • »
  • Kodagu: ಮತ್ತೆ ಜಲಸ್ಫೋಟಕ್ಕೆ ತತ್ತರಿಸಿದ ಕೊಡಗು, ನೋಡ ನೋಡುತ್ತಿದ್ದಂತೇ ಕುಸಿಯಿತು ಬೆಟ್ಟ!

Kodagu: ಮತ್ತೆ ಜಲಸ್ಫೋಟಕ್ಕೆ ತತ್ತರಿಸಿದ ಕೊಡಗು, ನೋಡ ನೋಡುತ್ತಿದ್ದಂತೇ ಕುಸಿಯಿತು ಬೆಟ್ಟ!

ಕೊಡಗಿನಲ್ಲಿ ಮಳೆ ಅವಾಂತರದ ಸಂಗ್ರಹ ಚಿತ್ರ

ಕೊಡಗಿನಲ್ಲಿ ಮಳೆ ಅವಾಂತರದ ಸಂಗ್ರಹ ಚಿತ್ರ

ಮಡಿಕೇರಿ ತಾಲ್ಲೂಕಿನ ಸೀಮೆಕಜೆಯಲ್ಲಿ ಭೀಕರ ಬೆಟ್ಟ ಕುಸಿತ ಸಂಭವಿಸಿದೆ. ಜಲಸ್ಫೋಟದ ತೀವ್ರತೆಗೆ ಸ್ಫೋಟಗೊಂಡು ಬೆಟ್ಟದ ಮಣ್ಣೆಲ್ಲ ರಸ್ತೆಗೆ ಬಂದು ಬಿದ್ದಿದೆ. ಲಕ್ಷಾಂತರ ಟನ್ ಪ್ರಮಾಣದ ಮಣ್ಣು ಕೆಸರಾಗಿ ಹರಿದು ಹೋಗಿರುವ ಘಟನೆ ನಡೆದಿದೆ.

  • Share this:

ಕೊಡಗು: ಕಾವೇರಿಯ (Cauvery) ತವರು, ಪ್ರಕೃತಿ ಸೌಂದರ್ಯದ ತಾಣ ಕೊಡಗಿನಲ್ಲಿ (Kodagu) ಮತ್ತೆ ಭೀಕರ ಜಲಸ್ಫೋಟ (water explosion) ಸಂಭವಿಸಿದೆ. ಜಲಸ್ಫೋಟದ ರಭಸಕ್ಕೆ ನೋಡ ನೋಡುತ್ತಿದ್ದಂತೆಯೇ ಇಡೀ ಬೆಟ್ಟವೇ (Hill) ಕುಸಿತವಾಗಿದೆ. ಮಡಿಕೇರಿ (Madikeri) ತಾಲ್ಲೂಕಿನ ಸೀಮೆಕಜೆಯಲ್ಲಿ ಭೀಕರ ಬೆಟ್ಟ ಕುಸಿತ (Land Slides) ಸಂಭವಿಸಿದೆ. ಬೆಟ್ಟ ಕುಸಿತದ ಭೀಕರತೆ ಹೇಗಿತ್ತು ಅಂದರೆ ಅದನ್ನು ನೋಡಿ ಸಾರ್ವಜನಿಕರೆಲ್ಲ ಬೆಚ್ಚಿ ಬಿದ್ದಿದ್ದಾರೆ. ಜಲಸ್ಫೋಟದ ತೀವ್ರತೆಗೆ ಸ್ಫೋಟಗೊಂಡು ಬೆಟ್ಟದ ಮಣ್ಣೆಲ್ಲ (soil) ರಸ್ತೆಗೆ ಬಂದು ಬಿದ್ದಿದೆ. ಲಕ್ಷಾಂತರ ಟನ್ ಪ್ರಮಾಣದ ಮಣ್ಣು ಕೆಸರಾಗಿ (Mud) ಹರಿದು ಹೋಗಿರುವ ಘಟನೆ ನಡೆದಿದೆ. ಶುಕ್ರವಾರ ಮುಂಜಾನೆ ನಡೆದಿರುವ ಜಲಸ್ಫೋಟ ತಡವಾಗಿ ಬೆಳಕಿಗೆ ಬಂದಿದೆ. ನಸುಕಿನಲ್ಲಿ ಭಾರಿ ಶಬ್ದ ಕೇಳಿ ಬಂದಿತು. ನಂತರ, ಬೆಳಿಗ್ಗೆ ನೋಡಿದಾಗ ಗುಡ್ಡದ ಒಂದು ಪಾರ್ಶ್ವ ಕುಸಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಬೆಟ್ಟದ ಕೆಳಗೆ ಇರುವ ಮನೆಗಳಿಗೆ ಆತಂಕ


ಸೀಮೆಕಜೆ ಬೆಟ್ಟದಲ್ಲಿ ಜಲಸ್ಫೋಟದಿಂದ ಬೆಟ್ಟದ ಒಂದು ಭಾಗವೇ ಸಂಪೂರ್ಣ ಕುಸಿದು ಹೋಗಿದೆ. ಹೀಗಾಗಿ ಬೈಟ್ಟದ ಕೆಳಭಾಗವಾದ ಜೋಡಿಪಾಲದಲ್ಲಿರುವ 15 ಮನೆಗಳಿಗೆ ಈಗ ಆತಂಕ ಶುರುವಾಗಿದೆ. ಇನ್ನಷ್ಟು ಬೆಟ್ಟ ಕುಸಿದರೆ ಮನೆಗಳಿಗೆ ಅಪಾಯ ಗ್ಯಾರೆಂಟಿ ಎನ್ನಲಾಗಿದೆ. ಇದರಿಂದಾಗಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ರಾಷ್ಟ್ರೀಯ ಹೆದ್ದಾರಿ 275ರ ಬಳಿಯ ಪ್ರದೇಶಗಳಾದ ಮದೆನಾಡು, ಜೋಡುಪಾಲ, ಮೊಣ್ಣಗೇರಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ


ಬೆಟ್ಟದ ಮೇಲ್ಭಾಗದಲ್ಲಿರುವ ಮನೆ ಸದಸ್ಯರು ಶಿಫ್ಟ್


ಇನ್ನು ಬೆಟ್ಟ ಕುಸಿದ ಮೇಲ್ಭಾಗದಲ್ಲಿರುವ ಒಂದು ಮನೆಗೆ ತೀವ್ರ ಆತಂಕ ಎದುರಾಗಿದೆ. ಹೀಗಾಗಿ ಎಲ್ಲರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ನಿರ್ಧಾರ ಮಾಡಲಾಗಿದೆ. ಇನ್ನು ಸ್ಥಳಕ್ಕೆ ಪಂಚಾಯಿತಿ ಸದಸ್ಯರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


ಇದನ್ನೂ ಓದಿ: Karnataka Weather: ಮುಂದುವರಿದ ತುಂತುರು ಮಳೆ; ಇಂದು ಭಾಗಶಃ ಮೋಡ ಕವಿದ ವಾತಾವರಣ


ಕಾರ್ಯಾಚರಣೆಗೆ ಜಿಗಣಿಗಳು ಅಡ್ಡಿ


‘ಗುಡ್ಡದ ಪಾರ್ಶ್ವ ಕುಸಿದಿರುವ ಸ್ಥಳವನ್ನು ತಲುಪಲಾಗುತ್ತಿಲ್ಲ. ವಿಪರೀತ ಜಿಗಣೆಗಳು, ಕೆಸರು ತುಂಬಿಕೊಂಡಿದೆ. ಸದ್ಯ, ಕೆಸರುಮಿಶ್ರಿತ ನೀರು ಹರಿಯುವುದು ಕಡಿಮೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಗುಡ್ಡದ ಕೆಳಭಾಗದಲ್ಲಿದ್ದ ಎರಡು ಕುಟುಂಬದ ಸದಸ್ಯರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ’ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.


ರಾಮಕೊಲ್ಲಿ ಸಮೀಪ ಭೂ ಪ್ರದೇಶದಲ್ಲಿ ಬಿರುಕು


ಇಲ್ಲಿಗೆ ಎರಡು ಕಿ.ಮೀ ದೂರದ 2ನೇ ಮೊಣ್ಣಂಗೇರಿ ಗ್ರಾಮದ ಗುಡ್ಡ ಪ್ರದೇಶದ ರಾಮಕೊಲ್ಲಿ ಸಮೀಪ ಬಿರುಕುಗಳು ಮೂಡಿರುವುದನ್ನು ಭೂವಿಜ್ಞಾನಿಗಳ ತಂಡ ಖಚಿತಪಡಿಸಿದೆ. ಭೂ ವಿಜ್ಞಾನಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ಮತ್ತು ಎನ್‍ಡಿಆರ್‌ಎಫ್ ತಂಡ ಪರಿಶೀಲನೆ ನಡೆಸಿತ್ತು.


ಜಲಸ್ಫೋಟದ ತೀವ್ರತೆಗೆ ಕೊಚ್ಟಿ ಹೋಗಿದ್ದ ಸೇತುವೆ


ಮದೆನಾಡು ಸಮೀಪದ 2ನೇ ಮೊಣ್ಣಂಗೇರಿಯಲ್ಲಿ ಸೋಮವಾರ ರಾತ್ರಿ ಭಾರೀ ಶಬ್ದದೊಂದಿಗೆ ‘ಜಲ ಸ್ಫೋಟ’ ಸಂಭವಿಸಿತ್ತು, ನಿಶಾನಿ ಬೆಟ್ಟದಲ್ಲಿ ಭಾರೀ ಭೂ ಕುಸಿತವಾಗಿದೆ. ಮಳೆ ಪ್ರಮಾಣ ಕುಗ್ಗಿದ್ದರೂ ರಾತ್ರೋ ರಾತ್ರಿ ಜಲಸ್ಫೋಟ ಸಂಭವಿಸಿರುವುದು ಗ್ರಾಮಸ್ಥರು ಸೇರಿದಂತೆ ಆಡಳಿತ ವ್ಯವಸ್ಥೆಯನ್ನೇ ಬೆಚ್ಚಿ ಬೀಳಿಸಿತ್ತು. ತೊರೆಯ ನೀರಿನಲ್ಲಿ ಭಾರೀ ಪ್ರಮಾಣದ ಮರದ ದಿಮ್ಮಿಗಳು ಕೊಚ್ಚಿ ಬಂದಿದ್ದರೆ, ಬೃಹತ್ ಕಲ್ಲು ಬಂಡೆಗಳು ಉರುಳಿ ಬಂದು 2ನೇ ಮೊಣ್ಣಂಗೇರಿಯಲ್ಲಿರುವ ರಾಮನಕೊಲ್ಲಿ ಸೇತುವೆಗೆ ಅಳವಡಿಸಿದ್ದ ಮರದ ಸೇತುವೆಯನ್ನು ಧ್ವಂಸಗೊಳಿಸಿತ್ತು.


ಇದನ್ನೂ ಓದಿ: Shiradi Ghat: ಬೆಂಗಳೂರು ಟು ಮಂಗಳೂರು ಪ್ರಯಾಣಕ್ಕೆ ಶಿರಾಡಿ ಘಾಟ್ ಓಪನ್; ಈ ನಿಯಮ ಅನ್ವಯ


ಆತಂಕದಲ್ಲೇ ಕಾಲ ಕಳೆಯುತ್ತಿರುವ ಜನ


ಸದ್ಯ ಮೂರು ದಿನಗಳಿಂದ ಮಳೆ ಸಲ್ಪ ಬಿಡುವು ನೀಡಿರುವುದು ಜನರು ಜೀವ ಕೈಯಲ್ಲಿಡಿದು ಬದುಕುತ್ತಿದ್ದಾರೆ. ಆದರೆ ಆಗಸ್ಟ್ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಭೀಕರ ಮಳೆ ಸುರಿಯುವ ಸಾಧ್ಯತೆ ಇದ್ದು, ಒಂದು ವೇಳೆ ಭಾರಿ ಮಳೆ ಸುರಿದರೆ, ಈ ಬಿರುಕುಗಳ ಮೂಲಕ ಬಾರಿ ನೀರು ಭೂಮಿಯೊಡಲು ಸೇರಿ, ಬಿರುಕು ಬಿಟ್ಟು ಸ್ವಲ್ಪ ಕುಸಿದಿರುವ ಇಡೀ ಬೆಟ್ಟವೇ ಕುಸಿಯುವ ಆತಂಕವಿದೆ.

Published by:Annappa Achari
First published: