Murder: ಬಿಯರ್​ ಬಾಟಲ್​ ಕ್ಯಾಪ್ ಓಪನ್ ಮಾಡೋ​ ವಿಚಾರಕ್ಕೆ ಕಿರಿಕ್​; ಬಾರ್​ನಲ್ಲಿ ಶುರುವಾದ​ ಗಲಾಟೆ ಕೊಲೆಯಲ್ಲಿ ಅಂತ್ಯ!

ಪ್ರಕಾಶ್ ಎಂಬಾತ  ಸ್ಟೈಲಾಗಿ ಬಾಟಲ್ ಕ್ಯಾಪ್ ಓಪನ್ ಮಾಡಿದ್ದ. ಈ ವೇಳೆ ಮಂಜುನಾಥ್ ಹಾಗೂ ಮತ್ತೋರ್ವ ನಮ್ಮುಂದೇನೆ ಸ್ಟೈಲ್​ ಆಗಿ ಬಾಟಲ್​ ಓಪನ್ ಮಾಡ್ತೀಯಾ ಎಂದು ಕಿರಿಕ್​ ತೆಗೆದು ಗಲಾಟೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜು.03): ದ್ವೇಷ, ಮೋಸ, ದರೋಡೆಗೆ ಕೊಲೆಗಳು ನಡೆಯುತ್ತೆ ಆದ್ರೆ ಬೆಂಗಳೂರಲ್ಲಿ (Bengaluru) ಬಿಯರ್ ಬಾಟಲ್ ಕ್ಯಾಪ್ (Beer Bottle Cap) ಓಪನ್ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ (Murder) ಅಂತ್ಯವಾಗಿದೆ. ಬಾರ್​ನಲ್ಲಿ ನಡೆದ ಗಲಾಟೆಯಲ್ಲಿ ಚಾಕು ಇರಿತಕ್ಕೆ ಒಳಗಾಗಿದ್ದ ಪ್ರಕಾಶ್ (Prakash) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಕಳೆದ ತಿಂಗಳ 26ನೇ ತಾರೀನಿನಂದು ಬಾರ್ ನಲ್ಲಿ ಕುಳಿತು ಕುಡಿಯುತ್ತಿದ್ದ ಮಂಜುನಾಥ್ ಅಂಡ್ ಗ್ಯಾಂಗ್ ನಡುವೆ ಗಲಾಟೆ ನಡೆದಿದೆ.

ಬಾಟಲ್​ ಓಪನ್ ಮಾಡೋ ವಿಚಾರಕ್ಕೆ ಕಿರಿಕ್

ಎಲ್ಲರೂ ಕುಡಿಯಲು ಎಣ್ಣೆ ಆರ್ಡರ್​ ಮಾಡಿದ್ರು. ಈ ವೇಳೆ ಪ್ರಕಾಶ್ ಎಂಬಾತ  ಸ್ಟೈಲಾಗಿ ಬಾಟಲ್ ಕ್ಯಾಪ್ ಓಪನ್ ಮಾಡಿದ್ದ. ಈ ವೇಳೆ ಮಂಜುನಾಥ್ ಹಾಗೂ ಮತ್ತೋರ್ವ ನಮ್ಮುಂದೇನೆ ಸ್ಟೈಲ್​ ಆಗಿ ಬಾಟಲ್​ ಓಪನ್ ಮಾಡ್ತೀಯಾ ಎಂದು ಕಿರಿಕ್​ ತೆಗೆದಿದ್ದಾರೆ. ನಾನ್ ಸ್ಟೈಲ್ ಮಾಡಿದ್ರೆ ನಿಮಗೇನು ಎಂದು  ಪ್ರಕಾಶ್ ಹೊರಗೆ ಬಂದಿದ್ದಾನೆ. ಹಿಂದೆಯೇ ಹೊರಗೆ ಬಂದ ಮಂಜುನಾಥ್ ಹಾಗೂ ಮತ್ತೊರ್ವ ವ್ಯಕ್ತಿ ಪ್ರಕಾಶ್​ ಮೇಲೆ ಹಲ್ಲೆ ಮಾಡಿ ಚಾಕು ಹಾಕಿದ್ದಾನೆ.

ಆರೋಪಿ ಮಂಜುನಾಥ್ ಬಂಧನ

ಬಳಿಕ ಎಲ್ಲರೂ ಎಸ್ಕೇಪ್​ ಆಗಿದ್ದಾರೆ. ಗಾಯಾಳು ಪ್ರಕಾಶ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಇಂದು ಚಿಕಿತ್ಸೆ ಫಲಿಸದೇ ಪ್ರಕಾಶ್​ ಸಾವನ್ನಪ್ಪಿದ್ದಾನೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದಿರಾನಗರ ಪೊಲೀಸರು ಕೊಲೆ ಆರೋಪಿ ಮಂಜುನಾಥ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Bengaluru: ಕಬಾಬ್ ರುಚಿಯಾಗಿಲ್ಲ ಎಂದು ಹೆಂಡತಿಗೆ ಚಾಕುವಿನಿಂದ ಇರಿದ; ಭಯದಲ್ಲಿ ಇದೇನು ಮಾಡಿಕೊಂಡ?

ಮದ್ಯದ ವಿಚಾರಕ್ಕೆ ಕೊಲೆ

ಇತ್ತೀಚೆಗೆ ಮದ್ಯದ ವಿಚಾರಕ್ಕೆ ನಡೆದ ಗಲಾಟೆ ವೇಳೆ ವ್ಯಕ್ತಿಯೊಬ್ಬರ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ ಪ್ರಕರಣ ಸಂಬಂಧ ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ವಸಂತ್‌ ಕುಮಾರ್‌(25), ಸರಣ್‌ ರಾಜ್‌(26) ಹಾಗೂ ಮುಗುಂದನ್‌(25) ಬಂಧಿತರು. ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳು ಜುಲೈ 27ರಂದು ತಡರಾತ್ರಿ 1.30ರ ಸುಮಾರಿಗೆ ಕೆ.ಆರ್‌.ಮಾರುಕಟ್ಟೆಯಲ್ಲಿ ಪ್ರಶಾಂತ್‌(30) ಎಂಬಾತನ ಹತ್ಯೆ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತ್ಯೆಯಾದ ಪ್ರಶಾಂತ್‌ ಹಾಗೂ ಆರೋಪಿಗಳು ಕೆ.ಆರ್‌.ಮಾರುಕಟ್ಟೆಯ ಹೂವಿನ ಅಂಗಡಿಗಳಲ್ಲಿ ಕೆಲಸ ಮಾಡುತ್ತಾರೆ. ಜುಲೈ 27ರ ತಡರಾತ್ರಿ ಪ್ರಶಾಂತ್‌ ಹಾಗೂ ಆರೋಪಿಗಳು ಮದ್ಯ ಸೇವಿಸಿದ್ದಾರೆ. ಬಳಿಕ ಮದ್ಯದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ರೊಚ್ಚಿಗೆದ್ದ ಆರೋಪಿಗಳು ದೊಣ್ಣೆಯಿಂದ ಪ್ರಶಾಂತ್‌ ತಲೆಗೆ ಹೊಡೆದು ಹಲ್ಲೆ ನಡೆಸಿದ್ದರು. ಈ ವೇಳೆ ತೀವ್ರ ರಕ್ತಸ್ರಾವ ಕುಸಿದು ಬಿದ್ದ ಪ್ರಶಾಂತ್‌ ಸ್ಥಳದಲ್ಲೇ ಮೃತಪಟ್ಟಿದ್ದ. ಬಳಿಕ ಆರೋಪಿಗಳು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Murder Case: ಚಿಕನ್​ ಅಂಗಡಿ ತೆರೆದಿದ್ದೇ ಕೊಲೆಗೆ ಕಾರಣವಾಯ್ತಾ? ಪ್ರವೀಣ್​ ಸಹೋದರನ ಸ್ಫೋಟಕ ಹೇಳಿಕೆ

ಕುಖ್ಯಾತ ಡ್ರಗ್ಸ್ ಪೆಡ್ಲರ್‌ ಬಂಧನ

ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಕುಖ್ಯಾತ ಡ್ರಗ್ಸ್ ಪೆಡ್ಲರ್‌ನನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಶ್ರೀರಾಮಪುರ ಠಾಣೆ ರೌಡಿ ಶೀಟರ್‌ ಸುನೀಲ್‌ ಬಂಧಿತ ಡ್ರಗ್ಸ್​ ಪೆಡ್ಲರ್‌. ಈತನ ವಿರುದ್ಧ ಶ್ರೀರಾಮಪುರ ಪೊಲೀಸ್‌ ಠಾಣೆ ಹಾಗೂ ಅಬಕಾರಿ ಇಲಾಖೆಯಲ್ಲಿ ಒಟ್ಟು 8 ಎನ್‌ಡಿಪಿಎಸ್‌ ಪ್ರಕರಣಗಳ ದಾಖಲಾಗಿವೆ. ಭವಿಷ್ಯದಲ್ಲಿ ಈತ ಮಾದಕವಸ್ತು ಸಂಗ್ರಹ, ಸಾಗಟ ಹಾಗೂ ಮಾರಾಟದಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುವುದರಿಂದ ಈತನ ವಿರುದ್ಧ ಪಿಟಿ ಎನ್‌ಡಿಪಿಎಸ್‌ ಕಾಯ್ದೆಯಡಿ ಬಂಧಿಸಲು ನಗರ ಪೊಲೀಸ್‌ ಆಯಕ್ತರು ಆದೇಶಿಸಿದ್ದರು. ಅದರಂತೆ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
Published by:Pavana HS
First published: