ಬೆಂಗಳೂರು: ರಾಜ್ಯ ರಾಜಧಾನಿ (State Capital) ಬೆಂಗಳೂರಿನಲ್ಲಿ ಮಹಿಳೆಯೊಬ್ಬಳ (Women) ಬರ್ಬರ ಹತ್ಯೆ (Murder) ನಡೆದಿದೆ. ಮಹಿಳೆಯನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಪಾಳು ಕಟ್ಟಡವೊಂದರಲ್ಲಿ (Building) ಆಕೆಯನ್ನು ಸುಟ್ಟಿದ್ದಾರೆ. ಬಳಿಕ ಅಲ್ಲೇ ಪಕ್ಕದಲ್ಲಿದ್ದ ಪೊದೆ ಬಳಿ ಆಕೆಯ ಮೃತ ದೇಹ (Dead Body) ಎಸೆದು ಎಸ್ಕೇಪ್ (Escape) ಆಗಿದ್ದಾರೆ. ಇಂಥದ್ದೊಂದು ಘೋರ ಘಟನೆ ಕೆಂಗೇರಿಯ (Kengeri) ರಾಮಸಂದ್ರದಲ್ಲಿ (Ramasandra) ನಡೆದಿದೆ. ಕಳೆದ 2-3 ದಿನಗಳ ಹಿಂದೆ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಬೇರೆ ಕಡೆ ಕೊಲೆ ಮಾಡಿ, ಇಲ್ಲಿ ಎಸೆದಿರಬಹುದು ಅಂತ ಪೊಲೀಸರು (Police) ಶಂಕಿಸಿದ್ದಾರೆ.
ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಯ್ತು ಮೃತದೇಹ
ಕೆಂಗೇರಿಯ ರಾಮಸಂದ್ರದ ನಿರ್ಜನ ಪ್ರದೇಶದಲ್ಲಿರುವ ಪಾಳು ಕಟ್ಟಡದ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಸುಮಾರು 25ರಿಂದ 30 ವರ್ಷ ವಯಸ್ಸಿನ ಮಹಿಳೆಯಾಗಿದ್ದು, ಕೊಲೆ ಮಾಡಿದ ಬಳಿಕ ಅರ್ಧಂಬರ್ಧ ಸುಟ್ಟು ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೆಂಗೇರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಕೊಲೆ ನಡೆದ ಸ್ಥಳದಲ್ಲಿ ಸಿಕ್ಕಿದ್ದೇನು?
ಇನ್ನು ಕೊಲೆ ನಡೆದ ಸ್ಥಳದಲ್ಲಿ ಕಾಂಡೋಮ್ ಸೇರಿದಂತೆ ಹಲವು ವಸ್ತುಗಳು ಸಿಕ್ಕಿವೆ ಎನ್ನಲಾಗಿದೆ. ಜೊತೆಗೆ ಕಟ್ಟಡದ ಕೋಣೆಯೊಂದರಲ್ಲಿ ಮಹಿಳೆಯ ಬಟ್ಟೆ ಇತ್ಯಾದಿಗಳು ಪತ್ತೆಯಾಗಿದೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ಕೆಂಗೇರಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Murder: ಗುರಾಯಿಸಿ ನೋಡಿದ್ದೇ ತಪ್ಪಾಗಿ ಹೋಯ್ತು, ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣ!
ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣ!
ಕೊಲೆ ನಡೆಯೋದಕ್ಕೆ ಯಾವ ಘನಂದಾರಿ ಕಾರಣವೂ ಬೇಕಿಲ್ಲ, ಚಿಕ್ಕ ಚಿಕ್ಕ ಸಿಲ್ಲಿ ಎನಿಸುವಂತೆ ರೀಸನ್ಗಳಿಗೆಲ್ಲ ಕೊಲೆ ನಡೆದೇ ಹೋಗುತ್ತದೆ ಎನ್ನುವುದಕ್ಕೆ ಬೆಂಗಳೂರಿನಲ್ಲೇ ಉದಾಹರಣೆಯೊಂದು ನಡೆದಿದೆ. ಇಲ್ಲಿ ಅಣ್ಣನೊಬ್ಬ ತನ್ನ ತಮ್ಮನನ್ನೇ ಕೊಂದು ಮುಗಿಸಿದ್ದಾನೆ. ಈ ಕೊಲೆಗೆ ಕಾರಣ ಮಾತ್ರ ಕ್ಷುಲ್ಲಕ. ಅಷ್ಟಕ್ಕೂ ತಮ್ಮ ಗುರಾಯಿಸಿದ ಎಂಬ ಕಾರಣ ತೆಗೆದು, ಅಣ್ಣ ಆ ತಮ್ಮನನ್ನು ಕೊಲೆ ಮಾಡಿದ್ದಾನೆ.
ತನ್ನನ್ನು ಗುರಾಯಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ತನ್ನ ತಮ್ಮನನ್ನು ಅಣ್ಣನೇ ಕೊಲೆ ಮಾಡಿರುವ ಘಟನೆ ಕೆ.ಆರ್ ಪುರಂ ಠಾಣಾ ವ್ಯಾಪ್ತಿಯ ಪ್ರಿಯಾಂಕ ನಗರದಲ್ಲಿ ನಡೆದಿದೆ. ರಾಮಕೃಷ್ಣ ಎಂಬಾತನೇ ತನ್ನ ತಮ್ಮನನ್ನು ಕೊಲೆ ಮಾಡಿದ ಆರೋಪಿ. ಈತನ ತಮ್ಮ 25 ವರ್ಷದ ಬಾಲು ಎಂಬಾತ ಕೊಲೆಯಾಗಿದ್ದಾನೆ.
ಚಾಕುವಿನಿಂದ ಇರಿದು ಕೊಂದ ಅಣ್ಣ
ತನ್ನನ್ನು ಗುರಾಯಿಸಿ ನೋಡಿದ ಎನ್ನುವ ಕಾರಣಕ್ಕೆ ರಾಮಕೃಷ್ಣ ತಮ್ಮನ ಬಳಿ ಜಗಳವಾಡಲು ಆರಂಭಿಸಿದ್ದಾನೆ. ಆದರೆ ಇದು ವಿಕೋಪಕ್ಕೆ ಹೋಗಿ ರಾಮಕೃಷ್ಣ ಅಡುಗೆ ಮನೆಯಲ್ಲಿ ಇದ್ದ ಚಾಕು ತಂದು, ತಮ್ಮನನ್ನು ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಣ್ಣ ತಮ್ಮನ ನಡುವೆ ಆಗಾಗ ಜಗಳ
ಅಣ್ಣ-ತಮ್ಮನ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಅನೇಕ ಬಾರಿ ಕೊಲ್ಲಲು ಆತ ಪ್ರಯತ್ನಿಸಿದ್ದನಂತೆ. ಆದರೆ ಈ ಬಾರಿ ಗುರಾಯಿಸಿದ ಎಂಬ ಸಿಲ್ಲಿ ಕಾರಣ ತೆಗೆದು, ಚಾಕು ಇರಿದು ಕೊಂದೇ ಬಿಟ್ಟಿದ್ದಾನೆ. ಇನ್ನು ಕೊಲೆ ಬಳಿಕ ಆರೋಪಿ ರಾಮಕೃಷ್ಣ ತಾನೇ ಪೊಲೀಸರಿಗೆ ಶರಣಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನೆಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Love Jihad: ಸರ್ಕಾರಿ ಶಿಕ್ಷಕನ ಕಾಮಪುರಾಣ, ರಾಸಲೀಲೆ ಹಿಂದೆ ಲವ್ ಜಿಹಾದ್ ಹುನ್ನಾರ; ಸಂತ್ರಸ್ತೆ ಬಿಚ್ಚಿಟ್ಟ ಸ್ಫೋಟಕ ಸತ್ಯ
ಹೆಂಡತಿ ಬಗ್ಗೆ ಮಾತನಾಡಿದ್ದಕ್ಕೆ ಕೊಲೆ
ಮತ್ತೊಂದೆಡೆ ತನ್ನ ಹೆಂಡತಿಯ ಬಗ್ಗೆ ಹಗುರವಾಗಿ ಮಾತನಾಡಿದ ಎನ್ನುವ ಕಾರಣಕ್ಕೆ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಸ್ನೇಹಿತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿರುವ ಪ್ರಕರಣ ಬಳ್ಳಾರಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ. ಶ್ರೀರಾಮ್ ಕೊಲೆ ಆರೋಪಿಯಾಗಿದ್ದು, ತಮ್ಮಣ್ಣ(43)ಎಂಬಾತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ