ಕಾಂಗ್ರೆಸ್ ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರೋದು ನಿಜ- ಜವಾಬ್ದಾರಿ ಕೊಟ್ಟೋರು ಕಾಳಜಿಯಿಂದ ಕೆಲಸ ಮಾಡಬೇಕು ; ಡಾ.ಜಿ.ಪರಮೇಶ್ವರ್​

ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 15 ಕ್ಷೇತ್ರ ಗೆಲ್ಲೋದು ನಮ್ಮ ಗುರಿ ಎಂದು ಜಿ ಪರಮೇಶ್ವರ್​​ ವಿಶ್ವಾಸ ವ್ಯಕ್ತಪಡಿಸಿದರು

G Hareeshkumar | news18-kannada
Updated:November 21, 2019, 2:12 PM IST
ಕಾಂಗ್ರೆಸ್ ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರೋದು ನಿಜ- ಜವಾಬ್ದಾರಿ ಕೊಟ್ಟೋರು ಕಾಳಜಿಯಿಂದ ಕೆಲಸ ಮಾಡಬೇಕು ; ಡಾ.ಜಿ.ಪರಮೇಶ್ವರ್​
ಡಾ.ಜಿ. ಪರಮೇಶ್ವರ್​
  • Share this:
ಬೆಂಗಳೂರು(ನ.21): ಕಾಂಗ್ರೆಸ್ ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರೋದು ನಿಜ ನಾಳೆಯಿಂದ ಜವಾಬ್ದಾರಿ ಕೊಟ್ಟಿರುವವರು ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ನನಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಾನು ಸಹ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್​​ ಹೇಳಿದ್ದಾರೆ. 

ಈ ಬಾರಿ ವಿಧಾನಸಭಾ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸವಾಗಿದೆ. ಎಲ್ಲವೂ ಸರಿ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 15 ಕ್ಷೇತ್ರ ಗೆಲ್ಲೋದು ನಮ್ಮ ಗುರಿ ಎಂದು ಜಿ ಪರಮೇಶ್ವರ್​​ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ  ಅಭ್ಯರ್ಥಿ ಎಂಟಿಬಿ ನಾಗರಾಜ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಯಾರಿಗೆ ಕೊಟ್ಟಿರುವುದು ಪಟ್ಟಿ ಬಿಡುಗಡೆ ಮಾಡಿದ್ರೆ ಒಳ್ಳೆಯದು. ಯಾವುದೋ ಕಾರಣಕ್ಕೆ ಇವರು ಸಹಾಯ ಮಾಡಿರಬಹುದು. ಪಕ್ಷದಲ್ಲಿ ಇದ್ದಾಗ ಸಹಾಯ ಮಾಡಿರಬಹುದು ಅದನ್ನ ಹೇಳುವುದು ಸರಿಯಲ್ಲ. ನಾಗರಾಜ್ ಅವರು ಈ ರೀತಿ ಹೇಳ್ತಾರೆ ಅಂದುಕೊಂಡಿರಲಿಲ್ಲ. ನನಗಂತೂ ಎಂಟಿಬಿ ನಾಗರಾಜ್ ಸಾಲ ಕೊಟ್ಟಿಲ್ಲ. ನಾನು ಪಡೆದುಕೊಂಡಿಲ್ಲ. ಸಾರ್ವಜನಿಕ ಜೀವನದಲ್ಲಿ ಇರೋರು ಇದನ್ನ ಬಹಿರಂಗವಾಗಿ ಹೇಳಿಕೊಳ್ಳಬಾರದು. ಅವರಿಗೆ ಒಳ್ಳೆಯದಲ್ಲ ಎಂದು ಹೇಳಿದರು.

ಇದನ್ನೂ ಓದಿ : ಅಪರೇಷನ್ ಕಮಲಕ್ಕೆ ಬಿಜೆಪಿಗೆ ಎಂಟಿಬಿ ನಾಗರಾಜ್​​​​ ಸಾಲ ನೀಡಿದ್ದಾರೆ; ಮಾಜಿ ಸಿಎಂ ಸಿದ್ಧರಾಮಯ್ಯ

ಸಚಿವ ಜೆ.ಸಿ ಮಧುಸ್ವಾಮಿ ಒಂದು ಸಮುದಾಯದ ವಿರುದ್ಧ ಹೇಳಿಕೆ ವಿಚಾರವಾಗಿ ಮಾತನಾಡಿದ ಪರಮೇಶ್ವರ್​​, ಸ್ವಾಮೀಜಿಗಳೇ ಹೇಳಿದ್ದಾರೆ ಆ ರೀತಿ ಮಾತನಾಡಿಲ್ಲ ಅಂತ ಅಲ್ಲಿಗೆ ಅದು ಮುಗಿಯಿತು. ಮಾಧುಸ್ವಾಮಿ ಸ್ಚಭಾವ ಮೊದಲಿಂದಲೂ ನಾನು ನೋಡಿದ್ದೇನೆ. ಸ್ವಲ್ಪ ಸಿಡುಕಿನ ಸ್ವಾಭಾವ ಆ ರೀತಿ ಮಾತನಾಡಿರಲ್ಲ. ಜಾತಿ ವ್ಯವಸ್ಥೆಯಲ್ಲಿ ನಿಂದನೆ ಮತ್ತು ಧೋಷಣೆ ಮಾಡುವುದು ಸರಿಯಲ್ಲ ಎಂದರು.

 (ವರದಿ : ಶ್ರೀನಿವಾಸ್​​​ ಹಳಕಟ್ಟಿ )
First published: November 21, 2019, 12:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading