Benne Halla: ಉಕ್ಕಿ ಹರಿದ ಬೆಣ್ಣೆ ಹಳ್ಳ, ಬಿಕ್ಕುತ್ತಿರುವ ಅಕ್ಕ-ಪಕ್ಕದ ಗ್ರಾಮಸ್ಥರು! ಧಾರವಾಡದಲ್ಲಿ ಪ್ರವಾಹ ಪರಿಸ್ಥಿತಿ

ಧಾರವಾಡ ಜಿಲ್ಲೆಯಲ್ಲಿ ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿದ್ದು, ಅಕ್ಕ ಪಕ್ಕಗಳ ಗ್ರಾಮಸ್ಥರು ದಿಕ್ಕು ತೋಚದವರಂತೆ ಆಗಿದ್ದಾರೆ. ಭಾರಿ ಮಳೆಯಿಂದಾಗಿ ಹಲವಾರು ಗ್ರಾಮಗಳಿಗೆ ನೀರು ಹೊಕ್ಕಿವೆ. ಪ್ರವಾಹದಲ್ಲಿ ಸಿಲುಕಿಕೊಂಡ ಎಂಟು ಜನರನ್ನು ರಕ್ಷಿಸಲಾಗಿದದ್ದು, ಐದು ಕಡೆ ಪರಿಹಾರ ಕೇಂದ್ರ ಆರಂಭಿಸಲಾಗಿದೆ.

ಬೆಣ್ಣೆಹಳ್ಳದಿಂದ ಅಕ್ಕಪಕ್ಕದ ಗ್ರಾಮಗಳಿಗೆ ಭೀತಿ

ಬೆಣ್ಣೆಹಳ್ಳದಿಂದ ಅಕ್ಕಪಕ್ಕದ ಗ್ರಾಮಗಳಿಗೆ ಭೀತಿ

  • Share this:
ಧಾರವಾಡ: ಹುಬ್ಬಳ್ಳಿ - ಧಾರವಾಡ (Hubballi-Dharwad) ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ (Heavy Rain) ಹಳ್ಳ - ಕೊಳ್ಳ ಉಕ್ಕಿ ಹರಿಯುತ್ತಿವೆ. ಬೆಣ್ಣೆ ಹಳ್ಳ ರುದ್ರನರ್ತನ ಮಾಡಲಾರಂಭಿಸಿದ್ದು, ಹಲವು ಗ್ರಾಮಗಳಿಗೆ (Villages) ನೀರು (Rain Water) ಹೊಕ್ಕಿವೆ. ಪ್ರವಾಹದಲ್ಲಿ (Flood) ಸಿಲುಕಿಕೊಂಡಿದ್ದ ಎಂಟು ಜನರನ್ನು ರಕ್ಷಿಸಲಾಗಿದೆ. ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮತ್ತು ಅಧಿಕಾರಿಗಳ ತಂಡ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಮುಳುಗಡೆಯಾದ ಮನೆಯವರಿಗಾಗಿ ಐದು ಕಡೆ ಹಾರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ. ಬೆಣ್ಣಿ ಹಳ್ಳದಿಂದ ಪ್ರತಿಬಾರಿಯೂ ತೊಂದರೆಯಾಗ್ತಿದೆ. ಆದರೆ ಜನಪ್ರತಿನಿಧಿಗಳು ಕಣ್ಣೊರೆಸುವ ತಂತ್ರ ಮಾಡುತ್ತಿದಾರೆ ಎಂದು ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು

ಉಕ್ಕಿ ಹರಿಯುತ್ತಿರುವ ಬೆಣ್ಣೆ ಹಳ್ಳ

ಧಾರವಾಡ ಜಿಲ್ಲೆಯಲ್ಲಿ ವರುಣನ ಅಬ್ಬರದಿಂದಾಗಿ ಬೆಣ್ಣಿಹಳ್ಳ ಉಕ್ಕಿ ಹರಿಯುತ್ತಿದೆ. ಬೆಣ್ಣೆಹಳ್ಳ ಪ್ರವಾಹದಿಂದ ಇಂಗಳಹಳ್ಳಿ ಗ್ರಾಮ ನಲುಗುವಂತಾಗಿದೆ. ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ಜನ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಗ್ರಾಮದ ಅರ್ಧ ಭಾಗ ಮುಳುಗಡೆಯಾಗಿದ್ದು, ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಸಾಮಾನು ಸರಂಜಾಮು ನೀರುಪಾಲಾಗಿವೆ. ದವಸ ಧಾನ್ಯ ಜಲಾವೃತಗೊಂಡಿವೆ. ಇಂಗಳಹಳ್ಳಿಯ ಜನತಾ ಪ್ಲಾಟ್ ಬಹುತೇಕ ಜಲಾವೃತಗೊಂಡಿದೆ. ಉಳಿದ ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.

ಉಕ್ಕಿ ಹರಿದ ಬೆಣ್ಣೆಹಳ್ಳ


ಪ್ರತಿ ವರ್ಷವೂ ತೊಂದರೆ ತಪ್ಪಿದ್ದಲ್ಲ

ಪ್ರತಿಬಾರಿ ಹಳ್ಳ ಬಂದಾಗಲೂ ಇದೇ ತೊಂದರೆಯಾಗ್ತಿದೆ. ಜನಪ್ರತಿನಿಧಿಗಳು ಕೇವಲ ಭರವಸೆ ಕೊಡ್ತಿದಾರೆ. ಆದರೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಶಾಶ್ವತ ಪರಿಹಾರ ಕೊಡಿ ಇಲ್ಲವೇ ನಮಗೊಂದಿಷ್ಟು ವಿಷ ಕೊಡಿ ಅಂತ ಗ್ರಾಮಸ್ಥರು  ಆಗ್ರಹಿಸಿದ್ದಾರೆ. ಆಗಲಾದರೂ ನಮಗೆ ನೆಮ್ಮದಿಯಿಂದ ಸಾಯಬಹುದು ಅಂತ ಅನಿಸ್ತಾ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಣ್ಣೆಹಳ್ಳ ಪ್ರವಾಹಕ್ಕೆ ಗ್ರಾಮಸ್ಥರು ನಲುಗಿದದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bengaluru Lakes: ಕಾಣದಂತೆ ಮಾಯವಾಯ್ತಣ್ಣ ಬೆಂಗಳೂರು ಕೆರೆಗಳು! ಜೀವಸೆಲೆಯ ನೆಲೆ ಮೇಲೆ ತಲೆ ಎತ್ತಿದ ಲೇಔಟ್‌ಗಳು!

ಕಿರೇಸೂರಿನಲ್ಲಿಯೂ ನೀರೋ ನೀರು

ಧಾರವಾಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿದ್ದು, ಪ್ರವಾಹಕ್ಕೆ ಜನತೆ ತತ್ತರಿಸಿದೆ. ಹುಬ್ಬಳ್ಳಿ ತಾಲೂಕಿನ ಕಿರೇಸೂರು ಗ್ರಾಮಕ್ಕೂ ಮಳೆ ನೀರು ನುಗ್ಗಿದೆ. ಹತ್ತಾರು ಮನೆಗಳು ಜಲಾವೃತಗೊಂಡಿವೆ. ಗ್ರಾಮದ ಅಂಬೇಡ್ಕರ್ ಕಾಲನಿ ವೃತ್ತದ ಸಿದ್ದಲಿಂಗೇಶ್ವರ ಕಾರಣಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ದವಸ, ಧಾನ್ಯ, ಸಾಮಾನುಗಳು ನೀರುಪಾಲಾಗಿವೆ. ಅಪಾರ ಪ್ರಮಾಣದ ಬೆಳೆ ಹಾನಿಯೂ ಸಂಭವಿಸಿದೆ. ಮೆಕ್ಕೆಜೋಳ ಉದ್ದು ಹೆಸರು ಇತ್ಯಾದಿ ಬೆಳೆ ಜಲಾವೃತಗೊಂಡಿದ್ದು, ಜನತೆ ಸಂಕಷ್ಟಕ್ಕೆ ಸಿಲುಕಿದೆ.

ಮನೆಗಳಿಗೆ ನುಗ್ಗಿದ ನೀರು


ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

ಬೆಣ್ಣಿ ಹಳ್ಳದಿಂದ ಪ್ರತಿಬಾರಿಯೂ ತೊಂದರೆಯಾಗ್ತಿದೆ. ಆದರೆ ಜನಪ್ರತಿನಿಧಿಗಳು ಕಣ್ಣೊರೆಸುವ ತಂತ್ರ ಮಾಡುತ್ತಿದಾರೆ ಎಂದು ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು.

ಶಾಶ್ವತ ಪರಿಹಾರಕ್ಕೆ ಆಗ್ರಹ


ಸಚಿವ ಮುನೇನಕೊಪ್ಪ ಭೇಟಿ

ಬೆಣ್ಣೆ ಹಳ್ಳ ಪ್ರವಾಹ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರು ಗ್ರಾಮಕ್ಕೆ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭೇಟಿ ನೀಡಿದರು. ಬೆಣ್ಣೆ ಹಳ್ಳದ ಅಕ್ಕ ಪಕ್ಕದ ಗ್ರಾಮಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಕಿರೇಸೂರ ಗ್ರಾಮ ಮತ್ತಿತರ ಕಡೆ ಭೇಟಿ ನೀಡಿದರು. ಮುನೇನಕೊಪ್ಪ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಶಾಶ್ವತ ಪರಿಹಾರ ಕಲ್ಪಿಸುವಂತೆ ಸಚಿವರನ್ನು ಗ್ರಾಮಸ್ಥರು ಆಗ್ರಹಿಸಿದರು. ನಂತರ ಹೆಬಸೂರ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಪ್ರವಾಹದ ಪರಿಸ್ಥಿತಿಯ ಅವಲೋಕನ ಮಾಡಿದರು. ಸಚಿವರು ಎದುರಿಗೆ ಸಂತ್ರಸ್ತರು ಅಳಲು ತೊಡಿಕೊಂಡರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಈ ವೇಳೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರವಾಹದಿಂದಾಗಿ ಪರದಾಟ


ಸಿಇಒ ಮತ್ತಿತರ ಅಧಿಕಾರಿಗಳ ಭೇಟಿ

ಬೆಣ್ಣೆಹಳ್ಳದಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ನೆರೆ ಪೀಡಿತ ಪ್ರದೇಶಕ್ಕೆ ಡಿಸಿ ಗುರುದತ್ ಹೆಗಡೆ, ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ ಇಟ್ನಾಳ್, ಎಸ್.ಪಿ ಲೋಕೇಶ್ ಭೇಟಿ ನೀಡಿದರು. ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕಿನ ವಿವಿಧೆಡೆ ಅಧಿಕಾರಿಳು ಭೇಟಿ ನೀಡಿ, ಹಾನಿಯ ಪರಿಶೀಲನೆ ಮಾಡಿದು. ಹುಬ್ಬಳ್ಳಿ ತಾಲೂಕಿನ ಕಿರೇಸೂರು ಗ್ರಾಮಕ್ಕೆ ಆಗಮಿಸಿದ ವೇಳೆ ಅಧಿಕಾರಿಗಳ ಮುಂದೆ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು. ತಮಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಕಿರೇಸೂರು ಗ್ರಾಮಸ್ಥರು ಮನವಿ ಮಾಡಿದರು.

ಪ್ರತಿಬಾರಿ ಹಳ್ಳ ಬಂದಾಗಲೂ ಗ್ರಾಮಕ್ಕೆ ನೀರು ನುಗ್ಗುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಸೇರಿ ಹಲವಾರು ಮುಖಂಡರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈಗಲಾದರೂ ಸಮಸ್ಯೆಗೆ ಸ್ಪಂದಿಸಬೇಕು, ಶಾಸ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು. ಗ್ರಾಮಸ್ಥರ ಮನವಿಯ ನಂತರ ಸೂಕ್ತ ಕ್ರಮಕೈಗೊಳ್ಳುವುದಾಗಿ ಸಿಇಒ ಸುರೇಶ್ ಇಟ್ನಾಳ್ ತಿಳಿಸಿದರು.

ಇದನ್ನೂ ಓದಿ: Bengaluru Rain: ಭೀಕರ ಮಳೆಗೆ ಬೆಚ್ಚಿಬಿದ್ದಿದೆ ಬೆಂಗಳೂರು! ರಾಜಧಾನಿ ಅವಾಂತರಕ್ಕೆ ಕಾರಣ ಯಾರು?

ನಂತರ ನ್ಯೂಸ್ 18 ಜೊತೆ ಮಾತನಾಡಿದ ಸಿಇಒ ಸುರೇಶ್ ಇಟ್ನಾಳ್, ಜಿಲ್ಲೆಯಲ್ಲಿ ಪ್ರವಾಹದಲ್ಲಿ ಸಿಲುಕಿದ ಒಟ್ಟು 8 ಜನರನ್ನು ರಕ್ಷಿಸಲಾಗಿದೆ. 5 ಕಡೆ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಅಗತ್ಯ ಬಿದ್ದಲ್ಲಿ ಮತ್ತಷ್ಟು ಕೇಂದ್ರಗಳನ್ನು ತೆರೆಯುತ್ತೇವೆ. ಪ್ರವಾಹಕ್ಕೆ ತುತ್ತಾದವರಿಗೆ ತಕ್ಷಣ ಸ್ಪಂದಿಸುವ ಕಾರ್ಯ ಮಾಡಿದ್ದೇವೆ ಎಂದರು.
Published by:Annappa Achari
First published: