ಮೈತ್ರಿ ಸರ್ಕಾರದ ವೇಳೆ ಯಾವುದೇ ಫೋನ್ ಟ್ಯಾಪಿಂಗ್ ಆಗಿಲ್ಲ, ಬೇಕಿದ್ದರೆ ಸೂಕ್ತ ತನಿಖೆ ನಡೆಸಲಿ; ಡಿ.ಕೆ.ಶಿವಕುಮಾರ್

ಸುಮ್ಮನೆ ಏನೇನು ‌ಬೇಕೋ ಅದನ್ನು ಮಾಡ್ತಾರೆ, ಆಮೇಲೆ ಏನು ಇಲ್ಲ ಅಂತಾರೆ. ಅವರು ಏನು ಬೇಕಾದರೂ ತನಿಖೆ ಮಾಡಿಸಲಿ ಎಂದು ಬಿಜೆಪಿಯ ಆರ್ ಅಶೋಕ್ ವಿರುದ್ಧ ಕಿಡಿ ಕಾರಿದರು.

HR Ramesh | news18
Updated:August 16, 2019, 1:19 PM IST
ಮೈತ್ರಿ ಸರ್ಕಾರದ ವೇಳೆ ಯಾವುದೇ ಫೋನ್ ಟ್ಯಾಪಿಂಗ್ ಆಗಿಲ್ಲ, ಬೇಕಿದ್ದರೆ ಸೂಕ್ತ ತನಿಖೆ ನಡೆಸಲಿ; ಡಿ.ಕೆ.ಶಿವಕುಮಾರ್
ಸಚಿವ ಡಿ.ಕೆ.ಶಿವಕುಮಾರ್
HR Ramesh | news18
Updated: August 16, 2019, 1:19 PM IST
ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ಯಾವುದೇ ಫೋನ್ ಟ್ಯಾಪಿಂಗ್ ಆಗಿಲ್ಲ.  ಇದು ಮಾಧ್ಯಮಗಳಿಗೆ ಯಾವ ರೀತಿ ಲೀಕ್ ಆಯ್ತು ಗೊತ್ತಿಲ್ಲ‌. ನಾನು ಈ ಬಗ್ಗೆ ಅಧಿಕಾರಿಗಳನ್ನು ಕೂಡ ವಿಚಾರಿಸಿದ್ದೇನೆ. ಅವರು ಏನು ಆಗಿಲ್ಲ ಅಂದಿದ್ದಾರೆ.  ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರು ಈ ಬಗ್ಗೆ ಸೂಕ್ತ ತನಿಖೆ ನಡೆಸಲಿ ಎಂದು ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ಇದನ್ನು ಓದಿ: ಬಿಜೆಪಿ ಹೈ ಕಮಾಂಡ್​ ಅಂಗಳ ತಲುಪಿದ ಫೋನ್​ ಟ್ಯಾಪಿಂಗ್​; ಎಚ್​ಡಿಕೆ ವಿರುದ್ಧ ಸಿಬಿಐ ತನಿಖೆ?

ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಹಿಂದಿನ ಗೃಹ ಸಚಿವರು ರಾಜಕಾರಣ ಮಾಡ್ತಿದ್ದಾರೆ. ಕೇವಲ ರಾಜಕಾರಣಕ್ಕಾಗಿ ಈ ರೀತಿಯ ಹೇಳಿಕೆ ಕೊಡೋದು ಸರಿಯಲ್ಲ. ಅವರು ಅಧಿಕಾರದಲ್ಲಿದ್ದಾಗ ಈ ಬಗ್ಗೆ ದೂರು ಕೊಡಬೇಕಿತ್ತು‌‌. ನಮ್ಮದೆಲ್ಲಾ ಫೋನ್ ಗಳು ಏನೇನು ಆಯ್ತು ಅನ್ನೋ ಪಟ್ಟಿ ಕೊಡಲಾ? ಎಂದು ಪ್ರಶ್ನಿಸಿದ ಅವರು, ಸುಮ್ಮನೆ ಏನೇನು ‌ಬೇಕೋ ಅದನ್ನು ಮಾಡ್ತಾರೆ, ಆಮೇಲೆ ಏನು ಇಲ್ಲ ಅಂತಾರೆ. ಅವರು ಏನು ಬೇಕಾದರೂ ತನಿಖೆ ಮಾಡಿಸಲಿ ಎಂದು ಬಿಜೆಪಿಯ ಆರ್ ಅಶೋಕ್ ವಿರುದ್ಧ ಕಿಡಿ ಕಾರಿದರು.

ರೈತರಿಗೆ ಸಿದ್ದರಾಮಯ್ಯ ಹಲವು ಯೋಜನೆಗಳನ್ನು ಘೋಷಣೆ ‌ಮಾಡಿದ್ರು. ಈಗ ಆ ಘೋಷಣೆಗೆ ಅವರು ಹೊಸ ಬಣ್ಣ ಹಾಕೊಂಡು ಹೊರಟಿದ್ದಾರೆ. ಇವಾಗ ನಾನು ಹೊಸದಾಗಿ ಮಾಡಿದ್ದೇನೆ ಅಂತಾ ಎಲ್ಲಾ ಕಡೆ ಜಾಹೀರಾತು ಕೊಟ್ಟು ಚೆನ್ನಾಗಿ ಕಾಣ್ತಿದ್ದಾರೆ.  ಯಡಿಯೂರಪ್ಪ ಚೆನ್ನಾಗಿ ಕಾಣಲಿ. ಇಂದಿರಾ ಕ್ಯಾಂಟಿನ್ ಸೇರಿದಂತೆ ಸಿದ್ದರಾಮಯ್ಯ ಘೋಷಣೆ ಮಾಡಿದ ಯಾವುದೇ ಕಾರ್ಯಕ್ರಮಗಳನ್ನು ತಡೆ ಹಿಡಿಯಬಾರದು. ಒಂದು ವೇಳೆ ರದ್ದು ಮಾಡಿದರೆ ನಾವಂತೂ ಸುಮ್ಮನೆ ಕೂರೋದಿಲ್ಲ. ನಮಗೂ ಒಂದು ಬದ್ದತೆ ಇದೆ. ಯಡಿಯೂರಪ್ಪ ದ್ವೇಷದ ರಾಜಕಾರಣ ‌ಮಾಡೋದಿಲ್ಲ ಎಂದು ಹೇಳಿದ್ದಾರೆ. ಅವರು ನುಡಿದಂತೆ ನಡೆದುಕೊಂಡರೆ ಅಷ್ಟೇ ಸಾಕು. ಒಂದು ವೇಳೆ ನಮ್ಮ ಕಾರ್ಯಕ್ರಮ ನಿಲ್ಲಿಸಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಸಿಎಂ ಬಿಎಸ್​ವೈ ಎಚ್ಚರಿಕೆ ಕೊಟ್ಟರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...