Bengaluru Buildings: ಸಿಲಿಕಾನ್‌ ಸಿಟಿಯಲ್ಲಿ ಅಕ್ರಮ ಬಿಲ್ಡಿಂಗ್‌ಗಳ ಕಾರುಬಾರು! ನಿಮ್ಮ ಮನೆ ಪಕ್ಕದಲ್ಲಿಯೇ ಇರಬಹುದು ಶಿಥಿಲಾವಸ್ಥೆ ಕಟ್ಟಡ!

ನೋಡ ನೋಡುತ್ತಿದ್ದಂತೆ‌ 1200 ಮೌಲ್ಯದ ನೋಯ್ಡಾಡದ ಟ್ವಿನ್ ವಿಲ್ಡಿಂಗ್ ಅಕ್ರಮ ಕಾರಣಕ್ಕೆ ನೆಲಕ್ಕುರುಳಿತು. ಈ ರೀತಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮ‌ ಕಟ್ಟಡಗಳಿಗೇನು ಕೊರತೆ ಏನಿಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ನೋಯ್ಡಾದ (Noida) ಬೃಹತ್ ಅಕ್ರಮ ಅವಳಿ ಕಟ್ಟಡ (Twin Towers) ನೆಲಕ್ಕುರುಳಿತು. ಆದ್ರೆ ಬೆಂಗಳೂರಿನಲ್ಲಿರುವ (Bengaluru) ಅಕ್ರಮ‌ ಕಟ್ಟಡಗಳಿಗೆ ಇನ್ನೂ ಮುಕ್ತಿ ಸಿಗ್ತಿಲ್ಲ‌.‌ ಸರ್ವೆ (Survey) ಹೆಸರಿನಲ್ಲಿ ಕಾಲ‌ ಕಾಲೆಳೆಯುತ್ತಿರುವ ಬಿಬಿಎಂಪಿ (BBMP), ಕ್ರಮ ಕೈಗೊಳ್ಳೋದ್ಯಾವಾಗ? ಅಷ್ಟಕ್ಕೂ ಸಿಟಿಯಲ್ಲಿ (City) ಎಷ್ಟಿವೆ ಅಕ್ರಮ ಕಟ್ಟಡ? ಎಷ್ಟು ಶಿಥಿಲಾವಸ್ಥೆಯ ಕಟ್ಟಡಗಳಿವೆ (dilapidated building) ಗೊತ್ತೆ? ಸಿಲಿಕಾನ್‌ ಸಿಟಿಯಲ್ಲಿ ಅಕ್ರಮ ಕಟ್ಟಡಗಳ ಕಾರುಬಾರೇ ನಡೆಯುತ್ತಿದೆ. ನಿಮ್ಮ ಮನೆ ಪಕ್ಕದಲ್ಲಿಯೇ ಶಿಥಿಲಾಸ್ಥೆ ಕಟ್ಟಡಗಳಿವೆ ಎಂದರೂ ತಪ್ಪಾಗುವುದಿಲ್ಲ. ಒಂದೆಡೆ ಮಹಾಮಳೆಗೆ ಮಹಾನಗರಿ ಬೆಂಗಳೂರು ಮುಳುಗುತ್ತಿದೆ. ಎಲ್ಲೆಡೆ ನೀರು ನಿಂತಿದ್ದು, ವೈಜ್ಞಾನಿಕವಾಗಿ, ಶಿಸ್ತುಬದ್ಧವಾಗಿ ಕಟ್ಟಡ ಕಟ್ಟಡಗಳಿಗೆ ಧಕ್ಕೆಯಾಗುವ ಸಾಧ್ಯತೆಯೂ ಇದೆ.

ಸಿಲಿಕಾನ್ ಸಿಟಿಯಲ್ಲೂ ಅಕ್ರಮ ಕಟ್ಟಡಗಳ ಕಾರುಬಾರು

ನೋಡ ನೋಡುತ್ತಿದ್ದಂತೆ‌ 1200 ಮೌಲ್ಯದ ನೋಯ್ಡಾಡದ ಟ್ವಿನ್ ವಿಲ್ಡಿಂಗ್ ಅಕ್ರಮ ಕಾರಣಕ್ಕೆ ನೆಲಕ್ಕುರುಳಿತು. ಈ ರೀತಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮ‌ ಕಟ್ಟಡಗಳಿಗೇನು ಕೊರತೆ ಏನಿಲ್ಲ. ಒಂದಲ್ಲ, ಎರಡಲ್ಲ ಬರೋಬ್ಬರಿ ಒಂದೂವರೆ ಲಕ್ಷ ಕ್ಕೂ ಹೆಚ್ಚು ಅಕ್ರಮ ಕಟ್ಟಡವಿದೆ. ಇದರಲ್ಲಿ ಜಾಗ ಒತ್ತುವರಿ ಮಾಡಿಕೊಂಡ, ರಾಜಕಾಲುವೆ ಮೇಲೆ ಮನೆ ಕಟ್ಟಿಸಿಕೊಂಡ, ಹೆಚ್ಚುವರಿ ಅಂತಸ್ತು ಕಟ್ಟಡ ಕಟ್ಟಿದ ಕಟ್ಟಡಗಳೂ ಇವೆ.

ಬೆಂಗಳೂರಿನಲ್ಲಿ 1,81,236 ಅನಧಿಕೃತ ಕಟ್ಟಡ!

ಬೆಂಗಳೂರಿನಲ್ಲಿ 1,81,236 ಅನಧಿಕೃತ ಕಟ್ಟಡ ಗುರುತಿಸಿರುವ ಬಿಬಿಎಂಪಿ, 36,759 ಪ್ಲಾನ್ ಡೀವಿಯೇಶನ್ ಕಟ್ಟಡಗಳ ಗುರುತು‌ ಮಾಡಿದೆ. ಇವುಗಳ ಪೈಕಿ 16,086 ಬಿಬಿಎಂಪಿ ಸರ್ವೇ ಮಾಡಿದೆ. ಉಳಿದ 20,673 ಕಟ್ಟಡಗಳ‌ ಸರ್ವೇ ಇದುವರೆಗೂ ಮಾಡಿಲ್ಲ.‌ 2016ರಿಂದ ಇಲ್ಲಿಯವರೆಗೂ ಬಿಬಿಎಂಪಿ ಸರ್ವೆ ಹೆಸರಿನಲ್ಲಿ ಕಾಲ‌ ಕಳೆಯುತ್ತಿದೆ. ಕೊರೊನಾ ಹೆಸರೇಳಿ ಸರ್ವೆ ಮಾಡದೇ ರಾಜಕಾರಣಿಗಳು, ಪ್ರಭಾವಿಗಳ ಪ್ರಭಾವಕ್ಕೆ ಮಣಿದು ಸುಮ್ಮನಿದೆ.

ಇದನ್ನೂ ಓದಿ: Bengaluru Rain: ಕಾರೂ ಬೇಡ ಬಸ್ಸೂ ಬೇಡ; ಟ್ರ್ಯಾಕ್ಟರ್‌ ಹತ್ತಿ ಆಫೀಸ್‌ಗೆ ಹೋದ ಟೆಕ್ಕಿ, ಉದ್ಯಮಿಗಳು!

ಹೈಕೋರ್ಟ್ ಚಾಟಿ ಬೀಸಿದರೂ ನೋ ಯೂಸ್

ಅಕ್ರಮ ಕಟ್ಟಡ ತೆರವುಗೊಳಿಸಲು ನೂರು ವರ್ಷ ಬೇಕೇ? ಎಂದು ಬಿಬಿಎಂಪಿಗೆ ಹೈಕೋರ್ಟ್ ಚಾಟಿ ಬೀಸಿದ್ರೂ ನೋ ಯೂಸ್. ಈ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಮಾತನಾಡಿ, ಸರ್ವೆ ಕಾರ್ಯ ಮಾಡಲಾಗುತ್ತಿದೆ. ಮುಗಿದ ಬಳಿಕ ಕೋರ್ಟ್ ಗೆ ವರದಿ ಸಲ್ಲಿಸಲಾಗುವುದು ಎನ್ನುತ್ತಾರೆ.

ಅಕ್ರಮ ಕಟ್ಟಡಗಳ ಮಾಲೀಕರಿಗೆ ನೋಟಿಸ್

ಇನ್ನು ಟ್ವಿನ್ ಟವರ್ ಡೆಮಾಲೀಷನ್ ಹಿನ್ನೆಲೆ  ಬಿಬಿಎಂಪಿ ಶಿಥಿಲಾವಸ್ಥೆಯ ಹಳೆಯ ಕಟ್ಟಡಗಳ ತೆರವಿಗೆ ಮುಂದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಶಿಥಿಲಗೊಂಡ ಕಟ್ಟಡಗಳ ಸರ್ವೆ ಮಾಡಿ ಪಟ್ಟಿ ಸಿದ್ದ ಪಡಿಸಿದೆ.‌ ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 629 ಹಳೇ ಕಟ್ಟಡಗಳಿವೆ. ಇದರಲ್ಲಿ 423 ಕಟ್ಟಡ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದೆ.‌ ತಾವೇ ಕಟ್ಟಡವನ್ನ ಡೆಮಾಲೀಷನ್ ಮಾಡಿ, ಇಲ್ಲವಾದ್ರೆ ಕಟ್ಟಡ ಡೆಮಾಲೀಷನ್ ವೆಚ್ಚ ಬರಿಸಿ ಅಂತ ನೋಟೀಸ್ ನೀಡಿದೆ. ಕಟ್ಟಡ ಡೆಮಾಲೀಷನ್ ಗೆ ಈಗಾಗಲೇ ಏಜೆನ್ಸಿ ಜೊತೆ ಒಪ್ಪಂದ ಮಾಡಿಕೊಂಡಿದೆ.

ಯಾವ್ಯಾವ ವಲಯದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಿವೆ?

ಪೂರ್ವ ವಲಯದಲ್ಲಿ- 101 ಕಟ್ಟಡಗಳು, ಪಶ್ಚಿಮ ವಲಯದಲ್ಲಿ- 160 ಕಟ್ಟಡಗಳು, ದಕ್ಷಿಣ ವಲಯದಲ್ಲಿ- 216 ಕಟ್ಟಡಗಳು, ಬೊಮ್ಮನಹಳ್ಳಿ ವಲಯದಲ್ಲಿ- 11 ಕಟ್ಟಡಗಳು, ದಾಸರಹಳ್ಳಿ ವಲಯದಲ್ಲಿ – 11 ಕಟ್ಟಡಗಳು, ಮಹದೇವಪುರ ವಲಯದಲ್ಲಿ- 37 ಕಟ್ಟಡಗಳು , ರಾಜರಾಜೇಶ್ವರಿ ವಲಯದಲ್ಲಿ- 9 ಕಟ್ಟಡಗಳು, ಯಲಹಂಕ ವಲಯದಲ್ಲಿ – 84 ಕಟ್ಟಡಗಳು ಇವೆ.

ಇದನ್ನೂ ಓದಿ: Bengaluru Rains: ಮಳೆ ಎಫೆಕ್ಟ್; ಬೆಂಗಳೂರಲ್ಲಿ ವಿಮಾನ ಹಾರಾಟ ವ್ಯತ್ಯಯ

ನೋಯ್ಡಾದ ಟ್ವಿನ್‌ ಬಿಲ್ಡಿಂಗ್ ತೆರವುಗೊಳಿಸಿದ ಮೇಲೆ ಬಿಬಿಎಂಪಿ ಪ್ರಭಾವಿಗಳಿಗೆ ಎದುರಾಡದೆ ಸುಮ್ಮನಿದೆ. ಆದರೆ ಶಿಥಿಲಾವಸ್ಥೆ ಕಟ್ಟಡಗಳ ಕೆಡವಲು ಬಿಬಿಎಂಪಿ ಅತ್ಯುತ್ಸಾಹ ತೋರುತ್ತಿದೆ. ಪುಣ್ಯಕ್ಕೆ ಈ ಕಾರ್ಯವಾದ್ರೂ ಬೇಗ ಆಗಬೇಕಿದೆ.
Published by:Annappa Achari
First published: