ಖರ್ಗೆ, ಪರಮೇಶ್ವರ್‌, ಡಿಕೆಶಿ, ಮೊಯ್ಲಿ ಒಂದಾಗಿದ್ದು, ಸಿದ್ದರಾಮಯ್ಯ ಕೆಳಗಿಳಿಸಲು ಓಡಾಡುತ್ತಿದ್ದಾರೆ; ರೇಣುಕಾಚಾರ್ಯ

ನಿಂಬೆ ಹಣ್ಣು ಹಿಡಿದು, ವಾಮಮಾರ್ಗದ ಮೂಲಕ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದ್ರು. ಆದರೂ, ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ.  ಯಡಿಯೂರಪ್ಪನನ್ನು ಹದ ಮಾಡಲು ನೀವು ಯಾರು. ಬಿಜೆಪಿ ಅಯ್ಕೆ ಮಾಡಿದ್ದು ಜನರು. ಯಾವ ರೇವಣ್ಣನೂ ಏನೂ ಮಾಡಲಿಕ್ಕೆ ಆಗಲ್ಲ. ತಾಕತ್ತು ಇದ್ದರೆ ಬರಲಿ, ಹೀಗೆ ಹುಚ್ಚು ಹುಚ್ಚು ಹೇಳಿಕೆ ನೀಡುತ್ತಾರೆನೋ. ಇದೆಲ್ಲಾ ನಡೆಯಲ್ಲ ಎಂದು ಎಚ್ಚರಿಕೆ ನೀಡಿದರು. 

HR Ramesh | news18-kannada
Updated:December 4, 2019, 5:12 PM IST
ಖರ್ಗೆ, ಪರಮೇಶ್ವರ್‌, ಡಿಕೆಶಿ, ಮೊಯ್ಲಿ ಒಂದಾಗಿದ್ದು, ಸಿದ್ದರಾಮಯ್ಯ ಕೆಳಗಿಳಿಸಲು ಓಡಾಡುತ್ತಿದ್ದಾರೆ; ರೇಣುಕಾಚಾರ್ಯ
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ
  • Share this:
ದಾವಣಗೆರೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹದ ಮಾಡುವುದು ಗೊತ್ತು ಎಂದು ಹಾಸನದಲ್ಲಿ ಹೇಳಿಕೆ ನೀಡಿದ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಬಗ್ಗೆಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು, ರೇವಣ್ಣ ಯಾರ‍್ರಿ, ಹದ ಮಾಡೋಕೆ ಎಂದು ಪ್ರಶ್ನೆ ಮಾಡಿದ್ದಾರೆ.

ದಾವಣಗೆರೆಯಲ್ಲಿ ಆಯೋಜಿಸಿದ್ದ ಬಿಜೆಪಿ ದಕ್ಷಿಣ ವಿಧಾನಸಭೆ ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರೇಣುಕಾಚಾರ್ಯ, ಈ ರಾಜ್ಯ, ದೇಶ ಯಾರಪ್ಪ ಆಸ್ತಿಯೂ ಅಲ್ಲ, ಇದು ಸಾರ್ವಜನಿಕರ ಆಸ್ತಿ. ಒಂದು ಕಾಲದಲ್ಲಿ ರಾಜ್ಯದಲ್ಲಿ ಗೂಂಡಾಗಿರಿ, ಇತ್ತು. ನಿಂಬೆ ಹಣ್ಣು ಹಿಡಿದು, ವಾಮಮಾರ್ಗದ ಮೂಲಕ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದ್ರು. ಆದರೂ, ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ.  ಯಡಿಯೂರಪ್ಪನನ್ನು ಹದ ಮಾಡಲು ನೀವು ಯಾರು. ಬಿಜೆಪಿ ಅಯ್ಕೆ ಮಾಡಿದ್ದು ಜನರು. ಯಾವ ರೇವಣ್ಣನೂ ಏನೂ ಮಾಡಲಿಕ್ಕೆ ಆಗಲ್ಲ. ತಾಕತ್ತು ಇದ್ದರೆ ಬರಲಿ, ಹೀಗೆ ಹುಚ್ಚು ಹುಚ್ಚು ಹೇಳಿಕೆ ನೀಡುತ್ತಾರೆನೋ. ಇದೆಲ್ಲಾ ನಡೆಯಲ್ಲ ಎಂದು ಎಚ್ಚರಿಕೆ ನೀಡಿದರು.

ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗದ ಬಗ್ಗೆ ಮಾತನಾಡಿದ ರೇಣುಕಾಚಾರ್ಯ, ಯಾರಿಗೆ ಬೇಕು ಮಂತ್ರಿಗಿರಿ. ನನಗೆ ಪಕ್ಷ ಟಿಕೆಟ್‌ ಕೊಟ್ಟಿದೆ, 3 ಬಾರಿ ಶಾಸಕನಾಗಿದ್ದಾನೆ, ಒಂದು ಬಾರಿ ಮಂತ್ರಿಯಾಗಿದ್ದೇನೆ. ಎಲ್ಲವನ್ನೂ ನೋಡಿದ್ದೇನೆ, ಇದರಲ್ಲೇ ತೃಪ್ತಿ ಇದೆ. ಜೀವನದಲ್ಲಿ ಅವಕಾಶವಾದಿ ರಾಜಕಾರಣ ಮಾಡಿಲ್ಲ. ಕೆಲವರು ಅವಕಾಶವಾದಿಗಳಾಗಿರುತ್ತಾರೆ. ಅವರ ಹೆಸರನ್ನು ಚುನಾವಣೆ ನಂತರ ಹೇಳುತ್ತೇನೆ. ನಮ್ಮ ಕಣ್ಮುಂದೆ ಇರೋದು ಉಪಚುನಾವಣೆ ಗೆಲ್ಲುವುದು ಒಂದೇ. ನನ್ನದು  ಮಾಡು ಇಲ್ಲವೇ ಮಡಿ ಪಾಲಿಸಿ. ನೇರವಾಗಿ ಇರುವಂತಹ ವ್ಯಕ್ತಿ. ಅಧಿಕಾರ ಸ್ವಾರ್ಥಕ್ಕಾಗಿ ತಲೆ ತಗ್ಗಿಸಲ್ಲ ಎಂದು ಹೇಳಿದರು.

ಇದನ್ನು ಓದಿ: ನನ್ನನ್ನು ಜೈಲಿಗೆ ಕಳುಹಿಸಿದವರ ನೆನಪಿಗಾಗಿ ಈ ಗಡ್ಡ: ಡಿಕೆ ಶಿವಕುಮಾರ್ (ವಿಶೇಷ ಸಂದರ್ಶನ)

ಮಲ್ಲಿಕಾರ್ಜುನ ಖರ್ಗೆ ಸಿಹಿ ಹಂಚುವ ವಿಚಾರವಾಗಿ ಪ್ರತಿಕ್ರಿಯಿಸಿದ ರೇಣುಕಾಚಾರ್ಯ,  ಕಾಂಗ್ರೆಸ್‌ನಲ್ಲಿ ಎ-ಜಡ್‌ ವರೆಗೆ ಗುಂಪುಗಳಿವೆ. ಕಾಂಗ್ರೆಸ್ ನೋಡಿದರೆ ಅಯ್ಯೋ ಅನ್ನಿಸುತ್ತೆ.  ಖರ್ಗೆ ಸೋತು ಬಿಟ್ಟಿದ್ದಾರೆ ಪಾಪ. ದಲಿತ ಮುಖ್ಯಮಂತ್ತಿ ಟ್ರಂಪ್‌ ಕಾರ್ಡ್‌ ಬಳಸುತ್ತಿದ್ದಾರೆ. ಇಡೀ ದೇಶದಲ್ಲಿ ಜನ ಕಾಂಗ್ರೆಸ್‌ ತಿರಸ್ಕರಿದ್ದಾರೆ. ಮೂಲ ಕಾಂಗ್ರೆಸ್ಸಿಗರು ಒಂದಾಗಿದ್ದಾರೆ.  ಖರ್ಗೆ, ಪರಮೇಶ್ವರ್‌, ಡಿಕೆಶಿ, ಮೊಯ್ಲಿ ಒಂದಾಗಿದ್ದಾರೆ. ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ. ಅವರಿಗೆ ಯಾವುದೇ ಕಾಂಗ್ರೆಸ್‌ ನಾಯಕರು ಸಾಥ್‌ ನೀಡುತ್ತಿಲ್ಲ.  ಒಂದು ವೇಳೆ ಕಾಂಗ್ರೆಸ್- ಜೆಡಿಎಸ್ ಮತ್ತೆ ಮೈತ್ರಿಯಾಗಿ ಸರ್ಕಾರ ರಚಿಸಿದರೆ ದೇವೇಗೌಡರ ಮನವೊಲಿಸಿ ಮುಖ್ಯಮಂತ್ರಿಯಾಗುವುದು ಒಂದು ಕಡೆ, ಇನ್ನೊಂದೆಡೆ ಕಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಆ ಸ್ಥಾನದಿಂದ ಕೆಳಗಿಳಿಸುವುದು ಖರ್ಗೆ ಅವರ ಸಿಹಿ ಸುದ್ದಿ. ಸಿದ್ದರಾಮಯ್ಯ ಅವರನ್ನು ನೂರಕ್ಕೆ ನೂರರಷ್ಟು ಇಳಿಸಲು ಹೊರಟಿದ್ದಾರೆ ಎಂದು ಹೇಳಿದರು.
First published: December 4, 2019, 5:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading