ಗುಂಪುಗಳು ನಾಲ್ಕಿದ್ದರೂ ಕೆಪಿಸಿಸಿ ಅಧ್ಯಕ್ಷರು ನೇಮಕವಾದರೆ ಎಲ್ಲರೂ ಒಂದೇ: ಸತೀಶ್ ಜಾರಕಿಹೊಳಿ

ದತ್ತ ಪೀಠ, ಅಯೋಧ್ಯ ಜತೆಗೆ ಕನಕಪುರ ಹೊಸ ಸೇರ್ಪಡೆಯಾಗಿದೆ. ಅವಕಾಶ ಸಿಕ್ಕ ಕಡೆಯಲ್ಲ ಕೋಮು ಉದ್ದೇಶಕ್ಕೆ ಬಳಕೆ ಮಾಡುತ್ತಾರೆ ಆಕ್ರೋಶ ವ್ಯಕ್ತಪಡಿಸಿದರು

news18-kannada
Updated:January 13, 2020, 1:57 PM IST
ಗುಂಪುಗಳು ನಾಲ್ಕಿದ್ದರೂ ಕೆಪಿಸಿಸಿ ಅಧ್ಯಕ್ಷರು ನೇಮಕವಾದರೆ ಎಲ್ಲರೂ ಒಂದೇ: ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
  • Share this:
ಬೆಳಗಾವಿ(ಜ.13) : ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎರಡಲ್ಲ ನಾಲ್ಕು ಗುಂಪುಗಳು ಇವೆ. ನಮ್ಮ ಗುಂಪುಗೆ ಅಧ್ಯಕ್ಷ ಆಗಲಿ ಎಂದು ಎಲ್ಲರೂ ಪ್ರಯತ್ನ ಮಾಡುತ್ತಾರೆ. ಅಧ್ಯಕ್ಷ ಸ್ಥಾನ ನೇಮಕವಾದ ಬಳಿಕ ಎಲ್ಲರೂ ಒಂದೆ. ಪ್ರಾದೇಶಿಕವಾರು ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ ಮಾಡಲು ಚಿಂತನೆ ನಡೆದಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ನೇಮಕ ಆಗುವ ವರೆಗೆ ಹೋರಾಟ ಇರುತ್ತದೆ. ಯಾರೇ ಕೆಪಿಸಿಸಿ ಅಧ್ಯಕ್ಷರಾದರೂ ಅವರ ಜತೆಗೆ ಕೆಲಸ ಮಾಡುತ್ತೇವೆ. ವಿರೋಧ ಪಕ್ಷದ  ನಾಯಕ
ಸಿದ್ದರಾಮಯ್ಯ ಹೈಕಮಾಂಡ್ ಭೇಟಿ ಬಳಿಕ ಅಧ್ಯಕ್ಷರ ಆಯ್ಕೆ ಅಂತಿಮ ಆಗುವ ಸಾಧ್ಯತೆ ಇದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ನೇಮಕ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಸ್ವಾಮಿಜಿಗಳು ನನ್ನ ಪರವಾಗಿ ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಪಕ್ಷ ಅಂತಿಮ ನಿರ್ಧಾರ ಕೈಕೊಳ್ಳುತ್ತದೆ. ಮಾಜಿ ಸಚಿವ ಜಮೀರ್ ಅಹ್ಮದ್ ಪ್ರತಿಭಟನೆಯನ್ನು ಸತೀಶ್ ಜಾರಕಿಹೊಳಿ ಸಮರ್ಥಿಸಿಕೊಂಡರು.

ಕಲ್ಕಡ್ಕ ಪ್ರಭಾಕರ್ ಭಟ್ ನೇತೃತ್ವದಲ್ಲಿ ಕನಕಪುರ ಚಲೋ ವಿಚಾರವಾಗಿ ಮಾತನಾಡಿದ ಅವರು, ದತ್ತ ಪೀಠ, ಅಯೋಧ್ಯ ಜತೆಗೆ ಕನಕಪುರ ಹೊಸ ಸೇರ್ಪಡೆಯಾಗಿದೆ. ಅವಕಾಶ ಸಿಕ್ಕ ಕಡೆಯಲ್ಲ ಕೋಮು ಉದ್ದೇಶಕ್ಕೆ ಬಳಕೆ ಮಾಡುತ್ತಾರೆ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ :  ಸಿಎಂ ಯಡಿಯೂರಪ್ಪ ಹೇಳಿದಂತೆ ನಡೆದುಕೊಳ್ಳಲಿ; ಶಾಸಕ ಕೆ ಸುಧಾಕರ್​​

ಸಿಎಎ, ಎನ್ ಆರ್ ಸಿ ಕಾನೂನು ಜಾರಿ ವಿಚಾರ ಕಾನೂನು ತರುವ ಮೂಲಕ ದೇಶ ಇಬ್ಭಾಗಕ್ಕೆ ಯತ್ನ ನಡೆಯುತ್ತಿದೆ. ಯಾವುದೇ ಪಕ್ಷ ನಿರ್ಧಾರ ಮಾಡಿದರು ಜನ ನಂಬಬಾರದು. ಜನ ಈ ವಿಚಾರದಲ್ಲಿ ಸ್ವತಂತ್ರ ನಿರ್ಧಾರ ಕೈಗೊಳ್ಳಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ