Fake University: ದೇಶದಲ್ಲಿದೆ 21 ಫೇಕ್ ಯುನಿವರ್ಸಿಟಿ! ಕರ್ನಾಟಕದಲ್ಲೂ ಇದೆ ನಕಲಿ ವಿಶ್ವವಿದ್ಯಾಲಯ!

ರಾಷ್ಟ್ರ ರಾಜಧಾನಿ ದೆಹಲಿಯ ಹೆಚ್ಚು ವಿಶ್ವವಿದ್ಯಾಲಯಗಳು ನಕಲಿಯಾಗಿವೆ. ಇನ್ನುಳಿದಂತೆ ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ನಕಲಿ ಯುನಿವರ್ಸಿಟಿಗಳು ಇವೆ ಅಂತ ವರದಿ ಹೇಳಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮುಂಬೈ: ತಮ್ಮ ಮಕ್ಕಳು ದೊಡ್ಡ ದೊಡ್ಡ ಕಾಲೇಜ್‌ಗಳಲ್ಲಿ (Collage) ಓದಬೇಕು, ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ (University) ಪದವಿ ಪಡೆಯಬೇಕು ಅಂತ ಹೆತ್ತವರು ಕನಸು ಕಾಣ್ತಾರೆ. ತಮ್ಮ ಮಕ್ಕಳು ಪ್ರತಿಷ್ಠಿತ ಕಾಲೇಜ್‌, ಯುನಿವರ್ಸಿಟಿಗಳಲ್ಲಿ ಓದಿ, ಉದ್ಧಾರವಾಗಲಿ ಅಂತ ಕಷ್ಟಪಟ್ಟು ಹಣ ಹೊಂದಿಸ್ತಾರೆ. ಆದರೆ ಆ ಮಕ್ಕಳು ಓದುವ ವಿಶ್ವವಿದ್ಯಾಲಯಗಳೇ ನಕಲಿಯಾದರೆ (Fake) ಮಾಡುವುದು ಏನು? ಹೌದು ಇಂಥದ್ದೊಂದು ಶಾಕಿಂಗ್ ರಿಪೋರ್ಟ್ (Shocking Report) ಇದೀಗ ಬಂದಿದೆ. ದೇಶದ 21 ವಿಶ್ವವಿದ್ಯಾಲಯಗಳು ನಕಲಿ ಅಂತ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅಥವಾ ಯುಜಿಸಿ (UGC) ಸ್ಪಷ್ಟಪಡಿಸಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಅತೀ ಹೆಚ್ಚು ನಕಲಿ ವಿಶ್ವವಿದ್ಯಾಲಯಗಳಿದ್ದು, ಕರ್ನಾಟಕದಲ್ಲೂ ಫೇಕ್ ಯುನಿವರ್ಸಿಟಿ ಇದೆ ಅಂತ ಯುಜಿಸಿ ವರದಿ ಹೇಳಿದೆ.  

21 ವಿಶ್ವವಿದ್ಯಾಲಯಗಳು ನಕಲಿ!

ದೇಶದ 21 ವಿಶ್ವವಿದ್ಯಾಲಯಗಳನ್ನು ನಕಲಿ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಹೇಳಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಹೆಚ್ಚು ವಿಶ್ವವಿದ್ಯಾಲಯಗಳು ನಕಲಿಯಾಗಿವೆ. ಇನ್ನುಳಿದಂತೆ ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ನಕಲಿ ಯುನಿವರ್ಸಿಟಿಗಳು ಇವೆ ಅಂತ ವರದಿ ಹೇಳಿದೆ.

ಯಾವ ರಾಜ್ಯಗಳಲ್ಲಿದೆ ನಕಲಿ ವಿಶ್ವವಿದ್ಯಾಲಯಗಳು?

ದೆಹಲಿಯಲ್ಲಿ ಅತೀ ಹೆಚ್ಚು ಅಂದರೆ 8 ವಿವಿಗಳು, ಉತ್ತರ ಪ್ರದೇಶದ 4 ವಿವಿಗಳು, ಪಶ್ಚಿಮ ಬಂಗಾಳದ 2, ಒಡಿಶಾದ 2 ವಿಶ್ವವಿದ್ಯಾಲಯಗಳು ನಕಲಿಯಾಗಿವೆ. ಇನ್ನುಳಿದಂತೆ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪುದುಚೇರಿ ಮತ್ತು ಆಂಧ್ರಪ್ರದೇಶಗಳಲ್ಲಿ ತಲಾ ಒಂದು ನಕಲಿ ವಿಶ್ವವಿದ್ಯಾಲಯವಿದೆ ಅಂತ ರಿಪೋರ್ಟ್ ಹೇಳಿದೆ.

ಇದನ್ನೂ ಓದಿ: Maharashtra Politics: ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸಗಾಳಿ! ಶಿವಸೇನೆಗೆ ಸಂಭಾಜಿ ಬ್ರಿಗೇಡ್ ಗೆಳೆಯ

ನಕಲಿ ವಿವಿ ಪಟ್ಟಿ ಸೇರಿದ ವಿಶ್ವವಿದ್ಯಾಲಯಗಳು

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಂಡ್ ಫಿಸಿಕಲ್ ಹೆಲ್ತ್ ಸೈನ್ಸಸ್ (AIIPPHS), ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ, ಸೇಂಟ್ ಜಾನ್ಸ್ ಯೂನಿವರ್ಸಿಟಿ, ಕಿಶನಟ್ಟಂ ಕೇರಳ, ನವಭಾರತ್ ಶಿಕ್ಷಣ ಪರಿಷತ್, ನಾರ್ತ್ ಒರಿಸ್ಸಾ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಅಂಡ್ ಟೆಕ್ನಾಲಜಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್, ಗಾಂಧಿ ಹಿಂದಿ ವಿದ್ಯಾಪೀಠ, ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪಥಿ, ರಾಜಾ ಅರೇಬಿಕ್ ವಿಶ್ವವಿದ್ಯಾಲಯ ಸೇರಿದಂತೆ ಒಟ್ಟು 21 ವಿಶ್ವವಿದ್ಯಾಲಯಗಳು ನಕಲಿ ಎಂದು  ವರದಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಯಾವ ಯುನಿವರ್ಸಿಟಿ ನಕಲಿ?

ಕರ್ನಾಟಕದ ಬಡಗಾಂವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ,  ಸೇಂಟ್ ಜಾನ್ಸ್ ವಿಶ್ವವಿದ್ಯಾಲಯ ನಕಲಿ ಅಂತ ವರದಿಯಲ್ಲಿ ಹೇಳಲಾಗಿದೆ. ಕಿಶಾನಟ್ಟಂ, ಕೇರಳ; ರಾಜಾ ಅರೇಬಿಕ್ ವಿಶ್ವವಿದ್ಯಾಲಯ, ನಾಗ್ಪುರ, ಮಹಾರಾಷ್ಟ್ರ; ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಪುದುಚೇರಿ ಮತ್ತು ಆಂಧ್ರಪ್ರದೇಶದ ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ವಿಶ್ವವಿದ್ಯಾನಿಲಯಗಳನ್ನು ನಕಲಿ ವಿಶ್ವವಿದ್ಯಾಲಯಗಳೆಂದು ಘೋಷಿಸಲಾಗಿದೆ.

ಇದನ್ನೂ ಓದಿ: Sonali Phogat: ಡ್ರಗ್ಸ್​ ಬೆರೆಸಿದ ನೀರು, 2 ತಾಸು ಟಾಯ್ಲೆಟ್​ನಲ್ಲಿ ಬಂದ್: ಸಿಸಿಟಿವಿಯಲ್ಲಿ ಬಯಲಾಯ್ತು ಸೋನಾಲಿ ಸಾವಿನ ರಹಸ್ಯ!

ನಕವಿ ವಿವಿಗಳಿಗೆ ಪದವಿ ನೀಡುವ ಅಧಿಕಾರವೇ ಇಲ್ಲ

ಇನ್ನು ನಕಲಿ ಎಂದು ಗುರುತಿಸಲಾಗಿದ ಈ 21 ವಿಶ್ವವಿದ್ಯಾಲಯಗಳಿಗೆ ಯಾವುದೇ ಪದವಿಗಳನ್ನು ನೀಡುವ ಅಧಿಕಾರವಿಲ್ಲ ಅಂತ ಹೇಳಲಾಗಿದೆ. ಕೇಂದ್ರ, ರಾಜ್ಯ ಮತ್ತು ಪ್ರಾಂತೀಯ ಕಾಯ್ದೆಯಡಿ ಸ್ಥಾಪಿಸಲಾದ ವಿಶ್ವವಿದ್ಯಾಲಯಗಳು ಮಾತ್ರ ಪದವಿಗಳನ್ನ ನೀಡಬಹುದಾಗಿದೆ. ವರದಿಗಳ ಪ್ರಕಾರ, ನಕಲಿ ಎಂದು ಘೋಷಿಸಲಾದ 21 ಸಂಸ್ಥೆಗಳು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಕಾಯ್ದೆ, 1956ರ ವಿರುದ್ಧ ಕಾರ್ಯನಿರ್ವಹಿಸುತ್ತಿವೆ.
Published by:Annappa Achari
First published: