ಕಳ್ಳರ ಚಿತ್ತ ಈರುಳ್ಳಿಯತ್ತ - ರಾತ್ರೋರಾತ್ರಿ ಈರುಳ್ಳಿಯನ್ನು ಮಂಗಮಾಯ ಮಾಡಿದ ಖದೀಮರು

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ರೈತ ಗುರುಬಸಯ್ಯಾ ಪ್ರಭುಸ್ವಾಮಿಮಠ ಅವರ ಜಮೀನಿನಲ್ಲಿ ರಾತ್ರೋರಾತ್ರಿ ಮೂರು ಎಕರೆ ಈರುಳ್ಳಿ ಒಂದು ಎಕರೆ ಮೆಣಸಿನಕಾಯಿ ಕಳ್ಳರು ದೋಚಿದ್ದಾರೆ.

G Hareeshkumar | news18-kannada
Updated:November 29, 2019, 7:24 PM IST
ಕಳ್ಳರ ಚಿತ್ತ ಈರುಳ್ಳಿಯತ್ತ - ರಾತ್ರೋರಾತ್ರಿ ಈರುಳ್ಳಿಯನ್ನು ಮಂಗಮಾಯ ಮಾಡಿದ ಖದೀಮರು
ರೈತ ಗುರುಬಸಯ್ಯಾ ಪ್ರಭುಸ್ವಾಮಿಮಠ
  • Share this:
ಗದಗ(ನ.29): ಬಂಗಾರ, ಹಣ ಕಳ್ಳತನ ಮಾಡೋದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಆ ಊರಲ್ಲಿ ಈರುಳ್ಳಿ ಕಳ್ಳರ ಹಾವಳಿ ಜೋರಾಗಿದೆ. ರೈತರು ಕಷ್ಟಪಟ್ಟು ಬೆಳೆದ ಫಸಲು ರಾತ್ರೋರಾತ್ರಿ ಕಳ್ಳರು ದೋಚಿದ್ದಾರೆ. ಯಾವಾಗ ಈರುಳ್ಳಿಗೆ ಬಂಪರ್ ಬೆಲೆ ಬಂತೋ ಆಗಲೇ ಕಳ್ಳರ ಕೆಂಗಣ್ಣು ರೈತರ ಜಮೀನಗಳ ಮೇಲೆ ಬಿದ್ದಿದೆ. ಇನ್ನೆನೂ ಎರಡು ದಿನಗಳಲ್ಲಿ ಈರುಳ್ಳಿ ಕೈಗೆ ಬರುತ್ತೆ ಅನ್ನೋ ಕನಸು ಕಂಡಿದ್ದ ರೈತರ ಜಮೀನು ಕಳ್ಳರು ಗುಡಿಸಿ ಗುಂಡಾಂತರ ಮಾಡಿದ್ದಾರೆ. ಕಷ್ಟಪಟ್ಟು ಬೆಳೆದ ರೈತ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ಹೌದು ವಿಚಿತ್ರವಾದ್ರೂ ಸತ್ಯ. ನಂಬಲೇ ಬೇಕು. ಅದ್ಯಾಕೋ ನಮ್ಮ ರೈತರ ಹಣೆ ಬರಹವೇ ಸರಿಯಿಲ್ಲ ಕಾಣುತ್ತೆ. ಒಂದಿಲ್ಲೊಂದು ಕಷ್ಟ ರೈತರನ್ನು ಹಿಂಡಿ ಹಿಪ್ಪಿ ಮಾಡುತ್ತಿದೆ. 15 ದಿನಗಳ ಹಿಂದೆ ಇದೇ ಈರುಳ್ಳಿಗೆ ಯಾರೂ ಕೌನ್ ಹೈ ಅಂತಿಲ್ಲ. ಯಾಕಂದ್ರೆ 400 ರೂಪಾಯಿಂದ 2 ಸಾವಿರ ಬೆಲೆ ಇತ್ತು. ಆದರೆ 4-5 ದಿನಗಳಿಂದ ಈರುಳ್ಳಿಗೆ ಸಖತ್ ಡಿಮ್ಯಾಂಡ್ ಆಗಿದೆ. ಈರುಳ್ಳಿ ಆವಕದಲ್ಲಿ ಸಾಕಷ್ಟು ಇಳಿಕೆ ಕಂಡಿದ್ದರಿಂದ ಈರುಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡಿದೆ.

ಈಗ ಪ್ರತಿ ಕ್ವಿಂಟಾಲ್ ಗೆ 4 ಸಾವಿರ ರಿಂದ 10 ಸಾವಿರ ಬೆಲೆ ಹೆಚ್ಚಾಗಿದೆ. ಹೀಗಾಗಿ ರೈತರ ಮುಖದಲ್ಲಿ ಖುಷಿ ಹಚ್ಚಾಗಿದೆ. ಈರುಳ್ಳಿ ಬೆಳೆದ ರೈತರು ಈಗ ಫುಲ್ ಖುಷಿಯಾಗಿದ್ದಾರೆ. ಆದರೆ ಈಗ ರೈತರಿಗೆ ಕಳ್ಳರ ಭಯ ಶುರುವಾಗಿದೆ. ಗದಗ ಜಿಲ್ಲೆಯಲ್ಲಿ ಈಗ ಈರುಳ್ಳಿ ಕಳ್ಳರ ಹಾವಳಿ ಜೋರಾಗಿದೆ. ಇದ್ರಿಂದ ರೈತರು ಕಂಗಾಲಾಗಿದ್ದಾರೆ. ಬೆಲೆ ಕುಸಿತದಿಂದ ಹೊರ ಬಂದ ರೈತರಿಗೆ ಈಗ ಕಳ್ಳರ ಕಾಟ ಹೆಚ್ವಾಗಿದೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ರೈತ ಗುರುಬಸಯ್ಯಾ ಪ್ರಭುಸ್ವಾಮಿಮಠ ಅವರ ಜಮೀನಿನಲ್ಲಿ ರಾತ್ರೋರಾತ್ರಿ ಮೂರು ಎಕರೆ ಈರುಳ್ಳಿ ಒಂದು ಎಕರೆ ಮೆಣಸಿನಕಾಯಿ ಕಳ್ಳರು ದೋಚಿದ್ದಾರೆ. ಬೆಳಗ್ಗೆ ಜಮೀನಿಗೆ ಬಂದು ನೋಡಿದ್ರೆ ರೈತ ಕಂಗಾಲಾಗಿ ಹೋಗಿದ್ದಾನೆ.

ಐದು ವರ್ಷಗಳ ಸತತ ಬರಗಾಲ ರೈತರನ್ನು ಹೈರಾಣು ಮಾಡಿದೆ. ಈ ಬಾರಿ ಉತ್ತಮ ಮಳೆಯಾಗಿದೆ. ಹೀಗಾಗಿ ಸಂತಸಗೊಂಡ ರೈತರು ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದಾರೆ. ಬೆಳೆ ಕೂಡ ಚೆನ್ನಾಗಿತ್ತು. ಆದರೆ ಈ ಬಾರಿ ಅತಿಯಾದ ಮಳೆಗೆ ಸಾಕಷ್ಟು ಈರುಳ್ಳಿ ‌ಕೊಳೆತು ಹೋಗಿದೆ. ಅಷ್ಟೋ ಇಷ್ಟು ಉಳಿದ ಈರುಳ್ಳಿ ಈಗ ಕಳ್ಳರು ದೋಚುತ್ತಿದ್ದು ರೈತರು ಕಂಗಾಲಾಗಿದ್ದಾರೆ. ನರೇಗಲ್ ಗುರುಬಸಯ್ಯಾ ಅವರ ಜಮೀನು ಅದೇ ಪಟ್ಟಣದ ಕಾಶಪ್ಪ ಚಲವಾದಿ ಲಾವಣಿ ಮಾಡಿದ್ದ. ಕಾಶಪ್ಪ ಸುಮಾರು 50 ಸಾವಿರ ಖರ್ಚು ಮಾಡಿದ್ದಾನೆ. ಇನ್ನೂ ಎರಡು ದಿನಗಳಲ್ಲಿ ಈರುಳ್ಳಿ ಮಾರ್ಕೆಟ್ ಕಳುಹಿಸಲು ಸಜ್ಹಾಗಿದ್ದ. ಆದರೆ ಕಳ್ಳರು ಎಲ್ಲವನ್ನು  ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ :  ಹೋಟೆಲ್ ಉದ್ಯಮದ ಮೇಲೂ ಬರೆ ಎಳೆದ ಈರುಳ್ಳಿ; ಖಾದ್ಯಗಳ ಬೆಲೆ ಏರಿಕೆ ಅನಿವಾರ್ಯ ಎಂದ ಉದ್ಯಮಿಗಳು

ಇದು ನರೇಗಲ್ ರೈತರ ಸಮಸ್ಯೆ ಮಾತ್ರವಲ್ಲ. ಗದಗ ತಾಲೂಕಿನಲ್ಲೂ ಈರುಳ್ಳಿ, ಮೆಣಸಿನಕಾಯಿ ಬೆಳೆ ಕಳ್ಳರು ಲೂಟಿ ನಡೆಸಿದ್ದಾರೆ. ಹೀಗಾಗಿ ರೈತರು ಬೆಳೆ ಉಳಿಸಿಕೊಳ್ಳಲು ರಾತ್ರಿಯಿಡೀ ಜಮೀನು ಕಾಯುವ ಕೆಲಸದಲ್ಲಿ ನಿರತರಾಗಿದ್ದಾರೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ಉಳಿಸಿಕೊಳ್ಳಲು ರೈತರು ಹರಸಹಾಸ ಪಡುತ್ತಿದ್ದಾರೆ.

 (ವರದಿ : ಸಂತೋಷ ಕೊಣ್ಣೂರ)

 
First published: November 29, 2019, 7:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading