ವಿಜಯಪುರ(ಜ.21) : ಕುರಿ ಮತ್ತು ನಾಯಿಗಳಿಗೆ ಮತ್ತು ಬರುವ ಸ್ಪೇ ಬಳಸಿ 15 ಕುರಿಗಳನ್ನು ಹೈಟೆಕ್ ರೀತಿಯಲ್ಲಿ ಕಳ್ಳತನ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ರೈತ ಸುಭಾಷ ವಾಲಿಕಾರ ಎಂಬುವರಿಗೆ ಸೇರಿದ ತೋಟದ ಮನೆಯ ಕುರಿ ದೊಡ್ಡಿಯಲ್ಲಿ ಕುರಿಗಳನ್ನು ಸಾಕಣೆ ಮಾಡಲಾಗಿತ್ತು. ಅಲ್ಲದೆ, ತೋಳ ಸೇರಿದಂತೆ ಕಳ್ಳರನ್ನು ಬೆದರಿಸಲು ನಾಯಿಗಳನ್ನು ಸಾಕಲಾಗಿತ್ತು. ಆದರೆ, ಈ ಕುರಿ ದೊಡ್ಡಿಯಲ್ಲಿದ್ದ 15 ಕುರಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಮಾಲೀಕರು ಮಧ್ಯರಾತ್ರಿ ಎಚ್ಚರಗೊಂಡಾಗ ವಾಹನಗಳು ಹೊರಟು ಹೋದ ಶಬ್ದ ಬಂದಿದೆ. ಹೊರ ಬಂದು ನೋಡಿದಾಗ ಕುರಿಗಳು ಕಳ್ಳತನ ನಡೆದಿರುವುದು ಗೊತ್ತಾಗಿದೆ
ಕುರಿಗಳಿಗೆ ಹಾಗೂ ನಾಯಿಗಳಿಗೆ ಮತ್ತು ಬರುವ ಸ್ಪ್ರೇ ಬಳಸಿರುವ ಶಂಕೆ ವ್ಯಕ್ತವಾಗಿದೆ. ಕುರಿಗಳು ಕೂಗಬಾರದೆಂದು ಕಳ್ಳರು ಸ್ಪ್ರೇ ಬಳಸಿದ್ದಾರೆಂದು ರೈತ ಆರೋಪಿಸಿದ್ದಾನೆ.
ನಾಯಿಗಳು ಸಹ ಬೊಗಳಬಾರದು ಎಂದು ಅವುಗಳಿಗೂ ಮತ್ತಿನ ಸ್ಪ್ರೇ ಹೊಡೆದಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ : ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಪ್ರಕರಣ: ಎನ್ಐಎ ಅಧಿಕಾರಿಗಳು ಇಂದು ಮಂಗಳೂರಿಗೆ ಭೇಟಿ
ಇದರಿಂದಾಗಿ ರೈತನಿಗೆ ಸುಮಾರು ರೂ. 1.50 ಲಕ್ಷ ರೂಪಾಯಿ ನಷ್ಟವಾಗಿದ್ದು, ರೈತರ ಸುಭಾಷ ವಾಲಿಕಾರ ಗೋಳಾಡುವಂತಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ