Coronavirus: ರಾಯಚೂರಿನಲ್ಲಿ ರೆಮಿಡಿಸಿವಿಯರ್ ಇಂಜೆಕ್ಷನ್ ಕಳ್ಳ ಸಾಗಾಟ ಆರೋಪ; ಸಾರ್ವಜನಿಕರ ಆಕ್ರೋಶ

ಕೋವಿಡ್ ಆಸ್ಪತ್ರೆ ಇರುವ ಓಪೆಕ್ ನಲ್ಲಿ ರಾಯಚೂರು ವೈದ್ಯಕೀಯ ಸಂಶೋಧನಾ ಸಂಸ್ಥೆ( ರಿಮ್ಸ್) ಅಂಬ್ಯುಲೆನ್ಸ್ ಚಾಲಕರೊಬ್ಬರು ಎರಡು ರೆಮಿಡಿಸಿವಿಯರ್ ಇಂಜೆಕ್ಷನ್ ನನ್ನು ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರೆಮಿಡಿಸಿವರ್​ ಔಷಧ

ರೆಮಿಡಿಸಿವರ್​ ಔಷಧ

  • Share this:
ರಾಯಚೂರು(ಏ.25): ಮಸ್ಕಿ ಬೈ ಎಲೆಕ್ಷನ್ ನಂತರ ರಾಯಚೂರು ಜಿಲ್ಲೆಯಲ್ಲಿ ಕೊರೋನಾ ಎರಡನೆಯ ಅಲೆ ಹೆಚ್ಚಾಗಿ ಹರಡುತ್ತಿದೆ.  ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ 500 ಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ, ಕೊರೊನಾ ಚೈನ್ ಕಟ್ ಮಾಡಲು ಸರಕಾರ ವೀಕೆಂಡ್ ಕರ್ಫ್ಯೂ ಜಾರಿ ಗೊಳಿಸಲಾಗಿದೆ. 57 ತಾಸುಗಳ ವೀಕೆಂಡ್ ಗೆ ಎರಡನೆಯ ದಿನವೂ ಜನರು ಮತ್ತೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಮಧ್ಯೆ ಕೊರೊನಾ ಸೋಂಕಿತರಿಗೆ ಅವಶ್ಯವಾಗಿರುವ ರೆಮಿಡಿಸಿವಿಯರ್ ಇಂಜೆಕ್ಷನ್ ನನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕಳ್ಳ ಸಾಗಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಲಾಕ್ ಡೌನ್:

ಕೊರೊನಾ ಎರಡನೆಯ ಅಲೆ ತಡೆಗಾಗಿ ಸರಕಾರ 57 ಗಂಟೆಗಳ ಲಾಕ್ ಡೌನ್ ಘೋಷಣೆ ಮಾಡಿದೆ. ನಿರಂತರ ಲಾಕ್ ಡೌನ್ ಎರಡನೆಯ ದಿನವಾಗಿದ್ದು, ಇಂದು ಸಹ ಅಂಗಡಿಗಳನ್ನು ಮುಚ್ಚಲಾಗಿತ್ತು. ಈ‌ ಮಧ್ಯೆ ಇಂದು ಮಹಾವೀರ ಜಯಂತಿ ಈ ಹಿನ್ನಲೆಯಲ್ಲಿ ಮಾಂಸ ಮಾರಾಟಕ್ಕೆ ನಿರ್ಬಂಧಿಸಲಾಗಿದೆ. ಆದರೆ ಕದ್ದು ಮುಚ್ಚಿ ಮಾಂಸ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.

ರಾಯಚೂರು ಜಿಲ್ಲೆಯಲ್ಲಿ ಈಗ ನಿತ್ಯ 500 ಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ ಈ ಹಿನ್ನಲೆಯಲ್ಲಿ ಜನ ಸಮಾಜಿಕ ಅಂತರ ಹಾಗೂ ಮಾಸ್ಕ್ ಹಾಕಿಕೊಳ್ಳಬೇಕು, ಶುಕ್ರವಾರದಿಂದ ರಾಯಚೂರಿನಲ್ಲಿ ಸೆಮಿ ಲಾಕ್​ಡೌನ್ ಮಾಡಲಾಗಿದೆ. ಶುಕ್ರವಾರ ಸಂಜೆಯಿಂದ ಕರ್ಫ್ಯೂ ಇದೆ. ಆದರೂ ಜನ ಇನ್ನೂ ಎಚ್ಚೆತ್ತುಕೊಂಡಿಲ್ಲ, ಈ ಮಧ್ಯೆ ವೀಕೆಂಡ್ ಎರಡನೆಯ ದಿನವಾದ ಇಂದು ಸಹ ಜನರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ತರಕಾರಿ ಮಾರುಕಟ್ಟೆಯನ್ನು ವಿಕೇಂದ್ರೀಕರಣ ಮಾಡಲಾಗಿದೆ. ಪ್ರತಿ ವಾರ್ಡಿಗೊಂದರಂತೆ ತರಕಾರಿ ಮಾರುಕಟ್ಟೆ ಆರಂಭಿಸಲಾಗಿದೆ. ಮುಂಜಾನೆ 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ, ಈ ಸಂದರ್ಭದಲ್ಲಿ ಕೋವಿಡ್ ನಿಯಮಾವಳಿಯನ್ನು ಪಾಲಿಸಬೇಕು, ಆದರೆ ಇಲ್ಲಿ ವ್ಯಾಪಾರಿಗಳು ಮಾಸ್ಕ್ ಹಾಕಿಕೊಂಡಿಲ್ಲ. ಗ್ರಾಹಕರು ಸಹ ಗುಂಪು ಗುಂಪಾಗಿ ಸೇರಿದ್ದು ಕಂಡು ಬಂತು.

ಚಾಮರಾಜನಗರ: ಯೂಟ್ಯೂಬ್​ ಲೈವ್​ನಲ್ಲೇ ಮದುವೆ ನೋಡಿ ವಧು-ವರರಿಗೆ ಹರಸಿದ ಬಂಧು-ಮಿತ್ರರು

ಈ ಮಧ್ಯೆ ಇಂದು ಭಾನುವಾರ, ಬಹುತೇಕರು ಮಾಂಸದೂಟ ಮಾಡುವುದು ವಾಡಿಕೆ, ಆದರೆ ಇಂದೇ ಮಹಾವೀರ ಜಯಂತಿ ಇರುವದರಿಂದ ಮಟನ್ ಅಂಗಡಿಗಳು ಬಂದ್ ಮಾಡಲು ಸೂಚಿಸಲಾಗಿತ್ತು, ಆದರೂ ಅಂಗಡಿಯವರು ಕದ್ದು ಮುಚ್ಚಿ ಮಾಂಸ ಮಾರಾಟ ಮಾಡುತ್ತಿರುವುದು ಕಂಡು ಬಂತು. ರಾಯಚೂರಿನಲ್ಲಿ ಕೊರೊನಾ ಅಬ್ಬರಿಸುತ್ತಿದೆ, ಇದು ಜನರಲ್ಲಿ ಭಯ ಹುಟ್ಟಿಸುತ್ತಿದ್ದರೂ ಜನರ ನಿರ್ಲಕ್ಷ್ಯ ಮುಂದುವರೆದಿದೆ.

ರೆಮಿಡಿಸಿವಿಯರ್:

ಕೊರೊನಾ ಸೋಂಕಿತರಿಗೆ ರೆಮಿಡಿಸಿವಿಯರ್ ಇಂಜೆಕ್ಷನ್ ಅವಶ್ಯ ಎನ್ನಲಾಗುತ್ತಿದೆ. ಆಸ್ಪತ್ರೆಗಳಲ್ಲಿ ರೆಮಿಡಿಸಿವಿಯರ್ ಇಂಜೆಕ್ಷನ್ ಹಾಕಿಸಲಾಗುತ್ತಿದೆ. ಈ ಮಧ್ಯೆ ರೆಮಿಡಿಸಿವಿಯರ್ ಇಂಜೆಕ್ಷನ್ ನನ್ನು ಕಳ್ಳ ಸಾಗಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ರಾಯಚೂರಿನ ಕೋವಿಡ್ ಆಸ್ಪತ್ರೆ ಇರುವ ಓಪೆಕ್ ನಲ್ಲಿ ರಾಯಚೂರು ವೈದ್ಯಕೀಯ ಸಂಶೋಧನಾ ಸಂಸ್ಥೆ( ರಿಮ್ಸ್) ಅಂಬ್ಯುಲೆನ್ಸ್ ಚಾಲಕರೊಬ್ಬರು ಎರಡು ರೆಮಿಡಿಸಿವಿಯರ್ ಇಂಜೆಕ್ಷನ್ ನನ್ನು ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇಂದು ಬೆಳಗಿನ ಜಾವ ಅಂಬ್ಯುಲೆನ್ಸ್ ಡ್ರೈವರ್ ರಮೇಶ ಹಾಗು ಕಸ್ತೂರೆಮ್ಮ ಎಂಬುವವರಿಗೆ ಇಂಜೆಕ್ಷನ್ ಗಳ ಮೇಲೆ ಹೆಸರು ಇರುವ ಮಾತ್ರೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮಾಹಿತಿ ಆಧಾರದಲ್ಲಿ ಕೆಲವು ಸಾರ್ವಜನಿಕರು ಹಿಡಿದು ಕೇಳಿದಾಗ ಇಂಜೆಕ್ಷನ್ ಇರುವ ಜೇಬಿ ತೋರಿಸಲು ಹಿಂಜರಿದಿದ್ದಾರೆ. ಈ ಮಧ್ಯೆ ಈ ಇಂಜೆಕ್ಷನ್ ಗಳನ್ನು ಅಲ್ಲಲ್ಲಿ ಎಸೆದಿರುವುದು ಕಂಡು ಬಂದಿದೆ.

ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಸರಬರಾಜು ಮಾಡುವ ರೆಮಿಡಿಸಿವಿಯರ್ ಇಂಜೆಕ್ಷನ್ ನನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ, ಸುಮಾರು 4500 ರೂಪಾಯಿ ಮೌಲ್ಯದ ರೆಮಿಡಿಸಿವಿಯರ್ ಇಂಜೆಕ್ಷನ್ ನನ್ನು ಖಾಸಗಿಯವರಿಗೆ 20 ಸಾವಿರರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ, ಸರಕಾರಿ ಆಸ್ಪತ್ರೆಗೆ ಸರಬರಾಜು ಆದ ಇಂಜೆಕ್ಷನ್ ಖಾಸಗಿ ಆಸ್ಪತ್ರೆಯಲ್ಲಿ ರುವ ಪ್ರಭಾವಿಗಳಿಗೆ ನೀಡುತ್ತಿದ್ದಾರೆ, ಈ ಕಾರಣಕ್ಕಾಗಿ ಈ ಅಕ್ರಮದ ಬಗ್ಗೆ ಸಮಗ್ರ ತನಿಖೆಯಾಗಬೇಕು, ಎಂದು ಜನಸಂಗ್ರಾಮ ಪರಿಷತ್ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.
Published by:Latha CG
First published: