ಬೃಹತ್ ಪ್ರಮಾಣದ ಪೆಟ್ರೋಲಿಯಂ ಉತ್ಪನ್ನಗಳ ಕಳವು ಜಾಲ; ಲಕ್ಷಾಂತರ ಮೌಲ್ಯದ ದಂಧೆಯ ಹಿಂದಿನ ರೂವಾರಿಗಳು ಯಾರು ? 

ಪೈಪ್ ಲೈನ್ ಗೆ ಹಾನಿ ಮಾಡಿರುವ ದಂಧೆಕೋರರು ಮುಖ್ಯ ಪೈಪ್ ಲೈನ್ ಗೆ ಇನ್ನೊಂದು ಪೈಪ್ ಅನ್ನು ವೆಲ್ಡಿಂಗ್ ಮಾಡಿ ಅಳವಡಿಸಿದ್ದು, ಇದನ್ನು ಗಮನಿಸಿದಲ್ಲಿ ಇದೊಂದು ಭಾರೀ ಪ್ರಮಾಣದ ದಂಧೆ ಎನ್ನುವುದು ಬೆಳಕಿಗೆ ಬರುತ್ತಿದೆ

ಪೈಪ್ ಲೈನ್ ಗೆ ಹಾನಿ ಮಾಡಿರುವ ದಂಧೆಕೋರರು ಮುಖ್ಯ ಪೈಪ್ ಲೈನ್ ಗೆ ಇನ್ನೊಂದು ಪೈಪ್ ಅನ್ನು ವೆಲ್ಡಿಂಗ್ ಮಾಡಿ ಅಳವಡಿಸಿದ್ದು, ಇದನ್ನು ಗಮನಿಸಿದಲ್ಲಿ ಇದೊಂದು ಭಾರೀ ಪ್ರಮಾಣದ ದಂಧೆ ಎನ್ನುವುದು ಬೆಳಕಿಗೆ ಬರುತ್ತಿದೆ

ಪೈಪ್ ಲೈನ್ ಗೆ ಹಾನಿ ಮಾಡಿರುವ ದಂಧೆಕೋರರು ಮುಖ್ಯ ಪೈಪ್ ಲೈನ್ ಗೆ ಇನ್ನೊಂದು ಪೈಪ್ ಅನ್ನು ವೆಲ್ಡಿಂಗ್ ಮಾಡಿ ಅಳವಡಿಸಿದ್ದು, ಇದನ್ನು ಗಮನಿಸಿದಲ್ಲಿ ಇದೊಂದು ಭಾರೀ ಪ್ರಮಾಣದ ದಂಧೆ ಎನ್ನುವುದು ಬೆಳಕಿಗೆ ಬರುತ್ತಿದೆ

  • Share this:
ಬೃಹತ್ ಪ್ರಮಾಣದ ಪೆಟ್ರೋಲಿಯಂ ಉತ್ಪನ್ನಗಳ ಕಳವು ದಂಧೆಯನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಬಂಟ್ವಾಳ ತಾಲೂಕಿನ ಸೋರ್ಣಾಡು ಗ್ರಾಮದ ಅರಳ ಎಂಬಲ್ಲಿ ಪೆಟ್ರೋಲಿಯಂ ಕಳ್ಳರು ಎಚ್.ಪಿ.ಸಿ.ಎಲ್, ಒ.ಎನ್.ಜಿ.ಸಿ ಸಂಸ್ಥೆಗೆ ಸೇರಿದ ಪೈಪ್ ಲೈನ್ ನಲ್ಲಿ ರಂದ್ರ ಕೊರೆದು ಈ ದಂಧೆಯನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅರಳ ನಿವಾಸಿ ಐವನ್ ಡಿಸೋಜಾ ಎನ್ನುವವರಿಗೆ ಸೇರಿದ ಜಮೀನಿನ ಮೂಲಕ ಮಂಗಳೂರು-ಬೆಂಗಳೂರು ನಡುವಿನ ಪೈಪ್‌ ಲೈನ್ ಹಾದುಹೋಗುತ್ತಿದ್ದು, ನೆಲದಿಂದ ಸುಮಾರು 15 ಅಡಿ ಆಳದಲ್ಲಿ ಈ ಪೈಪ್ ಲೈನ್ ಅನ್ನು ಅಳವಡಿಸಲಾಗಿದೆ. ಜೆಸಿಬಿ ಮೂಲಕ  ಅಗೆದು ಪೈಪ್ ಲೈನ್ ಗೆ ರಂದ್ರ ಮಾಡಿ ರಂದ್ರದ ಮೂಲಕ ಒಂದೂವರೆ ಇಂಚಿನ ಇನ್ನೊಂದು ಪೈಪ್ ಮೂಲಕ ದಂಧೆಕೋರರು ಪೆಟ್ರೋಲಿಯಂ ಉತ್ಪನ್ನಗಳನ್ನು ಕದಿಯಿತ್ತಿದ್ದರು.

ಮಂಗಳೂರಿನಿಂದ ಬೆಂಗಳೂರಿಗೆ ಹಾದುಹೋಗುವ ಪೆಟ್ರೋಲಿಯಂ ಉತ್ಪನ್ನದಲ್ಲಿ ವೆತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಎಚ್.ಪಿ.ಸಿ.ಎಲ್‌, ಒ.ಎನ್.ಜಿ.ಸಿ ಅಧಿಕಾರಿಗಳು ಪೈಪ್ ಲೈನ್ ನಲ್ಲಿ ಲೀಕೇಜ್ ಇರುವುದನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಪೈಪ್ ಲೈನ್ ಗೆ ಹಾನಿ ಮಾಡಿರುವ ದಂಧೆಕೋರರು ಮುಖ್ಯ ಪೈಪ್ ಲೈನ್ ಗೆ ಇನ್ನೊಂದು ಪೈಪ್ ಅನ್ನು ವೆಲ್ಡಿಂಗ್ ಮಾಡಿ ಅಳವಡಿಸಿದ್ದು, ಇದನ್ನು ಗಮನಿಸಿದಲ್ಲಿ ಇದೊಂದು ಭಾರೀ ಪ್ರಮಾಣದ ದಂಧೆ ಎನ್ನುವುದು ಬೆಳಕಿಗೆ ಬರುತ್ತಿದ್ದು, ದೊಡ್ಡ ದೊಡ್ಡ ಕುಳಗಳು ಈ ದಂಧೆಯಲ್ಲಿ ನಿರತರಾಗಿರುವ ಸಾಧ್ಯತೆಗಳು ಗೋಚರಿಸುತ್ತಿದೆ.

ಇದನ್ನು ಓದಿ: ಅಭಿನಂದನೆಗೆ ಸೀಮಿತವಾದ ಸಿಎಂ ಪ್ರವಾಸ; ಬೊಮ್ಮಾಯಿ ಮುಂದಿದೆ ಸಚಿವರ ಪಟ್ಟಿ ತಯಾರಿಸುವ ಸವಾಲ್​

ಕಳ್ಳರ ಈ ದಂಧೆಯಿಂದಾಗಿ ಲಕ್ಷಾಂತರ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳು ನಷ್ಟವಾಗಿದೆ‌ ಎಂದು ಅಂದಾಜಿಸಲಾಗಿದ್ದು, ನಷ್ಟದ ಮೊತ್ತ ಇನ್ನಷ್ಟೇ ತಿಳಿದುಬರಬೇಕಿದೆ. ದಂಧೆಕೋರರು ಸುಮಾರು 90 ಸಾವಿರ ಮೌಲ್ಯದ‌ ಪೈಪ್ ಲೈನ್ ಗೆ ಹಾನಿ ಮಾಡಿದ್ದು, ಈ ಸಂಬಂಧ ಕಂಪನಿಯು ಜಮೀನಿನ ಮಾಲಕ ಐವನ್‌ ಡಿಸೋಜಾ ವಿರುದ್ಧ ಪ್ರಕರಣ ದಾಖಲಿಸಿದೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಪೈಪ್ ಲೈನ್ ಗೆ ಆದ ಹಾನಿಯನ್ನು ನೀಡುವುದಾಗಿಯೂ ಹೇಳಿಕೊಂಡಿದ್ದಾನೆ. ಪ್ರಕರಣದ ಹಿಂದೆ ಇರುವ ಕಾಣದ ಕೈಗಳ ಬಗ್ಗೆಯೂ ಪೋಲಿಸರು ತನಿಖೆ ಆರಂಭಿಸಿದ್ದಾರೆ. ಮಂಗಳೂರು- ಬೆಂಗಳೂರು ನಡುವೆ ಹಾದು ಹೋಗುವ ಈ ಪೈಪ್‌ ಲೈನ್ ಹೆಚ್ಚಾಗಿ ಕಾಡುಪ್ರದೇಶಗಳಲ್ಲೇ ಹಾದುಹೋಗುತ್ತಿದೆ.

ಕೆಲವು ಕಡೆಗಳಲ್ಲಿ ಮಾತ್ರ ಖಾಸಗಿ ಜಮೀನು ಮೂಲಕ ಈ ಪೈಪ್ ಲೈನ್ ಹಾದುಹೋಗಿದ್ದು, ಈ ಪೈಪ್ ಲೈನ್ ಗೆ ಕೆಲವು‌ ಕಡೆಗಳಲ್ಲಿ ಗೇಟ್ ವಾಲ್ ಗಳನ್ನೂ ಅಳವಡಿಸಲಾಗಿದೆ. ಇಂಥ ಜಾಗದಲ್ಲೇ ಕಳ್ಳರು ಪೆಟ್ರೋಲ್ ಕದಿಯಲು ಉಪಯೋಗಿಸುತ್ತಿದ್ದು, ಈ ನಿರ್ದಿಷ್ಟ ಜಾಗವು ಕಳ್ಳರಿಗೆ ಸಿಗುವುದಾದರೂ ಹೇಗೆ ಎನ್ನುವ ಬಗ್ಗೆ ಇದೀಗ ಚರ್ಚೆಗಳು ಆರಂಭಗೊಂಡಿದೆ.

ನೆಲದಿಂದ ಸುಮಾರು 15 ಅಡಿ ಆಳದಲ್ಲಿ ಹಾದುಹೋಗುವ ಈ ಪೈಪ್ ಲೈನ್ ನ  ಗೇಟದ ವಾಲ್ ಗಳಿರುವ ಸ್ಥಳ ಕಂಪನಿಯ ಒಳಗಿನ ಸಿಬ್ಬಂದಿಗಳಿಗೆ ಮಾತ್ರ ತಿಳಿದಿರುವ ಸಾಧ್ಯತೆ‌ ಹೆಚ್ಚಾಗಿದ್ದು, ಈ ವಿವರ ದಂಧೆಕೋರರಿಗೆ ಸಿಗುವ ಹಿನ್ನಲೆಯನ್ನು ಪತ್ತೆ ಹಚ್ಚಬೇಕಿದೆ. ಕಂಪನಿಯ ಒಳಗಿನ ಅಧಿಕಾರಿಗಳು ಹಾಗು ಸಿಬ್ಬಂಧಿಗಳು ಈ ದಂಧೆಯ ಹಿಂದೆ ಭಾಗಿಯಾಗಿದ್ದಾರೆಯೇ ಎನ್ನುವ ಸಂಶಯವನ್ನೂ ಸಾರ್ವಜನಿಕರು ವ್ಯಕ್ತಪಡಿಸಿದ್ದು ,ಪೊಲೀಸರು ಈ ಬಗ್ಗೆಯೂ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: