• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Theft Case: ಬೆಳಗಾವಿ ಪೊಲೀಸರ ಭರ್ಜರಿ ಬೇಟೆ, 17 ಕೋಟಿ 54 ಲಕ್ಷ ಮೌಲ್ಯದ ಚಿನ್ನಾಭರಣ ಸೀಜ್

Theft Case: ಬೆಳಗಾವಿ ಪೊಲೀಸರ ಭರ್ಜರಿ ಬೇಟೆ, 17 ಕೋಟಿ 54 ಲಕ್ಷ ಮೌಲ್ಯದ ಚಿನ್ನಾಭರಣ ಸೀಜ್

ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು

ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು

ಕಳ್ಳತನ ಹಾಗೂ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಪೊಲೀಸರು ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಉತ್ತರ ವಲಯ ಐಜಿಪಿ ಸತೀಶಕುಮಾರ್ ಹೇಳಿದ್ದಾರೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

ಬೆಳಗಾವಿ (ಡಿ.16): ಬೆಳಗಾವಿ (Belagavi) ಜಿಲ್ಲೆಯ ವಿವಿಧ ಠಾಣೆಗಳಲ್ಲಿ ನಡೆದ 200 ಕಳ್ಳತನ ಪ್ರಕರಣ ಪತ್ತೆ ಮಾಡಿರುವ ಜಿಲ್ಲಾ ಪೊಲೀಸರು (District Police) ಒಟ್ಟು 324 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅದರಂತೆ ನಗದು ಸೇರಿದಂತೆ ಒಟ್ಟು 17 ಕೋಟಿ 54 ಲಕ್ಷ ರೂ. ಗಳ ಚಿನ್ನಾಭರಣ ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಕ್ಕ ಹಣ, ಚಿನ್ನಾಭರಣವನ್ನು (Gold Jewelry) ಕಳೆದುಕೊಂಡ ಸಾರ್ವಜನಿಕರಿಗೆ ಮರಳಿ ನೀಡಲಾಗಿದೆ ಎಂದು ಉತ್ತರ ವಲಯ ಐಜಿಪಿ ಸತೀಶ್​ ಕುಮಾರ್ (IGP Sathish Kumar) ಅವರು ಹೇಳಿದರು.


ಅಪರಾಧ ಚಟುವಟಿಕೆ ಮಟ್ಟ ಹಾಕಲು ಪ್ಲಾನ್​


ಇನ್ನೂ ಪೊಲೀಸ್ ಇಲಾಖೆಯಲ್ಲಿ ಪ್ರತಿದಿನವೂ ಹೊಸ ಹೊಸ ಸವಾಲು ಎದುರಾಗುತ್ತವೆ. ಕಳ್ಳತನ ಹಾಗೂ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಪೊಲೀಸರು ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಉತ್ತರ ವಲಯ ಐಜಿಪಿ ಸತೀಶಕುಮಾರ್ ಹೇಳಿದ್ದಾರೆ.


Belgavi district police seized gold and material worth Rs 17 crore 54 lakh including cash
ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು


ಪೊಲೀಸರ ತನಿಖೆಗೆ ಸೋಶಿಯಲ್ ಮೀಡಿಯಾ ಅನುಕೂಲ


ಕಳೆದ 10 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳ ಹಾಗೂ ಮೊಬೈಲ್ ಬಳಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇತ್ತು. ಈ ವೇಳೆ ಕೆಲವು ಪ್ರಕರಣಗಳನ್ನು ಬೇಗ ಪತ್ತೆ ಹಚ್ಚಲಾಗುತ್ತಿತ್ತು. ಇದೀಗ ವಾಟ್ಸಾಪ್, ಫೇಸ್‌ಬುಕ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಿಂದ ಆರೋಪಿಗಳ ಸುಳಿವು ಪತ್ತೆ ಹಚ್ಚುವುದು ಎಷ್ಟು ಕಷ್ಟವೋ. ಅಷ್ಟೇ ಪ್ರಮಾಣದಲ್ಲಿ ಪೊಲೀಸರ ತನಿಖೆಗೆ ಅನುಕೂಲವಾಗುತ್ತಿದೆ. ಆದ್ದರಿಂದ ಪೊಲೀಸರು ಸದಾಕಾಲವೂ ಕ್ರಿಯಾಶೀಲರಾಗುವುದರ ಜತೆಗೆ ಸಾಮಾಜಿಕ ಜಾಲತಾಣಗಳ ಬಳಕೆ ಜತೆಗೆ ತಂತ್ರಜ್ಞಾನಗಳ ಮೂಲಕ ಪ್ರಕರಣಗಳನ್ನು ಬೇಧಿಸುವ ಕಾರ್ಯವಾಗಲಿ ಎಂದರು.


201 ಪ್ರಕರಣ ಪತ್ತೆ, 324 ಆರೋಪಿಗಳ ಬಂಧನ


ಒಂದು ವರ್ಷದ ಅವಧಿಯಲ್ಲಿ 201 ಪ್ರಕರಣ ಪತ್ತೆ ಹಚ್ಚಿ 324 ಆರೋಪಿಗಳನ್ನ ಬಂಧಿಸಿದ ಬೆಳಗಾವಿ ಜಿಲ್ಲಾ ಪೊಲೀಸರು ಒಟ್ಟು 17 ಕೋಟಿ 54 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ ಎಂದು ಐಜಿಪಿ ತಿಳಿಸಿದರು. ಇದರಲ್ಲಿ 4 ಕೋಟಿ 18 ಲಕ್ಷ ಮೌಲ್ಯದ 8 ಕೆಜಿ 369ಗ್ರಾಂ ಚಿನ್ನ. 4 ಲಕ್ಷ 91 ಸಾವಿರ ಮೌಲ್ಯದ 7ಕೆಜಿ ಬೆಳ್ಳಿ, 1 ಕೋಟಿ 24 ಲಕ್ಷ ಮೌಲ್ಯದ ದ್ವಿಚಕ್ರ ವಾಹನ, 3 ಕೋಟಿ 99 ಲಕ್ಷ ಮೌಲ್ಯದ 24 ಮೋಟಾರ್ ವಾಹನಗಳು ವಶಕ್ಕೆ, 7 ಕೋಟಿ 47 ಲಕ್ಷ ನಗದು, 59 ಲಕ್ಷ ಮೌಲ್ಯದ ಮೊಬೈಲ್ ಸೇರಿ ಇತರೆ ವಸ್ತು ಜಪ್ತಿ ಮಾಡಲಾಗಿದೆ.


ಡಿಆರ್ ಮೈದಾನದಲ್ಲಿ ಸ್ವತ್ತುಗಳ ಪ್ರದರ್ಶನ


ಬೆಳಗಾವಿಯ ಡಿಆರ್ ಮೈದಾನದಲ್ಲಿ ಸ್ವತ್ತುಗಳ ಪ್ರದರ್ಶನ ಮಾಡಲಾಯಿತು. ಉತ್ತರ ವಲಯ ಐಜಿಪಿ ಸತೀಶ್ ಕುಮಾರ್, ಬೆಳಗಾವಿ ಎಸ್‌ಪಿ ಡಾ. ಸಂಜೀವ ಪಾಟೀಲ್, ಎಎಸ್‌ಪಿ ಮಹಾನಿಂಗ ನಂದಗಾವಿ ಅವರಿಂದ ನಗದು ಚಿನ್ನಾಭರಣ ಕಳೆದುಕೊಂಡ ದೂರುದಾರರಿಗೆ ಹಸ್ತಾಂತರ ಮಾಡಲಾಯಿತು. ಭರ್ಜರಿ ಬೇಟೆಯಾಡಿದ ಬೆಳಗಾವಿ ಜಿಲ್ಲಾ ಪೊಲೀಸರು 2022ರ ಸಾಲಿನಲ್ಲಿ ವಿವಿಧ ಪ್ರಕರಣಗಳ ಪತ್ತೆ ಹಚ್ಚಿ ಕೋಟಿ ಕೋಟಿ ಹಣ ಜಪ್ತಿ ಮಾಡುವ ಮೂಲಕ ಹಣ ಚಿನ್ನಾಭರಣ ಕಳೆದುಕೊಂಡವರ ಪಾಲಿನ ಆಪತ್​ ಬಾಂಧವರಾಗಿದ್ದಾರೆ.


ಕಾರು ಕದ್ದಿದ್ದ ದಂಪತಿ ಅಂದರ್​


ಬೆಂಗಳೂರು: ಕಳ್ಳತನ ಮಾಡಿದ್ದ ಕಾರ್​ನ್ನ ಮನೆಯನ್ನಾಗಿ ಮಾಡಿಕೊಂಡಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದರು. ದಂಪತಿ ದಿನವಿಡೀ ಕಾರ್​ನಲ್ಲಿ ಸುತ್ತಾಡುತ್ತಿದ್ರು. ಮನೆ ಇಲ್ಲದ ಕಾರಣ ದಂಪತಿ ಕಾರ್ ಕಳ್ಳತನ ಮಾಡಿ ಜೈಲುಪಾಲಾಗಿದ್ದಾರೆ. ಯಲಹಂಕ ನಿವಾಸಿಗಳಾದ ಮಂಜುನಾಥ್ (27) ಮತ್ತು ಪತ್ನಿ ವೇದಾವತಿ (25) ಬಂಧಿತರು.


ಇದನ್ನೂ ಓದಿ: Attica Gold: ಚಿನ್ನದಂತಾ ಮಾತನಾಡಿ ಅಟ್ಟಿಕಾ ಗೋಲ್ಡ್ ಮಾಲೀಕನಿಂದ ಮಹಿಳೆಗೆ ಮೋಸ! ಉದ್ಯಮಿ ಅಟ್ಟಿಕಾ ಬಾಬು ಅರೆಸ್ಟ್


ಬಂಧಿತರಿಂದ ಇಟಿಯೋಸ್ ಕಾರ್ ಮತ್ತು ಎರಡು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಮನೆ ತೊರೆದಿದ್ದ ದಂಪತಿಗೆ ಉಳಿದುಕೊಳ್ಳಲು ಸ್ಥಳ ಇರಲಿಲ್ಲ. ಹೀಗಾಗಿ ಕಾರ್ ಕಳ್ಳತನ ಮಾಡಿದ್ದ ದಂಪತಿ ದಿನವಿಡೀ ಸುತ್ತಾಡಿ, ರಾತ್ರಿ ಅದರಲ್ಲಿಯೇ ಉಳಿದುಕೊಳ್ಳುತ್ತಿದ್ದರು.

Published by:ಪಾವನ ಎಚ್ ಎಸ್
First published: