• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Bengaluru: ಪ್ರೇಯಸಿ ಕೊಲೆ ಕೇಸ್​ಗೆ ಟ್ವಿಸ್ಟ್; ವಿಚಾರಣೆಯಲ್ಲಿ ಭಯಾನಕ ಸಂಗತಿ ಬೆಳಕಿಗೆ

Bengaluru: ಪ್ರೇಯಸಿ ಕೊಲೆ ಕೇಸ್​ಗೆ ಟ್ವಿಸ್ಟ್; ವಿಚಾರಣೆಯಲ್ಲಿ ಭಯಾನಕ ಸಂಗತಿ ಬೆಳಕಿಗೆ

ಪ್ರಶಾಂತ್ ಮತ್ತು ನವ್ಯಾ

ಪ್ರಶಾಂತ್ ಮತ್ತು ನವ್ಯಾ

Crime News: ಪ್ರೇಯಸಿಯನ್ನು ಕೊಲೆ ಮಾಡಿದ ಬಳಿಕ ಆತ್ಮಹತ್ಯೆಗೆ ಪ್ರಶಾಂತ್ ಯೋಚಿಸಿದ್ದ. ಆದ್ರೆ ಕೊನೆಗೆ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ.

 • Share this:

ಬೆಂಗಳೂರು: ಹುಟ್ಟುಹಬ್ಬ ಆಚರಿಸಿ ಪ್ರೇಯಸಿಯನ್ನು (Girlfriend) ಕೊಲೆಗೈದ ಪ್ರಕರಣದಲ್ಲಿ ಆರೋಪಿ ವಿಚಾರಣೆ (Investigation) ವೇಳೆ ಭಯಾನಕ ಸತ್ಯ ಬಿಚ್ಚಿಟ್ಟಿದ್ದಾನೆ. ಪ್ರಶಾಂತ್ ಎಂಬಾತ 24 ವರ್ಷದ ನವ್ಯಾಳ ಕತ್ತು ಕೊಯ್ದು ಕೊಲೆ ಮಾಡಿ ಪೊಲೀಸರ ಮುಂದೆ ಶರಣಾಗಿದ್ದನು. ವಿಚಾರಣೆ ವೇಳೆ ಭಯಾನಕ ಸತ್ಯ ಬಿಚ್ಚಿಟ್ಟಿದ್ದಾನೆ. ಆರೋಪಿ ಪ್ರಶಾಂತ್ ಕೊಲೆ‌ ಮಾಡಿದ‌ ಬಳಿಕ ಐದು ಗಂಟೆ ಶವದ ಜೊತೆಯಲ್ಲಿದ್ದನು. ಈ ವೇಳೆ ಮೃತದೇಹವನ್ನು ಪೀಸ್ ಪೀಸ್ ಮಾಡಿ ಬಿಸಾಡಲು ಯೋಚಿಸಿದ್ದನಂತೆ. ಹೀಗಾಗಿ ಯೂಟ್ಯೂಬ್​ನಿಂದ ವಿಡಿಯೋ ಸಹ ವೀಕ್ಷಣೆ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.


ಪೀಸ್ ಪೀಸ್ ಮಾಡಿದ ಬಳಿಕ ಚೀಲದಲ್ಲಿ ಹಾಕಿಕೊಂಡು ಬಿಸಾಡಲು ಸಂಚು ರೂಪಿಸಿದ್ದನು. ಆದ್ರೆ ಮೃತದೇಹ ಪೀಸ್ ಪೀಸ್ ಮಾಡಲು ಮಚ್ಚು ಸಿಗದೇ ಪ್ರಶಾಂತ್ ಸುಮ್ಮನಾಗಿದ್ದನು. ಹೀಗಂತ ವಿಚಾರಣೆ ವೇಳೆ ಪೊಲೀಸರ ಮುಂದೆ ಪ್ರಶಾಂತ್ ಬಾಯಿಬಿಟ್ಟಿದ್ದಾನೆ.


ಠಾಣೆ ಮೆಟ್ಟಿಲೇರಿದ್ದ ಪ್ರೇಮ್ ಕಹಾನಿ


ಪ್ರಶಾಂತ್ ಮತ್ತು ನವ್ಯಾ ಪ್ರೇಮ್ ಕಹಾನಿ ಈ ಹಿಂದೆಯೇ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ನವ್ಯಾ ತಾಯಿ‌ ಪ್ರಶಾಂತ್ ವಿರುದ್ಧ ದೂರು ದಾಖಲಿಸಿದ್ದರು. ಮಗಳಿಗೆ ಪ್ರಶಾಂತ್ ಎಂಬಾತ ಕಿರುಕುಳ ಕೊಡುತ್ತಿದ್ದಾನೆ ಎಂದು ದೂರು ದಾಖಲಿಸಿದ್ದರು.


ಕೋರಮಂಗಲ ಪೊಲೀಸರು ಪ್ರಶಾಂತ್ ಕರೆದು ಬುದ್ಧಿವಾದ ಹೇಳಿದ್ದರು. ಈ ವೇಳೆ ನವ್ಯಾ ಸಹವಾಸಕ್ಕೆ ಹೋಗೋದಿಲ್ಲ ಎಂದಿದ್ದನು ಹೇಳಿದ್ದನು. ಆದರೆ ಪ್ರೀತಿಯಲ್ಲಿ ಜಗಳ ವಿರಹ ಎಲ್ಲಾ ಮಾಮೂಲಿ ಅಂತ ಇಬ್ಬರು ಮತ್ತೆ ಪರಸ್ಪರ ಸಂಪರ್ಕಕ್ಕೆ ಬಂದಿದ್ದರು.
ಗೆಳತಿಯನ್ನು ಹುಚ್ಚನಂತೆ ಪ್ರೀತಿ ಮಾಡ್ತಿದ್ದ!


ನವ್ಯಾಳನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ಪ್ರಶಾಂತ್ ಎದೆಯ ಮೇಲೆ ಗೆಳತಿಯ ಫೋಟೋ ಸಹ ಹಾಕಿಸಿಕೊಂಡಿದ್ದನು. ಮೈ ಮೇಲೆಲ್ಲಾ ನವ್ಯಾ ಎಂದು ಹಚ್ಚೆ ಸಹ ಹಾಕಿಕೊಂಡಿದ್ದನು. ಬರ್ತ್ ಡೇ ಮಾಡುತ್ತೇನೆಂದು ಕರೆಸಿ ಕೊಲೆ ಮಾಡಿ ಜೈಲು ಸೇರಿದ್ದಾನೆ.


ಇದನ್ನೂ ಓದಿ:  Congress Candidate: ಕೋಲಾರ ಕಾಂಗ್ರೆಸ್​ ಕಾರ್ಯಕರ್ತರ ಆಕ್ರೋಶಕ್ಕೆ ಚೇರ್​ಗಳು ಪೀಸ್​ ಪೀಸ್​! ಅಸಲಿಗೆ ಆಗಿದ್ದೇನು?

top videos


  ಪ್ರೇಯಸಿಯನ್ನು ಕೊಲೆ ಮಾಡಿದ ಬಳಿಕ ಆತ್ಮಹತ್ಯೆಗೆ ಪ್ರಶಾಂತ್ ಯೋಚಿಸಿದ್ದ. ಆದ್ರೆ ಕೊನೆಗೆ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ.

  First published: