ಹುಬ್ಬಳ್ಳಿ: ರೈಲಿನಿಂದ (Rail) ಬಿದ್ದು ಯುವಕ (Young Man) ಸಾವ್ನಪ್ಪಿರೋ ಘಟನೆ ಹುಬ್ಬಳ್ಳಿ (Hubballi) ಹೊರವಲಯದಲ್ಲಿ ನಡೆದಿದೆ. ಆದರೆ ಯುವಕನ ಸಾವಿನ (Death) ಬಗ್ಗೆ ಸಂಬಂಧಿಗಳು (Relatives) ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತ ದುರ್ದೈವಿಯನ್ನು ನಗರದ ಗಿರಣಿಚಾಳದ ನಿವಾಸಿ ವಿರೇಶ ಚಿಕ್ಕತುಂಬಳ (20) ಎಂದು ಗುರುತಿಸಲಾಗಿದೆ. ವಾಸ್ಕೋ ರೈಲಿನಲ್ಲಿ (Vasco Train) ಗೋವಾಕ್ಕೆ (Goa) ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ. ಗೆಳೆಯರ (Friends) ಜೊತೆ ಗೋವಾಕ್ಕೆ ಹೋಗೋದಾಗಿ ನೂರು ರೂಪಾಯಿ (100 Rupees) ಪಡೆದುಕೊಂಡು ಹೊರಟು ಹೋಗಿದ್ದ ವೀರೇಶ್, ಬೆಳಿಗ್ಗೆ ಆಗುವುದರೊಳಗೆ ಹೆಣವಾಗಿದ್ದಾನೆ.
ಗೆಳೆಯನನ್ನು ರಕ್ಷಿಸಲು ಹೋಗಿ ಸಾವು
ರೈಲು ಹತ್ತಿ ಗೋವಾ ಕಡೆ ಮುಖಮಾಡಿದ ಕೆಲವೇ ನಿಮಿಷಗಳಲ್ಲಿ ಸಾವಿಗೀಡಾಗಿದ್ದಾನೆ. ಹುಬ್ಬಳ್ಳಿಯ ಉಣಕಲ್ - ಅಮರಗೋಳದ ನಡುವೆ ಸಾವನ್ನಪ್ಪಿದ್ದಾನೆ. ವೀರೇಶ ಮತ್ತು ಆತನ ಗೆಳೆಯರಿದ್ದ ಇದ್ದ ಬೋಗಿ ಪ್ರಯಾಣಿಕರಿಂದ ಭರ್ತಿಯಾಗಿತ್ತು ಎನ್ನಲಾಗಿದೆ. ಹೀಗಾಗಿ ವೀರೇಶ್ ಮತ್ತು ಆತನ ಸ್ನೇಹಿತರು ಬಾಗಿಲಲ್ಲೇ ನಿಂತಿದ್ರು. ವೀರೇಶ್ ಸ್ನೇಹಿತ ಗೋಪಾಲ ಗುಟ್ಕಾ ಉಗಿಯಲೆಂದು ತಲೆಯನ್ನು ರೈಲಿನಿಂದ ಹೊರಗೆ ಹಾಕಿದ್ದಾನೆ. ಈ ವೇಳೆ ಆಯತಪ್ಪಿ ಬೀಳ್ತಿದ್ದ ಗೋಪಾಲನ ರಕ್ಷಣೆಗೆ ವೀರೇಶ್ ಮುಂದಾಗಿದ್ದಾನೆ. ಗೋಪಾಲ್ ಜೊತೆ ವೀರೇಶ್ ನೂ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ಬಿದ್ದ ರಭಸಕ್ಕೆ ವೀರೇಶ್ ಚಿಕ್ಕತುಂಬಳ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ವೀರೇಶ್ ಸಾವಿನ ಬಳಿಕ ಸ್ನೇಹಿತರು ನಾಪತ್ತೆ
ಗೋಪಾಲನನ್ನು ರೈಲ್ವೆ ಪೊಲೀಸರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ವೀರೇಶ್ ಶವದ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರ ಸುಪರ್ದಿಗೆ ಒಪ್ಪಿಸಿದ್ದರು. ಇದೆಲ್ಲದರ ಬೆಳವಣಿಗೆಯ ನಡುವೆ ಗಾಯಗೊಂಡಿದ್ದ ಗೋಪಾಲ ಕಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಟು ಹೋಗಿದ್ದಾನೆ. ಆತನ ಜೊತೆ ಗೋವಾಕ್ಕೆ ಹೋಗ್ತಿದ್ದ ಇನ್ನಿಬ್ಬರು ಸ್ನೇಹಿತರು ನಾಪತ್ತೆಯಾಗಿದ್ದಾರೆ. ಹೀಗಾಗಿ ವೀರೇಶ್ ಸಾವಿನ ಬಗ್ಗೆ ಪೋಷಕರು ಸಂಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Monkey: ಅನ್ನ ಹಾಕಿದವರ ಮೇಲೆಯೇ ಅಟ್ಯಾಕ್! ಕೊನೆಗೂ ಬಂಧಿಯಾಯ್ತು ಹುಚ್ಚು ಮಂಗ
ಸ್ನೇಹಿತರ ಮೇಲೆ ಮೃತನ ಪೋಷಕರ ಅನುಮಾನ
ಸ್ನೇಹಿತರೇ ರೈಲಿನಿಂದ ದಬ್ಬಿ ಕೊಲೆ ಮಾಡಿರೋ ಸಾಧ್ಯತೆಗಳಿವೆ ಅಂತ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ನಂಬಿಸಿ ಗೋವಾಕ್ಕೆ ಕರೆದೊಯ್ದು ಈ ರೀತಿ ಮಾಡಿದ್ದಾರೆ. ನಮಗೆ ಫೋನ್ ಮಾಡಿದವನು ಪತ್ತೆಯಿಲ್ಲ. ನಾಲ್ಕು ಜನ ಸ್ನೇಹಿತರ ಪೈಕಿ ಇಬ್ಬರು ಮಾತ್ರ ಸಿಕ್ಕಿದ್ದಾರೆ. ಉಳಿದ ಇಬ್ಬರು ಎಲ್ಲಿದ್ದಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲ. ವೀರೇಶ್ ನ ಗೆಳೆಯರ ದೂರವಾಣಿ ಸಂಭಾಷಣೆ ಕೇಳಿಸಿಕೊಂಡಾಗ ಅನುಮಾನ ಬರುತ್ತೆ.
ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹ
ಈ ಕುರಿತು ಸೂಕ್ತ ತನಿಖೆ ನಡೆಸಬೇಕು, ವೀರೇಶ್ ಸ್ನೇಹಿತರನ್ನು ವಿಚಾರಣೆಗೆ ಗುರಿಪಿಡಿಸುವಂತೆ ಪೋಷಕರು ಆಗ್ರಹಿಸಿದ್ದಾರೆ. ಸೂಕ್ತ ತನಿಖೆ ಮಾಡಿ ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಪೋಷಕರು ಅಲವತ್ತುಕೊಂಡಿದ್ದಾರೆ.
ಪೊಲೀಸರಿಂದ ತನಿಖೆ ಆರಂಭ
ವೀರೇಶ್ ಸ್ನೇಹಿತರು ಯಾರೆಂಬ ಬಗ್ಗೆ ಪೋಷಕರಿಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಗುಟ್ಕಾ ಉಗಿಯೋಕೆ ಹೋಗಿ ಆಯತಪ್ಪಿ ಬಿದ್ದ ಗೋಪಾಲನ ಮಾಹಿತಿ ಮಾತ್ರ ಸಿಕ್ಕಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಇತ್ತೀಚಿಗಷ್ಟೇ ರೈಲಲ್ಲಿ ಹುಚ್ಚಾಟ ಮಾಡಿದ್ದ ಯುವಕ
ಮೊನ್ನೆಯಷ್ಟೇ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಬರ್ತಿದ್ದ ರೈಲಿನಲ್ಲಿ ಯುವಕನೋರ್ವ ಹುಚ್ಚಾಟ ಮಾಡಿದ್ದ. ಪ್ರಾಣದ ಭೀತಿಯೇ ಇಲ್ಲದೆ ಬಾಗಿಲಲ್ಲಿ ನಿಂತು ಮಂಗನಂತೆ ಜಿಗಿದು, ಗಿಡದಲ್ಲಿನ ಎಲೆ ಕಿತ್ತೋ ಇತ್ಯಾದಿ ಮಾಡಿದ್ದ. ಯುವಕನ ಹುಚ್ಚಾಟಕ್ಕೆ ಸಹ ಪ್ರಯಾಣಿಕರೇ ತಬ್ಬಿಬ್ಬಾಗಿ, ಬುದ್ಧಿವಾದ ಹೇಳೋ ಪ್ರಯತ್ನ ಮಾಡಿದ್ದರು.
ಇದನ್ನೂ ಓದಿ: Hubballi: ಚಲಿಸುತ್ತಿದ್ದ ರೈಲಿನಲ್ಲಿ ಯುವಕನ ಹುಚ್ಚಾಟ: ಮಂಗನಂತೆ ಮಾಡೋದನ್ನ ನೋಡಿ ಪೆಚ್ಚಾದ ಜನ
ಇದರ ಬೆನ್ನ ಹಿಂದೆಯೇ ರೈಲು ಬೋಗಿಯ ಬಾಗಿಲಲ್ಲಿ ನಿಂತು ಗುಟ್ಕಾ ಉಗಿಯೋಕೆ ಹೋಗಿ ಆಯತಪ್ಪಿ ಬೀಳುತ್ತಿದ್ದ ಸ್ನೇಹಿತನನ್ನು ರಕ್ಷಿಸೋಕೆ ಹೋಗಿ ಯುವಕ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರೋ ಪೋಷಕರು, ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ