ಪುತ್ತೂರು (ಡಿ.09): ಟಿಪ್ಪು ಜಯಂತಿ (Tipu Jayanti) ಆಚರಣೆ ನಿಲ್ಲಿಸಿದ್ರು. ಬಳಿಕ ಶಾಲಾ ಪಠ್ಯ ಪುಸ್ತಕಗಳಲ್ಲಿ (Text Book) ಟಿಪ್ಪು ಪಾಠ ಕೈಬಿಡಲಾಯ್ತು. ಅಷ್ಟೇ ಅಲ್ಲದೇ ಟಿಪ್ಪು ಎಕ್ಸ್ಪ್ರೆಸ್ (Tipu) ಹೆಸರನ್ನು ಬಿಡದೆ ಬದಲಾಯಿಸಿದ್ರು ಇದೀಗ ಟಿಪ್ಪು ಆಡಳಿತದ ಮಾಡುತ್ತಿದ್ದ ಕಾಲದಲ್ಲಿ ಆರಂಭಗೊಂಡಿದ್ದ ಪೂಜೆಗೂ ಬ್ರೇಕ್ (Break) ಬಿದ್ದಿದೆ. ಟಿಪ್ಪುವಿನ ಕಾಲದ ದೀವಟಿಗೆ ಸಲಾಂಗೆ (Deevatige Salam) ರಾಜ್ಯ ಧಾರ್ಮಿಕ ಪರಿಷತ್ ನಿಷೇಧಿಸಿದೆ.
ದೀವಟಿಗೆ ಸಲಾಂ ಪೂಜೆಗೆ ಬ್ರೇಕ್
ಟಿಪ್ಪು ರಾಜ್ಯಾಡಳಿತ ಮಾಡುತ್ತಿದ್ದ ಕಾಲದಿಂದ ಈ ಪೂಜೆ ಆರಂಭಗೊಂಡಿತ್ತು. ರಾಜ್ಯದ ಎಲ್ಲಾ ಪ್ರಸಿದ್ಧ ದೇವಾಲಯಗಳಲ್ಲಿ ದೀವಟಿಗೆ ಸಲಾಂ ಪೂಜೆ ನಡೆಯುತ್ತಿತ್ತು. ದೇವಸ್ಥಾನದ ಸಂಧ್ಯಾ ಪೂಜೆಯಲ್ಲಿ ಈ ಪೂಜೆಯನ್ನು ಮಾಡಲಾಗಿತ್ತು. ಟಿಪ್ಪು ಬಲತ್ಕಾರವಾಗಿ ದೇವಸ್ಥಾನಗಳಲ್ಲಿ ದೀವಟಿಗೆ ಸಲಾಂ ಪೂಜೆ ಆರಂಭಿಸಿದ್ದರಂತೆ. ಇದೀಗ ದೇವಾಲಯಗಳಲ್ಲಿ ದೀವಟಿಗೆ ಪೂಜೆಗೆ ನಡೆಸದಂತೆ ಸೂಚಿಸಲಾಗಿದೆ.
ಸಂಧ್ಯಾ ಕಾಲದಲ್ಲಿ ಮೂಲ ದೇವರಿಗೆ ಆರತಿ
ಮಂಡ್ಯ ಶ್ರೀ ಚಲುವ ನಾರಾಯಣಸ್ವಾಮಿ ದೇವಾಲಯದಲ್ಲಿ ಪ್ರಾಚೀನ ಕಾಲದಿಂದಲೂ ಸಂಧ್ಯಾ ಕಾಲದಲ್ಲಿ ಮೂಲ ದೇವರಿಗೆ ಆರತಿ ಮಾಡಲಾಗುತ್ತಿತ್ತು. ಇದನ್ನು ಟಿಪ್ಪು ಸುಲ್ತಾನ್ ಆಳ್ವಿಕೆ ಅವಧಿಯಲ್ಲಿ ಟಿಪ್ಪು ಆದೇಶದ ಮೇರೆಗೆ 'ದೀವಟಿಗೆ ಸಲಾಂ' ಎಂದು ಹೆಸರು ಬದಲಿಸಲಾಗಿತ್ತು ಎನ್ನಲಾಗಿದೆ.
ಟಿಪ್ಪು ಆದೇಶದ ಮೇರೆಗೆ ಬದಲಾಗಿತ್ತು ಹೆಸರು
ದೀವಟಿಗೆ ಪೂಜೆಯನ್ನು ರಾಜ್ಯವನ್ನಾಳುವ ರಾಜನ ಪರವಾಗಿ ಆಚರಣೆ ಮಾಡುತ್ತಿದ್ರು. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಪುತ್ತೂರು ಮಹಾಲಿಂಗೇಶ್ವರ ಮೊದಲಾದ ದೇವಸ್ಥಾನಗಳಲ್ಲಿ ಇಂದಿಗೂ ನಡೆದುಕೊಂಡು ಬಂದ ಪೂಜೆಯಾಗಿದೆ. ಇನ್ನು ಮುಂದೆ ಈ ದೀವಟಿಗೆ ಸಲಾಂ ಪೂಜೆ ನಡೆಸದಂತೆ ಧಾರ್ಮಿಕ ಪರಿಷತ್ ನಿಂದ ಸುತ್ತೋಲೆ ಹೊರಡಿಸಿದೆ.
ದೀವಟಿಗೆ ಸಲಾಂ ಬದಲು ದೀಪ ನಮಸ್ಕಾರ ಪೂಜೆ
ದೀವಟಿಗೆ ಸಲಾಂ ಬದಲು ಸಂಧ್ಯಾಕಾಲದಲ್ಲಿ ದೀಪ ನಮಸ್ಕಾರ ಪೂಜೆ ನೆರವೇರಿಸಲು ದೇವಸ್ಥಾನಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯವನ್ನಾಳುವ ರಾಜ, ಮಂತ್ರಿ ಮತ್ತು ಪ್ರಜೆಗಳ ಒಳಿತಿಗಾಗಿ ಈ ದೀಪ ನಮಸ್ಕಾರ ಪೂಜೆ ನಡೆಯಲಿದೆ. ರಾಜ್ಯ ಧಾರ್ಮಿಕ ಪರಿಷತ್ ಮುಜರಾಯಿ ಇಲಾಖೆ ಎನ್ನುವ ದೀವಟಿಗೆ ಸಲಾಂ ಹೆಸರನ್ನೂ ಬದಲಾಯಿಸಿದ್ದು ಈ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾಹಿತಿ ನೀಡಿದೆ.
ಟಿಪ್ಪು ನಿಜ ಕನಸುಗಳು ಪುಸ್ತಕ
ಟಿಪ್ಪು ನಿಜ ಕನಸುಗಳು ಪುಸ್ತಕ ಮಾರಾಟ ಹಾಗೂ ಹಂಚಿಕೆಗೆ ನೀಡಿದ್ದ ತಡೆಯಾಜ್ಞೆಯನ್ನು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ತೆರವುಗೊಳಿಸಿದೆ. ಈ ಮೂಲಕ ‘ಟಿಪ್ಪು ನಿಜ ಕನಸುಗಳು’ ಪುಸ್ತಕ ಮಾರಾಟಕ್ಕೆ ಗ್ರೀನ್ಸಿಗ್ನಲ್ ಸಿಕ್ಕಿದೆ. ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ರಚಿಸಿದ ಟಿಪ್ಪು ನಿಜ ಕನಸುಗಳು ಪುಸ್ತಕ ಮಾರಾಟಕ್ಕೆ ಹಿಂದೆ ಇದೇ ಸಿಟಿ ಸಿವಿಲ್ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ವಿಧಿಸಿತ್ತು.
ಇದನ್ನೂ ಓದಿ: Book Launch: ಟಿಪ್ಪು ಕ್ರೂರಿ, ಆತನ ಜಯಂತಿ ಯಾಕೆ ಮಾಡ್ಬೇಕು? ಟಿಪ್ಪು ನಿಜ ಕನಸುಗಳು ಪುಸ್ತಕ ಬಿಡುಗಡೆ ಮಾಡಿ S L ಭೈರಪ್ಪ ಭಾಷಣ
ನ. 21ರಂದು ಪುಸ್ತಕ ಮಾರಾಟಕ್ಕೆ ತಡೆ
ವಿವಾದಿತ ‘ಟಿಪ್ಪು ನಿಜ ಕನಸುಗಳು’ ಪುಸ್ತಕ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ರಫೀವುಲ್ಲಾ.ಬಿ.ಎಸ್ ಕೋರ್ಟ್ನಲ್ಲಿ ದಾವೆ ಹೂಡಿದ್ದರು. ಬಳಿಕ ಕೋರ್ಟ್ ನವೆಂಬರ್ 21ರಂದು ಪುಸ್ತಕ ಮಾರಾಟ, ಹಂಚಿಕೆಗೆ ಮಧ್ಯಂತರ ತಡೆ ನೀಡಿತ್ತು. ಆದ್ರೆ, ಇಂದು (ಡಿಸೆಂಬರ್ 08) ಪುಸ್ತಕಕ್ಕೆ ನಿರ್ಬಂಧ ಕೋರಿದ್ದ ಮಧ್ಯಂತರ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಅಲ್ಲದೇ ಪುಸ್ತಕ ಮಾರಾಟ ಹಾಗೂ ಹಂಚಿಕೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ ಆದೇಶ ಹೊರಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ