• Home
  • »
  • News
  • »
  • state
  • »
  • Women Death: ಹೆರಿಗೆ ಬಳಿಕ ಮಗುವನ್ನು ಕಣ್ತುಂಬಿಕೊಳ್ತಿದ್ದಂತೆ ಬಾಣಂತಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದ್ರು ಕುಟುಂಬಸ್ಥರು

Women Death: ಹೆರಿಗೆ ಬಳಿಕ ಮಗುವನ್ನು ಕಣ್ತುಂಬಿಕೊಳ್ತಿದ್ದಂತೆ ಬಾಣಂತಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದ್ರು ಕುಟುಂಬಸ್ಥರು

ಮೃತ ಹರ್ಷಿತಾ

ಮೃತ ಹರ್ಷಿತಾ

ಆಸ್ಪತ್ರೆಗೆ ಕರೆತಂದ ಒಂದು ಗಂಟೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಹರ್ಷಿತಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದಾದ ಕೆಲವೇ ಸಮಯದಲ್ಲಿ ಹರ್ಷಿತಾ ಆರೋಗ್ಯ ಬಿಗಡಾಯಿಸಿದ್ದು ಕೂಡಲೇ ಮೈಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಸೂಚಿಸಿದ್ದಾರೆ, ಆದ್ರೆ ಮಾರ್ಗಮಧ್ಯೆಯೇ ಹರ್ಷಿತಾ ಪ್ರಾಣ ಹೋಗಿದೆ.

ಮುಂದೆ ಓದಿ ...
  • Share this:

ಕೊಡಗು (ಸೆ. 27) : ತಾಯಿ (Mother) ಮಡಿಲಲ್ಲಿ ಪ್ರೀತಿ ವಾತ್ಸಲ್ಯದಿಂದ ಬೆಳೆಯಬೇಕಾಗಿದ್ದ ಪುಟ್ಟ ಕಂದಮ್ಮ (Baby) ಕಣ್ಬಿಟ್ಟು ಪ್ರಪಂಚ ನೋಡುವ ಮುನ್ನವೇ ತಾಯಿಯನ್ನು ಕಳೆದುಕೊಂಡು ಅನಾಥವಾಗಿದೆ. 9 ತಿಂಗಳು ತನ್ನ ಗರ್ಭದಲ್ಲಿ ಬೆಳೆಸಿದ ಹೆತ್ತ ತಾಯಿ ಕಂದನನ್ನು ನೋಡಿದ ಕೆಲವೇ ಗಂಟೆಗಳಲ್ಲಿ ಇಹಲೋಕ ತ್ಯಜಿಸಿದ್ದಾಳೆ. ಇಂತಹ ಕರುಳು ಹಿಂಡುವ ಘಟನೆಗೆ ವೈದ್ಯರ ನಿರ್ಲಕ್ಷ್ಯವೇ (Doctor's Negligence) ಕಾರಣ ಅಂತ ಮೃತ ಬಾಣಂತಿಯ ಸಂಬಂಧಿಕರು (Relatives) ಆರೋಪಿಸಿದ್ದಾರೆ.


ಹರ್ಷಿತಾಗೆ ಅವಧಿಗೂ ಮುನ್ನವೇ ಹೆರಿಗೆ ನೋವು


ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪದ ನಿವಾಸಿ ಹರ್ಷಿತಾಗೆ ಅವಧಿಗೂ ಮುನ್ನವೇ ಹೆರಿಗೆ ನೋವು ಕಾಣಿಸಿಕೊಂಡಿತ್ತಂತೆ. ಹೀಗಾಗಿ ಪತಿ ಪ್ರದೀಪ್ ಕೂಡಲೇ ಮಧ್ಯರಾತ್ರಿ ಸಮೀಪದ ಮಾದಾಪುರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪರಿಶೀಲನೆ ನಡೆಸಿದ ವೈದ್ಯರು ಗರ್ಭಿಣಿಗೆ ತೀವ್ರ ರಕ್ತಸ್ರಾವ ಆಗುತ್ತಿದೆ. ಕೂಡಲೇ ಮಡಿಕೇರಿಗೆ ಹೋಗಿ ಎಂದು ಹೇಳಿದ್ದಾರೆ.


ಮಧ್ಯರಾತ್ರಿ ಮಡಿಕೇರಿ ಆಸ್ಪತ್ರೆಗೆ ದಾಖಲು


ಈ ಹಿನ್ನೆಲೆಯಲ್ಲಿ ರಾತ್ರಿ ಒಂದುವರೆ ಗಂಟೆಯಲ್ಲಿ ಪತ್ನಿ ಹರ್ಷಿತಾನನ್ನು ಪ್ರದೀಪ್ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಗೆ ಕರೆತಂದ ಒಂದು ಗಂಟೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಹರ್ಷಿತಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮನೆಯವರು ಕೂಡ ವಂಶೋದ್ಧಾರಕ ಬಂದ ಅಂತ ಖುಷಿಯಾಗಿದ್ದಾರೆ. ಆದಾದ ಕೆಲವೇ ಸಮಯದಲ್ಲಿ ಹರ್ಷಿತಾ ಆರೋಗ್ಯ ಬಿಗಡಾಯಿಸಿದ್ದು ಕೂಡಲೇ ಮೈಸೂರು ಆಸ್ಪತ್ರೆಗೆ ಕರೆದು ಕೊಂಡು ಹೋಗಲು ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.


ಮೈಸೂರಿಗೆ ಕರೆದುಕೊಂಡು ಹೋಗ್ತಿದ್ದ ವೇಳೆ ಸಾವು


ಮೈಸೂರಿಗೆ ಕರೆದೊಯ್ಯವಷ್ಟರಲ್ಲಿ ಬಾಣಂತಿ ಹರ್ಷಿತಾ ಹಸುಗೂಸು ಬಿಟ್ಟು ಇಹಲೋಕ ತ್ಯಜಿಸಿರುವುದಾಗಿ ಮೈಸೂರಿನ ಚಲುವಾಂಬ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ ಎಂದು ಹರ್ಷಿತಾ ಪತಿ ಪ್ರದೀಪ್ ಹೇಳಿದ್ದಾರೆ.


ಇದನ್ನೂ ಓದಿ: Basavaraj Bommai: ಪೊಲೀಸರು PFI ಮತ್ತು SDPI ಮುಖಂಡರ ಮನೆ ಮೇಲೆ ದಾಳಿ ನಡೆಸಿಲ್ಲ ಎಂದ್ರು ಸಿಎಂ ಬೊಮ್ಮಾಯಿ


ವೈದ್ಯರ ನಿರ್ಲಕ್ಷ್ಯದಿಂದ ಪತ್ನಿ ಸಾವು- ಪ್ರದೀಪ್​


ನನ್ನ ಪತ್ನಿ ಆರೋಗ್ಯವಾಗಾದ್ದಳು, ಹೆರಿಗೆಯೂ ಸಹಜವಾಗಿತ್ತು. ಆದರೆ ವೈದ್ಯರ ನಿರ್ಲಕ್ಷ್ಯದಿಂದ ನನ್ನ ಪತ್ನಿ ಮೃತಪಟ್ಟಿದ್ದಾಳೆ ಎಂದು  ಪ್ರದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ವೆಂಕಟೇಶ್ ಇದನ್ನು ಅಲ್ಲಗೆಳೆದಿದ್ದಾರೆ.


ಮೃತ ಬಾಣಂತಿ ಪತಿ


ಆರೋಪ ಅಲ್ಲಗೆಳೆದ ಆರೋಗ್ಯ ಇಲಾಖೆ


ಮೃತಪಟ್ಟ ಮಹಿಳೆ ಬಾಣಂತಿ ಇರುವ ಸಂದರ್ಭ ಸರಿಯಾಗಿ ಆರೋಗ್ಯ ಪರಿಶೀಲನೆ ಮಾಡಿಸಿಲ್ಲ. ಅವರಿಗೆ ಜಾಂಡೀಸ್ ಇರುವುದು ಹೆರಿಗೆ ಸಂದರ್ಭ ಗೊತ್ತಾಗಿದೆ. ಹೆರಿಗೆ ಬಳಿಕ ರಕ್ತಸ್ರಾವ ಹೆಚ್ಚಾಗಿದನ್ನು ಮಹಿಳೆಯ ಪತಿ ಮತ್ತು ಪೋಷಕರಿಗೂ ಹೇಳಿದ್ವಿ. ಆ ಬಳಿಕ ಮೈಸೂರು ಆಸ್ಪತ್ರೆಗೆ ಅವರನ್ನು ಕಳುಹಿಸಲಾಯಿತು.


ಇದನ್ನೂ ಓದಿ: Sudha Murthy: ರಾಜಮಾತೆ ಕಾಲಿಗೆ ನಮಸ್ಕರಿಸಿದ ಸುಧಾ ಮೂರ್ತಿ; ನೀವು ಮಾಡಿದ್ದು ಸರೀನಾ ಎಂದು ನೆಟ್ಟಿಗರ ಪ್ರಶ್ನೆ!


ಯಾರ ತಪ್ಪಿಗೋ ಗೊತ್ತಿಲ್ಲ ಆದ್ರೆ ಅನಾಥಗಿದ್ದು ಮಾತ್ರ ಪುಟ್ಟ ಕಂದ


ಆ ವೇಳೆ ಕೂಡ ನಮ್ಮ ಆಸ್ಪತ್ರೆ ವೈದ್ಯರು ಜೊತೆಗಿದ್ದರು. ಆದರೆ ಆಸ್ಪತ್ರೆ ಸೇರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಚಿಕಿತ್ಸೆ ನೀಡಿದ ವೈದ್ಯರ ಬಳಿ ವರದಿ ಕೇಳಲಾಗಿದೆ. ಅಲ್ಲದೇ ಈ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದ್ದು, ಒಂದು ವೇಳೆ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯವೇನಾದರೂ ಇದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಹೆಚ್‍ಓ ಡಾ. ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ. ಏನೇ ಆಗಲಿ ವೈದ್ಯರ ನಿರ್ಲಕ್ಷ್ಯವೋ ಅಥವಾ ಮನೆಯವರ ನಿರ್ಲಕ್ಷ್ಯವೋ ಏನು ತಪ್ಪು ಮಾಡದ ತಾಯಿ ತನ್ನ ಜೀವ ಕಳೆದು ಕೊಂಡು ಮಗುವನ್ನು ಅನಾಥ ಮಾಡಿ ಹೋಗಿರುವುದು ಮಾತ್ರ ಕರುಳ ಹಿಂಡೋ ವಿಷಯ

Published by:ಪಾವನ ಎಚ್ ಎಸ್
First published: