HOME » NEWS » State » THE WILDLIFE ASSASSINS HOME WAS RAIDED BY FOREST OFFICERS SESR CSB

ವನ್ಯಜೀವಿ ಹಂತಕನ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ: ಗನ್ ಸಹಿತ ಸಾಮಗ್ರಿ ವಶ; ಆರೋಪಿ ಪರಾರಿ

ಕಳೆದ ಡಿ . 27  ರಂದು ಕಿತ್ತೂರು ಅರಣ್ಯ ವಲಯದ ಕುಲವಳ್ಳಿ ಅರಣ್ಯದಲ್ಲಿ ಜಿಂಕೆ ಭೇಟಿಯಾಡುತ್ತಿದ್ದ ನಾಲ್ವರು ಹಂತಕರ ಪೈಕಿ ಇಬ್ಬರು ತಪ್ಪಿಸಿಕೊಂಡಿದ್ದರು‌.

news18-kannada
Updated:January 4, 2021, 2:28 PM IST
ವನ್ಯಜೀವಿ ಹಂತಕನ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ: ಗನ್ ಸಹಿತ ಸಾಮಗ್ರಿ ವಶ; ಆರೋಪಿ ಪರಾರಿ
ದಾಳಿಯ ಚಿತ್ರಣ
  • Share this:
ಬೆಳಗಾವಿ(ಜ. 4)- ಹವ್ಯಾಸಿ ವನ್ಯಜೀವಿ ಹಂತಕ ಮೆಹಮೂದ್ ಅಲಿಖಾನ್(50) ಮನೆ ಮೇಲೆ ಅರಣ್ಯಾಧಿಕಾರಿಗಳು ಇಂದು ಬೆಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ.  ನೆಹರೂ ನಗರದ ಮನೆ  ಮೇಲೆ   ನಾಗರಗಾಳಿ ಮತ್ತು ಬೆಳಗಾವಿ ಉಪವಿಭಾಗದ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿತು. ಕಳೆದ ಡಿ . 27  ರಂದು ಕಿತ್ತೂರು ಅರಣ್ಯ ವಲಯದ ಕುಲವಳ್ಳಿ ಅರಣ್ಯದಲ್ಲಿ ಜಿಂಕೆ ಭೇಟಿಯಾಡುತ್ತಿದ್ದ ನಾಲ್ವರು ಹಂತಕರ ಪೈಕಿ ಇಬ್ಬರು ತಪ್ಪಿಸಿಕೊಂಡಿದ್ದರು‌. ತಪ್ಪಿಸಿಕೊಂಡ ಇಬ್ಬರ ಪೈಕಿ ಮೆಹಮೂದ್ ಮನೆ ಮೇಲೆ  ಎಸಿಎಪ್ ಸಿ. ಜಿ. ಮಿರ್ಜಿ ನೇತೃತ್ವದಲ್ಲಿ  ಬೃಹತ್ ದಾಳಿ ನಡೆಯಿತು. ದಾಳಿ ವೇಳೆ  ಚಿಗರೆ ಕೊಂಬು, ಪಾಯಿಂಟ್ 315 ರೈಫಲ್, ಒಂದು (ಟೆಲಿಸ್ಕೋಪ್) ದೂರದರ್ಶಕ, ಎರಡು ಚಾಕುಗಳು, 2 ಟಾರ್ಚ್, ವಾಹನಕ್ಕೆ ಅಳವಡಿಸುವ ಟಾರ್ಚ್, 2 ವಾಕಿ ಟಾಕಿ, 26  ಜೀವಂತ ಬುಲೆಟ್​ಗಳು, ಡಿಬಿಎಲ್  ಸೇರಿದಂತೆ ವನ್ಯಬೇಟೆಗೆ ಬೇಕಾದ ಸಾಮಗ್ರಿಗಳು ಈತನ ಮನೆಯಲ್ಲಿ ತಪಾಸಿಸಿದಾಗ ಸಿಕ್ಕಿವೆ. ದಾಳಿ ವೇಳೆ ಆರೋಪಿತ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ.

ಪರೀಕ್ಷಾರ್ಥಿ ಎಸಿಎಫ್ ಚಂದ್ರಶೇಖರ ಪಾಟೀಲ, ಗೋಲಿಹಳ್ಳಿ ಆರ್ ಎಫ್ ಓ ಶ್ರೀಕಾಂತ್ ಕಡೋಲಕರ, ಬೆಳಗಾವಿ ಆರ್ ಎಫ್ ಓ ಶಿವಾನಂದ ಮಗದುಮ, ಡಿಆರ್ ಎಫ್ ಓ ಸಂಜಯ ಮಗದುಮ, ಡಿಆರ್ ಎಫ್ ಓ ಮಾಧುರಿ ದಳವಾಯಿ, ವಿನಯ ಗೌಡರ, ಅಜೀಜ್ ಮುಲ್ಲಾ, ಗಿರೀಶ್ ಮೆಕ್ಕೇದ, ಪ್ರವೀಣ ದೂಳೆಪ್ಪಗೋಳ, ನವೀನ ಹಂಚಿನಮನಿ ಇತರರು ಉಪಸ್ಥಿತರಿದ್ದರು.

ವಶಕ್ಕೆ ಪಡೆದುಕೊಂಡ ವಸ್ತುಗಳನ್ನು ಕೋರ್ಟ್ ಮುಂದೆ ಹಾಜರು ಪಡಿಸಲು ಅರಣ್ಯಾಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಜತೆಗೆ ಆರೋಪಿ‌ ಮೆಹಬೂಬ್ ಬಂಧನಕ್ಕೆ ಬಲೆ ಬೀಸಲಾಗಿದೆ. ಅನೇಕ ವರ್ಷಗಳಿಂದ ವನ್ಯಜೀವಿ ಭೇಟೆ ಮಾಡುತ್ತಿದ್ದರು.
Published by: Seema R
First published: January 4, 2021, 2:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories