Santosh Patil: ರಾಜ್ಯಪಾಲರಿಗೆ ಪತ್ರ ಬರೆದ ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ನಿ, ಪತಿ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ

ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ‌ಕೇಸ್‌ನಲ್ಲಿ ದಿಕ್ಕು ತಪ್ಪಿಸಲು ಹಲವರ ಯತ್ನಿಸಿದ್ದಾರೆ ಅಂತ ಮೃತರ ಪತ್ನಿ ಜಯಶ್ರೀ ದೂರಿದ್ದಾರೆ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದಿರುವ ಅವರು, ನ್ಯಾಯ ಕೂಡಿಸುವಂತೆ ಮನವಿ ಮಾಡಿದ್ದಾರೆ.

ಆತ್ಮಹತ್ಯೆಗೆ ಶರಣಾಗಿದ್ದ  ಸಂತೋಷ್ ಪಾಟೀಲ್

ಆತ್ಮಹತ್ಯೆಗೆ ಶರಣಾಗಿದ್ದ ಸಂತೋಷ್ ಪಾಟೀಲ್

  • Share this:
ಬೆಳಗಾವಿ, ಜುಲೈ, 15: ಮಾಜಿ ಸಚಿವ (Ex Minister) ಕೆಎಸ್ ಈಶ್ವರಪ್ಪ (KS Eshwarappa) ವಿರುದ್ಧ ಶೇ.40 ರಷ್ಟು ಕಮಿಷನ್ (C0mmission) ಆರೋಪ ಕೇಳಿ ಬಂದಿತ್ತು. ರಸ್ತೆ ಕಾಮಗಾರಿ (Road Work) ಹಣ ಬಿಡುಗಡೆ (Fund Relies) ಆಗದೇ ಇರುವುದಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೆಸರನ್ನು ವಾಟ್ಸಪ್ ಮೆಸೇಜ್ ನಲ್ಲಿ (WhatsApp Message) ಉಲ್ಲೇಖಿಸಿ ಉಡುಪಿಯ (Udupi) ಖಾಸಗಿ ಲಾಡ್ಜ್ (Lodge) ಒಂದರಲ್ಲಿ ಬೆಳಗಾವಿ (Belagavi) ಮೂಲದ ಗುತ್ತಿಗೆದಾರ (Contractor) ಸಂತೋಷ ಪಾಟೀಲ್ (Santosh Patil) ಎಂಬುವರು ಆತ್ಮಹತ್ಯೆ (Suicide) ಮಾಡಿಕೊಂಡಿದ್ದರು. ಈಗ ಆತ್ಮಹತ್ಯೆ ಪ್ರಕರಣದ (Case) ತನಿಖೆ (Enquiry) ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದ್ದು ನಮಗೆ ನ್ಯಾಯ (Justice) ಕೊಡಿಸುವಂತೆ ಮೃತ ಸಂತೋಷ ಪಾಟೀಲ್ ಪತ್ನಿ (Wife) ಜಯಶ್ರೀ ರಾಜ್ಯಪಾಲ (Governer) ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರಿಗೆ ಪತ್ರ (Letter) ಬರೆದಿದ್ದಾರೆ‌.

ರಾಜ್ಯಪಾಲರಿಗೆ ಸಂತೋಷ್ ಪಾಟೀಲ್ ಪತ್ನಿ ಪತ್ರ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದ್ದು, ನಮಗೆ ನ್ಯಾಯ ಕೊಡಿಸುವಂತೆ ಮೃತ ಸಂತೋಷ ಪಾಟೀಲ್ ಪತ್ನಿ ಜಯಶ್ರೀ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ‌. ನನ್ನ ಪತಿ ಸಂತೋಷ ಪಾಟೀಲ 12 ಏಪ್ರಿಲ್ 2022ರಂದು ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದ ಕೂಡಲೇ ಏ.14 ರಂದು ಅವರು ಮಾಡಿರುವ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಪ್ರಕರಣ ತನಿಖೆ ನಡೆಯುತ್ತಿರುವಾಗಲೇ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ 15 ದಿನದಲ್ಲಿ ಆರೋಪ ಮುಕ್ತನಾಗಿ ಹೊರ ಬರುವುದಾಗಿ ನೀಡಿರುವ ಹೇಳಿಕೆಯಿಂದ ನಾನಾ ಅನುಮಾನ ಕಾಡುತ್ತಿದೆ ಎಂದು ಪತ್ರದಲ್ಲಿ ದೂರಿದ್ದಾರೆ.

“ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಯತ್ನ”

ಸರಕಾರದ ಭಾಗವಾಗಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ತಮ್ಮ ಪ್ರಭಾವನ್ನು ಬಳಸಿಕೊಂಡು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನನ್ನ ಪತಿ ಸಂತೋಷ ಆತ್ಮಹತ್ಯೆ ಪ್ರಕರಣವನ್ನು ದಿಕ್ಕು ತಪ್ಪಿಸಿ ತಮಗೆ ಬೇಕಾದ ರೀತಿಯಲ್ಲಿ ಮಾಡಿಕೊಂಡಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಪತ್ರದಲ್ಲಿ ದೂರಿದ್ದಾರೆ‌.

ಇದನ್ನೂ ಓದಿ: Dakshina Kannada News: ಡಿಸಿ ‘ಗ್ರಾಮ ವಾಸ್ತವ್ಯ‘ ಪಂಜ ಗ್ರಾಮದಲ್ಲಿ; ನೀವೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ

“ಈಶ್ವರಪ್ಪನವರ ಅಣತಿಯಂತೆ ತನಿಖೆ ನಡೆಯುತ್ತಿದೆ”

ನನ್ನ ಪತಿ ದಿ. ಸಂತೋಷ ಹಿಂಡಲಗಾ ಗ್ರಾಪಂ ವ್ಯಾಪ್ತಿಯಲ್ಲಿ 108 ಕಾಮಗಾರಿಯನ್ನು ಪೂರ್ಣಗೊಳಿಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಅದರ ಬಿಲ್ ಮಂಜೂರು ಮಾಡಲು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಅವರ ಆಪ್ತರು 40% ಕಮಿಷನ್ ಕೇಳಿದ ವಿಷಯವೂ ಕೂಡ ಸಂತೋಷ ಹೇಳಿದ್ದರು. ಆದರೂ ಕೂಡ ಪ್ರಮುಖ ಆರೋಪಿ ಕೆ.ಎಸ್. ಈಶ್ವರಪ್ಪ 15 ದಿನದಲ್ಲಿ ಆರೋಪ ಮುಕ್ತನಾಗಿ ಹೊರ ಬರುತ್ತೇನೆ ಎಂದು ನೀಡಿರುವ ಹೇಳಿಕೆ ನಮಗೆ ಬಹಳ ಆಶ್ಚರ್ಯ ತಂದಿದೆ. ಅಲ್ಲದೆ, ಮಾಜಿ ಸಚಿವ ಈಶ್ವರಪ್ಪನವರ ಅಣತೆಯಂತೆ ತನಿಖೆ ನಡೆಯುತ್ತಿದೆ ಎನ್ನುವ ಅನುಮಾನವೂ ಕಾಡುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ‌.

ಇದನ್ನೂ ಓದಿ: BJP MLA: ದೇವಸ್ಥಾನಕ್ಕೆ ರಥ ನೀಡುವ ಹರಕೆ ಕೈ ಬಿಟ್ಟ ಶಾಸಕ ಎಂ ಪಿ ಕುಮಾರಸ್ವಾಮಿ

 “ನನಗೆ ಮತ್ತು ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಿ”

ರಾಜ್ಯಪಾಲರು ಸಂತೋಷ ಪಾಟೀಲ ಅನುಮಾನಾಸ್ಪಾದ ಸಾವಿನ ಹಿಂದೆ ಇರುವ ರಹಸ್ಯವನ್ನು ಭೇದಿಸಿ ಆರೋಪಿತರು ಎಷ್ಟೆ ಪ್ರಭಾವಿಯಾಗಿದ್ದರೂ ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ರುಜುವಾತು ಮಾಡುವಂತೆ ನನಗೆ ಮತ್ತು ನಮ್ಮ ಕುಟುಂಬಕ್ಕೆ ನ್ಯಾಯ ಸಿಗುವ ರೀತಿಯಲ್ಲಿ ತನಿಖೆ ನಡೆಸುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕೆಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಸಂತೋಷ ಪಾಟೀಲ ಪತ್ನಿ ಜಯಶ್ರೀ ಒತ್ತಾಯಿಸಿದ್ದಾರೆ‌.
Published by:Annappa Achari
First published: