• Home
  • »
  • News
  • »
  • state
  • »
  • Murder: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ! ದೃಶ್ಯಂ-2 ಸಿನಿಮಾ ಸ್ಟೈಲ್​ನಲ್ಲಿ ಸಾಕ್ಷಿ ನಾಶ!

Murder: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ! ದೃಶ್ಯಂ-2 ಸಿನಿಮಾ ಸ್ಟೈಲ್​ನಲ್ಲಿ ಸಾಕ್ಷಿ ನಾಶ!

ದೇಸೇಗೌಡ, ಜಯಲಕ್ಷ್ಮಿ

ದೇಸೇಗೌಡ, ಜಯಲಕ್ಷ್ಮಿ

ಕಟ್ಟಿಕೊಂಡ ಗಂಡ ದೇಸೇಗೌಡನನ್ನು ಪ್ರಿಯಕರ ಜೊತೆ ಸೇರಿ ಜಯಲಕ್ಷ್ಮಿ ಎಂಬಾಕೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಸಾಕ್ಷಿ ಸಿಗದಂತೆ ಕೊಲೆಗೆ ಬಳಸಿದ್ದ ವಸ್ತುಗಳನ್ನು ಒಂದೊಂದು ಕಡೆ ಬಿಸಾಡಿದ್ದಾಳೆ.

  • News18 Kannada
  • 4-MIN READ
  • Last Updated :
  • Karnataka, India
  • Share this:

ಅನೈತಿಕ ಸಂಬಂಧ (Illegal Relationship) ಪ್ರಶ್ನಿಸಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಗಂಡನನ್ನು (Wife and Husband) ಕೊಂದಿದ್ದಾಳೆ. ಅಷ್ಟೇ ಅಲ್ಲದೆ ಸಿನಿಮಾ ಸ್ಟೈಲ್​ನಲ್ಲಿ ಸಾಕ್ಷಿ ನಾಶ ಮಾಡಿರುವ ಘಟನೆ ಬೆಂಗಳೂರಿನ (Bengaluru) ಸೋಲದೇವನಹಳ್ಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಸ್ಸಿಂಗ್ ಕೇಸ್​ (Missing Case) ದಾಖಲಿಸಿಕೊಂಡು ತನಿಖೆ ನಡೆಸಿದ  ಪೊಲೀಸರಿಗೆ ಶಾಕ್​ ಆಗಿದೆ. ದೃಶ್ಯಂ -2 ಸಿನಿಮಾ ರೀತಿಯಲ್ಲಿ ಕೊಲೆಗೈದಿದ್ದು, ತನಿಖೆ ವೇಳೆ ರಹಸ್ಯ ಬಯಲಾಗಿದೆ. 


ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದಳು


ಕಟ್ಟಿಕೊಂಡ ಗಂಡ ದೇಸೇಗೌಡನನ್ನು ಪ್ರಿಯಕರ ಜೊತೆ ಸೇರಿ ಜಯಲಕ್ಷ್ಮಿ ಎಂಬಾಕೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಸಾಕ್ಷಿ ಸಿಗದಂತೆ ಕೊಲೆಗೆ ಬಳಸಿದ್ದ ವಸ್ತುಗಳನ್ನು ಒಂದೊಂದು ಕಡೆ ಬಿಸಾಡಿದ್ದಾಳೆ. ದೇಸೇಗೌಡನ ಮೃತದೇಹವನ್ನು ಸೋಲದೇವನಹಳ್ಳಿ ಫಾರ್ಮ್ ಹೌಸ್ ನಿಂದ ಕಾರಿನಲ್ಲಿ ಸಾಗಿಸಿದ್ದಾರೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಮೋರಿಯಲ್ಲಿ ಎಸೆದು ಹೋಗಿದ್ದಾರೆ.




ಮೋರಿಯಲ್ಲಿ ಶವ ಬಿಸಾಡಿದ ಪತ್ನಿ


ಹೆದ್ದಾರಿಯಲ್ಲಿರೋ ಮೋರಿಯಲ್ಲಿ ಸುಮಾರು‌ 50 ಮೀಟರ್ ನಷ್ಟು ಒಳಗೆ ಶವವನ್ನು ತುರುಕಿದ್ದಾರೆ. ಬಳಿಕ ಮೊಬೈಲ್ ನನ್ನು ಶವವಿದ್ದ 500 ಮೀಟರ್ ದೂರದಲ್ಲಿ ಎಸೆದು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾರೆ. ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಲು ಬಳಸಿದ್ದ ಹಗ್ಗವನ್ನು ಬೇರೆಡೆ ಎಸೆದಿದ್ದಾರೆ. ಸಾಕ್ಷ್ಯ ಸಿಗದಂತೆ ಒಂದೊಂದು ಕಡೆ ವಸ್ತುಗಳು ಎಸೆದಿದ್ದು, ಶವ ಸಾಗಿಸಿದ್ದ ಕಾರನನ್ನು ಸಹ ಆರೋಪಿಗಳು ಬೇರೆಡೆ ಸ್ಥಳಾಂತರಿಸಿದ್ದಾರೆ.


 ದಂಪತಿ ನಡುವೆ ಜಗಳ


35 ವರ್ಷದ ಜಯ ಎಂಬಾಕೆ ಕಳೆದ 16 ವರ್ಷಗಳ ಹಿಂದೆಯೇ ದೇಸೇಗೌಡನನ್ನು ಮದುವೆಯಾಗಿದ್ದಳು. ಇವರಿಗೆ ಇಬ್ಬರು ಮಕ್ಕಳೂ ಸಹ ಇದ್ದಾರೆ. ಆದ್ರೆ ಪದೇ ಪದೇ ಗಂಡ ಹೆಂಡತಿ ಜಗಳ ಮಾಡ್ತಿದ್ರು. ಜಯಗೆ ಪರಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಆತ ಮನೆಯಲ್ಲಿ ಯಾರೂ ಇಲ್ಲದ ವೇಳೆ ದೇಸೇಗೌಡನ ಮನೆಗೆ ಬಂದು ಹೋಗ್ತಿದ್ದ.




ಪತ್ನಿ ಅನೈತಿಕ ಸಂಬಂಧದ ಬಗ್ಗೆ ಅನುಮಾನ


ಪತ್ನಿ ಅನೈತಿಕ ಸಂಬಂಧ ಬಗ್ಗೆ ಪತಿ ದೇಸೇಗೌಡನಿಗೆ ಅನುಮಾನ ಬಂದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ರಾತ್ರಿ ಹೆಂಡತಿ ಜೊತೆ ದೇಸೇಗೌಡ ಗಲಾಟೆ ಮಾಡಿದ್ದಾನೆ. ಈ ವೇಳೆ ಪ್ರಿಯಕರನಿಗೆ ಕರೆ ಮಾಡಿ ಗಂಡ ಬೈಯುವುದನ್ನ ಪತ್ನಿ ಕೇಳಿಸಿದ್ದಾಳೆ. ಈ ವೇಳೆ ಪ್ರಿಯಕರ ಮನೆಯ ಹಿಂಬಾಗಿಲಿನ ಮೂಲಕ ಒಳಗೆ ಬಂದು ದನದ ಕೊಟ್ಟಿಗೆಯಲ್ಲಿದ್ದ ಹಗ್ಗ ತಂದು ಕೊಲೆ ಮಾಡಿದ್ದಾನೆ.


ಅಕ್ಕ-ತಮ್ಮ ಎಂದು ಸುಳ್ಳು ಹೇಳಿದ್ದ ಖತರ್ನಾಕ್​ 


ತನಿಖೆ ವೇಳೆ ಜಯಾ ಪ್ರಿಯಕರನನ್ನು ತನ್ನ ತಮ್ಮ ಎಂದು ಹೇಳಿಕೆ ನೀಡಿದ್ಲು.
ಆತ ಕೂಡ ಜಯಾಳನ್ನು ನಮ್ಮ ಅಕ್ಕ ಎಂದು ಹೇಳಿ ಪೊಲೀಸರಿಗೆ ತಲೆಕಡೆಸಿದ್ದ. ಅನುಮಾನಗೊಂಡು ಇಬ್ಬರನ್ನು ವಶಕ್ಕೆ ಪಡೆದು ಮೊಬೈಲ್ CDR ಪರಿಶೀಲನೆ ವೇಳೆ ಹೆಚ್ಚು ಕರೆ ಪ್ರಿಯತಮನಿಗೆ ಮಾಡಿರುವುದು ಪತ್ತೆಯಾಗಿದೆ. ಮೊಬೈಲ್ ಕರೆ ಆಧಾರದ ಮೇಲೆ ಇಬ್ಬರನ್ನ ವಶಕ್ಕೆ ಪಡೆದು  ಸೋಲದೇವನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಇಂಜಿನಿಯರ್​ ಜೊತೆ ಅಕ್ರಮ ಸಂಬಂಧ


ಆರೋಪಿ ಬಿಇ ಪದವೀಧರನಾಗಿದ್ದು, ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾನೆ.  ಜಯಲಕ್ಷ್ಮಿ ಜೊತೆ ತುಂಬಾ ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ‌. ನವೆಂಬರ್ 27 ರಂದು ಸೋಮಶೆಟ್ಟಳ್ಳಿಯಿಂದ ದೇಸೇಗೌಡ ಕಾಣೆಯಾಗಿದ್ದಾನೆ ಎಂದು ಸಂಬಂಧಿಕರು ದೂರು ನೀಡಿದ್ರು.


ಇದನ್ನೂ ಓದಿ: School Bag: ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆಗೆ ಇಳಿದ ಶಿಕ್ಷಕರಿಗೆ ಶಾಕ್; ಕಾಂಡೋಮ್, ಗರ್ಭನಿರೋಧಕ ಮಾತ್ರೆ ಪತ್ತೆ!


ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿಕೊಂಡು ವಿಚಾರಣೆ ಶುರುಮಾಡಿದ್ದ ಪೊಲೀಸರು ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಇದೀಗ ರಾಮನಗರ ಜಿಲ್ಲೆ ಕೆಂಪೇಗೌಡ ದೊಡ್ಡಿ ಬಳಿ ದೇಸೇಗೌಡ ಶವ ಪತ್ತೆಯಾಗಿದೆ. ಉಸಿರುಗಟ್ಟಿಸಿ ಕೊಲೆಗೈದ ಬಳಿಕ ಶವವನ್ನ ತಂದು ಎಸೆದಿದ್ದಾರೆ.

Published by:ಪಾವನ ಎಚ್ ಎಸ್
First published: