ಲಾಕ್ಡೌನ್ ವೇಳೆ ಕೆಲಸ ಕಳೆದುಕೊಂಡು ಸೆಕ್ಸ್ ವರ್ಕರ್ ಆದ ಗಂಡನಿಗೆ ವಿಚ್ಛೇದನ ನೀಡಲು ಮುಂದಾದ ಹೆಂಡತಿ..!

2 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಪತ್ನಿಗೆ ವಿಚ್ಛೇದನ ನೀಡಲು ಪತಿ ನಿರಾಕರಿಸಿದ್ದಾರೆ. ಜೊತೆಗೆ ವನಿತಾ ಸಹಾಯವಾಣಿಯವರು ದಂಪತಿಯನ್ನು ಸಮಾಲೋಚನೆಗೆ ಒಳಪಡಿಸಿ ಒಂದಾಗಿಸಲು ಯತ್ನಿಸಿದ್ದಾರೆ. ಆದರೆ ವಿಷಯ ಇತ್ಯರ್ಥವಾಗದೆ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಲಾಕ್​ಡೌನ್​ ಸಂಕಷ್ಟ ದಾಂಪತ್ಯವನ್ನೇ ಮುರಿದಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು: ಕಳೆದ ವರ್ಷ ಲಾಕ್​ಡೌನ್​ನಿಂದ ಜನ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದರು. ಅನೇಕ ಮಂದಿ ಉದ್ಯೋಗವನ್ನೇ ಕಳೆದುಕೊಂಡರು. ಮತ್ತೆ ಆರ್ಥಿಕವಾಗಿ ಸುಸ್ಥಿರ ಬದುಕು ನಡೆಸಲು ಇನ್ನೂ ಹೆಣಗಾಡುತ್ತಿದ್ದಾರೆ. ಹಣ, ಉದ್ಯೋಗ ಇಲ್ಲದೇ ಕಂಗೆಟ್ಟ ಕೆಲವರು ಅಡ್ಡದಾರಿಯನ್ನೂ ಹಿಡಿದಿದ್ದಾರೆ. ಇದೇ ರೀತಿ ಉದ್ಯೋಗ ಕಳೆದುಕೊಂಡ ಬೆಂಗಳೂರಿನ ಬಿಪಿಓ ಉದ್ಯೋಗಿ ಹಣಕ್ಕಾಗಿ ಮಾಡಿದ ಕೆಲಸ ಆತನ ಸಾಂಸರಿಕ ಜೀವನಕ್ಕೆ ಮುಳುವಾಗಿದೆ. ಹಣಕ್ಕಾಗಿ ಗಂಡ ಮಾಡುತ್ತಿದ್ದ ಕೆಲಸ ಗೊತ್ತಾಗುತ್ತಿದಂತೆ ಪತ್ನಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ.

  27 ವರ್ಷದ ಬಿಪಿಓ ಉದ್ಯೋಗಿ ಕಳೆದ ವರ್ಷ ಲಾಕ್ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದರು. ಸಂಸಾರ ನಡೆಸಲು ಸಾಧ್ಯವಾಗದೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಹಣ ಗಳಿಸಲು ಆತ ಆಯ್ಕೆ ಮಾಡಿಕೊಂಡ ವೃತಿಯೇ ಸೆಕ್ಸ್ ವರ್ಕರ್. ಸಾಮಾನ್ಯವಾಗಿ ಹೆಣ್ಣು ಮಕ್ಕಳು ವೇಶ್ಯೆ ವೃತ್ತಿಯಲ್ಲಿ ತೊಡಗಿರೋದನ್ನು ಕೇಳಿರುತ್ತೇವೆ. ಅದೇ ರೀತಿ ಪುರುಷರು ಈ ವೃತ್ತಿಯಲ್ಲಿ ತೊಡಗುವ ಅವಕಾಶವಿದೆ. ಇದೇ ರೀತಿ ಸೆಕ್ಸ್ ವರ್ಕರ್ ಆಗಿ ಕೆಲಸ ಮಾಡಲು ಶುರು ಮಾಡಿದ ಕೆಲ ತಿಂಗಳುಗಳ ಬಳಿಕ ವ್ಯಕ್ತಿಯ ಪತ್ನಿಗೆ ಅನುಮಾನ ಮೂಡಿದೆ.
  ಯಾವುದೇ ನಿರ್ದಿಷ್ಟ ಕಂಪನಿಯಲ್ಲಿ ಕೆಲಸವಿಲ್ಲದಿದ್ದರೂ ಪತಿ ಹೇಗೆ ಹಣ ಗಳಿಸುತ್ತಿದ್ದಾರೆ ಎಂಬ ಅನುಮಾನ ಪತ್ನಿಯನ್ನು ಕಾಣಲಾರಂಭಿಸಿದೆ. ತನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಾರೆ ಎಂದು ಶಂಕಿಸಿದ ಪತ್ನಿ ಹಲವು ಬಾರಿ ಈ ಬಗ್ಗೆ ಪತಿಯೊಂದಿಗೆ ಮಾತನಾಡಲು ಯತ್ನಿಸಿದ್ದಾರೆ. ಆದರೆ ಪತಿ ಯಾವುದಕ್ಕೂ ಸರಿಯಾಗಿ ಉತ್ತರಿಸದೇ ನುಣುಚಿಕೊಂಡಿದ್ದಾರೆ.

  ಇದನ್ನು ಓದಿ: ಕೆಎಸ್​ಆರ್​ಟಿಸಿ, ಬಿ‌ಎಂಟಿಸಿ ಖಾಸಗಿಯವರಿಗೆ ಮಾರುವ ಒಳಸಂಚು ನಡೆದಿದೆ; ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ

  ಕೊನೆಗೆ ತನ್ನ ಸೋದರನ ಸಹಾಯದಿಂದ ಪತಿಯ ಲ್ಯಾಪ್​ಟಾಪ್​ ಓಪನ್ ಮಾಡಿದ್ದಾರೆ. ಲ್ಯಾಪ್​ಟಾಪ್​ನಲ್ಲಿ ಹಲವು ಮಹಿಳೆಯರೊಂದಿಗೆ ಇರುವ ಫೋಟೋಗಳು , ಮಹಿಳೆಯರ ಮೊಬೈಲ್ ಸಂಖ್ಯೆಗಳನ್ನು ನೋಡಿದಾಗ ಶಾಕ್ ಆಗಿದೆ. ಮಹಿಳೆಯರೊಂದಿಗೆ ಅಕ್ಷೇಪಾರ್ಹ ಭಂಗಿಯಲ್ಲಿರುವ ಫೋಟೋಗಳ ಬಗ್ಗೆ ಪ್ರಶ್ನಿಸಿದಾಗ ಮೊದಲು ಅಲ್ಲಗಳೆದ ಪತಿ ನಂತರ ಒಪ್ಪಿಕೊಂಡಿದ್ದಾರೆ. ಹಣಕ್ಕಾಗಿ ಹೀಗೆಲ್ಲಾ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ನಿತ್ಯ 3ರಿಂದ 5 ಸಾವಿರದವರೆಗೂ ಗಳಿಸುತ್ತಿದ್ದಾಗಿ ಬಾಯ್ಬಿಟ್ಟಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಪತ್ನಿ ವಿಚ್ಛೇದಕ್ಕೆ ಮುಂದಾಗಿದ್ದಾರೆ.

  2 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಪತ್ನಿಗೆ ವಿಚ್ಛೇದನ ನೀಡಲು ಪತಿ ನಿರಾಕರಿಸಿದ್ದಾರೆ. ಜೊತೆಗೆ ವನಿತಾ ಸಹಾಯವಾಣಿಯವರು ದಂಪತಿಯನ್ನು ಸಮಾಲೋಚನೆಗೆ ಒಳಪಡಿಸಿ ಒಂದಾಗಿಸಲು ಯತ್ನಿಸಿದ್ದಾರೆ. ಆದರೆ ವಿಷಯ ಇತ್ಯರ್ಥವಾಗದೆ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಲಾಕ್​ಡೌನ್​ ಸಂಕಷ್ಟ ದಾಂಪತ್ಯವನ್ನೇ ಮುರಿದಿದೆ.

  • ವರದಿ: ಕಾವ್ಯಾ ವಿ

  Published by:HR Ramesh
  First published: