Husband-Wife Death: ಗಂಡನ ಮೃತದೇಹ ನೋಡಿ ಉಸಿರು ನಿಲ್ಲಿಸಿದ ಹೆಂಡತಿ! ಸಾವಿನಲ್ಲೂ ಒಂದಾದ ದಂಪತಿ

ವೈವಾಹಿಕ ಜೀವನದಲ್ಲಿ (married life) ಸುವರ್ಣ ಸಂಭ್ರಮ ಆಚರಿಸಿಕೊಂಡಿದ್ದ ದಂಪತಿ ನಿನ್ನೆ ಇಬ್ಬರೂ ಒಟ್ಟಿಗೆ ಸಾವಿನ ಮನೆ ಕದ ತಟ್ಟಿದ್ದಾರೆ. ಈ ಮೂಲಕ ಸಾವಿನಲ್ಲೂ (Death) ಗಂಡ (Husband) ಹೆಂಡತಿ (Wife) ಒಂದಾಗಿದ್ದಾರೆ.

ಸಾವಿನಲ್ಲೂ ಒಂದಾದ ದಂಪತಿ

ಸಾವಿನಲ್ಲೂ ಒಂದಾದ ದಂಪತಿ

  • Share this:
ಕಾಪು, ಉಡುಪಿ: ಅವರಿಬ್ಬರು ಸಂಸಾರದಲ್ಲಿ ಕಷ್ಟ ಸುಖ ಕಂಡಿದ್ದ ದಂಪತಿ (Couple). ವೈವಾಹಿಕ ಜೀವನದಲ್ಲಿ (married life) ಸುವರ್ಣ ಸಂಭ್ರಮ ಆಚರಿಸಿಕೊಂಡಿದ್ದ ದಂಪತಿ ನಿನ್ನೆ ಇಬ್ಬರೂ ಒಟ್ಟಿಗೆ ಸಾವಿನ ಮನೆ ಕದ ತಟ್ಟಿದ್ದಾರೆ. ಈ ಮೂಲಕ ಸಾವಿನಲ್ಲೂ (Death) ಗಂಡ (Husband) ಹೆಂಡತಿ (Wife) ಒಂದಾಗಿದ್ದಾರೆ. ಇಂಥದ್ದೊಂದು ಘಟನೆ ಉಡುಪಿ (Udupi) ಜಿಲ್ಲೆಯ ಕಾಪು (Kapu) ತಾಲೂಕಿನ ಬೆಳಪು ಎಂಬ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿಗಳಾದ ಕೃಷ್ಣ ಅಲಿಯಾಸ್ ಕುಟ್ಟಿ ಶೆಟ್ಟಿ ಹಾಗೂ ಅವರ ಪತ್ನಿ ರೇವತಿ ಶೆಟ್ಟಿ ಇಬ್ಬರೂ ಸಾವಿನಲ್ಲೂ ಒಂದಾಗಿದ್ದಾರೆ.  ಪತಿ ಕುಟ್ಟಿ ಶೆಟ್ಟಿ ಮೊದಲು ಸಾವನ್ನಪ್ಪಿದ್ದಾರೆ. ಅವರ ಮೃತದೇಹ (Dead Body) ನೋಡುತ್ತಿದ್ದಂತೆ ಕುಸಿದು ಬಿದ್ದ ರೇವತಿ ಶೆಟ್ಟಿ ಕೂಡ ಪ್ರಾಣ ಬಿಟ್ಟಿದ್ದಾರೆ.  

 ವಯೋಸಹಜ ಕಾಯಿಲೆಯಿಂದ ಪತಿ ನಿಧನ

ಬೆಳಪು ಗ್ರಾಮದ 80 ವರ್ಷದ ಕೃಷ್ಣ ಅಲಿಯಾಸ್ ಕುಟ್ಟಿ ಶೆಟ್ಟಿ ಮತ್ತು ಅವರ ಪತ್ನಿ 75 ವರ್ಷದ ರೇವತಿ ಶೆಟ್ಟಿ  ಎಂಬವರು ನಿನ್ನೆ ಸಾವಿನಲ್ಲೂ ಒಂದಾಗಿದ್ದಾರೆ. 80 ವರ್ಷದ ಕುಟ್ಟಿ ಶೆಟ್ಟಿ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಾ ಇದ್ದರು. ಆದರೆ ಚಿಕಿತ್ಸೆ ಫಲಿಸದೇ ಕುಟ್ಟಿ ಶೆಟ್ಟಿ ನಿನ್ನೆ ಮೃತಪಟ್ಟಿದ್ದಾರೆ.

ಗಂಡನ ಮೃತದೇಹ ನೋಡಿ ಕುಸಿದು ಬಿದ್ದ ಹೆಂಡತಿ

ಕುಟ್ಟಿ ಶೆಟ್ಟಿ ಹಾಗೂ ರೇವತಿ ಶೆಟ್ಟಿಯವರ ಮಕ್ಕಳು, ಮೊಮ್ಮಕ್ಕಳು, ಅಳಿಯ, ಸೊಸೆಯಂದಿರೆಲ್ಲ ಮುಂಬೈ ಸೇರಿದಂತೆ ಬೇರೆ ಬೇರೆ ಕಡೆ ಇದ್ದರು. ಹೀಗಾಗಿ ಅವರ ಶವವನ್ನು ಕುಟುಂಬದ ಮೂಲ ಮನೆಯಲ್ಲಿ ಶೈತ್ಯೀಕರಣದ ವ್ಯವಸ್ಥೆಯೊಂದಿಗೆ ಇರಿಸಲಾಗಿತ್ತು. ಬುಧವಾರ ಮುಂಜಾನೆ ಮಕ್ಕಳು ಮನೆಗೆ ಬರುತ್ತಲೇ ಅವರ ಮೃತದೇಹವನ್ನು ತಮ್ಮ ಸ್ವಂತ ಮನೆಗೆ ತರಲಾಗಿತ್ತು. ಗಂಡನ ಮೃತದೇಹವನ್ನು ಮನೆಯೊಳಗೆ ತಂದು ನೆಲಕ್ಕೆ ಇಟ್ಟಿದ್ದಾರೆ. ಈ ವೇಳೆ ಗಂಡನ ಮೃತದೇಹ ಓದಿ ರೇವತಿ ಶೆಟ್ಟಿ ಶಾಕ್‌ಗೆ ಒಳಗಾಗಿದ್ದಾರೆ. ಇದಾದ  ಕೆಲವೇ ಕ್ಷಣದಲ್ಲಿ ಪತ್ನಿ ರೇವತಿ ಶೆಟ್ಟಿ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Mother: ಹೆತ್ತಮ್ಮನಿಗೆ ತುತ್ತು ಅನ್ನ ಹಾಕದ ಪಾಪಿ, ದೇವಸ್ಥಾನದಲ್ಲಿ ಬಿಟ್ಟು ಹೋದ! ಮಗನ ದಾರಿ ಕಾಯುತ್ತ ಕುಳಿತ ವೃದ್ಧ ತಾಯಿ

ಜೊತೆಯಾಗಿಯೇ ಜಮೀನಿನಲ್ಲಿ ಪತಿ, ಪತ್ನಿ ಅಂತ್ಯಕ್ರಿಯೆ

ಸಾವಿನಲ್ಲೂ ಒಂದಾದ ಸತಿ-ಪತಿ ಗಳ ಪಾರ್ಥಿವ ಶರೀರವನ್ನು ಮಕ್ಕಳು ಮತ್ತು ಕುಟುಂಬಿಕರು ಒಟ್ಟಿಗೆ ಅಂತ್ಯಸಂಸ್ಕಾರ ಮಾಡಿದರು. ಸ್ಥಳೀಯ ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಮಾರ್ಗದರ್ಶನದಲ್ಲಿ ಬೆಳಪು ಧೂಮಪ್ಪ ಶೆಟ್ಟಿ ಮನೆ ಬಳಿಯ ಜಮೀನಿನಲ್ಲಿ ಸಿದ್ಧಪಡಿಸಿದ ಚಿತೆಯಲ್ಲಿ ಜೊತೆಯಾಗಿಯೇ ಅಂತ್ಯಕ್ರಿಯೆ ನಡೆಸಲಾಯಿತು.

ಶೋಕ ಸಾಗರದಲ್ಲಿ ಮುಳುಗಿದ ಕುಟುಂಬಸ್ಥರು

ಕುಟ್ಟಿ ಶೆಟ್ಟಿ ಮತ್ತು ರೇವತಿ ಶೆಟ್ಟಿ ಇಬ್ಬರು ವಿವಾಹವಾಗಿ ಸುಮಾರು ಐದು ದಶಕಗಳ ಕಾಲ ಜೊತೆಯಾಗಿ ಬಾಳಿದ್ದರು. ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನೂ ಆಚರಿಸಿಕೊಂಡಿದ್ದರು. ಮಕ್ಕಳು, ಮೊಮ್ಮಕ್ಕಳನ್ನು ಕಂಡು, ಸಿಹಿ ಕಹಿ, ನೋವು ಕಷ್ಟ ಸವಾಲುಗಳನ್ನು ಒಟ್ಟಿಗೇ ಎದುರಿಸಿದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಇದೊಂದು ಅಪರೂಪದ ಘಟನೆ ಎನ್ನಲಾಗುತ್ತಿದ್ದು, ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇದೀಗ ಇಬ್ಬರನ್ನೂ ಕಳೆದುಕೊಂಡು ಮಕ್ಕಳು, ಮನೆಯವರು, ಸಂಬಂಧಿಕರು, ಸ್ನೇಹಿತರು ಅಷ್ಟೇ ಅಲ್ಲದೇ ಗ್ರಾಮಸ್ಥರೆಲ್ಲ ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಇದನ್ನೂ ಓದಿ: Rahul Gandhi ಪ್ರಧಾನಿಯಾಗುತ್ತಾರೆ ಎಂದ ಸ್ವಾಮೀಜಿ! ಮುರುಘಾ ಶರಣರಿಂದ ಆಕ್ಷೇಪ ವ್ಯಕ್ತವಾಗಿದ್ದೇಕೆ?

ಗ್ಲಾಸ್ಸ್ಲ್ಯಾಬ್ ಅನ್ಲೋಡ್ ವೇಳೆ ಚಾಲಕ ಸಾವು

ಬೆಂಗಳೂರಿನಲ್ಲಿ ಗ್ಲಾಸ್​ಸ್ಲ್ಯಾಬ್ ಗಳು ಅನ್ಲೋಡ್ ಮಾಡುವಾಗ ಅವಘಡ ಸಂಭವಿಸಿ ಆಟೋ ಚಾಲಕ ಮೃತಪಟ್ಟ ಘಟನೆ ನಿನ್ನೆ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ವಸಂತಪುರ ರಸ್ತೆಯ ಬಿಕಾಸಿಪುರದಲ್ಲಿ ನಡೆದಿದೆ. ಅಮೃತಹಳ್ಳಿ ನಿವಾಸಿ ಲಗೇಜ್ ಆಟೋ ಚಾಲಕ ಶಂಕರ್ ಎಂಬುವರೇ ಮೃತ ದುರ್ದೈವಿ.
Published by:Annappa Achari
First published: