HOME » NEWS » State » THE WALK ON THE WOOD THAT DOESNT RUN ECLIPSE TO KUWAITS CANOPY WALK HK

ನಡೆಯದ ಮರದ ಮೇಲಿನ ನಡಿಗೆ - ಕುವೇಶಿಯ ಕೆನೋಪಿ ವಾಕ್ ಗೆ ಗ್ರಹಣ

ಕಳೆದ ಎರಡು ವರ್ಷದ ಹಿಂದೆ ಅದ್ಧೂರಿ ಉದ್ಘಾಟನೆ ಭಾಗ್ಯ ಕಂಡ ಕೆನೋಪಿ ವಾಕ್ ಈಗ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದು ಪ್ರವಾಸಿಗರ ಕಣ್ಣಿಂದ ದೂರ ಸರಿದಿದೆ.

G Hareeshkumar | news18-kannada
Updated:January 31, 2020, 4:26 PM IST
ನಡೆಯದ ಮರದ ಮೇಲಿನ ನಡಿಗೆ - ಕುವೇಶಿಯ ಕೆನೋಪಿ ವಾಕ್ ಗೆ ಗ್ರಹಣ
ಕೆನೋಪಿವಾಕ್
  • Share this:
ಕಾರವಾರ(ಜ.31) : ಪ್ರವಾಸೋದ್ಯಮದಲ್ಲಿ ಹೊಸ ಸಾಧನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ದೇಶದಲ್ಲೆ ಮೊದಲ ಯೋಜನೆ ಮರದ ಮೇಲಿನ ನಡಿಗೆ ಕೆನೋಪಿ ವಾಕ್ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಕುವೇಶಿಯಲ್ಲಿ ನಿರ್ಮಾಣ ಮಾಡಲಾಗಿತ್ತು, ದುರಂತ ಎಂದ್ರೆ ಈಗ ಇದು ಇದ್ದು ಇಲ್ಲದಂತಾಗಿದ್ದು ಪ್ರವಾಸಿಗರಿಂದ ದೂರ ಸರಿದಿದೆ.

ಕಳೆದ ಎರಡು ವರ್ಷದ ಹಿಂದೆ ಅದ್ಧೂರಿ ಉದ್ಘಾಟನೆ ಭಾಗ್ಯ ಕಂಡ ಕೆನೋಪಿ ವಾಕ್ ಈಗ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದು ಪ್ರವಾಸಿಗರ ಕಣ್ಣಿಂದ ದೂರ ಸರಿದಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಮತ್ತು ದಾಂಡೇಲಿ ಮಧ್ಯೆ ಇರುವ ಕುವೇಶಿ ಗ್ರಾಮದ ಅರಣ್ಯ ಬಾಗದಲ್ಲಿ ನಿರ್ಮಾಣ ಮಾಡಿದ ದೇಶದಲ್ಲೇ ಮೊದಲ ಕನೋಪಿ ವಾಕ್. ಒಟ್ಟೂ 84 ಲಕ್ಷ ವೆಚ್ಚದಲ್ಲಿ 240 ಮೀಟರ್ ಉದ್ದ ಮತ್ತು 30 ಪೀಟ್ ಎತ್ತರದಲ್ಲಿ ಅತಿ ಸುಂದರವಾಗಿ ನಿರ್ಮಾಣ ಮಾಡಲಾಗಿತ್ತು.

ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಹೊಸ ಛಾಪು ಮೂಡಿಸುವ ನಿಟ್ಟಿನಲ್ಲಿ ಅಂದಿನ ಸಚಿವ ಆರ್.ವಿ ದೇಶಪಾಂಡೆ ಈ ಯೋಜನೆಯನ್ನ ಇಲ್ಲಿ ಪರಿಚಯಿಸಿದರು. ಆರಂಭದಲ್ಲಿ ದೇಶ ವಿದೇಶದ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯಲು ಯಶಸ್ವಿಯಾದ ಕೆನೋಪಿ ವಾಕ್ ಈಗ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದೆ.

ಇನ್ನೂ ಕೆನೋಪಿ ವಾಕ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಇಲ್ಲಿನ ಸ್ಥಳೀಯರು ಮತ್ತು ಸಂಘಟನೆಯವರು ವಿರೋಧಿಸಿದರು. ನಗರ ಭಾಗದಿಂದ ತೀರಾ ಒಳ ಪ್ರದೇಶದ ದಟ್ಟ ಅರಣ್ಯದಲ್ಲಿ ಕೆನೋಪಿ ವಾಕ್ ನಿರ್ಮಾಣ ಮಾಡಿರುವದರಿಂದ  ಪ್ರವಾಸಿಗರು ಆಗಮಿಸುವ ಸಮಸ್ಯೆ ಮುಂದಿಟ್ಟು ಇಲ್ಲಿನ ಗ್ರಾಮಕ್ಕೆ ಮೊದಲು ರಸ್ತೆ ನಿರ್ಮಾಣ ಮಾಡಿಕೊಟ್ಟು ನಂತರ ಪ್ರವಾಸೋದ್ಯಮ ಅಭಿವೃದ್ದಿ ಪಡಿಸಿ ಎಂದು ಆಗ್ರಹಿಸಿದರು.

ಕೆನೋಪಿ ವಾಕ್ ಸಾಗುವ ಬಹುಪಾಲು ರಸ್ತೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾಗುತ್ತದೆ ಇಲ್ಲಿ ಡಾಂಬರು ರಸ್ತೆ ನರ್ಮಾಣಕ್ಕೆ ನಿಯಮ ಅಡ್ಡಿಯಾಗೊತ್ತೆ ಎನ್ನೋ ನಿಟ್ಟಿನಲ್ಲಿ ರಸ್ತೆ ನಿರ್ಮಾಣಕ್ಕೆ ಹಿಂದೇಟು ಹಾಕಲಾಗಿತ್ತು. ಈ ಹಿನ್ನಲೆಯಲ್ಲಿ ಇಲ್ಲಿನ ಸ್ಥಳೀಯರು ಅಡ್ಡಿ ಪಡಿಸಿ ಕೆನೋಪಿ ವಾಕ್ ಸ್ಥಗಿತ ಮಾಡಿದರು. ಅಂದಿನಿಂದ ಇಂದಿನವರೆಗೂ ಅಂದ್ರೆ ಒಂದೂವರೆ ವರ್ಷಗಳ ಕಾಲ ಕೆನೋಪಿ ವಾಕ್ ಕೆಲವೊಂದು ನಿಯಮಕ್ಕೆ ಜೋತು ಬಿದ್ದು ಸ್ಥಗಿತವಾಗಿದೆ.

ಇದನ್ನೂ ಓದಿ : ಹೆದ್ದಾರಿ ಪಾಲಾಗಿದ್ದ ಮಾನಸಿಕ ಅಸ್ವಸ್ಥನಿಗೆ ಮರು ಜೀವ ನೀಡಿದ ಮಹಿಳೆ

ದೇಶದ ಮೊದಲ ಕೆನೋಪಿ ವಾಕ್ ಗೆ ಗ್ರಹಣ ಹಿಡಿದು ಇಂದಿಗೆ ಒಂದೂವರೆ ವರ್ಷ ಮತ್ತೆ ಕೆನೋಪಿ ವಾಕ್ ನಡಿಗೆ ಪ್ರಾರಂಭ ಮಾಡುವ ಭರವಸೆ ಇದ್ದರೂ ಕೂಡ ಯಾವಾಗ ಎನ್ನುವ ಪ್ರಶ್ನೆ ಇದೆ. ಪ್ರವಾಸೋದ್ಯಮದಲ್ಲಿ ಹೊಸ ಮೈಲಿಗಲ್ಲಿಗೆ ಮುನ್ನುಡಿಯಾದ ಕೆನೋಪಿವಾಕ್ ಬೇಗ ಆರಂಭವಾಗಲಿ ಎನ್ನೋದು ಪ್ರವಾಸಿಗರ ಆಶಯ. ಕಳೆದ ಒಂದು ವರ್ಷದಿಂದ ಪ್ರವಾಸಿಗರಿಗೆ ಕೆನೋಪಿ ವಾಕ್‌ಮೇಲೆ ನಡೆದಾಡಲು ಅವಕಾಶ ಮಾಡಿಕೊಡುತ್ತಿಲ್ಲ ಬಂದ ಪ್ರವಾಸಿಗರು ನಿರಾಶರಾಗಿ ವಾಪಸ್ಸಾಗುತ್ತಿದ್ದಾರೆ. (ವರದಿ : ದರ್ಶನ ನಾಯ್ಕ್)
First published: January 31, 2020, 4:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories