• Home
  • »
  • News
  • »
  • state
  • »
  • Road Repair: ಗುಂಡಿ ಬಿದ್ದ ರಸ್ತೆಯಲ್ಲಿ ನಿತ್ಯ ನರಕ ದರ್ಶನ; ತಾವೇ ದುರಸ್ತಿಗೆ ಮುಂದಾದ ಗ್ರಾಮಸ್ಥರು

Road Repair: ಗುಂಡಿ ಬಿದ್ದ ರಸ್ತೆಯಲ್ಲಿ ನಿತ್ಯ ನರಕ ದರ್ಶನ; ತಾವೇ ದುರಸ್ತಿಗೆ ಮುಂದಾದ ಗ್ರಾಮಸ್ಥರು

ಗ್ರಾಮಸ್ಥರಿಂದ ರಸ್ತೆ ದುರಸ್ಥಿ

ಗ್ರಾಮಸ್ಥರಿಂದ ರಸ್ತೆ ದುರಸ್ಥಿ

ರಸ್ತೆಗಾಗಿ ಜನಪ್ರತಿನಿಧಿಗಳು-ಅಧಿಕಾರಿಗಳಿಗೆ ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ, ಹೀಗಾಗಿ ತಮ್ಮ ಊರಿನ ರಸ್ತೆಗೆ ಹಳ್ಳಿಗರೇ ಗುಡ್ಡದಿಂದ ಮೂರು ಲೋಡ್ ಕಲ್ಲು ತಂದು ರಸ್ತೆಯನ್ನ ದುರಸ್ಥಿ ಮಾಡಿಕೊಂಡಿದ್ದಾರೆ.

  • Share this:

ಚಿಕ್ಕಮಗಳೂರು (ಅ.01) : ಜನಪ್ರತಿನಿಧಿಗಳು-ಅಧಿಕಾರಿಗಳು (Officers) ಯಾರಿಗೆ ಹೇಳಿದರೂ ಯಾವುದೇ ಪ್ರಯೋಜನವಿಲ್ಲ (No Use) ಎಂದು ತಮ್ಮ ಊರಿನ ರಸ್ತೆಗೆ ಹಳ್ಳಿಗರೇ ಗುಡ್ಡದಿಂದ ಮೂರು ಲೋಡ್ ಕಲ್ಲು ತಂದು ರಸ್ತೆಯನ್ನ ದುರಸ್ಥಿ ಮಾಡಿಕೊಂಡ ಘಟನೆ ಜಿಲ್ಲೆಯ ಕಳಸ (Kalasa) ತಾಲೂಕಿನ ಹೊಸೂರು ಗ್ರಾಮದಲ್ಲಿ (Hosuru Village) ನಡೆದಿದೆ. ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದರೂ ಇಲ್ಲಿನ ಜನ ಇಂದಿಗೂ ಓಡಾಡೋದಕ್ಕೆ ಸೂಕ್ತ ರಸ್ತೆ ಇಲ್ಲದೆ ತಾವೇ ಗುಡ್ಡದಿಂದ 3 ಲೋಡ್ ಕಲ್ಲು ತಂದು ಊರಿನ ರಸ್ತೆಯಲ್ಲಿ (Road) ಬಿದ್ದಿದ್ದ ಗುಂಡಿಗೆ ತುಂಬಿದ್ದಾರೆ.


ರಸ್ತೆಯಿಲ್ಲದೆ ಜನರ ಪರದಾಟ


ಪ್ರತಿ ಮಳೆಗಾಲ ಮುಗಿದ ಕೂಡಲೇ ಇವರು ಈ ಕೆಲಸ ಮಾಡದಿದ್ದರೆ ಇವರಿಗೆ ಓಡಾಡೋದಕ್ಕೆ ರಸ್ತೆ ಇಲ್ಲದಂತಾಗುತ್ತೆ. ಹೊಸೂರು ಗ್ರಾಮ ಕುದುರೆಮುಖದ ತಪ್ಪಲಿನರುವ ಗ್ರಾಮ. 25ಕ್ಕೂ ಹೆಚ್ಚು ಕುಟುಂಬಗಳಿವೆ. ಸುತ್ತಮುತ್ತಲಿನ ಹಳ್ಳಿಗಳೆಲ್ಲಾ ಸೇರಿ 100ಕ್ಕೂ ಅಧಿಕ ಮನೆಗಳಿವೆ. ಆದಿವಾಸಿಗಳೇ ಹೆಚ್ಚು. ಮಳೆಗಾಲದಲ್ಲಿ ಇಲ್ಲಿ ಭಾರೀ ಮಳೆ ಸುರಿಯುತ್ತೆ. ಮಳೆ ಅಬ್ಬರಕ್ಕೆ ರಸ್ತೆಗಳೇ ಕೊಚ್ಚಿ ಹೋಗಿರುತ್ತೆ. ರಸ್ತೆ ಅಕ್ಕಪಕ್ಕದ ಗುಡ್ಡದ ಮಣ್ಣು ಜರಿದು ಮಳೆ ಮುಗಿಯುವಷ್ಟರಲ್ಲಿ ರಸ್ತೆಗಳೇ ಮಾಯವಾಗಿರುತ್ತೆ. 
ಜನರೇ ರಸ್ತೆ ದುರಸ್ಥಿಗೆ ಮುಂದಾಗಬೇಕು


ಮಳೆ ಮುಗಿದ ಕೂಡಲೇ ಈ ಮಾರ್ಗದಲ್ಲಿ ಓಡಾಡುವ ಜನರೇ ರಸ್ತೆ ದುರಸ್ಥಿಗೆ ಮುಂದಾಗಬೇಕು. ಈ ಗ್ರಾಮದಿಂದ ಮುಖ್ಯ ರಸ್ತೆಗೆ ಎರಡರಿಂದ ಮೂರು ಕಿ.ಮೀ. ದೂರವಿದೆ. ಕಲ್ಕೋಡು, ಕಾರ್ಲೆ, ಅಬ್ಬಿಕೂಡಿಗೆ, ಹೊರನಾಡು ಸೇರಿದಂತೆ ಹಲವು ಕುಗ್ರಾಮಗಳಿಗೆ ಈ ಮಾರ್ಗ ಸಂಪರ್ಕ ಕಲ್ಪಿಸುತ್ತೆ. ಈ ಮಾರ್ಗದ ಗ್ರಾಮದ ಜನ ಅನಿವಾರ್ಯವಾಗಿ ಎದ್ದು-ಬಿದ್ದು ಓಡಾಡ್ತಿದ್ದಾರೆ.


ಬೆಳೆ ಹೊತ್ತುಕೊಂಡು ಸಾಗೋ ಜನ


ಭತ್ತ, ಅಡಿಕೆ, ಕಾಫಿ, ಮೆಣಸು ಯಾವುದೇ ಬೆಳೆ ಇದ್ದರೂ ಎರಡ್ಮೂರು ಕಿ.ಮೀ. ಹೊತ್ತುಕೊಂಡೇ ಬರಬೇಕು. ಎಲ್ಲ ತಂದು ರಸ್ತೆಗೆ ಹಾಕಿಕೊಂಡು ಆಮೇಲೆ ಗಾಡಿಯಲ್ಲಿ ಕೊಂಡಯ್ಯಬೇಕು. ಹೊಲ-ಗದ್ದೆ-ತೋಟಗಳಿಗೆ ಹೋಗೋದು ಕಷ್ಟ. ಮಳೆಗಾಲದಲ್ಲಂತೂ ಇಲ್ಲಿನ ಜನರ ಬದುಕು ನರಕಯಾತನೆಯಾಗುತ್ತದೆ. ಮಳೆಗಾದಲ್ಲಿ ರಸ್ತೆ ಸರಿ ಇಲ್ಲ ಎನ್ನುವ ಕಾರಣಕ್ಕೆ ಹೆತ್ತವರು ಮಕ್ಕಳನ್ನ ಶಾಲೆಗೆ ಕಳಿಸೋದಕ್ಕೂ ಮೀನಾಮೇಷ ಎಣಿಸುತ್ತಾರೆ.


ಇದನ್ನೂ ಓದಿ: H D Kumaraswamy: ಅವ್ರು 50 ಕೋಟಿ ಕೊಟ್ಟಿರೋದು ನನ್ನನ್ನು ಕಟ್ಟಿ ಹಾಕಲು; ನಮ್ಮ ಕಾರ್ಯಕರ್ತರನ್ನು ಕೆಣಕಬೇಡಿ ಎಂದ್ರು ಕುಮಾರಸ್ವಾಮಿ


ಆರೋಗ್ಯ ಕೆಟ್ಟರೆ ಜೋಳಿಗೆಯೇ ಗತಿ


ಯಾರಿಗಾದರೂ ಆರೋಗ್ಯ ಹದಗೆಟ್ಟರೆ ಜೀಪೇ ಬರಬೇಕು. ಇಲ್ಲ ಜೋಳಿಗೆ ಕಟ್ಟಿಕೊಂಡು ಹೊತ್ತುಕೊಂಡು ಹೋಗಬೇಕು. ಜೀಪಿನವರು ಡಬಲ್ ಹಣ ಕೇಳುತ್ತಾರೆ. ಹಾಗಾಗಿ, ಇಲ್ಲಿನ ಜನ ಕಳೆದ ಎರಡ್ಮೂರು ದಶಕಗಳಿಂದಲೂ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬರುತ್ತಿದ್ದಾರೆ. ಆದರೆ, ಇವರ ನೋವಿಗೆ ಯಾರೊಬ್ಬರು ಸ್ಪಂದಿಸಿಲ್ಲ.
ಇದನ್ನೂ ಓದಿ: Two Youth Died: ರೀಲ್ಸ್ ಮಾಡಲು ಹೋಗಿ ನೀರಲ್ಲಿ ಮುಳುಗಿ ಯುವಕರಿಬ್ಬರ ಸಾವು


ಗ್ರಾಮಕ್ಕೆ ಬೇಕಿದೆ ಸೂಕ್ತ ರಸ್ತೆ-ಅಧಿಕಾರಿಗಳೇ ಇತ್ತ ನೋಡಿ


ಗಾಂಧಿ ಕೊಡ್ಸಿದ್ ಸ್ವಾತಂತ್ರ್ಯ ಯಾರಿಗೆ, ಎಲ್ಲಿ, ಯಾವಾಗ್ ಸಿಕ್ತೋ ಗೊತ್ತಿಲ್ಲ. ಈ ಬಡಜನರಿಗಂತೂ ಸಿಕ್ಕಿಲ್ಲ. ಕೇಳೋಕ್ ಹೋದ್ರೆ ಕೊಡೋರು ಇಲ್ಲ. ಕೊಡ್ಸೋರೂ ಇಲ್ಲ. ಈ ಕಾಡಂಚಿನ ಕುಗ್ರಾಮದಲ್ಲಿ ಇವ್ರ ಬದುಕು ಜನನಾಯಕರಿಗೆ ಪ್ರೀತಿ. ಇನ್ನಾದ್ರು, ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸರ್ಕಾರ ಇತ್ತ ಗಮನ ಹರಿಸಿ ಈ ಬಡಜನರಿಗೆ ನಾಲ್ಕೈದು ಕಿ.ಮೀ. ರಸ್ತೆ ನಿರ್ಮಿಸಿಕೊಟ್ಟರೇ ಈ ಜನ ಮನೆಯಲ್ಲಿ ಅವ್ರ ಫೋಟೋ ಇಟ್ಕೊಂಡು ಪೂಜೆ ಮಾಡೋದ್ರಲ್ಲಿ ನೋ ಡೌಟ್.

Published by:ಪಾವನ ಎಚ್ ಎಸ್
First published: