ಭಿಕ್ಷುಕನ ಗಂಟಿನಲ್ಲಿ ಗರಿಗರಿ ನೋಟುಗಳು ಕಂಡು ದಂಗಾದ ಗ್ರಾಮಸ್ಥರು
ಆಕಸ್ಮಿಕವಾಗಿ ಕೊಳಕಾದ ಬಟ್ಟೆಯ ಗಂಟುಗಳನ್ನ ಎಸೆಯಲು ಮುಂದಾದ ಗ್ರಾಮಸ್ಥರಿಗೆ ಎಸೆಯಬೇಡಿ ಅದರಲ್ಲಿ ಮೂಟೆ ಹಣವಿದೆ ಎಂದು ಅಂಗವಿಕಲ ಭಿಕ್ಷುಕ ರಂಗಸ್ವಾಮಯ್ಯ ತಿಳಿಸಿದಾಗ ಗ್ರಾಮಸ್ಥರು ಕೊಳಕು ಬಟ್ಟೆಯಲ್ಲಿದ್ದ ರಾಶಿ ರಾಶಿ ಹಣವನ್ನು ನೋಡಿ ಶಾಕ್ ಆಗಿದ್ದಾರೆ.
news18-kannada Updated:August 27, 2020, 11:12 PM IST

ಭಿಕ್ಷುಕನ ಗಂಟಿನಲ್ಲಿದ್ದ ಹಣ
- News18 Kannada
- Last Updated: August 27, 2020, 11:12 PM IST
ನೆಲಮಂಗಲ(ಆಗಸ್ಟ್. 27): ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬರದಿ ಗ್ರಾಮದ ಭಿಕ್ಷುಕ ರಂಗಸ್ವಾಮಯ್ಯ ಭಿಕ್ಷೆ ಬೇಡಿ ಕೂಡಿಟ್ಟ ಹಣ ನೋಡಿ ಗ್ರಾಮಸ್ಥರು ನಿಜಕ್ಕೂ ಶಾಕ್ ಆಗಿದ್ರು. ವರ್ಷಾನುಗಟ್ಟಲೆ ಭಿಕ್ಷೆ ಭೇಡಿದ ಹಣವನ್ನ ಜೋಪಾನವಾಗಿ ಗಂಟುಕಟ್ಟಿ ಕಾಪಾಡಿದ್ದ ಆ ಭಿಕ್ಷುಕ. ಅವನ ಗಂಟುಗಳನ್ನ ಬಿಚ್ಚಿ ಎಣಿಸಲು ಶುರು ಮಾಡಿದ ಗ್ರಾಮಸ್ಥರಿಗೆ 60 ಸಾವಿರ ಹಣದ ಲೆಕ್ಕ ಸಿಕ್ಕಿತು.
ಅಂಗವಿಕಲ ಭಿಕ್ಷುಕ ರಂಗಸ್ವಾಮಯ್ಯ ತನ್ನ ತಂದೆ ತಾಯಿ ಸಾವನ್ನಪ್ಪಿದ ನಂತರ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದ, ಹರಿದ ಬಟ್ಟೆ ಕೊಳಕು ದೇಹದ ರಂಗಸ್ವಾಮಯ್ಯನ ಬಳಿ ಜನ ಹೋಗಲು ಹಿಂಜರಿಯುತ್ತಿದ್ದರು, ಕೈಲಾದ ಹಣವ ನೀಡಿ ಸುಮ್ಮನಾಗುತ್ತಿದ್ದರು. ಗ್ರಾಮದಲ್ಲಿ ಯಾರೊಬ್ಬರಾದರೂ ಆತನಿಗೆ ಊಟ ನೀಡುತ್ತಿದ್ದರು. ಗ್ರಾಮಸ್ಥರು ನೀಡಿದ ಹಣವನ್ನು ಖರ್ಚು ಮಾಡದೆ ಸುಮಾರು ವರ್ಷಗಳಿಂದ ಹಾಗೆಯೇ ಕೂಡಿಟ್ಟುಕೊಂಡು ಬಂದಿದ್ದ. ಜೊತೆಗೆ ಆತನಿಗೆ ಅಂಗವಿಕಲ ವೇತನವೂ ದೊರೆಯುತ್ತಿತ್ತು. ಬಂದಂತಹ ಎಲ್ಲಾ ಹಣವನ್ನು ಕೊಳಕು ಕೊಳಕಾದ ಬಟ್ಟೆಗಳಲ್ಲಿ ಗಂಟು ಗಟ್ಟಿ ಕೂಡಿಟ್ಟಿದ್ದ, ಈತನ ಬಳಿ ಹಣ ಇದೆಯೆಂಬ ಸಣ್ಣ ಯೋಚನೆಯು ಗ್ರಾಮಸ್ಥರಲ್ಲಿ ಇರಲಿಲ್ಲ.
ಆಕಸ್ಮಿಕವಾಗಿ ಕೊಳಕಾದ ಬಟ್ಟೆಯ ಗಂಟುಗಳನ್ನ ಎಸೆಯಲು ಮುಂದಾದ ಗ್ರಾಮಸ್ಥರಿಗೆ ಎಸೆಯಬೇಡಿ ಅದರಲ್ಲಿ ಮೂಟೆ ಹಣವಿದೆ ಎಂದು ಅಂಗವಿಕಲ ಭಿಕ್ಷುಕ ರಂಗಸ್ವಾಮಯ್ಯ ತಿಳಿಸಿದಾಗ ಗ್ರಾಮಸ್ಥರು ಕೊಳಕು ಬಟ್ಟೆಯಲ್ಲಿದ್ದ ರಾಶಿ ರಾಶಿ ಹಣವನ್ನು ನೋಡಿ ಶಾಕ್ ಆಗಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಪ್ರವಾಹದಿಂದ 2030 ಕೋಟಿ ರೂ ವೆಚ್ಚದ ರಸ್ತೆ, ಸೇತುವೆ ಹಾನಿ ; ಡಿಸಿಎಂ ಗೋವಿಂದ ಕಾರಜೋಳ
ಗಂಟುಗಳನ್ನ ಬಿಚ್ಚಿ ಹಣವನ್ನು ಎಣಿಸಲು ಶುರುಮಾಡಿದ್ದಾಗ ಗ್ರಾಮಸ್ಥರಿಗೆ ಅರವತ್ತು ಸಾವಿರಕ್ಕೂ ಹೆಚ್ಚು ಹಣದ ಲೆಕ್ಕ ಸಿಕ್ಕಿದೆ. ಅಂಗವಿಕಲ ಭಿಕ್ಷುಕನಾದ ರಂಗಸ್ವಾಮಯ್ಯನ ಹಣವನ್ನು ಎಲ್ಲೂ ಕೂಡ ದುರ್ಬಳಕೆ ಆಗಬಾರದು ಎಂಬ ದೃಷ್ಟಿಯಿಂದ ಗ್ರಾಮಸ್ಥರು ಬ್ಯಾಂಕ್ ಖಾತೆ ಮಾಡುವ ಮೂಲಕ ಅಥವಾ ಅನಾಥಾಶ್ರಮಕ್ಕೆ ಸೇರಿಸಿ ಅವನು ಕೂಡಿಟ್ಟಿರುವ ಹಣವನ್ನೆಲ್ಲ ಅನಾಥಾಶ್ರಮಕ್ಕೆ ಕೊಡುವ ಚಿಂತನೆಯಲ್ಲಿದ್ದಾರೆ.
ಒಟ್ಟಾರೆ ಅನಾಥ ಅಂಗವಿಕಲ ರಂಗಸ್ವಾಮಯ್ಯನ ಬಗ್ಗೆ ಕಾಳಜಿ ವಹಿಸಿ ಅವನಿಗೆ ಉತ್ತಮ ಜೀವನ ರೂಪಿಸಲು ಗ್ರಾಮಸ್ಥರು ಮುಂದಾಗಿರುವುದು ಸಂತಸದ ಸಂಗತಿ.
ಅಂಗವಿಕಲ ಭಿಕ್ಷುಕ ರಂಗಸ್ವಾಮಯ್ಯ ತನ್ನ ತಂದೆ ತಾಯಿ ಸಾವನ್ನಪ್ಪಿದ ನಂತರ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದ, ಹರಿದ ಬಟ್ಟೆ ಕೊಳಕು ದೇಹದ ರಂಗಸ್ವಾಮಯ್ಯನ ಬಳಿ ಜನ ಹೋಗಲು ಹಿಂಜರಿಯುತ್ತಿದ್ದರು, ಕೈಲಾದ ಹಣವ ನೀಡಿ ಸುಮ್ಮನಾಗುತ್ತಿದ್ದರು. ಗ್ರಾಮದಲ್ಲಿ ಯಾರೊಬ್ಬರಾದರೂ ಆತನಿಗೆ ಊಟ ನೀಡುತ್ತಿದ್ದರು.