• Home
  • »
  • News
  • »
  • state
  • »
  • ಕಿಡಿ ಹೊತ್ತಿಸಿದ ಐಪಿಎಸ್​ ಅಧಿಕಾರಿ ಡಿ ರೂಪಾ ಪಟಾಕಿ ಟ್ವೀಟ್​; ಕಂಗನಾ ಸೇರಿ ನೆಟ್ಟಿಗರಿಂದ ಆಕ್ರೋಶ

ಕಿಡಿ ಹೊತ್ತಿಸಿದ ಐಪಿಎಸ್​ ಅಧಿಕಾರಿ ಡಿ ರೂಪಾ ಪಟಾಕಿ ಟ್ವೀಟ್​; ಕಂಗನಾ ಸೇರಿ ನೆಟ್ಟಿಗರಿಂದ ಆಕ್ರೋಶ

ಐಪಿಎಸ್​ ಅಧಿಕಾರಿ​ ಡಿ ರೂಪಾ ಅವರ ವಿರುದ್ಧ ನಟಿ ಕಂಗನಾ ಸೇರಿದಂತೆ ಹಲವರು ಪರ ವಿರೋಧ ಚರ್ಚೆ ನಡೆಸಿದ್ದಾರೆ. ಅದರಲ್ಲಿಯೂ ಟ್ರೂ ಇಂಡಾಲಜಿ ಖಾತೆ ಜೊತೆಗಿನ ಚರ್ಚೆ ಡಿ ರೂಪಾ ಅವರನ್ನು ಕೆರಳಿಸಿದೆ.

ಐಪಿಎಸ್​ ಅಧಿಕಾರಿ​ ಡಿ ರೂಪಾ ಅವರ ವಿರುದ್ಧ ನಟಿ ಕಂಗನಾ ಸೇರಿದಂತೆ ಹಲವರು ಪರ ವಿರೋಧ ಚರ್ಚೆ ನಡೆಸಿದ್ದಾರೆ. ಅದರಲ್ಲಿಯೂ ಟ್ರೂ ಇಂಡಾಲಜಿ ಖಾತೆ ಜೊತೆಗಿನ ಚರ್ಚೆ ಡಿ ರೂಪಾ ಅವರನ್ನು ಕೆರಳಿಸಿದೆ.

ಐಪಿಎಸ್​ ಅಧಿಕಾರಿ​ ಡಿ ರೂಪಾ ಅವರ ವಿರುದ್ಧ ನಟಿ ಕಂಗನಾ ಸೇರಿದಂತೆ ಹಲವರು ಪರ ವಿರೋಧ ಚರ್ಚೆ ನಡೆಸಿದ್ದಾರೆ. ಅದರಲ್ಲಿಯೂ ಟ್ರೂ ಇಂಡಾಲಜಿ ಖಾತೆ ಜೊತೆಗಿನ ಚರ್ಚೆ ಡಿ ರೂಪಾ ಅವರನ್ನು ಕೆರಳಿಸಿದೆ.

  • Share this:

    ಬೆಂಗಳೂರು (ನ,18):  ಪಟಾಕಿ ಸಿಡಿಸುವುದು ಹಿಂದೂ ಸಂಸ್ಕೃತಿಯ ಸಂಪ್ರದಾಯವಲ್ಲ. ಅದು ವಿದೇಶದಿಂದ ಬಂದಂತಹ ಸಂಪ್ರದಾಯ ಎಂಬ ಐಎಎಸ್​ ಅಧಿಕಾರಿ ಡಿ ರೂಪಾ ಅವರ ಟ್ವೀಟ್,​ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪಟಾಕಿ ಸಿಡಿಸುವ ಅಗತ್ಯವನ್ನು ಪ್ರಶ್ನಿಸಿದ ಡಿ ರೂಪಾ ಅವರ ವಿರುದ್ಧ ನಟಿ ಕಂಗನಾ ಸೇರಿದಂತೆ ಹಲವರು ಪರ ವಿರೋಧ ಚರ್ಚೆ ನಡೆಸಿದ್ದಾರೆ. ಅದರಲ್ಲಿಯೂ ಟ್ರೂ ಇಂಡಾಲಜಿ ಖಾತೆ ಜೊತೆಗಿನ ಚರ್ಚೆ ಡಿ ರೂಪಾ ಅವರನ್ನು ಕೆರಳಿಸಿದೆ. ಅಲ್ಲದೇ ಟ್ವಿಟರ್​ ಕೂಡ ಈ ಖಾತೆಯನ್ನು ನಿರ್ಬಂಧಿಸಿದೆ. ನ.14ರಂದು ಡಿ ರೂಪಾ ಪಟಾಕಿ ನಿಷೇಧ ಕುರಿತು ಬರೆದ ಅವರು ಹಿಂದೂಗಳ ಮಹಾಕಾವ್ಯ ಮತ್ತು ಪುರಾಣಗಳಲ್ಲಿ ಪಟಾಕಿ ಸಿಡಿಸುವ ಸಂಸ್ಕೃತಿ ಬಗ್ಗೆ ಪ್ರಸ್ತಾಪಿಸಿಲ್ಲ. ಇದು ಯುರೋಪಿಯನ್ನರೊಂದಿಗೆ ಬಂದ ಪದ್ಧತಿಯಾಗಿದೆ ಎಂದಿದ್ದರು. ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಹಲವರು, ಇದೇ ರೀತಿ ಇತರ ಧರ್ಮಗಳ ಪದ್ಧತಿಗಳನ್ನು ನೀವು ಪ್ರಶ್ನಿಸಿತ್ತೀರಾ ಎಂದು ಕೇಳಿದ್ದಾರೆ.



    ಡಿ ರೂಪಾ ಅವರ ಈ ಟ್ವೀಟ್​ಗೆ ಉತ್ತರಿಸಿರುವ ಟ್ರೂ ಇಂಡಾಲಜಿ ಎಂಬ ಖಾತೆ ಭಾರತದ ಪ್ರಾಚೀನ ಗ್ರಂಥಗಳಲ್ಲಿ ಪಟಾಕಿ ಉಲ್ಲೇಖಿಸಿದೆ ಎಂದು ವಾದಿಸಿದ್ದಾರೆ. ರೂಪಾ ಕೂಡ ಇದಕ್ಕೆ ತಕ್ಕ ಉತ್ತರ ನೀಡಿದ್ದು, ಉಲ್ಲೇಖಿಸಿರುವ ಗ್ರಂಥಗಳ ಪುರಾವೆ ಒದಗಿಸುವಂತೆ ಸವಾಲ್​ ಆಗಿದ್ದಾರೆ. ಇದೇ ವೇಳೆ ಈ ಖಾತೆ ಬಳಕೆದಾರರ ವಿರುದ್ಧ ಅವರು ಹರಿಹಾಯ್ದಿದ್ದು, ಗೊತ್ತು ಗುರಿ ಇಲ್ಲದೇ ಖಾತೆ ಎಂದು ವಾಗ್ದಾಳಿ ನಡೆಸಿದ್ದಾರೆ. ರೂಪಾ ಮತ್ತು ಟ್ರೂ ಇಂಡಾಲಾಜಿ ಖಾತೆ ನಡುವೆ ಪರಸ್ಪರ ವಾದ-ವಿವಾದ ನಡೆದಿದ್ದು, ಬುಧವಾರ ಟ್ವೀಟರ್​ ಈ ಟ್ರೂ ಇಂಡಾಲಾಜಿ ಖಾತೆಯನ್ನು ನಿರ್ಬಂಧಿಸಿದೆ.


    ಇನ್ನು ಈ ಖಾತೆಯನ್ನು ಅಮಾನತುಗೊಳಿಸಿದಕ್ಕೆ ನಟಿ ಕಂಗನಾ ರಾನೌತ್​ ಟ್ವಿಟರ್​ ಸಹ ಸಂಸ್ಥಾಪಕ ಜಾಕ್​ ಡಾರ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಪ್ರಶ್ನೆಗಳಳಿಗೆ ಉತ್ತರ ನೀಡದಿದ್ದರೆ, ನಿಮ್ಮ ಮನೆ ಮುರಿಯುತ್ತಾರೆ, ನಿಮ್ಮನ್ನು ಜೈಲಿಗಟ್ಟುತ್ತಾರೆ. ನಿಮ್ಮ ಧ್ವನಿ ಅಡಗಿಸುತ್ತಾರೆ. ಒಬ್ಬರ ಡಿಜಿಟಲ್​ ಗುರುತನ್ನು ತೆಗೆದು ಹಾಕುವುದು ವರ್ಚುಯಲ್​ ಜಗತ್ತಿನಲ್ಲಿ ಕೊಲೆಗಿಂತ ಕಡಿಮೆ ಅಪರಾಧವಲ್ಲ ಎಂದು ತೀಕ್ಷ್ಣ ಟೀಕೆ ನಡೆಸಿದ್ದಾರೆ.


    ಅಷ್ಟೇ ಅಲ್ಲದೇ ಮತ್ತೊಂದು ಟ್ವೀಟ್​ನಲ್ಲಿ ರೂಪಾ ವಿರುದ್ಧ ಹರಿಹಾಯ್ದಿರುವ ಬಾಲಿವುಡ್​ ನಟಿ, ಸಾಮಾನ್ಯ ಜನರ ಮೂಲಭೂತ ಹಕ್ಕನ್ನು ರಕ್ಷಿಸಲು ಸರ್ಕಾರ ರೂಪಾ ಅಂತ ಅಧಿಕಾರಿಗಳನ್ನು ನೇಮಿಸುತ್ತಾರೆ. ಆದರೆ ಅವರು, ಸತ್ಯ ಆಧಾರಗಳಿಂದ ವಾದದಲ್ಲಿ ಗೆಲ್ಲಲು ಅಸಹಾಯಕಾರಿ @TIinExile ಖಾತೆಯನ್ನೇ ನಿರ್ಬಂಧಿಸಿದ್ದಾರೆ. ಇದಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.



    @TIinExile ಏಕೆ ಅಮಾನತುಗೊಳಿಸಲಾಗಿದೆ. ಟ್ವಿಟರ್​ ಇಂಡಿಯಾ ಪಕ್ಷಪಾತ ಮನೋಭಾವ ಹೊಂದಿದೆ. ನಿಮಗೆ ನಾಚಿಕೆಯಾಗಬೇಕು ಪ್ರಧಾನಿಗಳು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುವ ಕಾಲಕ್ಕೆ ಕಾಯುತ್ತಿದ್ದೇನೆ ಎಂದು ಟ್ವೀಟ್​ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.



    ಕಂಗನಾ ಟ್ವೀಟ್​ ಬಳಿಕ ಟ್ರೂ ಇಂಡಾಲಜಿ ಖಾತೆಯನ್ನು ಮತ್ತೆ ಕಾರ್ಯಪ್ರವೃತ್ತ ಗೊಳಿಸುವಂತೆ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಯಾಯಿತು

    Published by:Seema R
    First published: