ಬೆಂಗಳೂರು(ಅಕ್ಟೋಬರ್. 20): ಸತ್ಯ ಇವಾಗ ಒಂದೊಂದೇ ಹೊರಗೆ ಬರುತ್ತಿವೆ. ಕೆಲವು ನಾಟಕಗಳ ಮೂಲಕ ಜನರಿಂದ ನನ್ನನ್ನು ದೂರ ಮಾಡಲು ಪ್ರಯತ್ನ ಮಾಡಿದ್ದರು. ಆದರೆ, ಇವಾಗ ಅಂತಹ ನಾಯಕರ ನಡುವಳಿಕೆ ಏನೆಂದು ಜನರಿಗೆ ಗೊತ್ತಾಗುತ್ತಿದೆ. ಮೈತ್ರಿ ಸರ್ಕಾರ ಅಸ್ಥಿರ ಗೊಳಿಸುವ ಸಂದರ್ಭದಲ್ಲಿ ನಡೆದ ವಾಸ್ತವ ಸ್ಥಿತಿಗಳನ್ನು ಬಿಜೆಪಿ ನಾಯಕರೇ ಈಗ ಜನರಿಗೆ ತಿಳಿಸುತ್ತಿದ್ದಾರೆ. ಜನರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. ನಾನು ಅಧಿಕಾರ ನಡೆಸುವ ಸಂದರ್ಬದಲ್ಲಿ ಸಿದ್ದರಾಮಯ್ಯ ತೊಂದರೆ ಕೊಟ್ಟಿದ್ದರು. ಹೀಗಿರುವಾಗಲು ಸಾಲ ಮನ್ನಾ ಸೇರಿದಂತೆ ಹಲವು ಕೊಡುಗೆಗಳನ್ನು ರಾಜ್ಯದ ಜನರಿಗೆ ಕೊಟ್ಟಿದ್ದೇನೆ. ನನ್ನ ಕೆಲ ಉತ್ತಮ ಕಾರ್ಯಕ್ರಮಗಳ ನೋಡಿಯೇ ಇವತ್ತು ಪ್ರಧಾನಿಗಳು ಆತ್ಮನಿರ್ಭಾರ್ ಎಂಬ ಕಾರ್ಯಕ್ರಮ ಜಾರಿಗೆ ತರುತ್ತಿದ್ದಾರೆ. ನನಗೆ ಕುಣಿಯಲು ಬರುತ್ತೆ, ಇವರಿಂದ ನಾನು ಏನು ಹೇಳಿ ಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಮೈತ್ರಿ ಸರ್ಕಾರ ತೆಗೆಯಲು ಇರುವ ಪಾತ್ರದ ಬಗ್ಗೆ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದರ ಬಗ್ಗೆ ನಾನು ಏನೂ ಹೇಳಲ್ಲ, ಜನರೇ ಈ ಬಗ್ಗೆ ನಿರ್ಧಾರ ಮಾಡಬೇಕು ಎಂದು ಕುಣಿಯಲಾಗದವನಿಗೆ ನೆಲ ಡೋಂಕು ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು.
ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ದೇಶದಲ್ಲಿ ಸುಧಾರಣಾ ಪರ್ವ ಆರಂಭವಾಗಿದೆ: ಸಿ ಟಿ ರವಿ
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಹೇಳಿಕೆಗೂ ನನಗೂ ಸಂಬಂಧವಿಲ್ಲ. ಇದು ಅವರ ಪಕ್ಷದ ಆಂತರಿಕ ಸಮಸ್ಯೆಗಳು ಅದನ್ನು ಅವರೇ ಸರಿಪಡಿಸಿ ಕೊಳ್ಳಬೇಕು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ